Just In
Don't Miss!
- Lifestyle
ರಾತ್ರಿ ವೇಳೆ ಬೇಳೆಕಾಳು ತಿನ್ನಬೇಕೋ ಬೇಡವೋ, ಆಯುರ್ವೇದ ಏನು ಹೇಳುತ್ತದೆ?
- Finance
ಮಾರ್ಚ್ 04ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Sports
ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್, Live ಸ್ಕೋರ್, ಪ್ಲೇಯಿಂಗ್ XI
- News
ಮಗಳ ಶಿರಚ್ಛೇದ ಮಾಡಿ, ರುಂಡದೊಂದಿಗೆ ಪೊಲೀಸರಿಗೆ ಶರಣಾದ ತಂದೆ
- Movies
ಮೊದಲ ವಾರವೇ ಹೊರಹೋಗ್ತಾರಾ ಶುಭಾ ಪೂಂಜಾ: ನಾಮಿನೇಟ್ ಆಗಿದ್ದು ಹೇಗೆ?
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರುತಿ ಸುಜುಕಿ ಕಂಪನಿಯ ಕಾರ್ ಲೀಸ್ ಯೋಜನೆಗೆ ಭಾರೀ ಬೇಡಿಕೆ
ಕೋವಿಡ್ 19 ಪರಿಣಾಮ ನಷ್ಟ ಅನುಭವಿಸಿದ್ದ ಆಟೋ ಕಂಪನಿಗಳು ವಾಹನಗಳ ಲೀಸ್ ಆಯ್ಕೆಯ ಮೇಲೆ ಹೆಚ್ಚು ಗಮನಹರಿಸಿದ್ದು, ಮಾರುತಿ ಸುಜುಕಿ ಕಂಪನಿಯು ಕೂಡಾ ವಿವಿಧ ಕಾರು ಮಾದರಿಗಳ ಮೇಲೆ ಲೀಸ್ ಆಯ್ಕೆಯನ್ನು ಆಫರ್ ನೀಡುವ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ಆರಂಭದಲ್ಲಿ ಬೆಂಗಳೂರು, ಮುಂಬೈ, ದೆಹಲಿ, ಹೈದ್ರಾಬಾದ್ ಮತ್ತು ಪುಣೆ ನಗರಗಳಲ್ಲಿ ಕಾರುಗಳ ಚಂದಾದಾರಿಕೆ ಆಯ್ಕೆಗಳನ್ನು ನೀಡಿದ್ದ ಮಾರುತಿ ಸುಜುಕಿಯು ಇದೀಗ ಕೊಚ್ಚಿಯಲ್ಲೂ ಹೊಸ ಯೋಜನೆ ಪರಿಚಯಿಸಿದ್ದು, ಮಾರುತಿ ಸುಜುಕಿ ಸಬ್‌ಸ್ಕೈಬ್‌ನಲ್ಲಿ ಆಕರ್ಷಕ ಬೆಲೆಯಲ್ಲಿ ಲೀಸ್ ಕಾರುಗಳ ಮಾಲೀಕತ್ವವನ್ನು ಹೊಂದಬಹುದಾಗಿದೆ. ಸಬ್‌ಸ್ಕೈಬ್‌ನಲ್ಲಿ ಅರೆನಾ ಮತ್ತು ನೆಕ್ಸಾ ಎರಡು ಮಾದರಿಯ ಕಾರುಗಳ ಆಯ್ಕೆಯು ಲಭ್ಯವಿದ್ದು, ಹೊಸ ಯೋಜನೆಯು ಸಾಕಷ್ಟು ಬೇಡಿಕೆ ಹರಿದುಬರುತ್ತಿದೆ.

ಅರೆನಾ ಕಾರು ಮಳಿಗೆಗಳಲ್ಲಿ ಸ್ವಿಫ್ಟ್, ಡಿಜೈರ್, ವಿಟಾರಾ ಬ್ರೆಝಾ ಮತ್ತು ಎರ್ಟಿಗಾ ಕಾರುಗಳ ಮೇಲೆ ಲೀಸ್ ಆಯ್ಕೆ ಲಭ್ಯವಿದ್ದಲ್ಲಿ ನೆಕ್ಸಾ ಕಾರು ಮಾರಾಟ ಮಳಿಗೆಗಳಲ್ಲಿ ಸಿಯಾಜ್, ಬಲೆನೊ ಮತ್ತು ಎಕ್ಸ್ಎಲ್6 ಕಾರುಗಳನ್ನು ಲೀಸ್ ಪಡೆಯಬಹುದಾಗಿದೆ.

