ಅರೆನಾ ಕಾರು ಮಾದರಿಗಳಿಗೂ 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ದೇಶದ ಅಗ್ರಗಣ್ಯ ಕಾರು ಉತ್ಪಾದನಾ ಮತ್ತು ಮಾರಾಟ ಕಂಪನಿಯಾಗಿರುವ ಮಾರುತಿ ಸುಜುಕಿ(Maruti Suzuki) ತನ್ನ ಅರೆನಾ ಕಾರು ಮಾದರಿಗಳನ್ನು ಕಾರ್ ಕನೆಕ್ಟ್ ಫೀಚರ್ಸ್‌ಗಳನ್ನು ಪರಿಚಯಿಸಿದ್ದು, ಹೊಸ ಕಾರು ಮಾದರಿಗಳ ಜೊತೆಗೆ ಅಸ್ತಿತ್ವದಲ್ಲಿರುವ ಕಾರು ಮಾದರಿಗಳಿಗೂ ಹೊಸ ಫೀಚರ್ಸ್ ಬಿಡುಗಡೆ ಮಾಡಿದೆ.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ಹೊಸದಾಗಿ ಬಿಡುಗಡೆಯಾಗುತ್ತಿರುವ ಆಧುನಿಕ ಫೀಚರ್ಸ್ ಕಾರುಗಳಲ್ಲಿ ಕಾರ್ ಕನೆಕ್ಟ್ ತಂತ್ರಜ್ಞಾನವನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದ್ದು, ಕಾರ್ ಕನೆಕ್ಟ್ ಟೆಕ್ನಾಲಜಿಯು ಹೊಸ ವಾಹನಗಳ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಮಾರುತಿ ಸುಜುಕಿ 2018ರಿಂದ ವಿವಿಧ ಕಾರು ಮಾದರಿಗಳಲ್ಲಿ ಕಾರ್ ಕನೆಕ್ಟ್ ಟೆಕ್ನಾಲಜಿಯನ್ನು ಬಳಕೆ ಮಾಡುತ್ತಿದ್ದು, ಹೊಸ ತಂತ್ರಜ್ಞಾನವನ್ನು ಇದೀಗ ತನ್ನ ಎಲ್ಲಾ ಕಾರು ಮಾದರಿಗಳಿಗೂ ಪರಿಚಯಿಸಿದೆ.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ಹೊಸದಾಗಿ ಬಿಡುಗಡೆಯಾಗುವ ಕಾರುಗಳಲ್ಲಿ ಹೊಸ ಕಾರ್ ಕನೆಕ್ಟ್ ತಂತ್ರಜ್ಞಾನವು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದ್ದು, ಈಗಾಗಲೇ ಅಸ್ತಿತ್ವ ಕಾರು ಮಾದರಿಗಳಿಗೆ ಹೊಸ ಟೆಲಿಮ್ಯಾಟ್ರಿಕ್ಸ್ ಕಂಟ್ರೊಲ್ ಯುನಿಟ್(TCU) ಅನ್ನು ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ಸುಜುಕಿ ಕನೆಕ್ಟ್ ಕಾರ್ ಟೆಕ್ನಾಲಜಿಯನ್ನು 'ಸುಜುಕಿ ಕನೆಕ್ಟ್' ಆಪ್ ಮೂಲಕ ನಿಯಂತ್ರಿಸಬೇಕಿದ್ದು, ಸುಜುಕಿ ಕನೆಕ್ಟ್ ಅನ್ನು ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಎರಡರಿಂದಲೂ ಡೌನ್‌ಲೋಡ್ ಮಾಡಬಹುದು.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ಸುಜುಕಿ ಕನೆಕ್ಟ್ ಟೆಕ್ನಾಲಜಿಯನ್ನು ಹೊಂದಿರುವ ಟೆಲಿಮ್ಯಾಟ್ರಿಕ್ಸ್ ಕಂಟ್ರೊಲ್ ಯುನಿಟ್ ಆಫ್ಟರ್ ಮಾರ್ಕೆಟ್ ವ್ಯವಸ್ಥೆಗಳಿಗಿಂತ ಭಿನ್ನವಾಗಿದ್ದು, ಸುಜುಕಿ ಕನೆಕ್ಟ್ ಸಿಸ್ಟಮ್ ಅನ್ನು ಟ್ಯಾಂಪರ್ ಮಾಡುವುದು ಅಸಾಧ್ಯವೆಂದು ಕಂಪನಿಯು ಭರವಸೆ ನೀಡುತ್ತದೆ.