22 ಗಂಟೆಗಳಲ್ಲಿ 1,850 ಕಿ.ಮೀ ಚಲಿಸಿ ಟಾಟಾ ಆಲ್‌‌ಟ್ರೊಜ್ ದಾಖಲೆ ಸರಿಗಟ್ಟಿದ ಮಾರುತಿ ಬಲೆನೊ

ಮಾರುತಿ ಸುಜುಕಿ ಬಲೆನೊ ಕಾರು 24 ಗಂಟೆಗಳಲ್ಲಿ ಗರಿಷ್ಠ ಪ್ರಮಾಣದವರೆಗೂ ಚಲಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯನ್ನು ನಿರ್ಮಿಸಿದೆ. ಬಲೆನೊ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ.

2 ಗಂಟೆಗಳಲ್ಲಿ 1,850 ಕಿ.ಮೀ ಚಲಿಸಿ ಟಾಟಾ ಆಲ್‌‌ಟ್ರೊಜ್ ದಾಖಲೆ ಸರಿಗಟ್ಟಿದ ಮಾರುತಿ ಬಲೆನೊ

ಈ ಹಿಂದೆ ಟಾಟಾ ಆಲ್‌‌ಟ್ರೊಜ್ ಕಾರು ಒಂದೇ ದಿನದಲ್ಲಿ ಅತಿ ಹೆಚ್ಚು ದೂರ ಚಲಿಸುವ ಮೂಲಕ ಹೊಸ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಪುಣೆಯ ದೇವ್ ಜಿತ್ ಸಹಾ ತಮ್ಮ ಆಲ್‌‌ಟ್ರೊಜ್ ಕಾರಿನ ಮೂಲಕ ಮಾಡಿದ್ದರು. ಅವರು 24 ಗಂಟೆಗಳಲ್ಲಿ ಆಲ್‌‌ಟ್ರೊಜ್ ಕಾರಿನ ಮೂಲಕ 1,603 ಕಿ.ಮೀ ಪ್ರಯಾಣಿಸಿದ್ದಾರೆ. ಆದರೆ ಪ್ರಂಜಲ್ ಅವರು ಕೇವಲ 22 ಗಂಟೆಗಳಲ್ಲಿ 1,1850 ಕಿ.ಮೀ ಮಾರುತಿ ಸುಜುಕಿ ಬಲೆನೊ ಕಾರಿನಲ್ಲಿ ಚಲಿಸಿ ದೇವ್ ಜಿತ್ ದಾಖಲೆಯನ್ನು ಸರಿಗಟ್ಟಿದ್ದಾರೆ

2 ಗಂಟೆಗಳಲ್ಲಿ 1,850 ಕಿ.ಮೀ ಚಲಿಸಿ ಟಾಟಾ ಆಲ್‌‌ಟ್ರೊಜ್ ದಾಖಲೆ ಸರಿಗಟ್ಟಿದ ಮಾರುತಿ ಬಲೆನೊ

ಪ್ರಂಜಲ್ ಅವರು ವಾರಣಾಸಿಯಿಂದ ಬೆಂಗಳೂರಿಗೆ 23 ಗಂಟೆಯಲ್ಲಿ ಪ್ರಯಾಣಿಸಿದ್ದಾರೆ. ಇವರು ವಾರಣಾಸಿಯಿಂದ ಬೆಂಗಳೂರಿಗೆ ಬರೊಬ್ಬರಿ 1,883.9 ಕಿ.ಮೀ ದೂರವನ್ನು ಕೇವಲ 23 ಗಂಟೆ 4 ನಿಮಿಷಗಳಲ್ಲಿ ಕ್ರಮಿಸಿದ್ದಾರೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

2 ಗಂಟೆಗಳಲ್ಲಿ 1,850 ಕಿ.ಮೀ ಚಲಿಸಿ ಟಾಟಾ ಆಲ್‌‌ಟ್ರೊಜ್ ದಾಖಲೆ ಸರಿಗಟ್ಟಿದ ಮಾರುತಿ ಬಲೆನೊ

ಪ್ರಂಜಲ್ ಅವರು ಮೂಲತಹ ಉತ್ತರ ಪ್ರದೇಶದ ವಾರಣಾಸಿಯವರಾಗಿದ್ದು, ಈ ದಾಖೆಲೆಯ ಪ್ರಯಾಣವನ್ನು ಅವರು ಏಕಾಂಗಿಯಾಗಿ ಪ್ರಯಾಣಿಸಿದ್ದಾರೆ. ಇವರು ಕಳೆದ ತಿಂಗಳ 24ರಂದು ಈ ರೆಕಾರ್ಡ್ ಬ್ರೇಕಿಂಗ್ ಡ್ರೈವ್ ಮಾಡಿದ್ದಾರೆ.

2 ಗಂಟೆಗಳಲ್ಲಿ 1,850 ಕಿ.ಮೀ ಚಲಿಸಿ ಟಾಟಾ ಆಲ್‌‌ಟ್ರೊಜ್ ದಾಖಲೆ ಸರಿಗಟ್ಟಿದ ಮಾರುತಿ ಬಲೆನೊ

ಬಲೆನೊ ಹ್ಯಾಚ್‌ಬ್ಯಾಕ್‌ ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ಕಂಪನಿಯು 2015ರಲ್ಲಿ ಮೊದಲ ಬಾರಿಗೆ ಬಲೆನೊ ಕಾರನ್ನು ಬಿಡುಗಡೆಗೊಳಿಸಿತ್ತು. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

2 ಗಂಟೆಗಳಲ್ಲಿ 1,850 ಕಿ.ಮೀ ಚಲಿಸಿ ಟಾಟಾ ಆಲ್‌‌ಟ್ರೊಜ್ ದಾಖಲೆ ಸರಿಗಟ್ಟಿದ ಮಾರುತಿ ಬಲೆನೊ

ಕಳೆದ ತಿಂಗಳಿನಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಬಲೆನೊ ಕಾರು ಎರಡನೇ ಸ್ಥಾನವನ್ನು ಪಡೆದುಕೊಂಡಿತು. ಮಾರುತಿ ಸುಜುಕಿ 2015 ರಲ್ಲಿ ಬಿಡುಗಡೆಯಾದಗಿನಿಂದ ತಯಾರಕರು ಹ್ಯಾಚ್‌ಬ್ಯಾಕ್‌ನಲ್ಲಿ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಬಿಎಸ್ 6 ಮಾಲಿನ್ಯ ನಿಮಕ್ಕೆ ಅನುಗುಣವಾಗಿ ನವೀಕರಣಗೊಂಡ ಮೊದಲ ಹ್ಯಾಚ್‌ಬ್ಯಾಕ್ ಬಲೆನೊ ಆಗಿದೆ.

2 ಗಂಟೆಗಳಲ್ಲಿ 1,850 ಕಿ.ಮೀ ಚಲಿಸಿ ಟಾಟಾ ಆಲ್‌‌ಟ್ರೊಜ್ ದಾಖಲೆ ಸರಿಗಟ್ಟಿದ ಮಾರುತಿ ಬಲೆನೊ

ಈ ಸಂದರ್ಭದಲ್ಲಿ ಬಲೆನೊ ಕಾರಿನಲ್ಲಿ ಕೆಲವು ಕಾಸ್ಮೆಟಿಕ್ ಬದಲಾವೆಣೆಗಳನ್ನು ಮಾಡಲಾಗಿತ್ತು. ಇದು ಈಗ ದೊಡ್ಡ ಲೋವರ್ ಗ್ರಿಲ್‌ನೊಂದಿಗೆ ಪರಿಷ್ಕೃತ ಮುಂಭಾಗದ ಬಂಪರ್ ಅನ್ನು ಪಡೆದುಕೊಂಡಿದೆ. ಮುಂಭಾಗದ ಗ್ರಿಲ್‌ನಲ್ಲಿನ ವಿನ್ಯಾಸವು ಬಿಎಸ್ 4 ಮಾದರಿಯಿಂದ ಭಿನ್ನವಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

2 ಗಂಟೆಗಳಲ್ಲಿ 1,850 ಕಿ.ಮೀ ಚಲಿಸಿ ಟಾಟಾ ಆಲ್‌‌ಟ್ರೊಜ್ ದಾಖಲೆ ಸರಿಗಟ್ಟಿದ ಮಾರುತಿ ಬಲೆನೊ

ಬಲೆನೊ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು (ಟಾಪ್-ಎಂಡ್ ಟ್ರಿಮ್‌ನೊಂದಿಗೆ ಲಭ್ಯವಿದೆ)ಮತ್ತು ಬಲೆನೊದಲ್ಲಿನ ಇತರ ಪೀಚರ್ ಗಳನ್ನು ಒಳಗೊಂಡಿದ್ದಾರೆ. ಸೈಡ್ ಪ್ರೊಫೈಲ್‌ಗೆ ಬರುತ್ತಿರುವಾಗ ಡೋರುಗಳ ಹ್ಯಾಂಡಲ್‌ಗಳಲ್ಲಿ ಕ್ರೋಮ್ ಅಲಂಕರಿಸಲು ಕಂಡುಬರುತ್ತದೆ ಮತ್ತು ಇದು ಸ್ಪೋರ್ಟಿ ಆಗಿ ಕಾಣುವ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳನ್ನು ಸಹ ಪಡೆಯುತ್ತದೆ.

2 ಗಂಟೆಗಳಲ್ಲಿ 1,850 ಕಿ.ಮೀ ಚಲಿಸಿ ಟಾಟಾ ಆಲ್‌‌ಟ್ರೊಜ್ ದಾಖಲೆ ಸರಿಗಟ್ಟಿದ ಮಾರುತಿ ಬಲೆನೊ

ಅದರೆ ಮಾರುತಿ ಬಲೆನೊ ಕಾರಿನ ಬಹಳ ವಿಶಾಲವಾದ ಕ್ಯಾಬಿನ್ ಪಡೆಯುತ್ತಾನೆ. ಇದು ಫ್ಯಾಬ್ರಿಕ್ ಸೀಟುಗಳನ್ನು ಪಡೆಯುತ್ತದೆ ಮತ್ತು ಅಪ್ಹೋಲ್ಸ್ಟರಿ ಬ್ಲೂ ಮತ್ತು ಬ್ಲ್ಯಾಕ್ ಥೀಮ್ ಅನ್ನು ಪಡೆಯುತ್ತದೆ. ಇದರಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

2 ಗಂಟೆಗಳಲ್ಲಿ 1,850 ಕಿ.ಮೀ ಚಲಿಸಿ ಟಾಟಾ ಆಲ್‌‌ಟ್ರೊಜ್ ದಾಖಲೆ ಸರಿಗಟ್ಟಿದ ಮಾರುತಿ ಬಲೆನೊ

ಇನ್ನು ಇದರಲ್ಲಿ ಮಧ್ಯದಲ್ಲಿ ಡಿಜಿಟಲ್ ಎಂಐಡಿಯೊಂದಿಗೆ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ. ಇದರೊಂದಿಗೆ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ಕ್ಲೈಮೇಟ್ ಕಂಟ್ರೋಲ್ ನಂತರಹ ಫೀಚರ್ ಗಳು ಕೂಡ ಲಭ್ಯವಿದೆ.

2 ಗಂಟೆಗಳಲ್ಲಿ 1,850 ಕಿ.ಮೀ ಚಲಿಸಿ ಟಾಟಾ ಆಲ್‌‌ಟ್ರೊಜ್ ದಾಖಲೆ ಸರಿಗಟ್ಟಿದ ಮಾರುತಿ ಬಲೆನೊ

ಮಾರುತಿ ಬಲೆನೊ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 82 ಬಿಎಚ್‌ಪಿ ಪವರ್ ಮತ್ತು 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

2 ಗಂಟೆಗಳಲ್ಲಿ 1,850 ಕಿ.ಮೀ ಚಲಿಸಿ ಟಾಟಾ ಆಲ್‌‌ಟ್ರೊಜ್ ದಾಖಲೆ ಸರಿಗಟ್ಟಿದ ಮಾರುತಿ ಬಲೆನೊ

ಮಾರುತಿ ಬಲೆನೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿತ್ತು. ಆದರೆ ಬಿಎಸ್ 6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಮಾರುತಿ ಸುಜುಕಿ ಕಂಪನಿಯು ಎಲ್ಲಾ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

2 ಗಂಟೆಗಳಲ್ಲಿ 1,850 ಕಿ.ಮೀ ಚಲಿಸಿ ಟಾಟಾ ಆಲ್‌‌ಟ್ರೊಜ್ ದಾಖಲೆ ಸರಿಗಟ್ಟಿದ ಮಾರುತಿ ಬಲೆನೊ

ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ಈ ವಿಭಾಗದ ಹ್ಯುಂಡೈ ಐ20, ಟಾಟಾ ಆಲ್ಟ್ರೊಜ್, ಹೋಂಡಾ ಜಾಝ್, ಫೋಕ್ಸ್‌ವ್ಯಾಗನ್ ಪೊಲೊ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಮಾರುತಿ ಬಲೆನೊ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.90 ಲಕ್ಷ ದಿಂದ 9.10 ಲಕ್ಷಗಳಾಗಿದೆ.

Most Read Articles

Kannada
English summary
Pranjal Singh In A Maruti Suzuki Baleno Sets Record. Read In Kannada.
Story first published: Friday, March 26, 2021, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X