ಭಾರತದಲ್ಲಿ ಹೊಸ ಬಲೆನೊ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಲಿದೆ ಮಾರುತಿ ಸುಜುಕಿ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದ್ದಾರೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಎಲ್ಲಾ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಬಹು ಜನಪ್ರಿಯವಾಗಿವೆ.

ಇದರಲ್ಲಿ ಬಲೆನೊ ಹ್ಯಾಚ್‌ಬ್ಯಾಕ್ ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ಕಂಪನಿಯು 2015ರಲ್ಲಿ ಮೊದಲ ಬಾರಿಗೆ ಬಲೆನೊ ಕಾರನ್ನು ಬಿಡುಗಡೆಗೊಳಿಸಿತ್ತು. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ. 2019ರಲ್ಲಿ ಮಾರುತಿ ಬಲೆನೊ ಮಿಡ್‌ಲೈಫ್ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿತು, ಇದು ಸ್ಮಾರ್ಟ್-ಹೈಬ್ರಿಡ್ ಆಯ್ಕೆಯನ್ನು ಸೇರಿಸುವುದರ ಜೊತೆಗೆ ವಿನ್ಯಾಸದಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ತಂದಿತು.

ಮಾರುತಿ ಬಲೆನೊ ಮುಂದಿನ ವರ್ಷ ಮತ್ತೊಂದು ಫೇಸ್‌ಲಿಫ್ಟ್ ಪಡೆಯಬಹುದು ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ಬಲೆನೊ ಮಾದರಿಗೆ ಹೋಲಿಸಿದರೆ ಬಲೆನೊ ಫೇಸ್‌ಲಿಫ್ಟ್ ಸ್ಟೈಲಿಂಗ್‌ನಲ್ಲಿ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಬಹುದು.

ಈ ಬಲೆನೊ ಕಾರು ಮರುವಿನ್ಯಾಸಗೊಳಿಸಲಾದ ಹೆಡ್‌ಲೈಟ್‌ಗಳು, ಹೊಸ ಫ್ರಂಟ್ ಗ್ರಿಲ್ ಮತ್ತು ಮರುಹೊಂದಿಸಲಾದ ಬಂಪರ್‌ಗಳನ್ನು ಒಳಗೊಂಡಿದೆ. ಇನ್ನು ಈ ಕಾರಿನ ಆಯಾಮಗಳು ಸಂಪೂರ್ಣವಾಗಿ ಬದಲಾಗದೆ ಉಳಿಯುವ ನಿರೀಕ್ಷೆಯಿದೆ.

ಇನ್ನು ಬಲೆನೊ ಒಳಭಾಗದಲ್ಲಿ ಕೆಲವು ಬದಲಾವಣೆಗಳಿರುತ್ತವೆ, ಬಲೆನೊ ಫೇಸ್‌ಲಿಫ್ಟ್ ಮಾದರಿಯು ಕೆಲವು ಹೆಚ್ಚುವರಿ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ. ಇನ್ನು ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಮಾರುತಿ ಬಲೆನೊ ಕಾರಿನಲ್ಲಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮುಂದುವರೆಸಬಹುದು. ಈ ಎಂಜಿನ್ 82 ಬಿಎಚ್‌ಪಿ ಪವರ್ ಮತ್ತು 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಈ ಬಲೆನೊ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು (ಟಾಪ್-ಎಂಡ್ ಟ್ರಿಮ್‌ನೊಂದಿಗೆ ಲಭ್ಯವಿದೆ)ಮತ್ತು ಬಲೆನೊದಲ್ಲಿನ ಇತರ ಪೀಚರ್ ಗಳನ್ನು ಒಳಗೊಂಡಿದ್ದಾರೆ. ಸೈಡ್ ಪ್ರೊಫೈಲ್‌ಗೆ ಬರುತ್ತಿರುವಾಗ ಡೋರುಗಳ ಹ್ಯಾಂಡಲ್‌ಗಳಲ್ಲಿ ಕ್ರೋಮ್ ಅಲಂಕರಿಸಲು ಕಂಡುಬರುತ್ತದೆ ಮತ್ತು ಇದು ಸ್ಪೋರ್ಟಿ ಆಗಿ ಕಾಣುವ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳನ್ನು ಸಹ ಪಡೆಯುತ್ತದೆ.

ಮಾರುತಿ ಬಲೆನೊ ಕಾರಿನ ಬಹಳ ವಿಶಾಲವಾದ ಕ್ಯಾಬಿನ್ ಹೊಂದಿದೆ. ಇದು ಫ್ಯಾಬ್ರಿಕ್ ಸೀಟುಗಳನ್ನು ಹೊಂದಿದ್ದು, ಅಪ್ಹೋಲ್ಸ್ಟರಿ ಬ್ಲೂ ಮತ್ತು ಬ್ಲ್ಯಾಕ್ ಥೀಮ್ ಅನ್ನು ಒಳಗೊಂಡಿದೆ. ಇದರಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ನೀಡಲಾಗಿದೆ.

ಇನ್ನು ಇದರಲ್ಲಿ ಮಧ್ಯದಲ್ಲಿ ಡಿಜಿಟಲ್ ಎಂಐಡಿಯೊಂದಿಗೆ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ. ಇದರೊಂದಿಗೆ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ಕ್ಲೈಮೇಟ್ ಕಂಟ್ರೋಲ್ ನಂತರಹ ಫೀಚರ್ ಗಳನ್ನು ಕೂಡ ಹೊಂದಿದೆ. ಮಾರುತಿ ಸುಜುಕಿ ಬಲೆನೊ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಎಲೈಟ್ ಐ20, ಟಾಟಾ ಆಲ್ಟ್ರೊಜ್, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications