ಸೆಮಿಕಂಡಕ್ಟರ್ ಪೂರೈಕೆ ಹೆಚ್ಚಳ- ಕಾರುಗಳ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಾರುತಿ ಸುಜುಕಿ

ಕೋವಿಡ್ ಪರಿಣಾಮ ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ನಿರಂತರವಾಗಿ ಏರಿಳಿತ ಉಂಟಾಗುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆ ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡುತ್ತಿದೆ.

ಸೆಮಿಕಂಡಕ್ಟರ್ ಪೂರೈಕೆ ಹೆಚ್ಚಳ- ಕಾರುಗಳ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಾರುತಿ ಸುಜುಕಿ

ಹೊಸ ತಂತ್ರಜ್ಞಾನ ಪ್ರೇರಿತ ವಾಹನಗಳ ಉತ್ಪಾದನೆಗೆ ಅವಶ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್(ಸೆಮಿಕಂಡಕ್ಟರ್) ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ. ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದ್ದು, ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ.

ಸೆಮಿಕಂಡಕ್ಟರ್ ಪೂರೈಕೆ ಹೆಚ್ಚಳ- ಕಾರುಗಳ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಾರುತಿ ಸುಜುಕಿ

ಚೀನಿ ಮಾರುಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದ್ದ ಎಲೆಕ್ಟ್ರಾನಿಕ್ ಚಿಪ್ ಪ್ರಮಾಣವನ್ನು ಕಡಿತಗೊಳಿಸುತ್ತಿರುವುದರಿಂದ ಇತರೆ ದೇಶಗಳಲ್ಲಿನ ಉತ್ಪಾದನಾ ಲಭ್ಯತೆ ಆಧರಿಸಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯೂ ಹೆಚ್ಚಳವಾಗುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್‌ಗಳಿಲ್ಲದೆ ಪ್ರಮುಖ ಕಾರು ಕಂಪನಿಯು ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿವೆ.

ಸೆಮಿಕಂಡಕ್ಟರ್ ಪೂರೈಕೆ ಹೆಚ್ಚಳ- ಕಾರುಗಳ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಾರುತಿ ಸುಜುಕಿ

ಎಲೆಕ್ಟ್ರಾನಿಕ್ ಚಿಪ್ ಇಲ್ಲದೆ ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸಲು ಸಾಧ್ಯವಿಲ್ಲ ಎನ್ನಬಹುದು. ಹೊಸ ಕಾರಿನಲ್ಲಿರುವ ಡಿಸ್ ಪ್ಲೇ, ಸ್ಪೀಕರ್, ಸ್ಟ್ಯಾಬಿಲಿಟಿ ಕಂಟ್ರೋಲ್, ಲೈಟಿಂಗ್, ಕಾರ್ ಕನೆಕ್ಟ್ ಫೀಚರ್ಸ್ ಸೇರಿ ಪ್ರಮುಖ ತಾಂತ್ರಿಕ ಸಾಧನಗಳ ಕಾರ್ಯನಿರ್ವಹಣೆಗೆ ಸೆಮಿ ಕಂಡಕ್ಟರ್ ಅವಶ್ಯವಾಗಿವೆ.

ಸೆಮಿಕಂಡಕ್ಟರ್ ಪೂರೈಕೆ ಹೆಚ್ಚಳ- ಕಾರುಗಳ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಾರುತಿ ಸುಜುಕಿ

ಕೋವಿಡ್ ಪರಿಣಾಮ ಬಿಡಿಭಾಗಗಳ ಪೂರೈಕೆಯ ಸರಪಳಿಯಲ್ಲಿ ಆಗಿರುವ ಸಮಸ್ಯೆಯೇ ಎಲೆಕ್ಟ್ರಾನಿಕ್ ಚಿಪ್ ಕೊರತೆಗೆ ಪ್ರಮುಖ ಕಾರಣವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳಿಗೆ ಪೂರೈಕೆಯಾಗಬೇಕಿದ್ದ ಹೆಚ್ಚಿನ ಪ್ರಮಾಣದ ಎಲೆಕ್ಟ್ರಾನಿಕ್ ಚಿಪ್ ಸ್ಟಾಕ್ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಉತ್ಪಾದನೆಗೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ.

ಸೆಮಿಕಂಡಕ್ಟರ್ ಪೂರೈಕೆ ಹೆಚ್ಚಳ- ಕಾರುಗಳ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಾರುತಿ ಸುಜುಕಿ

ಹೀಗಾಗಿ ಎಲೆಕ್ಟ್ರಾನಿಕ್ ಚಿಪ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವು ವಿಶ್ವಾದ್ಯಂತ ಪ್ರಮುಖ ಕಾರು ಕಂಪನಿಗಳಿಗೆ ಹೊಡೆತ ನೀಡುತ್ತಿದ್ದು, ಭಾರತದಲ್ಲೂ ದಿನಂಪ್ರತಿ ಸಾವಿರಾರು ಕಾರುಗಳನ್ನು ಉತ್ಪಾದಿಸುವ ಮಾರುತಿ ಸುಜುಕಿಯು ಸಹ ಕಾರು ಉತ್ಪಾದನೆ ಪ್ರಮಾಣದಲ್ಲಿ ಕಳೆದ ಮೂರು ತಿಂಗಳಿನಿಂದ ಹಿನ್ನಡೆ ಅನುಭವಿಸಿದೆ.

ಸೆಮಿಕಂಡಕ್ಟರ್ ಪೂರೈಕೆ ಹೆಚ್ಚಳ- ಕಾರುಗಳ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಾರುತಿ ಸುಜುಕಿ

ಎಲೆಕ್ಟ್ರಾನಿಕ್ ಚಿಪ್ ಅಗತ್ಯ ಪ್ರಮಾಣದಲ್ಲಿ ಸ್ಟಾಕ್ ಇಲ್ಲದಿರುವ ಕಾರಣಕ್ಕೆ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕದಗಳಲ್ಲಿ ಕೇವಲ ಒಂದೇ ಶಿಫ್ಟ್ ಮೂಲಕ ಉತ್ಪಾದನೆಯನ್ನು ಕೈಗೊಂಡಿದ್ದ ಮಾರುತಿ ಸುಜುಕಿ ಇದೀಗ ಸೆಮಿಕಂಡಕ್ಟರ್ ಸಮಸ್ಯೆಯು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿರುವುದರಿಂದ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುತ್ತಿದೆ.

ಸೆಮಿಕಂಡಕ್ಟರ್ ಪೂರೈಕೆ ಹೆಚ್ಚಳ- ಕಾರುಗಳ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಾರುತಿ ಸುಜುಕಿ

ಸೆಮಿಕಂಡಕ್ಟರ್ ಕೊರತೆಯ ಪರಿಣಾಮವೇ ಕಳೆದ ನಾಲ್ಕು ತಿಂಗಳಿನಲ್ಲಿ ಕಾರು ಉತ್ಪಾದನಾ ಪ್ರಮಾಣದಲ್ಲಿ ಶೇ.60ರಿಂದ ಶೇ.80 ರಷ್ಟು ಇಳಿಕೆ ಅನುಭವಿಸಿರುವ ಮಾರುತಿ ಸುಜುಕಿಯು ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ಕಾರುಗಳ ಪೂರೈಕೆಗೆ ಹರಸಾಹಸ ಮಾಡಿದೆ.

ಸೆಮಿಕಂಡಕ್ಟರ್ ಪೂರೈಕೆ ಹೆಚ್ಚಳ- ಕಾರುಗಳ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಾರುತಿ ಸುಜುಕಿ

ದಸರಾ ಮತ್ತು ದೀಪಾವಳಿ ಸಂದರ್ಭದಲ್ಲೂ ಲಕ್ಷಾಂತರ ಕಾರುಗಳಿಗೆ ಬುಕ್ಕಿಂಗ್ ಪಡೆದುಕೊಂಡಿದ್ದರೂ ಸಾವಿರ ಯುನಿಟ್ ಲೆಕ್ಕದಲ್ಲಿ ಕಾರುಗಳನ್ನು ವಿತರಣೆ ಮಾಡುತ್ತಿದ್ದು, ಇದೀಗ ಸೆಮಿಕಂಡಕ್ಟರ್ ಪೂರೈಕೆಯು ಹೆಚ್ಚುತ್ತಿರುವದಿಂದ ಮುಂಬರುವ ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ಭರವಸೆ ಸಿಕ್ಕಿದೆ.

ಸೆಮಿಕಂಡಕ್ಟರ್ ಪೂರೈಕೆ ಹೆಚ್ಚಳ- ಕಾರುಗಳ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಾರುತಿ ಸುಜುಕಿ

ಆದರೂ ಕಾರು ಉತ್ಪಾದನಾ ಕಂಪನಿಗಳ ಬೇಡಿಕೆಗೆ ತಕ್ಕಂತೆ ಸೆಮಿಕಂಡಕ್ಟರ್ ಪೂರೈಕೆಯು ಹೆಚ್ಚಳವಾಗಲು ಕನಿಷ್ಠ ಐದರಿಂದ ಆರು ತಿಂಗಳು ಕಾಲಾವಕಾಶ ತೆಗೆದುಕೊಳ್ಳಲಿದ್ದು, ಮಾರುತಿ ಸುಜುಕಿ ಕಂಪನಿಯು ಸಹ ಮುಂಬರುವ ದಿನಗಳಲ್ಲಿ ಉತ್ಪಾದನೆ ಹೆಚ್ಚಿಸುವ ತವಕದಲ್ಲಿದೆ.

