ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Maruti Suzuki Eeco

ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಇಕೋನ ಪ್ರಯಾಣಿಕ ಮಾದರಿಯ ಎಲ್ಲಾ ರೂಪಾಂತರಗಳ ಬೆಲೆ ಏರಿಕೆಯನ್ನು ಮಾಡಿದೆ. ಕಂಪನಿಯ ಪ್ರಕಾರ ಬ್ರ್ಯಾಂಡ್ ಈಗ ಪ್ಯಾಸೆಂಜರ್ ಏರ್‌ಬ್ಯಾಗ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುವುದರಿಂದ ಇದರ ಬೆಲೆಯನ್ನು ರೂ.8,000 ಗಳವರೆಗೆ ಹೆಚ್ಚಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Maruti Suzuki Eeco

ಮಾರುತಿ ಸುಜುಕಿ ಇಕೋ ಈ ಹಿಂದೆ ಚಾಲಕ ಏರ್‌ಬ್ಯಾಗ್ ಅನ್ನು ಮಾತ್ರ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿತ್ತು. ಈ ಮಾದರಿಯು ಇಬಿಡಿ ಜೊತೆಗೆ ಎಬಿಎಸ್, ರೇರ್ ಪಾರ್ಕಿಂಗ್ ಸೆನ್ಸರ್ ಗಳು, ಸ್ಪೀಡ್ ಅಲರ್ಟ್ ಸಿಸ್ಟಂ ಮತ್ತು ಸೀಟ್-ಬೆಲ್ಟ್ ರಿಮೈಂಡರ್ ಸಿಸ್ಟಮ್‌ನಂತಹ ಕೆಲವು ಇತರ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಮಾರುತಿ ಸುಜುಕಿ ಕಂಪನಿಯು ಕಳೆದ 10 ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಇಕೋ ಮಾದರಿಯ 7 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Maruti Suzuki Eeco

ಮಾರುತಿ ಸುಜುಕಿ ಇಕೋ ವ್ಯಾನ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ 2010ರಲ್ಲಿ ಬಿಡುಗಡೆಗೊಳಿಸಿದ್ದರು. ಮಾರುತಿ ಸುಜುಕಿ ಕಂಪನಿಯು ಕೇವಲ ಎರಡು ವರ್ಷಗಳಲ್ಲಿ ಇಕೋ ಮಾದರಿಯ 1 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಿದ್ದರು. 2014ರಲ್ಲಿ ಮಾರುತಿ ಮತ್ತೆ 1 ಲಕ್ಷ ಯುನಿಟ್ ಇಕೋವನ್ನು ಮಾರಾಟ ಮಾಡಿತು.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Maruti Suzuki Eeco

ಬೇಡಿಕೆ ಹೆಚ್ಚಾದಾಗ ಬೇಡಿಕೆಗೆ ತಕ್ಕಂತೆ ಪೂರೈಸಲು ಇಕೋ ಮಾದರಿಯ ಕಾರ್ಗೋ ಎಂಬ ಹೊಸ ರೂಪಾಂತರವನ್ನು ಪರಿಚಯಿಸಿದ್ದರು. ನಂತರ ಮೂರು ವರ್ಷಗಳಲ್ಲಿ ಸತತವಾಗಿ 1 ಲಕ್ಷ ಯೂನಿಟ್ ಇಕೋವನ್ನು ಮಾರುತಿ ಸುಜುಕಿ ಕಂಪನಿಯು ಮಾರಾಟವನ್ನು ಮಾಡಿದ್ದರು.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Maruti Suzuki Eeco

2018ರ ವೇಳೆಗೆ ಮಾರುತಿ ಸುಜುಕಿ ಕಂಪನಿಯು ಒಟ್ಟು 5 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದರು. ನಂತರ ಮಾರುತಿ ಸುಜುಕಿ ಕಂಪನಿಯು ತನ್ನ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾದ ಇಕೋ ವ್ಯಾನ್ ಅನ್ನು ಸಿಎನ್‌ಜಿ ಆವೃತ್ತಿಯಲ್ಲಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Maruti Suzuki Eeco

