ಸೆಮಿಕಂಡಕ್ಟರ್ ಕೊರತೆ: Maruti Suzuki ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ

ಕೋವಿಡ್ ಪರಿಣಾಮ ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ನಿರಂತರವಾಗಿ ಏರಿಳಿತ ಉಂಟಾಗುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆ ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡುತ್ತಿದೆ.

ಸೆಮಿಕಂಡಕ್ಟರ್ ಕೊರತೆ: ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ ಅನುಭವಿಸಲಿದೆ Maruti Suzuki ಕಂಪನಿ

ಹೊಸ ವಾಹನಗಳ ಉತ್ಪಾದನೆಗೆ ಅವಶ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್(ಸೆಮಿಕಂಡಕ್ಟರ್) ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ. ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತ ಮಾತ್ರವಲ್ಲ ವಿಶ್ವದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದ್ದು, ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ.

ಸೆಮಿಕಂಡಕ್ಟರ್ ಕೊರತೆ: ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ ಅನುಭವಿಸಲಿದೆ Maruti Suzuki ಕಂಪನಿ

ಚೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದ್ದ ಎಲೆಕ್ಟ್ರಾನಿಕ್ ಚಿಪ್ ಪ್ರಮಾಣವನ್ನು ಕಡಿತಗೊಳಿಸುತ್ತಿರುವುದರಿಂದ ಇತರೆ ದೇಶಗಳಲ್ಲಿನ ಉತ್ಪಾದನಾ ಲಭ್ಯತೆ ಆಧರಿಸಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯೂ ಹೆಚ್ಚಳವಾಗುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್‌ಗಳಿಲ್ಲದೆ ಪ್ರಮುಖ ಕಾರು ಕಂಪನಿಯು ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿವೆ.

ಸೆಮಿಕಂಡಕ್ಟರ್ ಕೊರತೆ: ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ ಅನುಭವಿಸಲಿದೆ Maruti Suzuki ಕಂಪನಿ

ಎಲೆಕ್ಟ್ರಾನಿಕ್ ಚಿಪ್ ಇಲ್ಲದೆ ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸಲು ಸಾಧ್ಯವಿಲ್ಲ. ಕಾರಿನಲ್ಲಿರುವ ಡಿಸ್ ಪ್ಲೇ, ಸ್ಪೀಕರ್, ಸ್ಟ್ಯಾಬಿಲಿಟಿ ಕಂಟ್ರೋಲ್, ಲೈಟಿಂಗ್, ಕಾರ್ ಕನೆಕ್ಟ್ ಫೀಚರ್ಸ್ ಸೇರಿ ಪ್ರಮುಖ ತಾಂತ್ರಿಕ ಸಾಧನಗಳು ಕಾರ್ಯನಿರ್ವಹಿಸಲು ಸೆಮಿ ಕಂಡಕ್ಟರ್ ಅವಶ್ಯವಾಗಿವೆ.

ಸೆಮಿಕಂಡಕ್ಟರ್ ಕೊರತೆ: ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ ಅನುಭವಿಸಲಿದೆ Maruti Suzuki ಕಂಪನಿ

ಕೋವಿಡ್ ಪರಿಣಾಮ ಬಿಡಿಭಾಗಗಳ ಪೂರೈಕೆಯ ಸರಪಳಿಯಲ್ಲಿ ಆಗಿರುವ ಸಮಸ್ಯೆಯೇ ಎಲೆಕ್ಟ್ರಾನಿಕ್ ಚಿಪ್ ಕೊರತೆಗೆ ಪ್ರಮುಖ ಕಾರಣವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳಿಗೆ ಪೂರೈಕೆಯಾಗಬೇಕಿದ್ದ ಹೆಚ್ಚಿನ ಪ್ರಮಾಣದ ಎಲೆಕ್ಟ್ರಾನಿಕ್ ಚಿಪ್ ಸ್ಟಾಕ್ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಲ್ಯಾಪ್‌ಟಾಪ್‌, ಮೊಬೈಲ್‌ಗಳು ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನ ಉತ್ಪಾದನೆಗೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ.

ಸೆಮಿಕಂಡಕ್ಟರ್ ಕೊರತೆ: ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ ಅನುಭವಿಸಲಿದೆ Maruti Suzuki ಕಂಪನಿ

ಹೀಗಾಗಿ ಎಲೆಕ್ಟ್ರಾನಿಕ್ ಚಿಪ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವು ವಿಶ್ವಾದ್ಯಂತ ಪ್ರಮುಖ ಕಾರು ಕಂಪನಿಗಳಿಗೆ ಹೊಡೆತ ನೀಡುತ್ತಿದ್ದು, ಭಾರತದಲ್ಲೂ ದಿನಂಪ್ರತಿ ಸಾವಿರಾರು ಕಾರುಗಳನ್ನು ಉತ್ಪಾದಿಸುವ Maruti Suzuki ಸಹ ಕಾರು ಉತ್ಪಾದನಾ ಪ್ರಮಾಣವನ್ನು ತಗ್ಗಿಸುವ ಪರಿಸ್ಥಿತಿ ಎದುರಾಗಿದೆ.

