ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಾರುತಿ ಸುಜುಕಿ ಕಾರು ಮಾರಾಟ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ 2021ರ ಫೆಬ್ರವರಿ ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದೆ. ಕಂಪನಿಯ ಅಂಕಿಅಂಶಗಳ ಪ್ರಕಾರ, ಕಂಪನಿಯು ಕಳೆದ ತಿಂಗಳು ಒಟ್ಟು 1,64,469 ವಾಹನಗಳನ್ನು ಮಾರಾಟ ಮಾಡಿದೆ.

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಾರುತಿ ಸುಜುಕಿ ಕಾರು ಮಾರಾಟ

ಇದರಲ್ಲಿ 1,47,483 ಯುನಿಟ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದ್ದರೆ, 11,486 ಯುನಿಟ್ ವಾಹನಗಳನ್ನು ರಫ್ತು ಮಾಡಲಾಗಿದೆ. ಇದರ ಜೊತೆಗೆ ಕಂಪನಿಯು ಒಇಇ ಪೂರೈಕೆಯಲ್ಲಿ 5,500 ಯುನಿಟ್‌ಗಳನ್ನು ಟೊಯೊಟಾ ಕಂಪನಿಗೆ ಮಾರಾಟ ಮಾಡಿದೆ.

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಾರುತಿ ಸುಜುಕಿ ಕಾರು ಮಾರಾಟ

ಕಂಪನಿಯ ವರ್ಷದ ಮಾರಾಟದ ಬಗ್ಗೆ ಹೇಳುವುದಾದರೆ ಕಂಪನಿಯ ಮಾರಾಟ ಪ್ರಮಾಣವು ಕಳೆದ ವರ್ಷದ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ 11.8%ನಷ್ಟು ಹೆಚ್ಚಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಾರುತಿ ಸುಜುಕಿ ಕಾರು ಮಾರಾಟ

ಕಂಪನಿಯು ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ 1,47,110 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಮಾರುತಿ ಸುಜುಕಿ ಕಂಪನಿಯು 2020ರ ಏಪ್ರಿಲ್ ನಿಂದ 2021ರ ಫೆಬ್ರವರಿ ಅವಧಿಯಲ್ಲಿ 14,79,505 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಾರುತಿ ಸುಜುಕಿ ಕಾರು ಮಾರಾಟ

ಕಂಪನಿಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದೇಶಿಯ ಮಾರುಕಟ್ಟೆಯಲ್ಲಿ ಹಾಗೂ ರಫ್ತು ಮಾರುಕಟ್ಟೆಯಲ್ಲಿ 12.8%ನಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ಬಾರಿ ಈ ಅವಧಿಯಲ್ಲಿ ಕಂಪನಿಯು 12,90,847 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಾರುತಿ ಸುಜುಕಿ ಕಾರು ಮಾರಾಟ

ಕಂಪನಿಯ ಮಿನಿ ಹಾಗೂ ಕಾಂಪ್ಯಾಕ್ಟ್ ಸೆಗ್ ಮೆಂಟ್ ಗಳು ಮಾರುತಿ ಸುಜುಕಿ ಕಂಪನಿಯ ಮಾರಾಟಕ್ಕೆ ಪ್ರಮುಖ ಕೊಡುಗೆ ನೀಡಿವೆ. ಕಂಪನಿಯು ಈ ಸೆಗ್ ಮೆಂಟಿನಲ್ಲಿ 7.3%ನಷ್ಟು ವಾಹನಗಳನ್ನು ಮಾರಾಟ ಮಾಡಿದೆ. ಆಲ್ಟೊ ಹಾಗೂ ಎಸ್-ಪ್ರೆಸ್ಸೊದ ಒಟ್ಟು 23,959 ಯುನಿಟ್'ಗಳು ಮಾರಾಟವಾಗಿವೆ. ಇವುಗಳ ಮಾರಾಟವು 12.9%ನಷ್ಟು ಹೆಚ್ಚಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಾರುತಿ ಸುಜುಕಿ ಕಾರು ಮಾರಾಟ

