ದೇಶಾದ್ಯಂತ ಸ್ಮಾರ್ಟ್ ಫೈನಾನ್ಸ್ ಸೇವೆ ಆರಂಭಿಸಿದ ಮಾರುತಿ ಸುಜುಕಿ

ಹೊಸ ಕಾರು ಖರೀದಿಗಾಗಿ ಒಂದೇ ಸೂರಿನಡಿ ವಿವಿಧ ಬ್ಯಾಂಕ್‌ಗಳ ಸಾಲ ಸೌಲಭ್ಯಗಳ ಮಾಹಿತಿಗಾಗಿ ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್‌ಗೆ ಚಾಲನೆ ನೀಡಿರುವ ಮಾರುತಿ ಸುಜುಕಿಯು ಹೊಸ ಸೇವೆಯನ್ನು ದೇಶಾದ್ಯಂತ ವಿಸ್ತರಿಸಿದ್ದು, ಸ್ಮಾಟ್ ಫೈನಾನ್ಸ್ ಆಯ್ಕೆಯ ಮೂಲಕ ಸುಲಭವಾಗಿ ಖರೀದಿ ಮಾಡಬಹುದಾಗಿದೆ.

ದೇಶಾದ್ಯಂತ ಸ್ಮಾರ್ಟ್ ಫೈನಾನ್ಸ್ ಸೇವೆ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಹೊಸ ಕಾರುಗಳ ಖರೀದಿಯನ್ನು ಸುಲಭಗೊಳಿಸಲು ಸ್ಮಾರ್ಟ್ ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್‌ಗೆ ಕಳೆದ ವರ್ಷದ ಕೊನೆಯಲ್ಲಿಯೇ ಚಾಲನೆ ನೀಡಿದ್ದು, ಆರಂಭಿಕವಾಗಿ ಹೊಸ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ಅನ್ನು ನೆಕ್ಸಾ ಕಾರು ಖರೀದಿದಾರರಿಗೆ ನಂತರ ಆಯ್ದ ನಗರಗಳಲ್ಲಿನ ಅರೆನಾ ಮಾರಾಟಗಳಲ್ಲಿ ಹೊಸ ಸೇವೆ ಆರಂಭಿಸಿತ್ತು.

ದೇಶಾದ್ಯಂತ ಸ್ಮಾರ್ಟ್ ಫೈನಾನ್ಸ್ ಸೇವೆ ಆರಂಭಿಸಿದ ಮಾರುತಿ ಸುಜುಕಿ

ಇದೀಗ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಾದರಿಯ ಕಾರು ಮಾರಾಟ ಮಳಿಗೆಗಳಿಗೂ ಹೊಸ ಫೈನಾನ್ಸ್ ಸರ್ವಿಸ್ ಸೇವೆಯನ್ನು ವಿಸ್ತರಿಸಲಾಗಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಗ್ರಾಹಕರು ಹೊಸ ಕಾರುಗಳ ಜೊತೆಗೆ ಮಾರುತಿ ಸುಜುಕಿ ಒಡೆತನದ ಟ್ರೂ ವ್ಯಾಲ್ಯೂ ಪ್ಲ್ಯಾಟ್‌ಫಾರ್ಮ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಸಹ ಖರೀದಿ ಮಾಡಬಹುದಾಗಿದೆ.

ದೇಶಾದ್ಯಂತ ಸ್ಮಾರ್ಟ್ ಫೈನಾನ್ಸ್ ಸೇವೆ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಎರಡು ಮಾದರಿಯ ಮಾರಾಟ ಸೌಲಭ್ಯವನ್ನು ಹೊಂದಿದ್ದು, ಸಾಮಾನ್ಯ ಕಾರು ಮಾದರಿಗಳನ್ನು ಅರೆನಾ ಮಾರಾಟ ಮಳಿಗೆಗಳಲ್ಲಿ ಮತ್ತು ಪ್ರೀಮಿಯಂ ಕಾರು ಮಾದರಿಗಳನ್ನು ನೆಕ್ಸಾ ಮಳಿಗೆಗಳಲ್ಲಿ ಮಾರಾಟ ಮಾಡುತ್ತದೆ.

ದೇಶಾದ್ಯಂತ ಸ್ಮಾರ್ಟ್ ಫೈನಾನ್ಸ್ ಸೇವೆ ಆರಂಭಿಸಿದ ಮಾರುತಿ ಸುಜುಕಿ

ಅರೆನಾದಲ್ಲಿ ಎಸ್-ಪ್ರೆಸ್ಸೊ, ಸ್ವಿಫ್ಟ್, ವಿಟಾರಾ ಬ್ರೆಝಾ, ಆಲ್ಟೊ, ವ್ಯಾಗನ್ಆರ್, ಡಿಸೈರ್, ಇಕೋ, ಸೆಲೆರಿಯೊ, ಎರ್ಟಿಗಾ ಕಾರುಗಳ ಮಾರಾಟ ಹೊಂದಿದ್ದರೆ ನೆಕ್ಸಾದಲ್ಲಿ ಇಗ್ನಿಸ್, ಬಲೆನೊ, ಎರ್ಟಿಗಾ ಎಕ್ಸ್6, ಎಸ್-ಕ್ರಾಸ್ ಮತ್ತು ಸಿಯಾಜ್ ಕಾರುಗಳ ಮಾರಾಟ ಸೌಲಭ್ಯ ಹೊಂದಿದೆ.

