ಮಾರುತಿ ಸಿಯಾಜ್ ಕಾರನ್ನು ರಿಬ್ಯಾಡ್ಜ್ ಮಾದರಿಯಾಗಿ ಮಾರಾಟಗೊಳಿಸಲಿದೆ ಟೊಯೊಟಾ
ಮಾರುತಿ ಸುಜುಕಿ ಸಿಯಾಜ್ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೆಡಾನ್ ಕಾರುಗಳಲ್ಲಿ ಒಂದಾಗಿದೆ. ಇದೀಗ ಈ ಮಾರುತಿ ಸುಜುಕಿ ಸಿಯಾಜ್ ಕಾರನ್ನು ಟೊಯೊಟಾ ಕಂಪನಿಯು ರಿಬ್ಯಾಡ್ಜ್ ಮಾದರಿಯಾಗಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.

ಟೊಯೊಟಾ ಕಂಪನಿಯು ಯಾರೀಸ್ ಸೆಡಾನ್ ಸ್ಥಾನಕ್ಕೆ ಸಿಯಾಜ್ ಕಾರನ್ನು ರಿಬ್ಯಾಡ್ಜ್ ಮಾದರಿಯಾಗಿ ತರಲಿದೆ. ಎರಡು ದೈತ್ಯ ವಾಹನ ತಯಾರಕರ ನಡುವಿನ ಸಹಭಾಗಿತ್ವದಲ್ಲಿ ರಿಬ್ಯಾಡ್ಜ್ ಅಗಿ ಮಾರಾಟವಾಗುವ ಮೂರನೇ ಮಾದರಿ ಸಿಯಾಜ್ ಆಗಿರಬಹುದು. ಟೀಮ್ ಬಿಹೆಚ್‍ಪಿ ಟೊಯೊಟಾ ಬ್ಯಾಡ್ಜ್ ಒಳಗೊಂಡ ಸಿಯಾಜ್‌ನ ಗ್ರಿಲ್ ಚಿತ್ರವನ್ನು ಬಹಿರಂಗಪಡಿಸಿದೆ. ಈ ಚಿತ್ರದಿಂದ ಟೊಯೊಟಾ ಸಿಯಾಜ್ ಕಾರನ್ನು ತನ್ನ ರಿಬ್ಯಾಡ್ ಮಾದರಿಯಾಗಿ ತರಬಹುದು ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

ಟೊಯೊಟಾ ಪ್ರಸ್ತುತ ಯಾರಿಸ್ ಸೆಡಾನ್ ಅನ್ನು ಮಾರುತಿ ಸುಜುಕಿ ಸಿಯಾಜ್ ಒಂದೇ ವಿಭಾಗದಲ್ಲಿ ಮಾರಾಟವಾಗುತ್ತಿದೆ. ಇದರಿಂದ ಯಾರಿಸ್ ಸ್ಥಾನಕ್ಕೆ ಸಿಯಾಜ್ ಸೆಡಾನ್ ಕಾರನ್ನು ರಿಬ್ಯಾಡ್ಜ್ ಮಾದರಿಯಾಗಿ ತರಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸಿಯಾಜ್‌ನ ರಿಬ್ಯಾಡ್ ಮಾದರಿಯು ಅದೇ 1.5-ಲೀಟರ್ ಕೆ-ಸೀರೀಸ್ ಎಂಜಿನ್ ಅನ್ನು ಹೊಂದಿರುತ್ತದೆ. ಅದರೊಂದಿಗೆ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದಿಂದ ಬ್ರ್ಯಾಂಡ್‌ನ (ಎಸ್‌ವಿಹೆಚ್ಎಸ್) ಸ್ಮಾರ್ಟ್ ಹೈಬ್ರಿಡ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ.

ಇದು 104 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಫೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಟಾರ್ಕ್ ಕನ್ವಟರ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಜೆಯನ್ನು ನೀಡಲಾಗುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸಿಯಾಜ್ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಅಲಾಯ್ ವ್ಹೀಲ್‌ಗಳು, ಕ್ರೋಮ್-ಪಿನಿಶ್ ವಿಂಡೋ ಲೈನ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿವೆ. ಟೊಯೋಟಾದ ರಿಬ್ಯಾಡ್ಜ್ ಮಾದರಿಯಲ್ಲಿಯೂ ಇವೆಲ್ಲವನ್ನೂ ಉಳಿಸಿಕೊಳ್ಳಬಹುದು.

ರಿಬ್ಯಾಡ್ಜ್ ಮಾದರಿಯು ಡ್ಯಾಶ್‍ಬೋರ್ಡ್‍ನಲ್ಲಿ ಬ್ಲ್ಯಾಕ್ ಮತ್ತು ಸಿಲ್ವರ್ ಆಕ್ಸೆಂಟ್‍ಗಳು, ಡೋರ್ ಟ್ರಿಮ್ಸ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ. ಆಪಲ್ ಕರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಇರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸಂ ಅನ್ನು ಹೊಂದಿರಲಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ಈ ಕಾರಿನಲ್ಲಿ ಮಲ್ಟಿಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಕೀ ಲೆಸ್ ಎಂಟ್ರಿ, ಮಲ್ಟಿಪಲ್ ಏರ್‍ಬ್ಯಾಗ್, ಇಬಿಡಿಯೊಂದಿಗೆ ಎಬಿಎಸ್, ಆಟೋಮ್ಯಾಟಿಕ್ ಕ್ಲೈಮೆಂಟ್, ರಿಯರ್ ಎಸಿ ವೆಂಟ್ಸ್, ಕ್ರೂಸ್ ಕಂಟ್ರೋಲ್ ಮತ್ತು ಇತರ ಫೀಚರ್ಸ್‍ಗಳನ್ನು ಹೊಂದಿರಲಿದೆ

ಸಿ-ಸೆಗ್‍ಮೆಂಟ್ ಸಿಯಾಜ್ ಸೆಡಾನ್ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಕಾರನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಬಿಡುಗಡೆಗೊಳಿಸಿದ್ದರು. ಮಿಡ್ ಸೆಡಾನ್ ಆದ ಮಾರುತಿ ಸಿಯಾಜ್ ಕಾರು ಸಿ ಸೆಗ್‍ಮೆಂಟ್‍ನಲ್ಲಿ ಹ್ಯುಂಡೈ ವೆರ್ನಾ, ಹೋಂಡಾ ಸಿಟಿ ಮತ್ತು ಸ್ಕೋಡಾ ರ್ಯಾಪಿಡ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ

ಟೊಯೊಟಾ ಯಾರಿಸ್ ಕೂಡ ಜನಪ್ರಿಯ ಸೆಡಾನ್ ಆಗಿದೆ. ಆದರೆ ಇತ್ತೀಚೆಗೆ ಇದರ ಜನಪ್ರಿಯತೆ ಕಡಿಮೆಯಾಗಿದೆ. ಮರಾಟದಲ್ಲಿಯು ಕುಸಿತ ಕಂಡಿದೆ. ಇದರಿಂದ ಯಾರಿಸ್ ಸ್ಥಾನಕ್ಕೆ ಜನಪ್ರಿಯ ಸಿಯಾಜ್ ಸೆಡಾನ್ ಅನ್ನು ತರಲು ನಿರ್ಧರಿಸಬಹುದು.


Click it and Unblock the Notifications