ಫೆಬ್ರವರಿ ತಿಂಗಳಿನಲ್ಲಿ ಎಂಟ್ರಿ ಲೆವೆಲ್ ಕಾಂಪ್ಯಾಕ್ಟ್ ಮಾದರಿಗಳಾದ ವ್ಯಾಗನ್ ಆರ್, ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್, ಬಲೆನೊ, ಡಿಜೈರ್ ಹಾಗೂ ಟೂರ್ ಎಸ್ ಕಾರುಗಳ ಒಟ್ಟು 80,517 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇವುಗಳ ಮಾರಾಟವು 15.3%ನಷ್ಟು ಹೆಚ್ಚಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಾರುತಿ ಸುಜುಕಿ ಕಾರು ಮಾರಾಟ

ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು ಈ ಕಾರುಗಳ ಒಟ್ಟು 69.328 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕಳೆದ ತಿಂಗಳು ಸಿಯಾಜ್ ಸೆಡಾನ್ ಕಾರಿನ 1,510 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಕಂಪನಿಯು ಈ ಕಾರಿನ 2,544 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಾರುತಿ ಸುಜುಕಿ ಕಾರು ಮಾರಾಟ

ಈ ಬಾರಿ ಈ ಕಾರಿನ ಮಾರಾಟವು 40.6%ನಷ್ಟು ಕುಸಿದಿದೆ. ಮಾರುತಿ ಸುಜುಕಿ ಕಂಪನಿಯ ಎಸ್‌ಯು‌ವಿಗಳ ಮಾರಾಟವು ಕಳೆದ ತಿಂಗಳು ಹೆಚ್ಚಾಗಿದೆ. ಎರ್ಟಿಗಾ, ಎಸ್-ಕ್ರಾಸ್, ವಿಟಾರಾ ಬ್ರೆಝಾ ಹಾಗೂ ಎಕ್ಸ್‌ಎಲ್ 6ಗಳ ಒಟ್ಟು 26,884 ಯುನಿಟ್‌ಗಳು ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾಗಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಾರುತಿ ಸುಜುಕಿ ಕಾರು ಮಾರಾಟ

ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಈ ಕಾರುಗಳ ಒಟ್ಟು 22,604 ಯುನಿಟ್‌ಗಳು ಮಾರಾಟವಾಗಿದ್ದವು. ಈ ವರ್ಷ ಈ ಕಾರಿನ ಮಾರಾಟ ಪ್ರಮಾಣವು 18.9%ನಷ್ಟು ಹೆಚ್ಚಳವಾಗಿದೆ. ಕಂಪನಿಯ ಇಕೊ ಎಂಪಿವಿಯ ಒಟ್ಟು 11,891 ಯುನಿಟ್‌ಗಳು ಕಳೆದ ತಿಂಗಳು ಮಾರಾಟವಾಗಿವೆ.

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಾರುತಿ ಸುಜುಕಿ ಕಾರು ಮಾರಾಟ

ಕಳೆದ ವರ್ಷದ ಫೆಬ್ರವರಿಯಲ್ಲಿ ಈ ಕಾರಿನ ಒಟ್ಟು 11,227 ಯುನಿಟ್‌ಗಳು ಮಾರಾಟವಾಗಿದ್ದವು. ಈ ವರ್ಷದ ಫೆಬ್ರವರಿಯಲ್ಲಿ ಈ ಕಾರಿನ ಮಾರಾಟವು 5.9%ನಷ್ಟು ಹೆಚ್ಚಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಾರುತಿ ಸುಜುಕಿ ಕಾರು ಮಾರಾಟ

ಕಂಪನಿಯ ಏಕೈಕ ಕಮರ್ಷಿಯಲ್ ವಾಹನವಾದ ಮಾರುತಿ ಸೂಪರ್ ಕ್ಯಾರಿಯ 2,722 ಯುನಿಟ್‌ಗಳು ಮಾರಾಟವಾಗಿವೆ. ಈ ವಾಹನದ ಮಾರಾಟವು ಕಳೆದ ವರ್ಷಕ್ಕಿಂತ 507.6%ನಷ್ಟು ಹೆಚ್ಚಳವಾಗಿದೆ.

Article Published On: Monday, March 1, 2021, 18:18 [IST]
English summary
Maruti Suzuki car sales increases in February 2021. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+