ನ್ಯೂ ಜನರೇಷನ್ ಸೆಲೆರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಬಹುನೀರಿಕ್ಷಿತ ನ್ಯೂ ಜನರೇಷನ್ ಸೆಲೆರಿಯೊ ಹ್ಯಾಚ್‌ಬ್ಯಾಕ್ ಮಾದರಿಯು ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ವಿತರಣೆ ಆರಂಭಕ್ಕೂ ಮುನ್ನ ಮಾರುತಿ ಸುಜುಕಿ ಕಂಪನಿಯು ಹೊಸ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಪ್ರಕಟಿಸಿದೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಎರಡನೇ ತಲೆಮಾರಿನ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಈ ಬಾರಿ ಹಲವಾರು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಗೊಂಡಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಸ್ಟ್ಯಾಂಡರ್ಡ್ ಫೀಚರ್ಸ‌್‌ಗಳನ್ನು ನೀಡಲಾಗಿದೆ. ಜೊತೆಗೆ ಆಸಕ್ತ ಗ್ರಾಹಕರಿಗೆ ಕಂಪನಿಯು ವಿವಿಧ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡ ಆಕ್ಸೆಸರಿಸ್ ಪ್ಯಾಕೇಜ್ ಘೋಷಿಸಿದ್ದು, ಆಕ್ಟಿವ್ ಅಂಡ್ ಕೂಲ್ ಹಾಗೂ ಪೆಪ್ಪಿ ಅಂಡ್ ಸ್ಟೈಲಿಶ್ ಆಕ್ಸೆಸರಿಸ್ ಪ್ಯಾಕೇಜ್ ಖರೀದಿಸಬಹುದಾಗಿದೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಆಕ್ಟಿವ್ ಅಂಡ್ ಕೂಲ್ ಪ್ಯಾಕೇಜ್‌ನಲ್ಲಿ ಸಾಮಾನ್ಯ ಆಕ್ಸೆಸರಿಸ್‌ಗಳನ್ನು ಒಳಗೊಂಡಿದ್ದರೆ ಪೆಪ್ಪಿ ಅಂಡ್ ಸ್ಟೈಲಿಶ್ ಪ್ಯಾಕೇಜ್‌ನಲ್ಲಿ ಹಲವಾರು ಪ್ರೀಮಿಯಂ ಆಕ್ಸೆಸರಿಸ್‌ಗಳನ್ನು ನೀಡಲಾಗಿದ್ದು, ಹೊಸ ಆಕ್ಸೆಸರಿಸ್ ಪ್ಯಾಕೇಜ್‌ಗಳ ಬೆಲೆ ಕೂಡಾ ಆಕರ್ಷಕವಾಗಿವೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಆಕ್ಸೆಸರಿಸ್‌ಗಳಿಗೆ ಅನುಗುಣವಾಗಿ ಪ್ರತಿ ಬಿಡಿಭಾಗಗಳ ಬೆಲೆಯು ಆರಂಭಿಕವಾಗಿ ರೂ. 330 ಗಳಿಂದ ಆರಂಭವಾಗಿ ರೂ. 29 ಸಾವಿರ ತನಕ ಬೆಲೆ ಹೊಂದಿದ್ದು, ಆಕ್ಸೆಸರಿಸ್ ಒಟ್ಟು ಮೌಲ್ಯವು ಸುಮಾರು ರೂ. 1 ಲಕ್ಷದಷ್ಟಿದೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ಆಕ್ಟಿವ್ ಅಂಡ್ ಕೂಲ್ ಅಥವಾ ಪೆಪ್ಪಿ ಅಂಡ್ ಸ್ಟೈಲಿಶ್ ಆಕ್ಸೆಸರಿಸ್ ಪ್ಯಾಕೇಜ್ ಪಡೆದುಕೊಳ್ಳಬಹುದಾಗಿದ್ದು, ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಚೈಲ್ಡ್ ಮೌಟೆಂಡ್ ಸೀಟ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಇಂಟಿರಿಯರ್ ಸ್ಟೈಲಿಂಗ್ ಕಿಟ್, ಮಷಿನ್ ಕಟ್ ಅಲಾಯ್ ವ್ಹೀಲ್, ಫ್ರಂಟ್ ಅಂಡ್ ರಿಯರ್ ಗಾರ್ನಿಶ್, ಡಿಜಿಟಲ್ ಟೈರ್ ಇನ್‌ಫ್ಯಾಟರ್, ಸ್ಟೀರಿಂಗ್ ವ್ಹೀಲ್ ಲಾಕ್, ಏರ್ ಪ್ಯೂರಿಫೈರ್, ಬಾಡಿ ಗ್ರಾಫಿಕ್ಸ್ ಸೇರಿದಂತೆ ಹಲವಾರು ಸ್ಟೈಲಿಷ್ ಆಕ್ಸೆಸರಿಸ್ ನೀಡಲಾಗಿದೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ನ್ಯೂ ಜನರೇಷನ್ ಸೆಲೆರಿಯೊ ಕಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.94 ಲಕ್ಷ ಬೆಲೆ ಹೊಂದಿದೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಆಕರ್ಷಕ ವಿನ್ಯಾಸ ಮತ್ತು ಹೊಸ ಫೀಚರ್ಸ್ ಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿರುವ ಹೊಸ ಸೆಲೆರಿಯೊ ಕಾರು ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿಯೇ ಹೆಚ್ಚಿನ ಇಂಧನ ದಕ್ಷತೆ ಹೊಂದಿದ್ದು, ಹೊಸ ಕಾರಿನಲ್ಲಿ ಜೋಡಣೆ ಮಾಡಲಾಗಿರುವ ಕೆ10ಸಿ ಡ್ಯುಯಲ್ ಜೆಟ್ 1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಆರಂಭಿಕ ಮಾದರಿಯಾದ ಎಲ್ಎಕ್ಸ್ಐ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಹೊರತು ಉಳಿದೆಲ್ಲಾ ಮಾದರಿಗಳಲ್ಲೂ ಮಾರುತಿ ಸುಜುಕಿ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಿದ್ದು, ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 24.97 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಟಾಪ್ ಎಂಡ್ ಮಾದರಿಯಾಗಿರುವ ಜೆಡ್ಎಕ್ಸ್ಐ ಎಎಂಟಿ ಮಾದರಿಯು ಪ್ರತಿ ಲೀಟರ್‌ಗೆ ಗರಿಷ್ಠ 26 ಕಿ.ಮೀ ಮೈಲೇಜ್ ನೀಡುತ್ತದೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಹೊಸ ಕಾರಿನಲ್ಲಿ ಇಂಧನ ದಕ್ಷತೆ ಹೆಚ್ಚಲು ಮಾರುತಿ ಸುಜುಕಿಯು ಸ್ಮಾರ್ಟ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ ಜೋಡಿಸಿದ್ದು, ಟ್ರಾಫಿಕ್ ದಟ್ಟಣೆಯಲ್ಲಿ ಇಂಧನ ದಹಿಸುವಿಕೆಯನ್ನು ನಿಯಮಿತಗೊಳಿಸಿ ಮೈಲೇಜ್ ಮೇಲೆ ಪರಿಣಾಮ ಬೀರದಂತೆ ತಡೆಯಲು ಹೊಸ ತಂತ್ರಜ್ಞಾನವು ಸಾಕಷ್ಟು ಸಹಕಾರಿಯಾಗಿದೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಹಾಗೆಯೇ ಹೊಸ ಕಾರು ಈ ಬಾರಿ ವ್ಯಾಗನ್ಆರ್, ಸ್ವಿಫ್ಟ್ ಮತ್ತು ಬಲೆನೊ ಮಾದರಿಗಳ ಉತ್ಪಾದನೆಗಾಗಿ ಬಳಕೆ ಮಾಡಲಾಗುತ್ತಿರುವ ಹಾರ್ಟ್ಟೆಕ್ ಪ್ಲ್ಯಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ನಿಂದಾಗಿ ಸೆಲೆರಿಯೊ ಕಾರು ಈ ಹಿಂದಿನ ಮಾದರಿಗಿಂತಲೂ ತುಸು ಹೆಚ್ಚುವರಿ ಸ್ಥಳಾವಕಾಶ ಹೊಂದಿದೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಹೊಸ ಕಾರು 3,695 ಎಂಎಂ ಉದ್ದ, 1,655 ಎಂಎಂ ಅಗಲ, 1,555 ಎಂಎಂ ಎತ್ತರ ಮತ್ತು 2,435 ಎಂಎಂ ವ್ಹೀಲ್ ಬೆಸ್ ಹೊಂದಿದ್ದು, ಹಳೆಯ ಮಾದರಿಗಿಂತ ಹೊಸ ಕಾರು 55 ಎಂಎಂ ಅಗಲ ಮತ್ತು 10 ಎಂಎಂ ವ್ಹೀಲ್ ಬೆಸ್ ಮತ್ತು 5 ಎಂಎಂ ಹೆಚ್ಚುವರಿ ಎತ್ತರದೊಂದಿಗೆ 170 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಹೊಸ ಕಾರು ಒಟ್ಟು ಏಳು ವೆರಿಯೆಂಟ್‌‌ಗಳೊಂದಿಗೆ ಆರ್ಕ್ಟಿಕ್ ವೈಟ್, ಸಿಲ್ಕಿ ಸಿಲ್ವರ್, ಗ್ಲಿಸ್ಟೆನಿಂಗ್ ಗ್ರೇ, ಸಾಲಿಡ್ ಫೈರ್ ರೆಡ್, ಸ್ಪೀಡಿ ಬ್ಲೂ ಮತ್ತು ಕೆಫೀನ್ ಬ್ರೌನ್ ಎಂಬ ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದ್ದು, ಆಕರ್ಷಕವಾದ ಗ್ರಿಲ್, ರಿಫ್ರೆಶ್‌ ಫ್ರಂಟ್ ಫಾಸಿಯಾದೊಂದಿಗೆ ಪರಿಷ್ಕೃತ ಬಂಪರ್, ವೃತ್ತಾಕಾರವಾದ ಹೆಡ್‌ಲ್ಯಾಂಪ್‌ಗಳು, ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕ ಹೊಂದುವ ಸಿಗ್ನೇಚರ್ ಲೋಗೋ ಪಡೆದುಕೊಂಡಿದೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಹೊಸ ಸೆಲೆರಿಯೊ ಕಾರಿನ ಲೋ ಟ್ರಿಮ್‌ಗಳು ಸಾಧಾರಣ ಅಲಾಯ್ ವ್ಹೀಲ್ ಗಳನ್ನು ಪಡೆದುಕೊಂಡಿದ್ದು, ಉನ್ನತ ರೂಪಾಂತರಗಳು ಬ್ಲ್ಯಾಕ್ ಬಣ್ಣದ 15-ಇಂಚಿನ ಅಲಾಯ್ ವ್ಹೀಲ್ ಜೋಡಣೆಯೊಂದಿಗೆ ಅತ್ಯುತ್ತಮ ಫೀಚರ್ಸ್ ಒಳಗೊಂಡ ಇಂಟಿರಿಯರ್ ಒಳಗೊಂಡಿದೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಸೆಲೆರಿಯೊ ಹ್ಯಾಚ್‌ಬ್ಯಾಕ್ ಮಾದರಿಗಾಗಿ ಮಾರುತಿ ಸುಜುಕಿ ಕಂಪನಿಯು ಮೊದಲ ಬಾರಿಗೆ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಫೋಟೈನ್‌ಮೆಂಟ್ ಸಿಸ್ಟಂ ಒಳಗೊಂಡಿರುವ 7.0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದ್ದು, ಆಪಲ್ ಕಾರ್ ಪ್ಲೇ ಮತ್ತು ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ಸ್ ಸಹ ಒಳಗೊಂಡಿರುತ್ತದೆ.

ನ್ಯೂ ಜನರೇಷನ್ ಸೆಲಿರಿಯೊ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಜೊತೆಗೆ ಹೊಸ ಕಾರಿನಲ್ಲಿ ಆಲ್ ಬ್ಲ್ಯಾಕ್ ಥೀಮ್ ಹೊಂದಿರುವ ಒಳಾಂಗಣ ಸೌಲಭ್ಯದೊಂದಿಗೆ ಫ್ಲಕ್ಸ್ ಅಲ್ಯುನಿಯಂ ಆಕ್ಸೆಂಟ್ ಜೊತೆಗೆ ಸ್ಟ್ರೀರಿಂಗ್ ವ್ಹೀಲ್, ಎಸಿ ವೆಂಟ್ಸ್, ಸೆಂಟರ್ ಕನ್ಸೊಲ್, ಸ್ಟಾರ್ಟ್/ಸ್ಟಾಪ್ ಬಟನ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದಾದ ರಿಯಲ್ ವ್ಯೂ ಮಿರರ್, ಕೀ ಲೆಸ್ ಎಂಟ್ರಿ ಜೊತೆಗೆ ಮ್ಯಾನುವಲ್ ಎಸಿ ಕಂಟ್ರೋಲ್ ಯನಿಟ್ ಹೊಂದಿದೆ.

ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಜೊತೆಗೆ ಹಿಲ್ ಹೋಲ್ಡ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ.

Most Read Articles

Kannada
English summary
Maruti suzuki celerio s accessories and prices details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X