ಕರೋನಾ ಭೀತಿಯ ನಡುವೆಯೂ ಜೂನ್ ತಿಂಗಳಿನಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಮಾರುತಿ ಎಸ್-ಕ್ರಾಸ್
ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎಸ್-ಕ್ರಾಸ್ ಮಾದರಿಯು ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಕರೋನಾ ಭೀತಿಯ ನಡುವೆಯ ಕಳೆದ ತಿಂಗಳ ಮಾರಾಟದಲ್ಲಿ ಈ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು ಉತ್ತಮ ಬೆಳವಣೆಗಯನ್ನು ಸಾಧಿಸಿದೆ.

ಈ ವರ್ಷದ ಜೂನ್ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು ಎಸ್-ಕ್ರಾಸ್ ಮಾದರಿಯ ಒಟ್ಟು 1,441 ಯುನಿಟ್ ಗಳನ್ನು ಮಾರಾಟಗೊಳಿಸಿವೆ. ತಿಂಗಳ ಆಧಾರದ ಮೇಲೆ ಇದು ಶೇ.524 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಎಸ್-ಕ್ರಾಸ್ ಮಾರಾಟದಲ್ಲಿರಲಿಲ್ಲ. ಎಸ್-ಕ್ರಾಸ್ ಬಿಎಸ್ -4 ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದ್ದರಿಂದ, ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಸ್ಥಗಿತಗೊಳಿಸಲಾಗಿತ್ತು.

ನಂತರ ಮಾರುತಿ ಸುಜುಕಿ ಕಂಪನಿಯು ಎಸ್-ಕ್ರಾಸ್ ಕಾರನ್ನು ಪೆಟ್ರೋಲ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದ್ದರು. ಪೆಟ್ರೋಲ್ ಎಂಜಿನ್ ಖಂಡಿತವಾಗಿಯೂ ಬಿಎಸ್-6 ಮಾರುತಿ ಸುಜುಕಿ ಎಎಸ್-ಕ್ರಾಸ್‌ಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಲು ಸಹಾಯ ಮಾಡಿದೆ

ಈ ಮಾರುತಿ ಎಸ್-ಕ್ರಾಸ್ ಪೆಟ್ರೋಲ್ ಆವೃತ್ತಿಯನ್ನು ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಬಿಎಸ್-6 ಮಾರುತಿ ಎಸ್-ಕ್ರಾಸ್ ಕಾರಿನಲ್ಲಿ ಹೊಸ ಎಂಜಿನ್ ಆಯ್ಕೆಯ ಜೊತೆ ವಿನ್ಯಾಸದಲ್ಲಿ ಮತ್ತು ಫೀಚರ್ ಗಳನ್ನು ಕೂಡ ಅಪ್ದೇಟ್ ಮಾಡಿ ಬಿಡುಗಡೆಗೊಳಿಸಿತು.

ಹೊಸ ಎಸ್-ಕ್ರಾಸ್ ನಲ್ಲಿ 1.5 ಪೆಟ್ರೋಲ್ ಮಾದರಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಣೆಯ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 103.5 ಬಿಹೆಚ್‍ಪಿ ಪವರ್ ಮತ್ತು 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಈ ಹೊಸ ಮಾರುತಿ ಎಸ್-ಕ್ರಾಸ್ ಕಾರಿನ ಇಂಟಿರಿಯರ್ ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಟಚ್ ಸ್ಕ್ರೀನ್ ಇನ್ಪೋಟೇನ್‍ಮೆಂಟ್ ಸಿಸ್ಟಂ, ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋವನ್ನು ಹೊಂದಿದೆ.

ಇದರೊಂದಿಗೆ ಎಸಿ ವೆಂಟ್ಸ್, ಸ್ಟಿಯರಿಂಗ್ ಮೌಟೆಂಡ್ ಕಂಟ್ರೋಲ್ ಅನ್ನು ಅಳವಡಿಸಲಿದೆ. ಇನ್ನು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಇದರಲ್ಲಿ ಏರ್‍ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಎಸ್ಒಫಿಕ್ಸ್ ಚೈಲ್ಡ್ ಸೀಟ್, ಸ್ಪೀಡ್ ವಾರ್ನಿಂಗ್ ಸಿಸ್ಟಂ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಹೊಂದಿದೆ.

ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು ಒಟ್ಟು 147,368 ಯುನಿಟ್‌ಗನ್ನು ಮಾರಾಟಗೊಳಿಸಿವೆ. ಇದರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 130,348 ಯುನಿಟ್‌ಗಳನ್ನು ಮಾರಾಟಗೊಳಿಸಿದೆ. ಉಳಿದ 17,020 ಯುನಿಟ್‌ಗಳನ್ನ ರಫ್ತು ಮಾಡಿದ್ದಾರೆ.

ಭಾರತೀಯ ಮಾರುಕಟ್ಟೆಯಲ್ಲಿ ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಮಾರುತಿ ಸುಜುಕಿ ನಿಸ್ಸಂದೇಹವಾಗಿ ನಾಯಕನಾಗಿದ್ದರೂ, ಪ್ರೀಮಿಯಂ ವಾಹನಗಳ ಮಾರಾಟದಲ್ಲಿ ಹ್ಯುಂಡೈ ಕಂಪನಿಗೆ ಹೋಲಿಸಿದರೆ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿಲ್ಲ. ಮಾರುತಿ ಸುಜುಕಿ ಎಸ್-ಕ್ರಾಸ್ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications