ಚಲಿಸುವಾಗಲೇ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ Maruti Suzuki ಕಂಪನಿ

Maruti Suzuki ಕಂಪನಿಯು ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹೈಬ್ರಿಡ್ ಕಾರ್ ಅನ್ನು ರಸ್ತೆ ಬದಿಯ ಚಾರ್ಜಿಂಗ್ ಮೂಲಸೌಕರ್ಯವನ್ನು ಅವಲಂಬಿಸದೆ ಪ್ರಯಾಣದಲ್ಲಿರುವಾಗಲೇ ಚಾರ್ಜ್ ಮಾಡಬಹುದು. ಈ ಆಟೋ ಚಾರ್ಜಿಂಗ್ ಕಾರಿನಲ್ಲಿ ಎಂಜಿನ್ ಬ್ಯಾಟರಿಗೆ ಶಕ್ತಿಯನ್ನು ನೀಡುತ್ತದೆ.

ಚಲಿಸುವಾಗಲೇ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ Maruti Suzuki ಕಂಪನಿ

ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. Hyundai, Tata Motors, Mahindra and Mahindra ಗಳಂತಹ ಹಲವು ದೊಡ್ಡ ದೊಡ್ಡ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿವೆ. ಇದರ ಜೊತೆಗೆ ಅನೇಕ ಹೊಸ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈ ಕಂಪನಿಗಳಿಗೆ ಹೊಲಿಸಿದರೆ Maruti Suzuki ಕಂಪನಿಯು ಈಗ ಹೈಬ್ರಿಡ್ ಎಲೆಕ್ಟ್ರಿಕ್ ಕಾರಿನ ಮೇಲೆ ಕೆಲಸ ಮಾಡುತ್ತಿದೆ.

ಚಲಿಸುವಾಗಲೇ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ Maruti Suzuki ಕಂಪನಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ Maruti Suzuki ಕಂಪನಿಯ ಅಧಿಕಾರಿಯೊಬ್ಬರು ಹಲವಾರು ಎಲೆಕ್ಟ್ರಿಕ್ ವಾಹನಗಳು ಜಂಟಿ ಪರೀಕ್ಷೆಯಲ್ಲಿದ್ದು, ಮುಂದಿನ ತಿಂಗಳಿನಿಂದ Toyota ಕಂಪನಿಯ ಜೊತೆಗೂಡಿ ಈ ಮಾದರಿಗಳ ಪರೀಕ್ಷೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು. ಅದರ ಬಳಕೆಯ ಕುರಿತು ಹೆಚ್ಚಿನ ಗ್ರಾಹಕರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

ಚಲಿಸುವಾಗಲೇ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ Maruti Suzuki ಕಂಪನಿ

ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವವರೆಗೆ ಆಟೋ ಚಾರ್ಜಿಂಗ್ ಯಂತ್ರಗಳು ಬೇಕಾಗುತ್ತವೆ. ಈ ಕಾರಣಕ್ಕೆ ನಾವು ಆ ದಿಕ್ಕಿನಲ್ಲಿ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಿದ್ದೇವೆ ಎಂದು ಅವರು ಹೇಳಿದರು. Maruti Suzuki ಕಂಪನಿಯು ಹಲವು ದಿನಗಳಿಂದ ಈ ವಾಹನವನ್ನು ಪರೀಕ್ಷಿಸುತ್ತಿದೆ.

ಚಲಿಸುವಾಗಲೇ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ Maruti Suzuki ಕಂಪನಿ

ಮುಂದಿನ 10 - 15 ವರ್ಷಗಳವರೆಗೆ ಇದು ಒಂದು ಪ್ರಬಲ ತಂತ್ರಜ್ಞಾನವಾಗಿರಲಿದ್ದು, ಹಲವು ಅನುಕೂಲಗಳನ್ನು ಹೊಂದಿರಲಿದೆ ಎಂಬುದು ಕಂಪನಿಯ ಅಭಿಪ್ರಾಯ. ಈ ತಂತ್ರಜ್ಞಾನವು ಎಕ್ಸ್ ಟರ್ನಲ್ ಚಾರ್ಜಿಂಗ್ ಮೂಲಸೌಕರ್ಯದ ಅವಲಂಬನೆಯನ್ನು ತಪ್ಪಿಸಬಹುದು. ಜೊತೆಗೆ ಮಾಲಿನ್ಯ ಹೊರಸೂಸುವಿಕೆಯು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆ.

ಚಲಿಸುವಾಗಲೇ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ Maruti Suzuki ಕಂಪನಿ

ಈ ಆಟೋ ಚಾರ್ಜಿಂಗ್ ಕಾರಿನ ಎಂಜಿನ್ ಬ್ಯಾಟರಿಗೆ ಪವರ್ ನೀಡುತ್ತದೆ. ಇದರಿಂದ ಕಾರು ಹೆಚ್ಚು ದೂರದವರೆಗೂ ಚಲಿಸಲು ಸಾಧ್ಯವಾಗುತ್ತದೆ. Maruti Suzuki ಕಂಪನಿಯು Toyota ಕಂಪನಿಯ ಸಹಯೋಗದೊಂದಿಗೆ Suse ಎಂಬ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸಿದೆ. ಈ ಕಾರು 3.6 ಕಿ.ವ್ಯಾ ಬ್ಯಾಟರಿ ಹಾಗೂ 1.8 ಲೀಟರ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್'ಗೆ 27 ಕಿ.ಮೀಗಳ ಮೈಲೇಜ್ ನೀಡುತ್ತದೆ.

ಚಲಿಸುವಾಗಲೇ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ Maruti Suzuki ಕಂಪನಿ

Maruti Suzuki ಕಂಪನಿಯು ಹಲವಾರು ದಿನಗಳಿಂದ WagonR ಎಲೆಕ್ಟ್ರಿಕ್ ಕಾರ್ ಅನ್ನು ಪರೀಕ್ಷಿಸುತ್ತಿದೆ. ಈ ಕಾರು Maruti Suzuki ಕಂಪನಿಯ ಮೊದಲಎಲೆಕ್ಟ್ರಿಕ್ ಕಾರು ಮಾದರಿಯಾಗಲಿದೆ. ಆದರೆ ಈ ಕಾರ್ ಅನ್ನು ಯಾವಾಗ ಬಿಡುಗಡೆಗೊಳಿಸಲಾಗುತ್ತದೆ ಎಂಬ ಬಗ್ಗೆ Maruti Suzuki ಕಂಪನಿಯು ಮಾಹಿತಿ ನೀಡಿಲ್ಲ.

ಚಲಿಸುವಾಗಲೇ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ Maruti Suzuki ಕಂಪನಿ

ಈ ಕಾರಿನ 50 ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. Maruti Suzuki ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದರತ್ತ ಹೆಚ್ಚು ಗಮನ ಹರಿಸುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಚಲಿಸುವಾಗಲೇ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ Maruti Suzuki ಕಂಪನಿ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯವನ್ನು ಸುಧಾರಿಸಲು ಕೇಂದ್ರ ಸರ್ಕಾರವೂ ಮುಂದಾಗಿದೆ. ಜೊತೆಗೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಸಹ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದನ್ನು ಅನೇಕ ಗ್ರಾಹಕರು ಕಾಯುತ್ತಿದ್ದಾರೆ.

ಚಲಿಸುವಾಗಲೇ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ Maruti Suzuki ಕಂಪನಿ

Maruti Suzuki ಕಂಪನಿಯು ಎಲೆಕ್ಟ್ರಿಕ್ ವಾಹನ ಸೆಗ್ ಮೆಂಟಿನಲ್ಲಿ ಬೇರೆ ಕಂಪನಿಗಳಿಗೆ ಹೋಲಿಸಿದರೆ ತೀರಾ ಹಿಂದುಳಿದಿದೆ ಎಂದೇ ಹೇಳಬಹುದು. ಆದರೆ ಕಂಪನಿಯು ಯಾವುದೇ ಆತುರ ತೋರದೇ ಹೈಬ್ರಿಡ್ ವಾಹನಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ಆದರೆ ಕಂಪನಿಯು ಅದನ್ನು ಬಿಡುಗಡೆಗೊಳಿಸಲು ವಿಳಂಬ ಮಾಡಲು ಬಯಸುವುದಿಲ್ಲ. ಆದಷ್ಟು ಬೇಗ ತನ್ನ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಚಲಿಸುವಾಗಲೇ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ Maruti Suzuki ಕಂಪನಿ

Maruti Suzuki ಕಂಪನಿಗಳು ಭಾರತದಲ್ಲಿ ತಮ್ಮದೇ ಆದ ಜನಪ್ರಿಯತೆಯನ್ನು ಹೊಂದಿವೆ. ಎರಡು ಮೂರು ದಶಕಗಳ ಹಿಂದೆ Maruti ಕಂಪನಿಯ ಕಾರುಗಳನ್ನು ಖರೀದಿಸುವುದು ಜನರಿಗೆ ಹೆಮ್ಮೆಯ ಸಂಗತಿಯಾಗಿತ್ತು. ಆಗ ಮಾರಾಟವಾಗುತ್ತಿದ್ದ ಕಂಪನಿಯ Maruti 800 ಕಾರು ಹೆಚ್ಚು ಜನಪ್ರಿಯವಾಗಿತ್ತು. ಈಗಲೂ ಸಹ ಆ ಕಾರ್ ಅನ್ನು ಭಾರತದ ರಸ್ತೆಗಳಲ್ಲಿ ಕಾಣಬಹುದು. ಈ ಕಾರಣಕ್ಕಾಗಿಯೇ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಜನರು Maruti Suzuki ಕಂಪನಿಯ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಮೂಲ: ಮನಿ ಕಂಟ್ರೋಲ್

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Maruti suzuki company working on hybrid electric vehicles details
Story first published: Tuesday, August 24, 2021, 12:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X