ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಆನ್‌ಲೈನ್ ಕಾರ್ ಫೈನಾನ್ಸಿಂಗ್ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಸ್ಮಾರ್ಟ್ ಫೈನಾನ್ಸ್ ದೇಶಿಯ ಮಾರುಕಟ್ಟೆಯಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ ಮೂಲಕ ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಒಟ್ಟು ರೂ. 6,500 ಕೋಟಿ ಕಾರು ಸಾಲ ವಿತರಿಸಲಾಗಿದೆ. ವಿಶೇಷವೆಂದರೆ ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ ಆರಂಭವಾದ ಕೇವಲ ಒಂಬತ್ತು ತಿಂಗಳಲ್ಲಿ ಈ ಸಾಧನೆ ಮಾಡಿದೆ.

ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಸ್ಮಾರ್ಟ್ ಫೈನಾನ್ಸಿಂಗ್ ಸೊಲ್ಯೂಷನ್ಸ್ ಮೂಲಕ, ಕಂಪನಿಯು ತನ್ನ ಗ್ರಾಹಕರಿಗೆ ನೈಜ ಸಮಯದ ಟ್ರ್ಯಾಕಿಂಗ್‌ನೊಂದಿಗೆ ಆನ್‌ಲೈನ್ ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಇದು ಕ್ರೆಡಿಟ್ ಸ್ಕೋರ್ ಆಧಾರಿತ ಬಡ್ಡಿ ದರ, ಪೂರ್ವ ಅನುಮೋದಿತ ಸಾಲ, ಆನ್‌ಲೈನ್ ಡಾಕ್ಯುಮೆಂಟ್ ಶೇರಿಂಗ್, ನೈಜ ಸಮಯದ ಸಾಲದ ಸ್ಥಿತಿ ಟ್ರ್ಯಾಕಿಂಗ್‌ನಂತಹ ಹಲವು ವೈಶಿಷ್ಟ್ಯಗಳನ್ನು ನೀಡುತ್ತದೆ.

ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಇದರ ಜೊತೆಗೆ ಪ್ಲಾಟ್‌ಫಾರಂ ಸಹ ಅರ್ಜಿದಾರರಿಂದ ಹಣಕಾಸು ಒದಗಿಸುವ ಆಯ್ಕೆಯನ್ನು ಸಹ ಒದಗಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಯಾವುದೇ ಗೌಪ್ಯ ಶುಲ್ಕ ಅಥವಾ ಸಂಬಂಧಿತ ಶುಲ್ಕಗಳಿಲ್ಲದೆ ಪಾರದರ್ಶಕವಾಗಿರುತ್ತದೆ. ಮಾರುತಿ ಸುಜುಕಿ ಕಂಪನಿಯು 16 ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಇವುಗಳಲ್ಲಿ ಹೆಚ್‌ಡಿ‌ಎಫ್‌ಸಿ ಬ್ಯಾಂಕ್, ಐ‌ಸಿ‌ಐ‌ಸಿ‌ಐ ಬ್ಯಾಂಕ್, ಯೆಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಸ್‌ಇಂಡ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಚೋಳಮಂಡಲಂ ಫೈನಾನ್ಸ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಮಹೀಂದ್ರಾ ಫೈನಾನ್ಸ್, ಕೋಟಕ್ ಮಹೀಂದ್ರಾ, ಸುಂದರಂ ಸೇರಿವೆ.

ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಈ ಪ್ಲಾಟ್ ಫಾರಂಗೆ ಇನ್ನೂ ಕೆಲವು ಹೊಸ ಹಣಕಾಸು ಕಂಪನಿಗಳನ್ನು ಸೇರಿಸಲು ಯೋಜಿಸುತ್ತಿರುವುದಾಗಿ ಮಾರುತಿ ಸುಜುಕಿ ಕಂಪನಿ ಹೇಳಿದೆ. ಆನ್‌ಲೈನ್ ಕಾರ್ ಫೈನಾನ್ಸಿಂಗ್ ಅನ್ನು ಹೆಚ್ಚು ವ್ಯಾಪಕವಾಗಿ ಮಾಡಲು ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ ಎಕ್ಸ್‌ಚೇಂಜ್ ಆಯ್ಕೆಯನ್ನು ಸಹ ಪರಿಚಯಿಸಿದೆ. ಇದು ಬಳಸಿದ ಕಾರುಗಳಿಗೆ ಬದಲಿಗೆ ಖರೀದಿದಾರರಿಗೆ ಸಮಂಜಸವಾದ ಅಂದಾಜು ಮೌಲ್ಯವನ್ನು ಒದಗಿಸುತ್ತದೆ.

ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಈ ಬಗ್ಗೆ ಮಾತನಾಡಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಅಂಡ್ ಸೇಲ್ಸ್) ಶಶಾಂಕ್ ಶ್ರೀವಾಸ್ತವ, ಕರೋನಾ ಸಾಂಕ್ರಾಮಿಕದ ನಂತರ ಡಿಜಿಟಲ್ ಖರೀದಿ ಹಾಗೂ ಮಾರಾಟದಲ್ಲಿ ಭಾರಿ ಬೆಳವಣಿಗೆ ಕಂಡುಬಂದಿದೆ. ಜನರು ಈಗ ಕಾರು ಖರೀದಿಗಾಗಿ ಡಿಜಿಟಲ್ ಮಾರ್ಗವನ್ನು ಅನುಸರಿಸುತ್ತಿದ್ದಾರೆ.

ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಈ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್‌ನೊಂದಿಗೆ ಡಿಜಿಟಲ್ ಪರಿಹಾರವನ್ನು ಪರಿಚಯಿಸಿದೆ. ಡಿಜಿಟಲ್ ಮಾಧ್ಯಮವು ಕಾರು ಖರೀದಿಯ ಅನುಭವವನ್ನು ಗ್ರಾಹಕರಿಗೆ ಇನ್ನಷ್ಟು ಉತ್ತಮ ಹಾಗೂ ಸುಲಭವಾಗಿಸಿದೆ ಎಂದು ಹೇಳಿದರು.

ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಅಂದ ಹಾಗೆ ಅಕ್ಟೋಬರ್‌ನಲ್ಲಿ ಮಾರುತಿ ಸುಜುಕಿ ಕಂಪನಿಯು 1,38,335 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 1,12,788 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದರೆ, 21,322 ಯುನಿಟ್'ಗಳನ್ನು ರಫ್ತು ಮಾಡಿದೆ. 2020ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಕಂಪನಿಯ ಮಾರಾಟವು 33% ನಷ್ಟು ಕುಸಿತವನ್ನು ದಾಖಲಿಸಿದೆ.

ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಸೆಮಿ ಕಂಡಕ್ಟರ್ ಕೊರತೆಯಿಂದಾಗಿ ಕಾರುಗಳ ಉತ್ಪಾದನೆ ಕುಂಠಿತಗೊಂಡು ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ಕಂಪನಿ ಹೇಳಿದೆ. ಮಾರುತಿ ಸುಜುಕಿ ಕಂಪನಿಯು ಹೊಸ ತಲೆಮಾರಿನ Celerio ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಕಂಪನಿಯು ಈ ಕಾರ್ ಅನ್ನು ನವೆಂಬರ್ 10 ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಮಾರುತಿ ಸುಜುಕಿ ಕಂಪನಿಯ ಉತ್ಪಾದನೆಯು ಈ ತಿಂಗಳಿನಿಂದ ಸಹಜ ಸ್ಥಿತಿಗೆ ತಲುಪುವ ಸಾಧ್ಯತೆಗಳಿವೆ. ಕಂಪನಿಯು ನವೆಂಬರ್ ತಿಂಗಳಲ್ಲಿ 1,45,000 - 1,50,000 ಯುನಿಟ್ ಕಾರುಗಳನ್ನು ಉತ್ಪಾದಿಸುವ ನಿರೀಕ್ಷೆಗಳಿವೆ. ಸೆಮಿಕಂಡಕ್ಟರ್‌ಗಳ ಪೂರೈಕೆ ಉತ್ತಮವಾಗುವುದರಿಂದ ಉತ್ಪಾದನೆಯು ಸುಧಾರಿಸಲಿದೆ ಎಂದು ಹೇಳಲಾಗಿದೆ.

ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲೇ ತನ್ನ ಜನಪ್ರಿಯ ಮಾದರಿಗಳಾದ Swift, Dzire, Vitara Brezza ಕಾರುಗಳ ಉತ್ಪಾದನೆಯನ್ನು ಹೆಚ್ಚಿಸಲಿದೆ. ಮೂಲಗಳ ಪ್ರಕಾರ ಕಂಪನಿಯು ಈ ಉತ್ಪಾದನಾ ಸಂಖ್ಯೆಯ ಅಂಕಿ ಅಂಶಗಳನ್ನು ಉಪಕರಣಗಳ ಪೂರೈಕೆದಾರರಿಗೆ ನೀಡಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ ತಿಂಗಳುಗಳಲ್ಲಿ ಕಂಪನಿಯ ಉತ್ಪಾದನೆಯಲ್ಲಿ 50% - 60% ನಷ್ಟು ಇಳಿಕೆಯಾಗಿದೆ.

ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಸೆಮಿಕಂಡಕ್ಟರ್‌ಗಳ ಕೊರತೆ ಕಂಪನಿಯ ಉತ್ಪಾದನೆ ಇಳಿಕೆಯಾಗಲು ಪ್ರಮುಖ ಕಾರಣವಾಗಿದೆ. ಸೆಮಿಕಂಡಕ್ಟರ್ ಗಳು ಆಧುನಿಕ ಕಾರುಗಳಲ್ಲಿ ಪ್ರಮುಖವಾಗಿವೆ.ಸೆಮಿಕಂಡಕ್ಟರ್‌ಗಳ ಕೊರತೆಯಿಂದ ಹಲವು ಕಂಪನಿಗಳು ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿವೆ. ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಮಲೇಷ್ಯಾದಲ್ಲಿ ಸೆಮಿಕಂಡಕ್ಟರ್ ಗಳ ಉತ್ಪಾದನೆಯು ಮತ್ತೆ ಹೆಚ್ಚಾಗಲಿದೆ.

ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಈ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯ ಉತ್ಪಾದನೆಯು ನವೆಂಬರ್‌ ತಿಂಗಳಿಗಿಂತ ಹೆಚ್ಚಾಗಿರಲಿದೆ ಎಂದು ಅಂದಾಜಿಸಲಾಗಿದೆ. ಅಕ್ಟೋಬರ್‌ನಲ್ಲಿ ಕಂಪನಿಯ ಉತ್ಪಾದನೆಯು ಸೆಪ್ಟೆಂಬರ್‌ ತಿಂಗಳಿಗಿಂತ 40% ನಷ್ಟು ಹೆಚ್ಚಾಗಿದೆ. ಅಕ್ಟೋಬರ್‌ಗೆ ಹೋಲಿಸಿದರೆ ಕಾರುಗಳ ಉತ್ಪಾದನೆಯು ನವೆಂಬರ್ ತಿಂಗಳಿನಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ. ಇದರಿಂದ ಕಂಪನಿಯ ಕಾರುಗಳ ಉತ್ಪಾದನೆಯು ಡಿಸೆಂಬರ್ ವೇಳೆಗೆ ಸಹಜ ಸ್ಥಿತಿಯತ್ತ ಮರಳಲಿದೆ.

ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಮಾರುತಿ ಸುಜುಕಿ ಕಂಪನಿಯ ಸರಾಸರಿ ಉತ್ಪಾದನೆ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ಕರೋನಾ ವೈರಸ್ ಎರಡನೇ ಅಲೆ ದೇಶಕ್ಕೆ ಅಪ್ಪಳಿಸುವ ಮೊದಲು 1,67,000 ಯುನಿಟ್‌ಗಳಷ್ಟಿತ್ತು. ಮಲೇಷ್ಯಾದಲ್ಲಿ ತಯಾರಿಸಲಾಗುವ ಸೆಮಿಕಂಡಕ್ಟರ್‌ಗಳು ಭಾರತವನ್ನು ತಲುಪಲು 6 ರಿಂದ 8 ವಾರಗಳು ಬೇಕಾಗುತ್ತವೆ. ಸೆಪ್ಟೆಂಬರ್ - ಅಕ್ಟೋಬರ್‌ ಅವಧಿಯಲ್ಲಿ ಕಂಪನಿಯ ಉತ್ಪಾದನೆಯು ಸುಧಾರಿಸಿದೆ.

ಸ್ಮಾರ್ಟ್ ಫೈನಾನ್ಸ್ ಮೂಲಕ ಆರು ಸಾವಿರ ಕೋಟಿ ಸಾಲ ವಿತರಿಸಿದ Maruti Suzuki

ಉತ್ಪಾದನೆಯು ನವೆಂಬರ್ - ಡಿಸೆಂಬರ್‌ನಲ್ಲಿ ಮತ್ತಷ್ಟು ಸುಧಾರಿಸುವ ಸಾಧ್ಯತೆಗಳಿವೆ. SIAM ಪ್ರಕಾರ, ಮಾರುತಿ ಸುಜುಕಿ ಕಂಪನಿಯು ನವೆಂಬರ್‌ ತಿಂಗಳಿನಲ್ಲಿ 1,50,000 ಯುನಿಟ್‌ಗಳನ್ನು ಉತ್ಪಾದಿಸಿದರೆ, ಈ ಪ್ರಮಾಣವು ಕಳೆದ ನಾಲ್ಕು ವರ್ಷಗಳಲ್ಲಿಯೇ ಅತ್ಯುತ್ತಮ ಎನಿಸಲಿದೆ. ಇದಕ್ಕೂ ಮುನ್ನ ಕಂಪನಿಯು 2017ರ ನವೆಂಬರ್ ತಿಂಗಳಿನಲ್ಲಿ 1,54,000 ಯುನಿಟ್‌ ಕಾರುಗಳನ್ನು ಉತ್ಪಾದಿಸಿತ್ತು.

Most Read Articles

Kannada
English summary
Maruti suzuki disbursed rs 6500 crore car loan through smart finance details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X