ಖಚಿತವಾಗದ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯ ಬಿಡುಗಡೆ

ಅಂತರರಾಷ್ಟ್ರೀಯ ಮಾರುಕಟ್ಟೆಗಲ್ಲಿ ಉತ್ತಮ ಬೇಡಿಕೆಯೊಂದಿಗೆ ಈ ಆಫ್-ರೋಡರ್ ಸುಜುಕಿ ಜಿಮ್ನಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಸ್ತುತ ತಲೆಮಾರಿನ ಸುಜುಕಿ ಜಿಮ್ನಿ ಮಿನಿ ಎಸ್‍ಯುವಿಯು 2018ರಿಂದ ಮಾರಾಟವಾಗುತ್ತಿದೆ.

ಖಚಿತವಾಗದ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯ ಬಿಡುಗಡೆ

ಈ ಐಕಾನಿಕ್ ಆಫ್-ರೋಡರ್ ಸುಜುಕಿ ಜಿಮ್ನಿ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳಾಗಿತ್ತು. ಆದರೆ ಇದೀಗ ಜಿಮ್ನಿ ಎಸ್‍ಯುವಿಯ ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಮಾರುತಿ ಸುಜುಕಿ ಖಚಿತಪಡಿಸಿದ್ದಾರೆ. ಕಂಪನಿಯು ಪ್ರಸ್ತುತ ಮಾಡೆಲ್‌ಗಾಗಿ ಮಾರ್ಕೆಟಿಂಗ್‌ನ ವಿವಿಧ ಅಂಶಗಳನ್ನು ಅಧ್ಯಯನ ಮಾಡುತ್ತಿದೆ ಎಂದು ಮಾರುತಿ ಸುಜುಕಿಯ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಬಹಿರಂಗಪಡಿಸಿದ್ದಾರೆ.

ಖಚಿತವಾಗದ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯ ಬಿಡುಗಡೆ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯು ಭಾರತದಿಂದ ಸುಜುಕಿಯ ಪ್ರಸಿದ್ಧ ಕಾಂಪ್ಯಾಕ್ಟ್ ಆಫ್-ರೋಡರ್ ಜಿಮ್ನಿ ರಫ್ತು ಮಾಡಲು ಪ್ರಾರಂಭಿಸಿದೆ. ಗುಜರಾತ್‌ನ ಮುಂಡ್ರಾ ಬಂದರಿನಿಂದ ಲ್ಯಾಟಿನ್ ಅಮೆರಿಕದ ದೇಶಗಳಾದ ಕೊಲಂಬಿಯಾ ಮತ್ತು ಪೆರುವಿಗೆ 184 ಯುನಿಟ್ ಗಳನ್ನು ಮೊದಲ ಬ್ಯಾಚ್ ಆಗಿ ರಫ್ತು ಮಾಡಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಖಚಿತವಾಗದ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯ ಬಿಡುಗಡೆ

ಮೂರು ಡೋರಿನ ಸುಜುಕಿ ಜಿಮ್ನಿ ಮಾದರಿಯನ್ನು ಭಾರತದಿಂದ ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ. 2020ರ ಆಟೋ ಎಕ್ಸ್‌ಪೋ ಸಂದರ್ಭದಲ್ಲಿ ಮಾರುತಿ ಸುಜುಕಿ ಭಾರತದಲ್ಲಿ ಜಿಮ್ನಿಯನ್ನು ಪ್ರದರ್ಶಿಸಿದರು. ಇದು ಆಫ್-ರೋಡ್ ವಾಹನ ಪ್ರಿಯರಿಗೆ ಹೆಚ್ಚಿನ ಕುತೂಹಲ ಹುಟ್ಟು ಹಾಕಿತು.

