3 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ciaz

ದೇಶದ ಅತಿ ದೊಡ್ಡ ಮತ್ತು ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಸರಣಿಯಲ್ಲಿ ವೈವಿಧ್ಯಮಯ ಮಾದರಿಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಎಲ್ಲಾ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಗಳಿಸಿದೆ.

3 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ciaz

ಇದೀಗ ಮಾರುತಿ ಸುಜುಕಿಯ ಪ್ರೀಮಿಯಂ ಸೆಡಾನ್ ಸಿಯಾಜ್ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಮಾರುತಿ ಸುಜುಕಿ ಕಂಪನಿಯು ಸಿಯಾಜ್ ಅನ್ನು ಇಲ್ಲಿಯವರೆಗೆ 3 ಲಕ್ಷ ಗ್ರಾಹಕರಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಿದೆ. ಇದು ಭಾರತದಲ್ಲಿ ಸೆಡಾನ್ ಮಾರಾಟ ಕಡಿಮೆಯಾಗುತ್ತಿರುವ ಸಮಯದಲ್ಲಿ ಮಿಡ್ ಸೈಜ್ ಸೆಡಾನ್ ವಿಭಾಗದಲ್ಲಿ ಅತ್ಯಂತ ವೇಗವಾಗಿದೆ. ಸಿಯಾಜ್ ಅನ್ನು ಭಾರತದಲ್ಲಿ 2014ರಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಯಿತು. ಬಿಎಸ್6 ಕಂಪ್ಲೈಂಟ್ ಸಿಯಾಜ್‌ನ ಬೆಲೆಯು ರೂ,8.60 ಲಕ್ಷದಿಂದ ಆರಂಭವಾಗುತ್ತದೆ.

3 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ciaz

ಇನ್ನು ಸಿಯಾಜ್ ಆಲ್ಫಾ 1.5 ಲೀಟರ್ ಪೆಟ್ರೋಲ್ ಆಟೋಮ್ಯಾಟಿಕ್ ರೂಪಾಂತರದ ಬೆಲೆಯು ರೂ.11.59 ಲಕ್ಷದವರೆಗೆ ಏರುತ್ತದೆ. ಸಿಯಾಜ್ ಮಿಡ್ ಸೈಜ್ ಸೆಡಾನ್ ವಿಭಾಗದಲ್ಲಿ ಹೋಂಡಾ ಸಿಟಿ ಮತ್ತು ಹ್ಯುಂಡೈ ವೆರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

3 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ciaz

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಮಾತನಾಡಿ, 3 ಲಕ್ಷ ಮಾರಾಟದ ಮೈಲಿಗಲ್ಲು ಗ್ರಾಹಕರ ನಂಬಿಕೆ ಮತ್ತು ಬ್ರಾಂಡ್‌ನಲ್ಲಿ ವಿಶ್ವಾಸವನ್ನು ತೋರಿಸುತ್ತದೆ ಎಂದು ಹೇಳಿದರು.

3 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ciaz

2018ರಲ್ಲಿ ಫೇಸ್ ಲಿಫ್ಟ್ ಪಡೆದ ಹೊಸ ತಲೆಮಾರಿನ ಮಾರುತಿ ಸಿಯಾಜ್ ಡಿಆರ್ ಎಲ್ ಗಳೊಂದಿಗೆ ಮುಂಭಾಗದ ಗ್ರಿಲ್, ನಯವಾದ ಬಂಪರ್ ಮತ್ತು ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ಪಡೆದುಕೊಂಡಿತು. ಹಲವಾರು ಕ್ರೋಮ್ ಅಲಂಕಾರಗಳೂ ಇವೆ, ಮತ್ತು ಸ್ಟೀರಿಂಗ್ ವೀಲ್, ಒಳಗಿನ ಡೋರ್ ಹ್ಯಾಂಡಲ್‌ಗಳು, ಎಸಿ ಲೌವ್ರೆಸ್ ನಾಬ್ ಮತ್ತು ಪಾರ್ಕಿಂಗ್ ಬ್ರೇಕ್ ಲಿವರ್ ನಂತಹ ಸೆಡಾನ್ ಸುತ್ತಲೂ ಕಾಣಬಹುದು.

3 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ciaz

ಒಳಭಾಗದಲ್ಲಿ, ಸಿಯಾಜ್ 4.2 ಇಂಚಿನ ಟಿಎಫ್‌ಟಿ ಮಲ್ಟಿ-ಇನ್ಫರ್ಮೇಷನ್ ಡಿಸ್‌ಪ್ಲೇ (ಎಂಐಡಿ) ಯೊಂದಿಗೆ ಬರುತ್ತದೆ. ಪ್ರಯಾಣಿಕರಿಗೆ ಸ್ಟ್ಯಾಂಡರ್ಡ್ ಆಗಿ ಹಿಂಭಾಗದ ಎಸಿ ವೆಂಟ್‌ಗಳಿವೆ. ಮುಂದಿನ ಸೀಟುಗಳು ಮತ್ತು ಹಿಂಭಾಗದ ಸೀಟುಗಳು ಸೆಂಟರ್ ಆರ್ಮ್‌ರೆಸ್ಟ್ ಅನ್ನು ಪಡೆಯುತ್ತವೆ.

3 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ciaz

ಮುಂಭಾಗದ ಸೀಟಿನ ಆರ್ಮ್‌ರೆಸ್ಟ್ ಅದರ ಅಡಿಯಲ್ಲಿ ಸ್ಟ್ರೋರೇಂಜ್ ಸ್ಪೇಸ್ ಹೊಂದಿದ್ದರೆ ಹಿಂಭಾಗದ ಸೀಟಿನ ಆರ್ಮ್‌ರೆಸ್ಟ್ ಕಪ್ ಹೋಲ್ಡರ್‌ಗಳನ್ನು ಪಡೆಯುತ್ತದೆ .ಸಿಯಾಜ್ ಅನ್ನು ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಿಕಲ್ ಅಡ್ಜಸ್ಟಬಲ್ ಒಆರ್‌ವಿಎಮ್‌ಗಳು ಮತ್ತು ಇತರ ಫೀಚರ್‌ಗಳನ್ನು ನೀಡಲಾಗಿದೆ.

3 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ciaz

ಇನ್ನು ಈ ಮಾರುತಿ ಸಿಯಾಜ್ ಕಾರಿನಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ, ಸಿಯಾಜ್ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ಡ್ರೈವರ್ ಮತ್ತು ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ ಫೀಚರ್ಸ್ ಅನ್ನು ಪಡೆಯುತ್ತದೆ.

3 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ciaz

ಈ ಮಾರುತಿ ಸುಜುಕಿ ಸಿಯಾಜ್ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 103 ಬಿಎಚ್‌ಪಿ ಪವರ್ ಮತ್ತು 138 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಐದು-ಸ್ಪೀಡ್ ಮ್ಯಾನುವಲ್ ಅಥವಾ ನಾಲ್ಕು-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕರ್ನಾವಾಟರ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

3 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ciaz

ಇನ್ನು ಟೊಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಯಾರಿಸ್ ಸೆಡಾನ್ ಅನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಿ ಇದರ ಸ್ಥಾನಕ್ಕೆ ಮಾರುತಿ ಸಿಯಾಜ್ ರಿಬ್ಯಾಡ್ಜ್ ಆವೃತ್ತಿಯಾದ ಬೆಲ್ಟಾ ಕಾರನ್ನು ಟೊಯೊಟಾ ಕಂಪನಿಯು ಪರಿಚಯಿಸಲಿದೆ. ವರದಿಗಳ ಪ್ರಾಕರ, ಟೊಯೊಟಾ ಕಂಪನಿಯು ಭಾರತದಲ್ಲಿ ಯಾರಿಸ್ ಸೆಡಾನ್ ಉತ್ಪದಾನೆಯನ್ನು ಸ್ಥಗಿತಗೊಳಿಸಿದೆ.

3 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ciaz

ಟೊಯೊಟಾ ಯಾರೀಸ್ ಕಾರು ಮಾರುತಿಯ ಸಿಯಾಜ್ ಮಾದರಿಯ ಅದೇ ವಿಭಾಗದಲ್ಲಿ ಮಾರಾಟವಾಗುತ್ತಿದೆ. ಭಾರತದಲ್ಲಿ ಯಾರಿಸ್ ಸೆಡಾನ್ ಮಾರಾಟದಲ್ಲಿ ದೊಡ್ಡ ಕುಸಿತವಾಗಿದೆ. ಮತ್ತೊಂದೆಡೆ ಅದೇ ವಿಭಾಗದ ಮಾರುತಿ ಸುಜುಕಿ ಸಿಯಾಜ್ ಉತ್ತಮವಾಗಿ ಮಾರಾಟವಾಗುತ್ತಿದೆ.ಇದರಿಂದ ಜಪಾನ್ ಮೂಲದ ಟೊಯೊಟಾ ಕಂಪನಿಯು ಸಿಯಾಜ್ ರಿಬ್ಯಾಡ್ಜ್ ಮಾದರಿಯನ್ನು ತರಲು ಮುಂದಾಗಿದೆ.

3 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ciaz

ಟೊಯೊಟಾ ಇತ್ತೀಚೆಗೆ ಭಾರತದಲ್ಲಿ ಬೆಲ್ಟಾ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದೆ. ಇದೇ ಹೆಸರನ್ನು ಹೊಸ ರಿಬ್ಯಾಡ್ಜ್ ಮಾದರಿಗೆ ನೀಡಲಾಗುತ್ತದೆ. ಎರಡು ದೈತ್ಯ ವಾಹನ ತಯಾರಕರ ನಡುವಿನ ಸಹಭಾಗಿತ್ವದಲ್ಲಿ ರಿಬ್ಯಾಡ್ಜ್ ಅಗಿ ಮಾರಾಟವಾಗುವ ಮೂರನೇ ಮಾದರಿ ಸಿಯಾಜ್ ಆಗಿರಬಹುದು. ಮಾರುತಿ ಸುಜುಕಿ ಸಿಯಾಜ್ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೆಡಾನ್ ಕಾರುಗಳಲ್ಲಿ ಒಂದಾಗಿದೆ.

3 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ciaz

ಇದರೊಂದಿಗೆ ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಭಾರತದಲ್ಲಿ ತನ್ನ ಜನಪ್ರಿಯ ಮಾದರಿಗಳನ್ನು ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಮಾರುತಿ ಸುಜುಕಿ ಹೊಸ ತಲೆಮಾರಿನ ಸೆಲೆರಿಯೊ ಹ್ಯಾಚ್‌ಬ್ಯಾಕ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದಲ್ಲದೇ ಮಾರುತಿ ಸುಜುಕಿ ಕಂಪನಿಯು ಸ್ವಿಫ್ಟ್ ಹ್ಯಾಚ್‌ಬ್ಯಾಕ್, ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಮತ್ತು ವಿಟಾರಾ ಬ್ರೆಝಾ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯ ಸಿಎನ್‌ಜಿ ಮಾದರಿಗಳಾಗಿ ಬಿಡುಗಡೆಗೊಳಿಸಲಿವೆ.

Most Read Articles

Kannada
English summary
Maruti suzuki ciaz mid size sedan clocked 3 lakh units sales milestone details
Story first published: Friday, September 10, 2021, 15:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X