2020ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ ಮಾರುತಿ ಸುಜುಕಿ
ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ 2020ರ ಡಿಸೆಂಬರ್ ತಿಂಗಳ ತಮ್ಮ ಕಾರು ಮಾರಾಟದ ವರದಿಯನ್ನು ಪ್ರಕಟಿಸಿದೆ. ಹಿಂದಿನ ತಿಂಗಳಲ್ಲಿ ಒಟ್ಟಾರೆ ಮಾರಾಟದಲ್ಲಿ ಕಂಪನಿಯು ಶೇ.20.2 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

2020ರ ಡಿಸೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಒಟ್ಟು 1,60,226 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು 2019ರ ಡಿಸೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು 1,33,296 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಮಾತ್ರ 1,50,288 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. 2019ರ ಡಿಸೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 1,25,753 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು.

2019ರ ಡಿಸೆಂಬರ್ ತಿಂಗಳ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರು ಮಾರಾಟವನ್ನು ಕಳೆದ ತಿಂಗಳಿಗೆ ಹೋಲಿಸಿದರೆ ಶೇ.19.5 ರಷ್ಟು ಬೆಳವಣಿಗೆಯನ್ನು ಕಂಡಿದೆ. ದೇಶೀಯ ಮಾರಾಟದಲ್ಲಿ ಇತರ ಒಇಎಂಗಳಿಗೆ ಕಳುಹಿಸಲಾದ 3,808 ಯುನಿಟ್‌ಗಳು ಸೇರಿವೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು 9938 ಯುನಿಟ್‌ಗಳನ್ನು ರಫ್ತು ಮಾಡಿದೆ. ಇನ್ನು 2019ರ ಡಿಸೆಂಬರ್ ತಿಂಗಳು ಮಾರುತಿ ಸುಜುಕಿ 7561 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಮಾರುತಿ ಸುಜುಕಿ ಕಂಪನಿಯು 2019ರ ಡಿಸೆಂಬರ್ ತಿಂಗಳಲ್ಲಿ ನಡೆಸಿದ ರಫ್ತನ್ನು ಕಳೆದ ತಿಂಗಳಿಗೆ ಹೋಲಿಸಿದರೆ ಶೇ.31.4 ರಷ್ಟು ಹೆಚ್ಚಳವಾಗಿದೆ.

ಪ್ಯಾಸೆಂಜರ್ ವಾಹನಗಳ ವಿಭಾಗದಲ್ಲಿ ಮಾರುತಿ ಸುಜುಕಿ ಹ್ಯಾಚ್‌ಬ್ಯಾಕ್‌ಗಳ 77,641 ಯುನಿಟ್ ಮಾರಾಟದೊಂದಿಗೆ ಶೇ.18.2 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದು ವ್ಯಾಗನ್ಆರ್, ಸ್ವಿಫ್ಟ್, ಬಲೆನೊದಂತಹ ಮಾದರಿಗಳನ್ನು ಒಳಗೊಂಡಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಲ್ಟೊ ಮತ್ತು ಎಸ್-ಪ್ರೆಸ್ಸೊ ಮಾದರಿಗಳನ್ನು ಒಳಗೊಂಡಿರುವ ಮಿನಿ ವಿಭಾಗವು ಶೇ.4.4 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಕಳೆದ ತಿಂಗಳು 24,927 ಯುನಿಟ್‌ಗಳು ಮಾರಾಟವಾಗಿವೆ.

ಮಾರುತಿ ಸುಜುಕಿಯ ಯುವಿ ವಿಭಾಗವೂ ಶೇ.8 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ವಿಟಾರಾ ಬ್ರೆಝಾ, ಎರ್ಟಿಗಾ, ಎಸ್-ಕ್ರಾಸ್ ಮತ್ತು ಎಕ್ಸ್‌ಎಲ್ 6 ಗಳನ್ನು ಒಳಗೊಂಡಿರುವ ಯುವಿ ವಿಭಾಗವು ಕಳೆದ ತಿಂಗಳು 25,701 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದೆ.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಸಿಯಾಜ್ ಅನ್ನು ಒಳಗೊಂಡಿರುವ ಮಧ್ಯಮ ಗಾತ್ರದ ಸೆಡಾನ್ ವಿಭಾಗವು ಮಾರಾಟದಲ್ಲಿ ಶೇ.28.9 ರಷ್ಟು ಕುಸಿತವನ್ನು ದಾಖಲಿಸಿದೆ. ಕಳೆದ ತಿಂಗಳು ಮಿಡ್ ಸೆಡಾನ್ 1270 ಯುನಿಟ್‌ಗಳ ಮಾರಾಟವಾಗಿವೆ.

ಮಾರುತಿ ಸುಜುಕಿ 2020ರ ಏಪ್ರಿಲ್ - ಡಿಸೆಂಬರ್ ಅವಧಿಯಲ್ಲಿ ಮಾರಾಟದಲ್ಲಿ ಶೇ 18 ರಷ್ಟು ಕುಸಿತ ದಾಖಲಿಸಿತ್ತು. ಆದರೆ 2020ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಕಂಪನಿಯು 9,65,626 ಯುನಿಟ್ ಮಾರಾಟವನ್ನು ನೋಂದಾಯಿಸಿ ಬೆಳವಣಿಗೆಯನ್ನು ಕಂಡಿದೆ.

ಮಾರುತಿ ಸುಜುಕಿ ಕಾರುಗಳ ಮಾರಾಟದಲ್ಲಿ ತಿಂಗಳಿಗೊಮ್ಮೆ ಬೆಳವಣಿಗೆಯನ್ನು ಕಾಣುತ್ತಿದೆ. ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯ ಕಾರು ಮಾರಾಟದಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸಿದ್ದಾರೆ, ಭಾರತದಲ್ಲಿ ಅತಿ ಹೆಚ್ಚು ಕಾರು ಮಾರಾಟ ಮಾಡುವ ಕಾರು ಉತ್ಪಾದಕರಾಗಿ ಮುಂದುವರೆದಿದ್ದಾರೆ.


Click it and Unblock the Notifications