ಆಕರ್ಷಕ ಬೆಲೆಗಳಲ್ಲಿ ಲೀಸ್ ಕಾರುಗಳು..!
ಮಾರುತಿ ಸುಜುಕಿಯು ಪ್ರತಿ ದಿನಕ್ಕೆ ಕನಿಷ್ಠ ರೂ.700ರಿಂದ ಗರಿಷ್ಠ ರೂ.1200 ದರ ಅನ್ವಯವಾಗುವಂತೆ ಲೀಸ್ ಕಾರುಗಳ ಆಯ್ಕೆಯನ್ನು ನೀಡುತ್ತಿದ್ದು, ಹೊಸ ಲೀಸ್ ಕಾರಿಗೆ ನೋಂದಣಿ ಮಾಡಿದ 15 ದಿನದೊಳಗಾಗಿ ಕಾರಿನ ಮಾಲೀಕತ್ವವನ್ನು ಹಸ್ತಾಂತರ ಮಾಡಲಿದೆ.

ಲೀಸ್ ಪಡೆದ ಕಾರುಗಳ ದರವನ್ನು ಪ್ರತಿ ತಿಂಗಳು ಪಾವತಿಸಬೇಕಿದ್ದು, ಕನಿಷ್ಠ 24 ತಿಂಗಳು ಲೀಸ್ ಆಯ್ಕೆಯನ್ನು ಪಡೆದುಕೊಳ್ಳಬೇಕು. ಗ್ರಾಹಕರ ತಮ್ಮ ಆದ್ಯತೆ ಮೇರೆಗೆ ಕಾರುಗಳನ್ನು 24, 36 ಮತ್ತು 48 ತಿಂಗಳಿಗೆ ಲೀಸ್ ಪಡೆದುಕೊಳ್ಳಬಹುದಾಗಿದ್ದು, ಲೀಸ್ ಮೊತ್ತದಲ್ಲೇ ಕಾರಿನ ನಿರ್ವಹಣಾ ವೆಚ್ಚ, ಪಾಲಿಸಿ ಶುಲ್ಕಗಳು ಒಳಗೊಂಡಿರುತ್ತವೆ.

ಲೀಸ್ ಕಾರುಗಳ ಪಟ್ಟಿಯಲ್ಲಿ ಸ್ವಿಫ್ಟ್ ವಿಎಕ್ಸ್ಐ ಮ್ಯಾನುವಲ್ ಮಾದರಿಯು ಪ್ರತಿ ತಿಂಗಳಿಗೆ ಆರಂಭಿಕವಾಗಿ ರೂ.22,591 ದರ ಹೊಂದಿದ್ದಲ್ಲಿ ಹೈ ಎಂಡ್ ಮಾದರಿಯಾದ ಎಕ್ಸ್ಎಲ್6 ಅಲ್ಪಾ ಆಟೋಮ್ಯಾಟಿಕ್ ಆವೃತ್ತಿಯು ರೂ.40,365 ಬೆಲೆ ಹೊಂದಿದೆ.

ಲೀಸ್‌ನಲ್ಲಿ ನೀಡಲಾಗುವ ಪ್ರತಿ ಕಾರು ಮಾದರಿಗಳು ಸಹ ಹೊಸ ಕಾರು ಆವೃತ್ತಿಯಾಗಿದ್ದು, ಮಾಲೀಕ್ವದ ಸಂದರ್ಭದಲ್ಲಿ ತಾಂತ್ರಿಕ ಅಂಶಗಳ ಸಮಸ್ಯೆಗಳನ್ನು ಹೊರತುಪಡಿಸಿ ತಪ್ಪು ಚಾಲನೆಯಿಂದಾಗುವ ಅಪಘಾತ, ಸಂಚಾರಿ ನಿಯಮ ಉಲ್ಲಂಘನೆಗಳಿಗೆ ಚಂದಾದಾರರೇ ಹೊಣೆಯಾಗಿರುತ್ತಾರೆ.

ಆದರೆ ಬ್ರೇಕ್ ಡೌನ್‌ನಂತಹ ಸಮಸ್ಯೆಗಳಿಂದ ಉಂಟಾಗುವ ಅನಾಹುತಗಳಿಗೆ ಕಂಪನಿಯೇ ವೆಚ್ಚ ಭರಿಸಲಿದ್ದು, ಲೀಸ್ ಹೊಂದಿರುವ ಕಾರುಗಳಿಗೆ ಗರಿಷ್ಠ ಸುರಕ್ಷತೆ ನೀಡುವ ಸಲುವಾಗಿ ಸಮಗ್ರ ವಿಮಾ ಪಾಲಿಸಿಯನ್ನು ಹೊಂದಿರುತ್ತವೆ.

ಇದರಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಲೀಸ್ ಕಾರುಗಳಿಗೆ ವಾರ್ಷಿಕವಾಗಿ 18 ಸಾವಿರ ಕಿ.ಮೀ ನಿಗದಿಪಡಿಸಲಾಗಿದ್ದು, ಒಂದು ವರ್ಷದಲ್ಲಿ 18 ಸಾವಿರ ಕಿ.ಮೀ ಗಿಂತಲೂ ಹೆಚ್ಚು ಸಂಚರಿಸಿದ್ದಲ್ಲಿ ಪ್ರತಿ ಕಿ.ಮೀ ಹೆಚ್ಚುವರಿಗಾಗಿ ರೂ.7 ಶುಲ್ಕ ಪಾವತಿ ಮಾಡಬೇಕಾಗುತ್ತದೆ.
MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಒಂದು ವೇಳೆ ಲೀಸ್ ಪಡೆದುಕೊಂಡ ಅವಧಿಗಿಂತಲೂ ಮೊದಲೇ ಕಾರು ಹಿಂದಿರುಗಿಸುವ ಸಂದರ್ಭ ಎದುರಾದಲ್ಲಿ ಅದಕ್ಕೂ ಅವಕಾಶಗಳನ್ನು ನೀಡಲಾಗಿದ್ದು, ಅವಧಿಗಿಂತಲೂ ಮುಂಚಿತವಾಗಿ ಕಾರು ಹಿಂದಿರುಗಿಸುವುದಾರರೇ ಕೆಲವು ಷರತ್ತುಗಳಿಗೆ ಬದ್ದವಾಗಿರಬೇಕು.

ಉದಾಹರಣೆಗೆ ಒಂದು ಸ್ವಿಫ್ಟ್ ಕಾರನ್ನು 24 ತಿಂಗಳಿಗೆ ಲೀಸ್ ಪಡೆದುಕೊಂಡು 8 ತಿಂಗಳು ಬಳಕೆ ಮಾಡಿರುತ್ತೀರಿ. ಆದರೆ ನಿಮಗೆ 8 ತಿಂಗಳ ನಂತರ ಅದನ್ನು ಮುಂದುವರಿಸಲು ಇಷ್ಟವಿಲ್ಲ ಎಂದಿಟ್ಟುಕೊಳ್ಳೋಣ. ಆಗ ನೀವು ಮಾಲೀಕತ್ವದ ಕನಿಷ್ಠ 12 ತಿಂಗಳ ಅವಧಿಯನ್ನು ಪೂರೈಸಲೇಬೇಕಾದ ಅನಿವಾರ್ಯತೆಗಳಿರುತ್ತವೆ.
MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಜೊತೆಗೆ ಮಾಲೀಕತ್ವವನ್ನು ಕಡೆದುಕೊಳ್ಳುವ 1 ತಿಂಗಳು ಮುಂಚಿತವಾಗಿಯೇ ಕಂಪನಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಮಾಸಿಕ ಚಂದಾ ಹಣ ಪಾವತಿಯಲ್ಲೂ ನಿಗದಿತ ಅವಧಿಯನ್ನು ಮೀರಿದರೆ ದಂಡದ ಶುಲ್ಕವನ್ನು ಸಹ ಪಾವತಿಮಾಡಬೇಕಾಗುತ್ತದೆ.

ಇದು ಹೊಸ ಕಾರು ಖರೀದಿಯಿಂದಾಗುವ ಆರ್ಥಿಕ ಹೊರೆಗಿಂತಲೂ ತುಸು ಭಿನ್ನವಾಗಿದ್ದು, ನಮಗೆ ಕಾರಿನ ಬಳಕೆಯ ಅವಶ್ಯಕತೆಯಿಲ್ಲ ಎಂದಾದಲ್ಲಿ ವಾಪಸ್ ನೀಡಬಹುದಾದ ಆಯ್ಕೆಯಿರುತ್ತದೆ. ಆದರೆ ಹೊಸ ವಾಹನ ಖರೀದಿ ನಂತರ ಆರ್ಥಿಕ ಹೊರೆಯಾದರೂ ನೀವು ಅದನ್ನು ನಿರ್ವಹಣೆ ಮಾಡಲೇಬೇಕಾದ ಅನಿವಾರ್ಯತೆಯಿರುತ್ತದೆ. ಹೀಗಾಗಿ ಲೀಸ್ ಕಾರುಗಳು ಅವಶ್ಯಕ ಸಂದರ್ಭಗಳಲ್ಲಿ ಸಾಕಷ್ಟು ಅನುಕೂಲ ಎನ್ನಬಹುದಾಗಿದ್ದು, ಮಾರುತಿ ಲೀಸ್ ಕಾರುಗಳ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿ.