ಸಹಜ ಸ್ಥಿತಿಯತ್ತ ಮರಳುತ್ತಿದೆ Maruti Suzuki ಕಂಪನಿ ಉತ್ಪಾದನೆ

ಪ್ರಪಂಚದಾದ್ಯಂತ ಸೆಮಿಕಂಡಕ್ಟರ್'ಗಳ ಕೊರತೆ ಎದುರಾಗಿದ್ದು ಆಟೋಮೊಬೈಲ್ ಕಂಪನಿಗಳು ತತ್ತರಿಸಿವೆ. ಭಾರತೀಯ ಆಟೋಮೊಬೈಲ್ ಕಂಪನಿಗಳು ಇದರಿಂದ ಹೊರತಾಗಿಲ್ಲ. ಸೆಮಿಕಂಡಕ್ಟರ್'ಗಳ ಕೊರತೆಯು ಕಂಪನಿಗಳ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.

ಸಹಜ ಸ್ಥಿತಿಯತ್ತ ಮರಳುತ್ತಿದೆ Maruti Suzuki ಕಂಪನಿ ಉತ್ಪಾದನೆ

ಮಾರುತಿ ಸುಜುಕಿ (Maruti Suzuki) ಭಾರತದ ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಕಂಪನಿಯು ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ತನ್ನ ಉತ್ಪಾದನಾ ಘಟಕಗಳಲ್ಲಿ ಉತ್ಪಾದನಾ ಕಾರ್ಯಾಚರಣೆಗಳನ್ನು ಗಣನೀಯವಾಗಿ ಕಡಿಮೆಗೊಳಿಸಿತ್ತು. ಆದರೆ ಈಗ ಸೆಮಿಕಂಡಕ್ಟರ್'ಗಳಿಗೆ ನಿಧಾನವಾಗಿ ಬೇಡಿಕೆ ಕಡಿಮೆಯಾಗುತ್ತಿದೆ. ಇದರಿಂದ ಕಾರುಗಳ ವಿತರಣೆಗಾಗಿ ಕಾಯುವ ಅವಧಿಯೂ ಕಡಿಮೆಯಾಗುತ್ತಿದೆ.

ಸಹಜ ಸ್ಥಿತಿಯತ್ತ ಮರಳುತ್ತಿದೆ Maruti Suzuki ಕಂಪನಿ ಉತ್ಪಾದನೆ

ಕರೋನಾ ವೈರಸ್ ಸಾಂಕ್ರಾಮಿಕದ ನಂತರ ಸೆಮಿಕಂಡಕ್ಟರ್‌ಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಯಿತು. ಕಾರುಗಳಲ್ಲಿ ಅಳವಡಿಸಬಹುದಾದ ಎಲೆಕ್ಟ್ರಾನಿಕ್ ತಂತ್ರಜ್ಞಾನಗಳನ್ನು ತಯಾರಿಸಲು ಸೆಮಿಕಂಡಕ್ಟರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಸೆಮಿಕಂಡಕ್ಟರ್'ಗಳಿಂದ ಉತ್ಪಾದಿಸುವ ಸೆನ್ಸಾರ್ ಹಾಗೂ ಕಂಟ್ರೋಲರ್'ಗಳನ್ನು ಈಗ ಆಧುನಿಕ ವಾಹನಗಳಲ್ಲಿ ಹೆಚ್ಚಾಗಿ ಒದಗಿಸಲಾಗುತ್ತದೆ.

ಸಹಜ ಸ್ಥಿತಿಯತ್ತ ಮರಳುತ್ತಿದೆ Maruti Suzuki ಕಂಪನಿ ಉತ್ಪಾದನೆ

ಸೆಲ್ ಫೋನ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಸೆಮಿಕಂಡಕ್ಟರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕರೋನಾ ವೈರಸ್ ಹಾವಳಿ ಶುರುವಾದ ನಂತರ ಸೆಲ್ ಫೋನ್‌ ಹಾಗೂ ಲ್ಯಾಪ್‌ಟಾಪ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ ಎಂಬುದು ಅಂಕಿ ಅಂಶಗಳಿಂದ ರುಜುವಾತಾಗಿದೆ. ಆಟೋಮೊಬೈಲ್ ಉದ್ಯಮವು ಎದುರಿಸುತ್ತಿರುವ ಸೆಮಿಕಂಡಕ್ಟರ್‌ಗಳ ಕೊರತೆಗೆ ಇದು ಪ್ರಮುಖ ಕಾರಣವಾಗಿದೆ.

ಸಹಜ ಸ್ಥಿತಿಯತ್ತ ಮರಳುತ್ತಿದೆ Maruti Suzuki ಕಂಪನಿ ಉತ್ಪಾದನೆ

ಈಗ ವಿಶ್ವದ ಹಲವು ದೇಶಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಿಸಿರುವುದರಿಂದ ಸೆಮಿಕಂಡಕ್ಟರ್‌ಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಇದರಿಂದ ಆಟೋಮೊಬೈಲ್ ಕಂಪನಿಗಳು ನಿಟ್ಟುಸಿರು ಬಿಡುತ್ತಿವೆ.

ಸಹಜ ಸ್ಥಿತಿಯತ್ತ ಮರಳುತ್ತಿದೆ Maruti Suzuki ಕಂಪನಿ ಉತ್ಪಾದನೆ

ಈ ಬಗ್ಗೆ ಮಾತನಾಡಿರುವ ಮಾರುತಿ ಸುಜುಕಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ, ಕಳೆದ ಕೆಲವು ತಿಂಗಳುಗಳಿಂದ ಸೆಮಿಕಂಡಕ್ಟರ್‌ಗಳ ಕೊರತೆ ತೀವ್ರವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ 40% ಹಾಗೂ ಅಕ್ಟೋಬರ್‌ ತಿಂಗಳಿನಲ್ಲಿ 60% ನಷ್ಟಿದ್ದ ನಮ್ಮ ಕಂಪನಿಯ ಜಿಡಿಪಿ ಈ ನವೆಂಬರ್‌ನಲ್ಲಿ 85% ಆಗಲಿದೆ ಎಂದು ಹೇಳಿದರು.

ಸಹಜ ಸ್ಥಿತಿಯತ್ತ ಮರಳುತ್ತಿದೆ Maruti Suzuki ಕಂಪನಿ ಉತ್ಪಾದನೆ

ಇಡೀ ಭಾರತೀಯ ಆಟೋಮೊಬೈಲ್ ಉದ್ಯಮಕ್ಕೆ ಸೆಮಿಕಂಡಕ್ಟರ್‌ಗಳ ಅವಶ್ಯಕತೆ ಇದೆ ಎಂದು ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ. ಮಾರುತಿ ಸುಜುಕಿ ಕಂಪನಿಯು ಈ ವರ್ಷದ ಅಕ್ಟೋಬರ್'ನಲ್ಲಿ 1,34,779 ಯುನಿಟ್ ಕಾರುಗಳನ್ನು ಉತ್ಪಾದಿಸಿದೆ. ಈ ಪ್ರಮಾಣವು 2020ರ ಅಕ್ಟೋಬರ್ ತಿಂಗಳಿನಲ್ಲಿ ಉತ್ಪಾದಿಸಲಾದ ಮಾರುತಿ ಸುಜುಕಿ ಕಾರುಗಳಿಗಿಂತ 26% ನಷ್ಟು ಕಡಿಮೆಯಾಗಿದೆ.

ಸಹಜ ಸ್ಥಿತಿಯತ್ತ ಮರಳುತ್ತಿದೆ Maruti Suzuki ಕಂಪನಿ ಉತ್ಪಾದನೆ

ತಮ್ಮ ಕಂಪನಿಯ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ ಶಶಾಂಕ್ ಶ್ರೀವಾಸ್ತವ, ಇಂಡೋ - ಜಪಾನೀಸ್ ಕಂಪನಿಯು ಈಗ ಇತರ ಪವರ್‌ಟ್ರೇನ್ ಆಯ್ಕೆಗಳ (ಎಲೆಕ್ಟ್ರಿಕ್) ಬಗ್ಗೆ ಕಲಿಯುತ್ತಿದೆ ಎಂದು ಹೇಳಿದರು. ಅವರ ಮಾತಿನಿಂದ ಮಾರುತಿ ಸುಜುಕಿ ಕಂಪನಿಯು ಸಹ ಇತರ ಕಂಪನಿಗಳಂತೆ ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಎಂಬುದು ಸ್ಪಷ್ಟವಾಗಿದೆ.

ಸಹಜ ಸ್ಥಿತಿಯತ್ತ ಮರಳುತ್ತಿದೆ Maruti Suzuki ಕಂಪನಿ ಉತ್ಪಾದನೆ

ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಸೆಲೆರಿಯೊ ಕಾರ್ ಅನ್ನು ಸಂಪೂರ್ಣವಾಗಿ ಹೊಸ ನೋಟದಲ್ಲಿ ಪರಿಚಯಿಸಿದೆ. ಹೊಸ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾದ ಹೊಸ ಸೆಲೆರಿಯೊ ಕಾರು ಮೊದಲಿಗಿಂತ ವಿಶಾಲ, ಹಗುರ ಹಾಗೂ ಗಟ್ಟಿಮುಟ್ಟಾಗಿದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿಕೊಂಡಿದೆ. ಕಂಪನಿಯು ಈ ಕಾರ್ ಅನ್ನು ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಪೆಟ್ರೋಲ್ ಕಾರು ಎಂದು ಪರಿಚಯಿಸಿದೆ.

ಸಹಜ ಸ್ಥಿತಿಯತ್ತ ಮರಳುತ್ತಿದೆ Maruti Suzuki ಕಂಪನಿ ಉತ್ಪಾದನೆ

ARAI ಪ್ರಮಾಣೀಕರಿಸಿರುವಂತೆ ಹೊಸ ಸೆಲೆರಿಯೊ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ 26.68 ಕಿ.ಮೀ ಮೈಲೇಜ್ ನೀಡುತ್ತದೆ. ಹೊಸ ಸೆಲೆರಿಯೊ ಕಾರಿನಲ್ಲಿ ಕಂಪನಿಯ ಹೊಸ K10C ಲೈನ್ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗಿದೆ. ಮ್ಯಾನುಯಲ್ ಹಾಗೂ ಎಎಂಟಿ ಗೇರ್‌ಬಾಕ್ಸ್ ಆಯ್ಕೆಗಳನ್ನು ಈ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಈ ಎಂಜಿನ್ ಗರಿಷ್ಠ 67 ಬಿಹೆಚ್‌ಪಿ ಪವರ್ ಹಾಗೂ 89 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಸಹಜ ಸ್ಥಿತಿಯತ್ತ ಮರಳುತ್ತಿದೆ Maruti Suzuki ಕಂಪನಿ ಉತ್ಪಾದನೆ

ಹೊಸ ಸೆಲೆರಿಯೊ ಕಾರಿನಲ್ಲಿ ಉತ್ತಮ ಇಂಧನ ದಕ್ಷತೆಗಾಗಿ ಐಡಿಯಲ್ ಸ್ಟಾರ್ಟ್ - ಸ್ಟಾಪ್ ಸಿಸ್ಟಂ ನೀಡಲಾಗಿದೆ. ಮಾರುತಿ ಸುಜುಕಿ ಕಂಪನಿಯು ಹೊಸ ಸೆಲೆರಿಯೊ ಕಾರು ಮಾತ್ರವಲ್ಲದೆ ದೇಶಿಯ ಮಾರುಕಟ್ಟೆಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಕಂಪನಿಯು ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿರುವ ಹೊಸ ತಲೆಮಾರಿನ ವಿಟಾರಾ ಬ್ರೆಝಾ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಇತ್ತೀಚೆಗೆ ಪರೀಕ್ಷಾರ್ಥ ಪ್ರಯೋಗ ನಡೆಸಿತ್ತು.

ಸಹಜ ಸ್ಥಿತಿಯತ್ತ ಮರಳುತ್ತಿದೆ Maruti Suzuki ಕಂಪನಿ ಉತ್ಪಾದನೆ

ಮಾರುತಿ ಸುಜುಕಿ ಕಂಪನಿಯು ತನ್ನ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಹಾಗೂ XL6 ಪ್ರೀಮಿಯಂ ಎಂಪಿವಿ ಮಾದರಿಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಈ ಹೊಸ ಹ್ಯಾಚ್‌ಬ್ಯಾಕ್ ಹಾಗೂ ಎಂಪಿವಿ ಕಾರುಗಳನ್ನು ಸಹ ಕಳೆದ ಕೆಲವು ತಿಂಗಳುಗಳಿಂದ ಪರೀಕ್ಷಾರ್ಥ ರನ್‌ಗಳಲ್ಲಿ ತೊಡಗಿಸಲಾಗಿದೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಇವೆರಡು ಕಾರುಗಳು ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಸಹಜ ಸ್ಥಿತಿಯತ್ತ ಮರಳುತ್ತಿದೆ Maruti Suzuki ಕಂಪನಿ ಉತ್ಪಾದನೆ

ಕಂಪನಿಯ ಮಾರಾಟ ಬಗ್ಗೆ ಹೇಳುವುದಾದರೆ ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು ಒಟ್ಟು 1,38,335 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 1,82,448 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಮಾರುತಿ ಸುಜುಕಿ ಕಂಪನಿಯು ಈ ಬಾರಿ ಶೇ.24.18 ರಷ್ಟು ಕುಸಿತವನ್ನು ದಾಖಲಿಸಿದೆ.

Most Read Articles

Kannada
English summary
Maruti suzuki company s production slowly backs to normal details
Story first published: Thursday, November 25, 2021, 10:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X