ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕಾಗಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ

2ನೇ ಅಲೆಯ ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಹರಸಾಹಸಪಡುತ್ತಿದ್ದು, ವೈರಸ್ ಹರಡುವಿಕೆ ತಡೆಯಲು ಭಾಗಶಃ ಲಾಕ್ಡೌನ್, ಕರ್ಫ್ಯೂ ವಿಧಿಸಲಾಗುತ್ತಿದೆ. ಲಾಕ್‌ಡೌನ್ ಪರಿಣಾಮ ಆಟೋ ಉತ್ಪಾದನಾ ವಲಯವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ವಾಹನ ಉತ್ಪಾದನೆ ಸ್ಥಗಿತಗೊಂಡಿರುವ ಬೆನ್ನಲ್ಲೇ ಮೇಡಿಕಲ್ ಆಕ್ಸಿಜನ್ ಉತ್ಪಾದನೆಗೆ ಕೈಜೋಡಿಸಿವೆ.

ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕಾಗಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ

ಕಳೆದ ವರ್ಷದ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಿಸಿಕೊಳ್ಳುತ್ತಿದ್ದ ಆಟೋ ಉದ್ಯಮವು ಇದೀಗ ಮತ್ತೊಮ್ಮೆ ಲಾಕ್‌ಡೌನ್ ಪರಿಣಾಮ ನಷ್ಟ ಭೀತಿ ಎದುರಿಸುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ನೆಲ ಕಚ್ಚಿದೆ. ಕೋವಿಡ್ ಹೆಚ್ಚಳ ನಡುವೆಯೂ ದೇಶದ ಪ್ರಮುಖ ಆಟೋ ಕಂಪನಿಗಳು ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಮಾಡುತ್ತಿದ್ದು, ಇನ್ನು ಕೆಲವು ಕಂಪನಿಗಳು ಉದ್ಯೋಗಿಗಳ ಆರೋಗ್ಯ ದೃಷ್ಠಿಯಿಂದ ವಾಹನ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ.

ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕಾಗಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ

ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ ಕೂಡಾ ಪರಿಸ್ಥಿತಿಗೆ ಅನುಗುಣವಾಗಿ ಕಳೆದ ಒಂದು ವಾರ ಪೂರ್ತಿಯಾಗಿ ಹೊಸ ವಾಹನ ಉತ್ಪಾದನೆಯನ್ನು ಸ್ತಗಿತಗೊಳಿ ಆಕ್ಸಿಜನ್ ಉತ್ಪಾದನೆ ಅವಕಾಶ ನೀಡಿತ್ತು.

ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕಾಗಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ

ಒಂದು ವಾರದ ಬಳಿಕೆ ಮತ್ತೆ ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಕಾರು ಉತ್ಪಾದನೆ ಕೈಗೊಳ್ಳುವ ಯೋಜನೆಯಲ್ಲಿದ್ದ ಕಂಪನಿಯು ಇದೀಗ ಮತ್ತೆ ಉತ್ಪಾದನಾ ಪ್ರಕ್ರಿಯೆ ಆರಂಭಿಸುವ ಯೋಜನೆಯಿಂದ ಹಿಂದೆ ಸರಿದಿದ್ದು, ಮೂರು ಘಟಕದಲ್ಲೂ ಮೆಡಿಕಲ್ ಆಕ್ಸಿಜನ್ ಉತ್ಪಾದನೆ ಅವಕಾಶ ನೀಡಿದೆ.

ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕಾಗಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ

ಮುಂದಿನ ಒಂದು ವಾರದ ದೇಶಾದ್ಯಂತ ನೆಲೆಗೊಂಡಿರುವ ಪ್ರಮುಖ ಮೂರು ಘಟಕಗಳಲ್ಲೂ ಆಕ್ಸಿಜನ್ ಉದ್ಪಾದಿಸಲು ಆದೇಶಿಸಿರುವ ಮಾರುತಿ ಸುಜುಕಿ ಕಂಪನಿಯು ಆಕ್ಸಿಜನ್ ಉತ್ಪಾದನೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಿದೆ. ಆಕ್ಸಿಜನ್ ಉತ್ಪಾದನಾ ಸೌಲಭ್ಯವನ್ನು ಜೋಡಣೆಗಾಗಿ ಪಿಎಸ್ಎ ಕಂಪನಿಯ ಜೊತೆಗೂಡಿದ್ದು, ಮತ್ತೊಂದು ಘಟಕದಲ್ಲಿ ಏರೊಕ್ಸ್ ನಿಜೆನ್ ಇಕ್ವಿಪ್ಮೆಂಟ್ ಪ್ರೈ,ಲೀ ಕಂಪನಿಯು ಆಕ್ಸಿಜನ್ ಉತ್ಪಾದನೆ ಮಾಡುತ್ತಿದೆ.

ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕಾಗಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ

ಏರೊಕ್ಸ್ ನಿಜೆನ್ ಇಕ್ವಿಪ್ಮೆಂಟ್ ಪ್ರೈ,ಲೀ ಕಂಪನಿಯು ಈಗಾಗಲೇ ವಿವಿಧ ಮಾದರಿಯ ಹಲವಾರು ಉತ್ಪಾದನಾ ಕಂಪನಿಗಳ ಜೊತೆಗೂಡಿ ಆಕ್ಸಿಜನ್ ಉತ್ಪಾದಿಸುತ್ತಿದ್ದು, ಬೇಡಿಕೆ ಹೆಚ್ಚಿದ ಪರಿಣಾಣ ದಿನವೊಂದಕ್ಕೆ ವಿವಿಧ ರಾಜ್ಯಗಳಲ್ಲಿ ನಾಲ್ಕು ಹೊಸ ಆಕ್ಸಿಜನ್ ಉತ್ಪಾದನಾ ಕೇಂದ್ರಗಳನ್ನು ಆಂಭಿಸುತ್ತಿದೆ.

ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕಾಗಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ

ಈಗಾಗಲೇ ಮಾರುತಿ ಸುಜುಕಿಯೊಂದಿಗೆ ಐದಕ್ಕೂ ಹೆಚ್ಚು ಆಕ್ಸಿಜನ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಈಗಾಗಲೇ ಹೊಸ ಘಟಕಗಳಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ ಅನ್ನು ಪ್ರಮುಖ ರಾಜ್ಯಗಳಿಗೆ ಸಾಗಾಣಿಕೆ ಮಾಡಲಾಗಿದೆ.

MOST READ: ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 2,200ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕಾಗಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ

ಇದೀಗ ಮತ್ತೊಂದು ಕಾರು ಉತ್ಪಾದನಾ ಘಟಕದಲ್ಲೂ ಆಕ್ಸಿಜನ್ ಉತ್ಪಾದನೆ ಅವಕಾಶ ನೀಡಿರುವ ಮಾರುತಿ ಸುಜುಕಿಯು ಕಾರು ಉತ್ಪಾದನೆಯನ್ನು ಮತ್ತೆ ಮುಂದೂಡಿಕೆ ಮಾಡಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲೂ ಆಕ್ಸಿಜನ್ ಉತ್ಪಾದನೆಗೆ ಸಹಕರಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕಾಗಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ

ಕೋವಿಡ್ ತಗ್ಗಿಸಲು ಸರ್ಕಾರದ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಕೆಲವು ವಾಹನ ಉತ್ಪಾದನಾ ಕಂಪನಿನಗಳು ಆಕ್ಸಿಜನ್ ಉತ್ಪಾದನೆಗೆ ಸಹಕರಿಸಿದ್ದಲ್ಲಿ ಇನ್ನು ಕೆಲವು ಆಟೋ ಕಂಪನಿಗಳು ಸರ್ಕಾರಕ್ಕೆ ಆರ್ಥಿಕವಾಗಿ ಸಹಕಾರ ನೀಡಿವೆ.

MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕಾಗಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಮಾತ್ರವಲ್ಲದೆ ಟಾಟಾ ಮೋಟಾರ್ಸ್, ಎಂಜಿ ಮೋಟಾರ್ ಕಂಪನಿಯು ಕೂಡಾ ತಮ್ಮ ಕಾರು ಉತ್ಪಾದನಾ ಘಟಕದಲ್ಲೇ ತಾತ್ಕಾಲಿಕ ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಅವಕಾಶ ನೀಡಿದ್ದು, ಕೋವಿಡ್ ವಿರುದ್ದದ ಹೋರಾಟದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಹಕಾರ ನೀಡುತ್ತಿವೆ.

Most Read Articles

Kannada
English summary
Maruti Suzuki Increases Oxygen PSA Plant Production In Indaia. Read in Kannada.
Story first published: Monday, May 10, 2021, 20:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X