ಸೆಮಿಕಂಡಕ್ಟರ್ ಕೊರತೆ: ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ ಅನುಭವಿಸಲಿದೆ Maruti Suzuki ಕಂಪನಿ

ಎಲೆಕ್ಟ್ರಾನಿಕ್ ಚಿಪ್ ಅಗತ್ಯ ಪ್ರಮಾಣದ ಸ್ಟಾಕ್ ಇಲ್ಲದಿರುವ ಕಾರಣಕ್ಕೆ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕದಗಳಲ್ಲಿ ಕೇವಲ ಒಂದೇ ಶಿಫ್ಟ್ ಮೂಲಕ ಉತ್ಪಾದನೆಯನ್ನು ಕೈಗೊಳ್ಳುತ್ತಿದ್ದು, ಕಳೆದ ತಿಂಗಳು 7ರಿಂದ 21ರ ತನಕವು ಕನಿಷ್ಠ ಪ್ರಮಾಣದ ಕಾರು ಉತ್ಪಾದನೆ ಮಾಡಿದೆ.

ಸೆಮಿಕಂಡಕ್ಟರ್ ಕೊರತೆ: ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ ಅನುಭವಿಸಲಿದೆ Maruti Suzuki ಕಂಪನಿ

ಅಗಸ್ಟ್ ತಿಂಗಳ ಕೊನೆಯಾಂತ್ಯದಲ್ಲಿ ಎಲೆಕ್ಟ್ರಿಕ್ ಚಿಪ್ ಹೆಚ್ಚಳ ನೀರಿಕ್ಷೆಯಲ್ಲಿದ್ದ Maruti Suzuki ಕಂಪನಿಗೆ ನಿರಾಸೆ ಉಂಟಾಗಿದ್ದು, ಕಳೆದ ತಿಂಗಳ ಕಾರು ಉತ್ಪಾದನೆಯಲ್ಲಿ ಶೇ.60 ರಷ್ಟು ಉತ್ಪಾದನಾ ಪ್ರಮಾಣವು ಕಡಿಮೆಯಾಗಿದೆ.

ಸೆಮಿಕಂಡಕ್ಟರ್ ಕೊರತೆ: ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ ಅನುಭವಿಸಲಿದೆ Maruti Suzuki ಕಂಪನಿ

ಬಿಡಿಬಿಭಾಗಗಳ ಕೊರೆತೆಯು ಮುಂದುವರೆದಲ್ಲಿ Maruti Suzuki ಕಂಪನಿಯ ಸೆಪ್ಟೆಂಬರ್‌ ಅವಧಿಯ ಕಾರು ಮಾರಾಟವು ಮತ್ತಷ್ಟು ಕುಸಿಯುವ ಸಾಧ್ಯತೆಗಳಿದ್ದು, ಸೆಮಕಂಡಕ್ಟರ್ ಉತ್ಪಾದನಾ ಕಂಪನಿಗಳ ಮೇಲೆ ಆಟೋ ಉತ್ಪಾದನಾ ಮತ್ತು ಎಲೆಕ್ಟ್ರಿಕ್ ಉತ್ಪನ್ನ ಉತ್ಪಾದನಾ ಕಂಪನಿಗಳು ಒತ್ತಡ ಹೇರುತ್ತಿವೆ. ಹೀಗಾಗಿ ಪೂರೈಕೆ ಪ್ರಮಾಣವು ಕಡಿಮೆಯಿರುವುರಿಂದ ಪರಿಸ್ಥಿತಿ ತಿಳಿಗೊಳ್ಳಲು ಇನ್ನು ಕೆಲ ತಿಂಗಳುಗಳೇ ಬೇಕಿದೆ.

ಸೆಮಿಕಂಡಕ್ಟರ್ ಕೊರತೆ: ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ ಅನುಭವಿಸಲಿದೆ Maruti Suzuki ಕಂಪನಿ

ಪ್ರತಿ ದಿನ ಮೂರು ಶಿಫ್ಟ್‌ಗಳಲ್ಲಿ ನಡೆಯುತ್ತಿದ್ದ ಕಾರು ಉತ್ಪಾದನೆಗೆ ಎಲೆಕ್ಟ್ರಿಕ್ ಚಿಪ್ ಕೊರತೆಯು ಭಾರೀ ಹೊಡೆತ ನೀಡುತ್ತಿದ್ದು, ಇಷ್ಟು ದಿನಗಳ ಕಾಲ ಕೋವಿಡ್ ಪರಿಣಾಮ ವಾಹನ ಉತ್ಪಾದನೆ ಸ್ಥಗಿತಗೊಳಿಸಿದ್ದ ಕಾರು ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಸೆಮಿಕಂಡಕ್ಟರ್ ಕೊರತೆ: ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ ಅನುಭವಿಸಲಿದೆ Maruti Suzuki ಕಂಪನಿ

ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಈ ವರ್ಷ ಮಾತ್ರವಲ್ಲ ಕಳೆದ ವರ್ಷ ಕೂಡಾ ಕಾರು ಉತ್ಪಾದನೆಗೆ ಹೊಡೆತ ನೀಡಿತ್ತು. ಕಳೆದ ವರ್ಷವು ಎಲೆಕ್ಟ್ರಾನಿಕ್ ಚಿಪ್ ಸ್ಟಾಕ್ ಇಲ್ಲದ ಪರಿಣಾಮ ಮಹೀಂದ್ರಾ ಕಂಪನಿಯು ಕೆಲ ವಾರಗಳ ಕಾಲ ಕಾರು ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು.

ಸೆಮಿಕಂಡಕ್ಟರ್ ಕೊರತೆ: ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ ಅನುಭವಿಸಲಿದೆ Maruti Suzuki ಕಂಪನಿ

ಇದೀಗ ಮತ್ತೆ ಎಲೆಕ್ಟ್ರಿಕ್ ಚಿಪ್ ಕೊರತೆಯು ಜಾಗತಿಕವಾಗಿ ಬಿಕ್ಕಟ್ಟು ಎದುರಿಸುತ್ತಿದ್ದು, ಭಾರತದಲ್ಲಿ ವಿವಿಧ ಕಂಪನಿಗಳು ಸೆಮಿಕಂಡಕ್ಟರ್ ಉತ್ಪಾದನಾ ಸೌಲಭ್ಯ ಹೊಂದಿದ್ದರೂ ಸೆಮಿಕಂಡಕ್ಟರ್‌ ಉತ್ಪಾದನೆಗೆ ಬೇಕಿರುವ ವಿವಿಧ ರಾಸಾಯನಿಕ ವಸ್ತುಗಳಿಗೆ ಚೀನಾ ಮತ್ತು ತೈವಾನ್ ಮಾರುಕಟ್ಟೆಯನ್ನು ಅವಲಂಬಿಸಿರುವುದಲ್ಲದೆ ಸಣ್ಣ ಪ್ರಮಾಣದ ಉತ್ಪಾದನಾ ಯುನಿಟ್ ಹೊಂದಿವೆ.

ಸೆಮಿಕಂಡಕ್ಟರ್ ಕೊರತೆ: ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ ಅನುಭವಿಸಲಿದೆ ಜನಪ್ರಿಯ Maruti Suzuki ಕಂಪನಿ

ಇದರಿಂದಾಗಿ ಹೊಸ ಕಾರುಗಳನ್ನು ಖರೀದಿಸುವ ಯೋಜನೆಯಲ್ಲಿರುವ ಗ್ರಾಹಕರು ಬುಕ್ಕಿಂಗ್ ನಂತರ ಹೆಚ್ಚು ದಿನಗಳ ಕಾಲ ಕಾಯುವಂತಾಗಲಿದೆ. ವರದಿಗಳ ಪ್ರಕಾರ, ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ ಮಾಡಲಾದ ಕಾರುಗಳ ವಿತರಣೆಯು ವಿಳಂಬವಾಗಬಹುದಾಗಿದೆ ಎನ್ನಲಾಗಿದೆ.

ಸೆಮಿಕಂಡಕ್ಟರ್ ಕೊರತೆ: ಕಾರು ಉತ್ಪಾದನೆಯಲ್ಲಿ ಭಾರೀ ಕುಸಿತ ಅನುಭವಿಸಲಿದೆ ಜನಪ್ರಿಯ Maruti Suzuki ಕಂಪನಿ

ಬಿಡಿಭಾಗಗಳ ಕೊರತೆ ಎದುರಿಸುತ್ತಿರುವ ಕೆಲವು ಕಾರು ಕಂಪನಿಗಳು ತಮ್ಮ ಹೊಸ ಕಾರುಗಳ ಸಾಮಾನ್ಯ ಕಾಯುವ ಅವಧಿಯು 2 ತಿಂಗಳಿನಿಂದ ಇದೀಗ 5ರಿಂದ 6 ತಿಂಗಳಿಗೆ ನಿಗದಿಪಡಿಸುತ್ತಿದ್ದು, ಮುಂಬರುವ ಹಬ್ಬದ ಸಂಭ್ರಮದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಕಾರು ವಿತರಣೆಯು ವಿಳಂಬವಾಗಲಿದೆ.

Most Read Articles

Kannada
English summary
Maruti suzuki car production may fall by 60 percent this month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X