ಕೇವಲ 6 ವರ್ಷದಲ್ಲಿ 10 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Maruti Baleno
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದ್ದಾರೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಎಲ್ಲಾ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಬಹು ಜನಪ್ರಿಯತೆಯನ್ನು ಗಳಿಸುವಲ್ಲಿ ಯಶ್ವಸಿಯಾಗಿದೆ.

ಇದರಲ್ಲಿ ಬಲೆನೊ ಹ್ಯಾಚ್‌ಬ್ಯಾಕ್ ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ಕಂಪನಿಯು 2015ರಲ್ಲಿ ಮೊದಲ ಬಾರಿಗೆ ಬಲೆನೊ ಕಾರನ್ನು ಬಿಡುಗಡೆಗೊಳಿಸಿತ್ತು. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ. ಈ ಜನಪ್ರಿಯ ಬಲೆನೊ ಕಾರು ಮಾರಾಟದಲ್ಲಿ 1 ಮಿಲಿಯನ್ ಅಥವಾ 10 ಲಕ್ಷ ಯುನಿಟ್‌ಗಳನ್ನು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಮಾರುತಿ ಸುಜುಕಿಯು 2020ರ ಮೇ ಮತ್ತು 2021ರ ಅಕ್ಟೋಬರ್ ತಿಂಗಳುಗಳ ನಡುವೆ 2.5 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಮಾರುತಿ ಸುಜುಕಿ 2015 ರಲ್ಲಿ ಬಿಡುಗಡೆಯಾದಗಿನಿಂದ ತಯಾರಕರು ಹ್ಯಾಚ್‌ಬ್ಯಾಕ್‌ನಲ್ಲಿ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಣಗೊಂಡ ಮೊದಲ ಹ್ಯಾಚ್‌ಬ್ಯಾಕ್ ಈ ಬಲೆನೊ ಆಗಿದೆ.

ಈ ಸಂದರ್ಭದಲ್ಲಿ ಬಲೆನೊ ಕಾರಿನಲ್ಲಿ ಕೆಲವು ಕಾಸ್ಮೆಟಿಕ್ ಬದಲಾವೆಣೆಗಳನ್ನು ಮಾಡಲಾಗಿತ್ತು. ಹೊಸ ಬಲೆನೊ ಕಾರಿನಲ್ಲಿ ದೊಡ್ಡ ಲೋವರ್ ಗ್ರಿಲ್‌ನೊಂದಿಗೆ ಪರಿಷ್ಕೃತ ಮುಂಭಾಗದ ಬಂಪರ್ ಅನ್ನು ಪಡೆಯುತ್ತದೆ. ಮುಂಭಾಗದ ಗ್ರಿಲ್‌ನಲ್ಲಿನ ವಿನ್ಯಾಸವು ಬಿಎಸ್ 4 ಮಾದರಿಯಿಂದ ಭಿನ್ನವಾಗಿದೆ.

ಬಲೆನೊ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು (ಟಾಪ್-ಎಂಡ್ ಟ್ರಿಮ್‌ನೊಂದಿಗೆ ಲಭ್ಯವಿದೆ)ಮತ್ತು ಬಲೆನೊದಲ್ಲಿನ ಇತರ ಪೀಚರ್ ಗಳನ್ನು ಒಳಗೊಂಡಿದ್ದಾರೆ. ಸೈಡ್ ಪ್ರೊಫೈಲ್‌ಗೆ ಬರುತ್ತಿರುವಾಗ ಡೋರುಗಳ ಹ್ಯಾಂಡಲ್‌ಗಳಲ್ಲಿ ಕ್ರೋಮ್ ಅಲಂಕರಿಸಲು ಕಂಡುಬರುತ್ತದೆ ಮತ್ತು ಇದು ಸ್ಪೋರ್ಟಿ ಆಗಿ ಕಾಣುವ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಸಹ ಒಳಗೊಂಡಿವೆ.

ಅದರೆ ಮಾರುತಿ ಬಲೆನೊ ಕಾರಿನ ಬಹಳ ವಿಶಾಲವಾದ ಕ್ಯಾಬಿನ್ ಪಡೆಯುದೆ. ಇದು ಫ್ಯಾಬ್ರಿಕ್ ಸೀಟುಗಳನ್ನು ಪಡೆಯುತ್ತದೆ ಮತ್ತು ಅಪ್ಹೋಲ್ಸ್ಟರಿ ಬ್ಲೂ ಮತ್ತು ಬ್ಲ್ಯಾಕ್ ಥೀಮ್ ಅನ್ನು ಪಡೆಯುತ್ತದೆ. ಇದರಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ನೀಡಲಾಗಿದೆ.

ಇನ್ನು ಇದರಲ್ಲಿ ಮಧ್ಯದಲ್ಲಿ ಡಿಜಿಟಲ್ ಎಂಐಡಿಯೊಂದಿಗೆ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ. ಇದರೊಂದಿಗೆ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ಕ್ಲೈಮೇಟ್ ಕಂಟ್ರೋಲ್ ನಂತರಹ ಫೀಚರ್ ಗಳನ್ನು ಕೂಡ ನೀಡಿದ್ದಾರೆ.

