ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಬಜೆಟ್ ಕಾರುಗಳ ಮೂಲಕ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು ಕಳೆದ ಮೂರು ವರ್ಷಗಳಿಂದ ಅತ್ಯಧಿಕ ಮಟ್ಟದ ವಾಹನಗಳನ್ನು ಮಾರಾಟ ಮಾಡಿದ್ದು, ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ದಾಖಲೆ ಪ್ರಮಾಣದ ಬೆಳವಣಿಗೆ ಸಾಧಿಸಿದೆ.

ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ಬಜೆಟ್ ಕಾರುಗಳ ಮೂಲಕ ಅತ್ಯಧಿಕ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ಇದುವರೆಗೆ ಸುಮಾರು 50 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಇದು ಕೇವಲ ಗ್ರಾಮೀಣ ಭಾಗದಲ್ಲಿನ ಗ್ರಾಹಕರು ಖರೀದಿಸಿದ ಮಾರುತಿ ಸುಜುಕಿ ಕಾರುಗಳ ಸಂಖ್ಯೆಯಾಗಿದ್ದು, ಮಾಹಾನಗರಗಳು, ಟೈರ್ 1 ಮತ್ತು ಟೈರ್ 2 ನಗರಗಳಲ್ಲಿನ ಕಾರು ಮಾರಾಟವು ಅತ್ಯಧಿಕವಾಗಿದೆ.

ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ತಾಲೂಕು ಮಟ್ಟದಲ್ಲೂ ಕಾರು ಮಾರಾಟ ಮಳಿಗೆ ಮತ್ತು ಗ್ರಾಹಕ ಸೇವಾ ಕೇಂದ್ರಗಳನ್ನು ಹೊಂದಿರುವ ಮಾರುತಿ ಸುಜುಕಿ ಕಂಪನಿಯು ದೇಶಾದ್ಯಂತ ಗ್ರಾಮೀಣ ಭಾಗದಲ್ಲಿಯೇ 1,700 ಕಾರು ಮಾರಾಟ ಮಳಿಗೆಗಳನ್ನು ಹೊಂದಿದ್ದು, ಇದುವರೆಗೆ ಕಂಪನಿಯು ಸಮಾರು 50 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.

ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

2008-2009ರ ಆರ್ಥಿಕ ವರ್ಷದಲ್ಲಿ ಶೇ.10ರಷ್ಟಿದ್ದ ಕಾರು ಮಾರಾಟ ಪ್ರಮಾಣವು 2020-2021ರ ಹಣಕಾಸು ವರ್ಷದಲ್ಲಿ ಶೇ.40.9ಕ್ಕೆ ಏರಿಕೆಯಾಗಿದ್ದು, ಮಾರುತಿ ಸುಜುಕಿಯು ಅರ್ಧದಷ್ಟು ವಾಹನಗಳನ್ನು ಗ್ರಾಮೀಣ ಭಾಗದಲ್ಲೇ ಮಾರಾಟಗೊಳಿಸುತ್ತಿದೆ.

ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಮಾರುತಿ ಸುಜುಕಿಯು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಎರಡು ಮಾದರಿಯ ಮಾರಾಟ ಸೌಲಭ್ಯವನ್ನು ಹೊಂದಿದ್ದು, ಸಾಮಾನ್ಯ ಕಾರು ಮಾದರಿಗಳನ್ನು ಅರೆನಾ ಮಾರಾಟ ಮಳಿಗೆಗಳಲ್ಲಿ ಮತ್ತು ಪ್ರೀಮಿಯಂ ಕಾರು ಮಾದರಿಗಳನ್ನು ನೆಕ್ಸಾ ಮಳಿಗೆಗಳಲ್ಲಿ ಮಾರಾಟ ಮಾಡುತ್ತದೆ.

ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಅರೆನಾದಲ್ಲಿ ಎಸ್-ಪ್ರೆಸ್ಸೊ, ಸ್ವಿಫ್ಟ್, ವಿಟಾರಾ ಬ್ರೆಝಾ, ಆಲ್ಟೊ, ವ್ಯಾಗನ್ಆರ್, ಡಿಸೈರ್, ಇಕೋ, ಸೆಲೆರಿಯೊ, ಎರ್ಟಿಗಾ ಕಾರುಗಳ ಮಾರಾಟ ಹೊಂದಿದ್ದರೆ ನೆಕ್ಸಾದಲ್ಲಿ ಇಗ್ನಿಸ್, ಬಲೆನೊ, ಎರ್ಟಿಗಾ ಎಕ್ಸ್6, ಎಸ್-ಕ್ರಾಸ್ ಮತ್ತು ಸಿಯಾಜ್ ಕಾರುಗಳ ಮಾರಾಟ ಸೌಲಭ್ಯ ಹೊಂದಿದೆ.

ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ಅರೆನಾ ಕಾರು ಮಾದರಿಗಳೆ ಹೆಚ್ಚು ಬೇಡಿಕೆ ಹೊಂದಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ಎಸ್-ಪ್ರೆಸ್ಸೊ ಮಾದರಿಯ ಮಾರಾಟವು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಮಾರುತಿ ಸುಜುಕಿಯು ಹೊಸ ಕಾರುಗಳ ಖರೀದಿಯನ್ನು ಸುಲಭಗೊಳಿಸಲು ಸ್ಮಾರ್ಟ್ ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್‌ಗೆ ಕಳೆದ ವರ್ಷದ ಕೊನೆಯಲ್ಲಿಯೇ ಚಾಲನೆ ನೀಡಿದ್ದು, ಆರಂಭಿಕವಾಗಿ ಹೊಸ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ಅನ್ನು ನೆಕ್ಸಾ ಕಾರು ಖರೀದಿದಾರರಿಗೆ ನಂತರ ಆಯ್ದ ನಗರಗಳಲ್ಲಿನ ಅರೆನಾ ಮಾರಾಟಗಳಲ್ಲಿ ಹೊಸ ಸೇವೆ ಆರಂಭಿಸಿತ್ತು.

ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಇದೀಗ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಾದರಿಯ ಕಾರು ಮಾರಾಟ ಮಳಿಗೆಗಳಿಗೂ ಹೊಸ ಫೈನಾನ್ಸ್ ಸರ್ವಿಸ್ ಸೇವೆಯನ್ನು ವಿಸ್ತರಿಸಲಾಗಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಗ್ರಾಹಕರು ಹೊಸ ಕಾರುಗಳ ಜೊತೆಗೆ ಮಾರುತಿ ಸುಜುಕಿ ಒಡೆತನದ ಟ್ರೂ ವ್ಯಾಲ್ಯೂ ಪ್ಲ್ಯಾಟ್‌ಫಾರ್ಮ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಸಹ ಖರೀದಿ ಮಾಡಬಹುದಾಗಿದೆ.

ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಮಾರುತಿ ಸುಜುಕಿಯು ಪರಿಚಯಿಸಿರುವ ಹೊಸ ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ಸೇವೆಗಳು ನೆಕ್ಸಾ ಮತ್ತು ಅರೆನಾದಲ್ಲಿನ ಎಲ್ಲಾ ಕಾರು ಮಾದರಿಗಳಿಗೂ ಅನ್ವಯವಾಗಲಿದ್ದು, ಹೊಸ ಕಾರು ಖರೀದಿದಾರರಿಗೆ ಎಂಡ್-ಟು-ಎಂಡ್ ಮತ್ತು ಲೈವ್ ಕಾರ್ ಫೈನಾನ್ಸ್ ಸೇವೆ ಒದಗಿಸುವ ಗುರಿ ಹೊಂದಿದೆ.

Most Read Articles

Kannada
English summary
Maruti Suzuki Achieved New Sales Milestone In Rural India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X