ಈ ಮಾದರಿಯಲ್ಲಿ ಹೆಚ್ಚು ಸ್ಪೇಸ್ ಹಾಗೂ ಅಲ್ಟ್ರಾ ಎಫಿಶಿಯನ್ಸಿ ಎಂಜಿನ್ ಇದರ ಜನಪ್ರಿಯತೆಗೆ ಮುಖ್ಯ ಕಾರಣವಾಗಿದೆ. ಈ ಕಾರಣಕ್ಕೆ ಮಾರುತಿ ಸುಜುಕಿ ಕಂಪನಿಯು ಇಕೋ ಕಾರ್ ಅನ್ನು ಸಿಎನ್‌ಜಿ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಿದೆ. ಸಿಎನ್‌ಜಿ ಕಾರುಗಳು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವಾಹನಗಳಿಗಿಂತ ಕಡಿಮೆ ಮಾಲಿನ್ಯವನ್ನು ಉಂಟು ಮಾಡುತ್ತವೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Maruti Suzuki Eeco

ಈ ಇಕೋ ಮಾದರಿಯಲ್ಲಿ 5 ರಿಂದ 7 ಸೀಟುಗಳನ್ನು ಹೊಂದಿದೆ. ಈ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 73 ಬಿಹೆಚ್‌ಪಿ ಮತ್ತು 101 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡಿನ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Maruti Suzuki Eeco

ಮಾರುತಿ ಇಕೋ ಸಿಎನ್‌ಜಿ ಮಾದರಿಯು ಪ್ರತಿ ಲೀಟರ್‌ಗೆ 21.8 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇಕೋ ಮಾದರಿಯ ಒಟ್ಟು ಮಾರಾಟದಲ್ಲಿ ಶೇ.17 ರಷ್ಟು ಸಿಎನ್‌ಜಿ ರೂಪಾಂತರ ಕೊಡುಗೆಯನ್ನು ನೀಡಿದೆ. ಮಾರುತಿ ಸುಜುಕಿ ಇಕೋ ಕಾರು ಭಾರತದ ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಬಿಡುಗಡೆಗೊಳಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Maruti Suzuki Eeco

ಇನ್ನು ಮಾರುತಿ ಸುಜುಕಿ ಭಾರತದಲ್ಲಿ ನ್ಯೂ ಜನರೇಷನ್ ಆಲ್ಟೋವನ್ನು ಪರೀಕ್ಷಿಸಲು ಪ್ರಾರಂಭಿಸಿದೆ, ಹೊಸ ಮಾದರಿಯು ಗಮನಾರ್ಹವಾಗಿ ದೊಡ್ಡದಾಗಿದೆ ಮತ್ತು ಹೆಚ್ಚು ವಿಶಾಲವಾಗಿರುತ್ತದೆ ಎಂದು ಸ್ಪೈ ಚಿತ್ರಗಳು ಬಹಿರಂಗಪಡಿಸುತ್ತವೆ. ಇದು ಅಸ್ತಿತ್ವದಲ್ಲಿರುವ ಮಾದರಿಗಿಂತ ಉದ್ದ, ಅಗಲ ಮತ್ತು ಎತ್ತರವಾಗಿರುತ್ತದೆ, ಇದು ಕ್ಯಾಬಿನ್‌ನೊಳಗೆ ಹೆಚ್ಚಿನ ಸ್ಥಳವನ್ನು ರಚಿಸಲು ಸಹಾಯವಾಗುತ್ತದೆ. ಈ ನ್ಯೂ ಜನರೇಷನ್ ಮಾರುತಿ ಸುಜುಕಿ ಆಲ್ಟೋ ಮುಂದಿನ ವರ್ಷದ ಮಧ್ಯಾಂತರ ಅವಧಿಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಈ ಹೊಸ ಕಾರು ಬಿಡುಗಡೆ ವಿಳಂಬದ ಹಿಂದಿನ ನಿಖರ ಕಾರಣ ಇನ್ನೂ ಬಹಿರಂಗಗೊಂಡಿಲ್ಲ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Maruti Suzuki Eeco