ದೇಶಾದ್ಯಂತ ಸ್ಮಾರ್ಟ್ ಫೈನಾನ್ಸ್ ಸೇವೆ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಪರಿಚಯಿಸಿರುವ ಹೊಸ ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ಸೇವೆಗಳು ನೆಕ್ಸಾ ಮತ್ತು ಅರೆನಾದಲ್ಲಿನ ಎಲ್ಲಾ ಕಾರು ಮಾದರಿಗಳಿಗೂ ಅನ್ವಯವಾಗಲಿದ್ದು, ಹೊಸ ಕಾರು ಖರೀದಿದಾರರಿಗೆ ಎಂಡ್-ಟು-ಎಂಡ್ ಮತ್ತು ಲೈವ್ ಕಾರ್ ಫೈನಾನ್ಸ್ ಸೇವೆ ಒದಗಿಸುವ ಗುರಿ ಹೊಂದಿದೆ.

ದೇಶಾದ್ಯಂತ ಸ್ಮಾರ್ಟ್ ಫೈನಾನ್ಸ್ ಸೇವೆ ಆರಂಭಿಸಿದ ಮಾರುತಿ ಸುಜುಕಿ

ಕಾರ್ ಫೈನಾನ್ಸ್ ಆಯ್ಕೆಯನ್ನು ಸರಳಗೊಳಿಸುವ ಉದ್ದೇಶದಿಂದ ಸಂಪೂರ್ಣ ಆಟೋ ಫೈನಾನ್ಸ್ ಅಗತ್ಯಗಳಿಗಾಗಿ ‘ಒನ್ ಸ್ಟಾಪ್ ಶಾಪ್' ಸಿದ್ದಗೊಳಿಸಲಾಗಿದ್ದು, ಗ್ರಾಹಕರು ತಮ್ಮ ಅಗತ್ಯತೆ ಮತ್ತು ಅನುಕೂಲಕ್ಕೆ ತಕ್ಕಂತೆ ಫೈನಾನ್ಸ್ ಆಯ್ಕೆಗಳನ್ನು ಪಡೆದುಕೊಳ್ಳಬಹುದು.

ದೇಶಾದ್ಯಂತ ಸ್ಮಾರ್ಟ್ ಫೈನಾನ್ಸ್ ಸೇವೆ ಆರಂಭಿಸಿದ ಮಾರುತಿ ಸುಜುಕಿ

ಕಾರುಗಳ ಖರೀದಿಗೆ ಸುಲಭವಾದ ಸಾಲಸೌಲಭ್ಯ ಯಾವುದು? ಯಾವ ಬ್ಯಾಂಕ್ ಸಾಲದಿಂದ ಕಡಿಮೆ ಬಡ್ಡಿ? ಯಾವ ಬ್ಯಾಂಕಿನಲ್ಲಿ ಗರಿಷ್ಠ ಸಾಲ ಲಭ್ಯ? ಯಾವ ಮಾದರಿಯ ಸಾಲ ಸೌಲಭ್ಯ ಮರುಪಾವತಿಗೆ ಸರಳವಾಗಿರುತ್ತೆ? ಎನ್ನುವ ಹಲವಾರು ಪ್ರಶ್ನೆಗಳಿಗೆ ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ಅತಿ ಸುಲಭವಾಗಿ ಯಾವುದೇ ಗೊಂದಲಗಳಿಲ್ಲದೆ ವಿವರಿಸುತ್ತದೆ.

ದೇಶಾದ್ಯಂತ ಸ್ಮಾರ್ಟ್ ಫೈನಾನ್ಸ್ ಸೇವೆ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಸದ್ಯ ಎಚ್‌ಡಿಎಫ್‌ಸಿ ಬ್ಯಾಂಕ್, ಯೆಸ್ ಬ್ಯಾಂಕ್, ಐಸಿಸಿಐ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಚೋಳಮಂಡಲಂ ಫೈನಾನ್ಸ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಮಹೀಂದ್ರಾ ಫೈನಾನ್ಸ್ ಮತ್ತು ಕೊಟಕ್ ಮಹೀಂದ್ರಾ ಪ್ರೈಮ್ ಜೊತೆ ಪಾಲುದಾರಿಕೆ ಹೊಂದಿದ್ದು, ಸಾಕಷ್ಟು ಹಣಕಾಸು ಸಂಸ್ಥೆಗಳ ವಿವಿಧ ಸಾಲದ ಆಯ್ಕೆಗಳು ಗ್ರಾಹಕರಿಗೆ ಲಭ್ಯವಿದೆ.

ದೇಶಾದ್ಯಂತ ಸ್ಮಾರ್ಟ್ ಫೈನಾನ್ಸ್ ಸೇವೆ ಆರಂಭಿಸಿದ ಮಾರುತಿ ಸುಜುಕಿ

ಈ ಮೂಲಕ ಡಿಜಿಟಲ್ ಸೇವೆಯು ಸುಲಭವಾಗಿ ಹಣಕಾಸಿನ ನೆರವು ಆಯ್ಕೆಗಳನ್ನು ಪಡೆಯಲು ಸಹಕಾರಿಯಾಗಿರುವುದಲ್ಲದೆ ಸಾಲ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಸಂಪೂರ್ಣವಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತದೆ.

Article Published On: Monday, July 12, 2021, 8:45 [IST]
English summary
Maruti Car ‘Smart Finance’ Scheme Portal Launched Across India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+