ಈ ಮಾರುತಿ ಬಲೆನೊ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 82 ಬಿಎಚ್‌ಪಿ ಪವರ್ ಮತ್ತು 113 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಮಾರುತಿ ಬಲೆನೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿತ್ತು. ಆದರೆ ಬಿಎಸ್ 6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಮಾರುತಿ ಸುಜುಕಿ ಕಂಪನಿಯು ಎಲ್ಲಾ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಈ ಮಾರುತಿ ಬಲೆನೊ ಕಾರು ಸಾಕಷ್ಟು ಪ್ರಮಾಣದ ಆಂತರಿಕ ಜಾಗವನ್ನು ನೀಡುತ್ತದೆ. ಇದು ಪ್ರಸ್ತುತ ಮಾರುತಿ ಸುಜುಕಿ ತಯಾರಿಸುವ ಅತಿದೊಡ್ಡ ಹ್ಯಾಚ್‌ಬ್ಯಾಕ್ ಆಗಿದೆ. ಇದು 2,520 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ, ಇದು ಪ್ರಯಾಣಿಕರಿಗೆ ಉತ್ತಮ ಪ್ರಮಾಣದ ಕ್ಯಾಬಿನ್ ಜಾಗವನ್ನು ಅನುವಾದಿಸುತ್ತದೆ. ಹಿಂಬದಿಯ ಸೀಟುಗಳು ಸ್ಥಳಾವಕಾಶವನ್ನು ಹೊಂದಿವೆ ಮತ್ತು ಉತ್ತಮ ಪ್ರಮಾಣದ ಲೆಗ್ ಸ್ಪೇಸ್ ಅನ್ನು ನೀಡುತ್ತವೆ ಮತ್ತು ಶಾರ್ಟ್ ಡ್ರೈವ್‌ಗಳಿಗಾಗಿ ನೀವು ಹಿಂಭಾಗದಲ್ಲಿ ಮೂರು ಪ್ರಯಾಣಿಕರನ್ನು ಸಹ ಕುಳಿತುಕೊಳ್ಳಬಹುದು..

ಬೂಟ್ ಸ್ಪೇಸ್ 339 ಲೀಟರ್ ಆಗಿದ್ದು ಇದು ವಾರಾಂತ್ಯದ ವಿಹಾರಕ್ಕೆ ಸಾಕಾಗುತ್ತದೆ. ನೀವು ಹೆಚ್ಚಿನ ವಸ್ತುಗಳನ್ನು ಸಾಗಿಸಲು ಬಯಸಿದರೆ ನೀವು 60:40 ಸ್ಪ್ಲಿಟ್-ಫೋಲ್ಡಿಂಗ್ ಸೀಟ್‌ಗಳನ್ನು ಸಹ ಪಡೆಯುತ್ತೀರಿ. ಬಲೆನೊದ ಗಾತ್ರವ ನಗರಗಳ ಬಳಕೆಗಾಗಿ ನಿರ್ವಹಿಸಬಹುದಾಗಿದೆ. ಬಲೆನೊದ ಗ್ರೌಂಡ್ ಕ್ಲಿಯರೆನ್ಸ್ 165 ಎಂಎಂ ಆಗಿದ್ದು, ಇದು ಹದಗೆಟ್ಟ ರಸ್ತೆಗಳನ್ನು ನಿಭಾಯಿಸಲು ಸಾಕಾಗುತ್ತದೆ.

ಮಾರುತಿ ಬಲೆನೊ ಮುಂದಿನ ವರ್ಷ ಮತ್ತೊಂದು ಫೇಸ್‌ಲಿಫ್ಟ್ ಪಡೆಯಬಹುದು ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ಬಲೆನೊ ಮಾದರಿಗೆ ಹೋಲಿಸಿದರೆ ಬಲೆನೊ ಫೇಸ್‌ಲಿಫ್ಟ್ ಸ್ಟೈಲಿಂಗ್‌ನಲ್ಲಿ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಬಹುದು. ಈ ಹೊಸ್ ಬಲೆನೊ ಕಾರು ಮರುವಿನ್ಯಾಸಗೊಳಿಸಲಾದ ಹೆಡ್‌ಲೈಟ್‌ಗಳು, ಹೊಸ ಫ್ರಂಟ್ ಗ್ರಿಲ್ ಮತ್ತು ಮರುಹೊಂದಿಸಲಾದ ಬಂಪರ್‌ಗಳನ್ನು ಒಳಗೊಂಡಿದೆ. ಇನ್ನು ಈ ಕಾರಿನ ಆಯಾಮಗಳು ಸಂಪೂರ್ಣವಾಗಿ ಬದಲಾಗದೆ ಉಳಿಯುವ ನಿರೀಕ್ಷೆಯಿದೆ.

ಇನ್ನು ಬಲೆನೊ ಒಳಭಾಗದಲ್ಲಿ ಕೆಲವು ಬದಲಾವಣೆಗಳಿರುತ್ತವೆ, ಬಲೆನೊ ಫೇಸ್‌ಲಿಫ್ಟ್ ಮಾದರಿಯು ಕೆಲವು ಹೆಚ್ಚುವರಿ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ. ಇನ್ನು ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಐ20, ಟಾಟಾ ಆಲ್ಟ್ರೊಜ್, ಹೋಂಡಾ ಜಾಝ್, ಫೋಕ್ಸ್‌ವ್ಯಾಗನ್ ಪೊಲೊ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.


Click it and Unblock the Notifications