ಹಲವು ಸುರಕ್ಷತಾ ಫೀಚರ್'ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಇಕೋ ಕಾರ್ಗೋ

ಮಾರುತಿ ಸುಜುಕಿ ಕಂಪನಿಯ ಇಕೋ ಕಾರ್ಗೊ ವಾಹನವು ಹೆಚ್ಚು ಸ್ಥಳ ಹಾಗೂ ಮೆಂಟೆನೆನ್ಸ್'ಗೆ ಹೆಸರುವಾಸಿಯಾಗಿದೆ. ಮಾರುತಿ ಸುಜುಕಿ ಕಂಪನಿಯು ಇಕೋ ವಾಹನವನ್ನು ಕಾಲ ಕಾಲಕ್ಕೆ ಅಪ್ ಡೇಟ್ ಮಾಡುತ್ತಿದೆ.

ಹಲವು ಸುರಕ್ಷತಾ ಫೀಚರ್'ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಇಕೋ ಕಾರ್ಗೋ

ಈಗ ಕಂಪನಿಯು ಈ ವಾಹನದಲ್ಲಿ ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಸಿಸ್ಟಂ ಅಳವಡಿಸಿದೆ. ಇದರಿಂದಾಗಿ ಇಕೋ ವಾಹನದ ಸುರಕ್ಷತೆ ಮತ್ತಷ್ಟು ಹೆಚ್ಚಿದೆ. ಈ ಫೀಚರ್ ಅಳವಡಿಸಿರುವ ಕಂಪನಿಯು ವಾಹನದ ಬೆಲೆಯನ್ನು ಸಹ ಹೆಚ್ಚಿಸಿದೆ. ಬೆಲೆ ಹೆಚ್ಚಳದ ನಂತರ ಮಾರುತಿ ಇಕೋ ವಾಹನದ ಬೆಲೆ ಎಕ್ಸ್ ಶೋರೂಂ ದರದಂತೆ ರೂ.4.27 ಲಕ್ಷದಿಂದ ರೂ.5.49 ಲಕ್ಷಗಳಾಗಿದೆ.

ಹಲವು ಸುರಕ್ಷತಾ ಫೀಚರ್'ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಇಕೋ ಕಾರ್ಗೋ

ಹೊಸ ಬೆಲೆಗಳು ಏಪ್ರಿಲ್ 21ರಿಂದ ಜಾರಿಗೆ ಬಂದಿವೆ. ರಿವರ್ಸ್ ಪಾರ್ಕಿಂಗ್ ಫೀಚರ್ ಜೊತೆಗೆ ಇಕೋ ವಾಹನದಲ್ಲಿ ಸ್ಪೀಡ್ ಲಿಮಿಟರ್ ಡಿವೈಸ್, ಸೈಡ್ ಇಂಪ್ಯಾಕ್ಟ್ ಬೀಮ್, ರಿಫ್ಲೆಕ್ಟರ್ ಸ್ಟ್ರಿಪ್, ಏರ್‌ಬ್ಯಾಗ್, ಎಬಿಎಸ್ ಇಬಿಡಿ ಹಾಗೂ ಸೀಟ್‌ಬೆಲ್ಟ್ ರಿಮ್ಯಾಂಡರ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್'ಗಳನ್ನು ಸೇರಿಸಲಾಗಿದೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಹಲವು ಸುರಕ್ಷತಾ ಫೀಚರ್'ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಇಕೋ ಕಾರ್ಗೋ

ಮಾರುತಿ ಸುಜುಕಿ ಕಂಪನಿಯು ಇಕೋ ವಾಹನವನ್ನು ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್'ಗಳಲ್ಲಿ ಮಾರಾಟ ಮಾಡುತ್ತದೆ. ಈ ವಾಹನದ ಬಿಎಸ್ 6 ಸಿಎನ್‌ಜಿ ಮಾದರಿಯನ್ನು ಕಳೆದ ವರ್ಷ ಜನವರಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಹಲವು ಸುರಕ್ಷತಾ ಫೀಚರ್'ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಇಕೋ ಕಾರ್ಗೋ

ಇಕೋ ಕಾರ್ಗೋ ಮಾದರಿಯನ್ನು 2015ರಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆಯಾದ 3 ವರ್ಷಗಳಲ್ಲಿ ಅಂದರೆ 2018ರ ವೇಳೆಗೆ ಕಂಪನಿಯು 5 ಲಕ್ಷ ಯುನಿಟ್‌ ಇಕೋ ಕಾರ್ಗೋ ವಾಹನಗಳನ್ನು ಮಾರಾಟ ಮಾಡಿದೆ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಹಲವು ಸುರಕ್ಷತಾ ಫೀಚರ್'ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಇಕೋ ಕಾರ್ಗೋ

ಮಾರುತಿ ಇಕೋ ವಾಹನದಲ್ಲಿರುವ ಎಂಜಿನ್ ಬಗ್ಗೆ ಹೇಳುವುದಾದರೆ, ಇಕೋ ಕಾರ್ಗೋ ವಾಹನದಲ್ಲಿ ಅಳವಡಿಸಿರುವ 1.2 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ 72 ಬಿಹೆಚ್‌ಪಿ ಪವರ್ ಹಾಗೂ 98 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಹಲವು ಸುರಕ್ಷತಾ ಫೀಚರ್'ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಇಕೋ ಕಾರ್ಗೋ