ಖಚಿತವಾಗದ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯ ಬಿಡುಗಡೆ

ಈ ಸುಜುಕಿ ಜಿಮ್ನಿ ಎಸ್‍ಯುವಿಯು ಯುರೋಪಿಯನ್ ದೇಶಗಳಲ್ಲಿ ಬಹುಬೇಡಿಕೆಯನ್ನು ಪಡೆದುಕೊಂಡಿದೆ, ಅಲ್ಲದೇ ಸುಜುಕಿ ಜಿಮ್ನಿ ತವರು ಜಪಾನ್ ನಲ್ಲಿಯು ಬೇಡಿಕೆ ಹೆಚ್ಚಾಗಿದೆ. ಸುಜುಕಿ ಕಂಪನಿಯ ಜಪಾನ್ ನಲ್ಲಿರುವ ಕೊಸೈನ ಘಟಕದಲ್ಲಿ ಉತ್ಪಾದನೆಯನ್ನು ಗರಿಷ್ಠ ಪ್ರಮಾಣಕ್ಕೆ ಏರಿಸಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಖಚಿತವಾಗದ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯ ಬಿಡುಗಡೆ

ಆದರೂ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಐಕಾನಿಕ್ ಆಪ್-ರೋಡರ್ ಜಿಮ್ನಿ ಬೇಡಿಕೆಯು ಅಷ್ಟರ ಪ್ರಮಾಣಕ್ಕೆ ಇದೆ. ಇದರಿಂದ ಭಾರತದಲ್ಲಿ ಮಾರುತಿ ಸುಜುಕಿಯ ಗುರುಗಾಂವ್‌ನಲ್ಲಿರುವ ಘಟಕದಲ್ಲಿ ಉತ್ಪಾದನೆಯನ್ನು ಮಡಲಾಗುತ್ತಿದೆ.

ಖಚಿತವಾಗದ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯ ಬಿಡುಗಡೆ

ಇನ್ನು ಜಿಮ್ನಿಯನ್ನು ಇತ್ತೀಚೆಗೆ ಮೆಕ್ಸಿಕೊದಲ್ಲಿ ಸುಜುಕಿ ಕಂಪನಿಯು ಬಿಡುಗಡೆಗೊಳಿಸಿತ್ತು. ಇದು ಕೇವಲ 72 ಗಂಟೆಗಳ ಅವಧಿಯಲ್ಲಿ ಸೋಲ್ಡ್ ಔಟ್ ಆಯ್ತು. ಜಿಮ್ನಿ ಮಿನಿ ಎಸ್‍ಯುವಿಯನ್ನು 2018ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಜಾಗತಿಕವಾಗಿ ಅನಾವರಣಗೊಂಡು 1.5 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ.

MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್‌ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಖಚಿತವಾಗದ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯ ಬಿಡುಗಡೆ

ಈ ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿದೆ. ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಇದು 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಖಚಿತವಾಗದ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯ ಬಿಡುಗಡೆ

ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಭಾರತದಲ್ಲಿ ಬಿಡುಗಡೆಯಾದರೆ ಈ ಜಿಮ್ನಿ ಎಸ್‍‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍‍ಯುವಿಯ ಉತ್ತರಾಧಿಕಾರಿಯಾಗಲಿದೆ.

ಖಚಿತವಾಗದ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯ ಬಿಡುಗಡೆ

ಭಾರತದಲ್ಲಿ ಆಫ್-ರೋಡ್ ವಾಹನ ಎಂದು ಹೇಳಿದಾಗ ಮೊದಲು ಯೋಚನೆಗೆ ಬರುವುದು ಮಹೀಂದ್ರಾ ಥಾರ್ ಎಂದೇ ಹೇಳಬಹುದು. ಆದರೆ ಅದೇ ರೀತಿ ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುವ ಜಿಮ್ನಿ ಓಮ್ದು ವೇಳೆ ಭಾರತದಲ್ಲಿ ಬಿಡುಗಡೆಗೊಂಡರೆ ಥಾರ್ ಎಸ್‍ಯುವಿಗೆ ಪ್ರಬಲ ಎದುರಾಳಿ ಆಗುತ್ತದೆ.

Most Read Articles

Kannada
English summary
Maruti Jimny Is Still Under Consideration For India. Read In Kananda.
Story first published: Monday, February 22, 2021, 15:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X