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ಪ್ರಸ್ತುತ ಮಾರುತಿ ಸುಜುಕಿ ಬಳಕೆದಾರರು ದೇಶದಾದ್ಯಂತ ಇರುವ 2800ಕ್ಕೂ ಹೆಚ್ಚು ಶೋರೂಮ್‌ಗಳಲ್ಲಿ ಟೆಲಿಮ್ಯಾಟ್ರಿಕ್ಸ್ ಕಂಟ್ರೊಲ್ ಯುನಿಟ್ ಖರೀದಿಗೆ ಲಭ್ಯವಿದ್ದು, ರೂ 11,900ಕ್ಕೆ(ತೆರಿಗೆಗಳನ್ನು ಒಳಗೊಂಡಂತೆ) ಹೊಸ ತಂತ್ರಜ್ಞಾನ ಸೌಲಭ್ಯವನ್ನು ಪರಿಚಯಿಸಲಾಗಿದೆ.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ಹೊಸ ಸುಜುಕಿ ಕನೆಕ್ಟ್ ಸೌಲಭ್ಯದ ಮೂಲಕ ಗ್ರಾಹಕರಿಗೆ ಭದ್ರತಾ ಎಚ್ಚರಿಕೆಗಳು, ಜಿಯೋಫೆನ್ಸಿಂಗ್, ವಾಹನದ ಸ್ಥಿತಿಗತಿ ಮಾಹಿತಿ, ಲೈವ್ ಕಾರ್ ಮಾನಿಟರಿಂಗ್, ಕ್ರಿಯಾತ್ಮಕ ಎಚ್ಚರಿಕೆಗಳು, ರಸ್ತೆಬದಿಯ ನೆರವು ಮತ್ತು ಇನ್ನೂ ಕೆಲವು ವೈಶಿಷ್ಟ್ಯತೆಗಳು ಬಳಕೆದಾರರ ಅನುಭವವನ್ನು ಗಮನಾರ್ಹವಾಗಿ ಸುಧಾರಿಸುತ್ತವೆ.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ಇದಕ್ಕಾಗಿ ಹೊಸ ಟೆಲಿಮ್ಯಾಟ್ರಿಕ್ಸ್ ಕಂಟ್ರೊಲ್ ಯುನಿಟ್(TCU) ಅಳವಡಿಸಿಕೊಳ್ಳುವ ಗ್ರಾಹಕರು ರೂ.999ಕ್ಕೆ ವಾರ್ಷಿಕ ಚಂದಾದಾರಿಕೆಯನ್ನು ಪಡೆದುಕೊಳ್ಳಬೇಕು. ಮೂರು ವರ್ಷಗಳಿಗೆ ರೂ. 2,229 ನಿಗದಿಪಡಿಸಲಾಗಿದ್ದು, ಕಂಪನಿಯು ಸುಧಾರಿತ ವೈಶಿಷ್ಟ್ಯಗಳ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ಇನ್ನು ಬಜೆಟ್ ಮತ್ತು ಪ್ರೀಮಿಯಂ ಕಾರುಗಳ ಮೂಲಕ ವಾಹನ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು ಎಂಟ್ರಿ ಲೆವಲ್ ಕಾರುಗಳ ಜೊತೆಯಲ್ಲಿ ಪ್ರೀಮಿಯಂ ಕಾರು ಮಾರಾಟದಲ್ಲೂ ಮುನ್ನಡೆ ಸಾಧಿಸುತ್ತಿದೆ.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಕಾರು ಮಾರಾಟದಲ್ಲಿ ಎರಡು ಹಂತದ ಮಾರಾಟ ಮಳಿಗೆಗಳನ್ನು ಹೊಂದಿದ್ದು, ಅರೆನಾ ಕಾರು ಮಾರಾಟ ಮಳಿಗೆಗಳಲ್ಲಿ ಎಸ್-ಪ್ರೆಸ್ಸೊ, ಸ್ವಿಫ್ಟ್, ವಿಟಾರಾ ಬ್ರೆಝಾ, ಆಲ್ಟೊ, ವ್ಯಾಗನ್ಆರ್, ಡಿಸೈರ್, ಇಕೋ, ಸೆಲೆರಿಯೊ, ಎರ್ಟಿಗಾ ಕಾರುಗಳನ್ನು ಮಾರಾಟ ಮಾಡಿದ್ದಲ್ಲಿ ನೆಕ್ಸಾ ಶೋರೂಂನಲ್ಲಿ ಪ್ರೀಮಿಯಂ ಕಾರು ಮಾದರಿಗಳಾದ ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್6 ಮತ್ತು ಎಸ್-ಕ್ರಾಸ್ ಕಾರು ಮಾರಾಟ ಸೌಲಭ್ಯ ಹೊಂದಿದೆ.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ದೇಶಾದ್ಯಂತ ಮಾರುತಿ ಸುಜುಕಿ ಸದ್ಯ 2,600ಕ್ಕೂ ಹೆಚ್ಚು ಅರೆನಾ ಕಾರು ಮಾರಾಟ ಮಳಿಗೆಗಳನ್ನು ಹೊಂದಿದ್ದರೆ 370 ನೆಕ್ಸಾ ಶೋರೂಂಗಳನ್ನು ತೆರೆದಿದ್ದು, ನೆಕ್ಸಾ ಶೋರೂಂಗಳು ಸದ್ಯಕ್ಕೆ ಮೆಟ್ರೋ ನಗರಗಳು ಮತ್ತು ಟೈರ್ 1 ನಗರಗಳಲ್ಲಿ ಮಾತ್ರ ಕಾರ್ಯನಿರ್ವಹಣೆಯಲ್ಲಿವೆ.