ಸೆಮಿ ಕಂಡಕ್ಟರ್ ಪೂರೈಕೆ ಹೆಚ್ಚಳ- ಕಾರುಗಳ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಾರುತಿ ಸುಜುಕಿ

ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಈ ವರ್ಷ ಮಾತ್ರವಲ್ಲ ಕಳೆದ ವರ್ಷ ಕೂಡಾ ಕಾರು ಉತ್ಪಾದನೆಗೆ ಹೊಡೆತ ನೀಡಿತ್ತು. ಕಳೆದ ವರ್ಷವು ಎಲೆಕ್ಟ್ರಾನಿಕ್ ಚಿಪ್ ಸ್ಟಾಕ್ ಇಲ್ಲದ ಪರಿಣಾಮ ಕೆಲ ಕಾರು ಕಂಪನಿಗಳು ಕೆಲ ವಾರಗಳ ಕಾಲ ಕಾರು ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದವು.

ಸೆಮಿ ಕಂಡಕ್ಟರ್ ಪೂರೈಕೆ ಹೆಚ್ಚಳ- ಕಾರುಗಳ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಾರುತಿ ಸುಜುಕಿ

ಎಲೆಕ್ಟ್ರಿಕ್ ಚಿಪ್ ಕೊರತೆಯು ಜಾಗತಿಕವಾಗಿ ಬಿಕ್ಕಟ್ಟಾಗಿ ಪರಿಣಮಿಸಿದ್ದು, ಭಾರತದಲ್ಲಿ ವಿವಿಧ ಕಂಪನಿಗಳು ಸೆಮಿಕಂಡಕ್ಟರ್ ಉತ್ಪಾದನಾ ಸೌಲಭ್ಯ ಹೊಂದಿದ್ದರೂ ಸೆಮಿಕಂಡಕ್ಟರ್‌ ಉತ್ಪಾದನೆಗೆ ಬೇಕಿರುವ ವಿವಿಧ ರಾಸಾಯನಿಕ ವಸ್ತುಗಳಿಗೆ ಚೀನಾ ಮತ್ತು ತೈವಾನ್ ಮಾರುಕಟ್ಟೆಯನ್ನು ಅವಲಂಬಿಸಿರುವುದಲ್ಲದೆ ಸಣ್ಣ ಪ್ರಮಾಣದ ಉತ್ಪಾದನಾ ಯುನಿಟ್ ಹೊಂದಿವೆ.

ಸೆಮಿ ಕಂಡಕ್ಟರ್ ಪೂರೈಕೆ ಹೆಚ್ಚಳ- ಕಾರುಗಳ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಾರುತಿ ಸುಜುಕಿ

ಇದರಿಂದಾಗಿ ಕಳೆದ ದಸರಾ ಮತ್ತು ದೀಪಾವಳಿ ಹಬ್ಬದ ಋತುವಿನಲ್ಲಿ ಹೊಸ ಕಾರುಗಳನ್ನು ಖರೀದಿಸುವ ಯೋಜನೆಯಲ್ಲಿದ್ದ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಕಾರು ಸಿಗದಿರುವುದು ಸಾಕಷ್ಟು ನಿರಾಶೆ ಉಂಟುಮಾಡಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ಇನ್ನು ಕೆಲವು ತಿಂಗಳುಗಳ ಕಾಲ ಕಾಯಬೇಕಾದ ಅನಿವಾರ್ಯತೆಗಳಿವೆ. ವರದಿಗಳ ಪ್ರಕಾರ ಭಾರತದಲ್ಲಿ ಸುಮಾರು 4 ಲಕ್ಷದಿಂದ 5 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ ಮಾಡಲಾದ ಕಾರುಗಳ ವಿತರಣೆಯು ವಿಳಂಬವಾಗಬಹುದಾಗಿದೆ ಎನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ಸಮಸ್ಯೆ ಬಗೆಹರಿದು ಉದ್ಯಮ ಸಹಜ ಸ್ಥಿತಿಯತ್ತ ಮರಳುವ ಭರವಸೆ ವ್ಯಕ್ತಪಡಿಸಲಾಗಿದೆ.

Article Published On: Saturday, November 27, 2021, 8:46 [IST]
English summary
Maruti suzuki cars waiting periodto reduce details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+