ಇನ್ನು ಸಿಎನ್‌ಜಿ ಎಂಜಿನ್ 46 ಬಿಹೆಚ್‌ಪಿ ಪವರ್ ಹಾಗೂ 85 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಮಾದರಿಯೂ ಇಕೋ ಕಾರ್ಗೋದ ಒಟ್ಟು ಮಾರಾಟದಲ್ಲಿ 17%ನಷ್ಟು ಪಾಲನ್ನು ಹೊಂದಿದೆ.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಹಲವು ಸುರಕ್ಷತಾ ಫೀಚರ್'ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಇಕೋ ಕಾರ್ಗೋ

ಮಾರುತಿ ಸುಜುಕಿ ಕಂಪನಿಯು ದೇಶಾದ್ಯಂತ ಒಂದು ತಿಂಗಳ ಕಾಲ ರಿಪೇರಿ ಶಿಬಿರವನ್ನು ಆಯೋಜಿಸುತ್ತಿದೆ. ಈ ಶಿಬಿರವು ಏಪ್ರಿಲ್ 20ರಿಂದ ಮೇ 20ರವರೆಗೆ ಮಾರುತಿ ಸುಜುಕಿ ಕಂಪನಿಯ ಎಲ್ಲಾ ಅಧಿಕೃತ ನೆಕ್ಸಾ ಹಾಗೂ ಅರೆನಾ ಮಾರಾಟಗಾರರಲ್ಲಿ ನಡೆಯಲಿದೆ.

ಹಲವು ಸುರಕ್ಷತಾ ಫೀಚರ್'ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಇಕೋ ಕಾರ್ಗೋ

ಈ ಶಿಬಿರದಲ್ಲಿ ಮಾರುತಿ ಸುಜುಕಿ ಕಂಪಪನಿಯು ವಿಶೇಷ ಸೇವೆಗಳ ಜೊತೆಗೆ ರಿಯಾಯಿತಿ ಕೊಡುಗೆಗಳನ್ನು ನೀಡಲಿದೆ. ಈ ಶಿಬಿರದಲ್ಲಿ ಎಸಿ ಫಿಲ್ಟರ್, ಎಸಿ ಗ್ಯಾಸ್, ಎಸಿ ಟ್ರೀಟ್ ಮೆಂಟ್ ಕಿಟ್, ಕಂಡೆನ್ಸರ್ ಮುಂತಾದವುಗಳಿಗೆ ವಿಶೇಷ ಸರ್ವೀಸ್ ನೀಡಲಾಗುವುದು.

MOSTREAD: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಹಲವು ಸುರಕ್ಷತಾ ಫೀಚರ್'ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಇಕೋ ಕಾರ್ಗೋ

ಈ ಶಿಬಿರದಲ್ಲಿ ಸರ್ವೀಸ್ ಕೇಂದ್ರಕ್ಕೆ ಬರುವ ವಾಹನಗಳನ್ನು ಸರ್ವೀಸ್'ಗೆ ಮೊದಲು ಹಾಗೂ ನಂತರ ಸ್ವಚ್ಛಗೊಳಿಸಲಾಗುತ್ತದೆ. ಈ ಎಲ್ಲಾ ಕೊಡುಗೆಗಳು ಮಾರುತಿ ಸುಜುಕಿ ಕಂಪನಿಯ ಅಧಿಕೃತ ಸೇವಾ ಕೇಂದ್ರಗಳಲ್ಲಿ ಮಾತ್ರ ಲಭ್ಯವಿರಲಿವೆ. ಈ ಶಿಬಿರವು ಆಯಾ ರಾಜ್ಯಗಳಲ್ಲಿರುವ ಲಾಕ್‌ಡೌನ್ ನಿಯಮವನ್ನು ಅವಲಂಬಿಸಿರುತ್ತದೆ.

ಹಲವು ಸುರಕ್ಷತಾ ಫೀಚರ್'ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಇಕೋ ಕಾರ್ಗೋ

ಮಾರುತಿ ಸುಜುಕಿ ಕಂಪನಿಯು ತನ್ನ ಆಯ್ದ ಕೆಲವು ಕಾರುಗಳ ಬೆಲೆಯನ್ನು ಏಪ್ರಿಲ್ 16ರಿಂದ ಹೆಚ್ಚಿಸಿದೆ. ಕಂಪನಿಯ ಅರೆನಾ ಹಾಗೂ ನೆಕ್ಸಾದಲ್ಲಿ ಮಾರಾಟವಾಗುವ ಕೆಲವು ಮಾದರಿಗಳ ಬೆಲೆಯನ್ನು ರೂ.34,000ಗಳವರೆಗೆ ಹೆಚ್ಚಿಸಿದೆ.

MOSTREAD: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಹಲವು ಸುರಕ್ಷತಾ ಫೀಚರ್'ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಇಕೋ ಕಾರ್ಗೋ

ಈ ಬೆಲೆ ಹೆಚ್ಚಳವು ಆಲ್ಟೊ, ಸ್ವಿಫ್ಟ್, ಡಿಜೈರ್, ಬ್ರೆಝಾ, ಎಕ್ಸ್‌ಎಲ್ 6, ವ್ಯಾಗನ್ಆರ್, ಎರ್ಟಿಗಾ ಕಾರುಗಳಿಗೆ ಅನ್ವಯವಾಗುತ್ತದೆ.

Most Read Articles

Kannada
English summary
Maruti Suzuki Eeco cargo gets many safety features. Read in Kannada.
Story first published: Tuesday, April 27, 2021, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X