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ಬಜೆಟ್ ಕಾರುಗಳ ಮೂಲಕ ಅರೆನಾ ಕಾರು ಮಾರಾಟ ಮಳಿಗೆಗಳು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದರೆ ನೆಕ್ಸಾ ಶೋರೂಂಗಳು ತುಸು ಪ್ರೀಮಿಯಂ ಬಯಸುವ ಗ್ರಾಹಕರಿಗೆ ಅನುಕೂಲಕರವಾಗಿದ್ದು, ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್6 ಮತ್ತು ಎಸ್-ಕ್ರಾಸ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿವೆ.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

2015ರ ಮೊದಲ ಬಜೆಟ್ ಮತ್ತು ಪ್ರೀಮಿಯಂ ಕಾರುಗಳ ಮಾರಾಟವನ್ನು ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡುತ್ತಿದ್ದ ಮಾರುತಿ ಸುಜುಕಿಯು ಮೊದಲ ಬಾರಿಗೆ ಎರಡು ಮಾದರಿಯ ಮಾರಾಟ ಮಳಿಗೆಗಳನ್ನು ತೆರೆಯಲು ಆರಂಭಿಸಿತು.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ನೆಕ್ಸಾ ಶೋರೂಂ ಆರಂಭವಾಗಿ ಭಾರತದಲ್ಲಿ 6 ವರ್ಷ ಪೂರೈಸಿದ್ದು, ನೆಕ್ಸಾ ಮಾರಾಟ ಮಳಿಗೆಗಳ ಮೂಲಕ ಮಾರುತಿ ಸುಜುಕಿ ಕಂಪನಿಯು ಇದುವರೆಗೆ ಬರೋಬ್ಬರಿ 15 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.

ಅರೆನಾ ಕಾರು ಮಾದರಿಗಳು 'Suzuki Connect' ಫೀಚರ್ಸ್ ಪರಿಚಯಿಸಿದ ಮಾರುತಿ ಸುಜುಕಿ

ಇದು ಕೇವಲ ಪ್ರೀಮಿಯಂ ಕಾರು ಮಾದರಿಗಳ ಮಾರಾಟವಾಗಿದ್ದು, ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್6 ಮತ್ತು ಎಸ್-ಕ್ರಾಸ್ ಕಾರುಗಳ ಮೂಲಕ ಕಂಪನಿಯು ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿತು. ಈ ಮೂಲಕ ಮಾರುತಿ ಸುಜುಕಿ ಕಾರು ಮಾರಾಟದ ಶೇ.20 ರಷ್ಟು ಪಾಲನ್ನು ತನ್ನದಾಗಿಸಿಕೊಂಡಿರುವ ನೆಕ್ಸಾ ಶೋರೂಂಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಗ್ರಾಹಕರ ಸೆಳೆಯುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Maruti suzuki introduces suzuki connect feature to arena lineup details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X