ಆದರೆ ಕರೋನಾ ಮಹಾಮಾರಿ ಮುಖ್ಯ ಕಾರಣವಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ನ್ಯೂ ಜನರೇಷನ್ ಮಾರುತಿ ಸುಜುಕಿ ಆಲ್ಟೋ ಕಾರು ಹಾರ್ಟ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎಂದು ವರದಿಯಾಗಿದೆ, ಇದು ಹೊಸ ಎಸ್-ಪ್ರೆಸ್ಸೊ ಮತ್ತು ವ್ಯಾಗನ್ಆರ್ ಕಾರುಗಳನ್ನು ಸಹ ಆಧಾರವಾಗಿದೆ. ಈ ಹೊಸ ಮಾರುತಿ ಸುಜುಕಿ ಆಲ್ಟೋ ಮಾದರಿಯು ಒಟ್ಟಾರೆ ಪ್ರೊಫೈಲ್ ಅನ್ನು ಉಳಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸುತ್ತೇವೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಸಣ್ಣ ಓವರ್‌ಹ್ಯಾಂಗ್‌ಗಳನ್ನು ಒಳಗೊಂಡಿರುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Maruti Suzuki Eeco

ಮುಂಭಾಗ ಮತ್ತು ಹಿಂಭಾಗದಲ್ಲಿ ಸಣ್ಣ ಓವರ್‌ಹ್ಯಾಂಗ್‌ಗಳನ್ನು ಒಳಗೊಂಡಿರುತ್ತದೆ. ಈ ಹೊಸ ಕಾರಿನಲ್ಲಿ ಹೆಡ್‌ಲ್ಯಾಂಪ್‌ಗಳು, ಹೆಚ್ಚು ಪ್ರಮುಖವಾದ ಗ್ರಿಲ್ ಮತ್ತು ಹೊಸ ಟೈಲ್-ಲ್ಯಾಂಪ್ ಕ್ಲಸ್ಟರ್‌ಗಳ ವಿಷಯದಲ್ಲಿ ಹ್ಯಾಚ್‌ಬ್ಯಾಕ್ ಗಮನಾರ್ಹ ವಿನ್ಯಾಸ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಹೊಸ ಆಲ್ಟೊ ಹ್ಯಾಚ್‌ಬ್ಯಾಕ್ ನಲ್ಲಿ ಸುಜುಕಿಯ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಒಳಗೊಂಡಿರಬಹುದು. ಒಟ್ಟಿನಲ್ಲಿ ನ್ಯೂ ಜನರೇಷನ್ ಮಾರುತಿ ಸುಜುಕಿ ಆಲ್ಟೋ ಕಾರು ಕೆಲವು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಬಹುದು.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Maruti Suzuki Eeco

ಜನಪ್ರಿಯ ಒಮ್ನಿ ವ್ಯಾನ್ ಸ್ಥಗಿತಗೊಂಡ ಬಳಿಕ ಮಾರುತಿ ಸುಜುಕಿ ಕಂಪನಿಯ ಇಕೋ ಭಾರತೀಯ ಮಾರುಕಟ್ಟೆಯಲ್ಲಿರುವ ಏಕೈಕ ವ್ಯಾನ್ ಆಗಿದೆ. ಮಾರುತಿ ಸುಜುಕಿ ಕಂಪನಿಯ ಕಾರುಗಳ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಇಕೋ ಭಾರತದ್ಲ್ಲಿ ಮಾರಾಟವಾಗುವ ವಾಹನಗಳ ಟಾಪ್-10 ಪಟ್ಟಿಯಲ್ಲಿ ಸ್ಥಿರವಾಗಿ ಸ್ಥಾನ ಪಡೆದುಕೊಳ್ಳುವ ಮಾದರಿಯಾಗಿದೆ.

Most Read Articles

Kannada
English summary
Maruti suzuki eeco price increased by rs 8000 read to find more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X