ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಸಿಎನ್‌ಜಿ ಮಾದರಿಗಳ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ಯೋಜಿಸುತ್ತಿದೆ. ಮಾರುತಿ ಸುಜುಕಿ ಕಂಪನಿಯು ತನ್ನ ಮೂರು ಜನಪ್ರಿಯ ಮಾದರಿಗಳಾದ ಸ್ವಿಫ್ಟ್, ಡಿಜೈರ್ ಮತ್ತು ವಿಟಾರಾ ಬ್ರೆಝಾವನ್ನು ಸಿಎನ್‌ಜಿ ಮಾದರಿಗಳಾಗಿ ಪರಿಚಯಿಸಲಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಇದರಲ್ಲಿ ವಿಟಾರಾ ಬ್ರೆಝಾ ಎಸ್‍ಯುವಿಯು 1.4ಎಲ್ ಕೆಎಲ್15ಬಿ ಪೆಟ್ರೋಲ್ ಇಂಜಿನ್‌ನೊಂದಿಗೆ ಫ್ಯಾಕ್ಟರಿ ಅಳವಡಿಸಿದ ಸಿಎನ್‌ಜಿ ಕಿಟ್‌ನೊಂದಿಗೆ ಬರುತ್ತದೆ. ಪವರ್ ಮತ್ತು ಟಾರ್ಕ್ ಫಲಿತಾಂಶಗಳು ಸಣ್ಣ ಕುಸಿತಕ್ಕೆ ಸಾಕ್ಷಿಯಾಗುತ್ತವೆ. ಈ ಸಿಎನ್‌ಜಿ ಎಸ್‍ಯುವಿಯು 91 ಬಿಹೆಚ್‍ಪಿ ಪವರ್ ಮತ್ತು 122 ಎಮ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಎನ್ ಜಿ ಕಿಟ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ನೀಡುವ ಸಾಧ್ಯತೆ ಇದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಇತರ ಮಾರುತಿ ಸುಜುಕಿ ಸಿಎನ್‌ಜಿ ಕಾರುಗಳಂತೆಯೇ, ಇದು ಎರಡು ಪರಸ್ಪರ ಅವಲಂಬಿತ ಇಸಿಯು ಮತ್ತು ಇಂಟಿಲಿಜೆಂಟ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿರುತ್ತದೆ. ಹೆಚ್ಚುವರಿ ಸಿಎನ್‌ಜಿ ಕಿಟ್‌ನೊಂದಿಗೆ, ವಾಹನದ ಒಟ್ಟಾರೆ ತೂಕ ಹೆಚ್ಚಾಗುತ್ತದೆ. ಇನ್ನು ಸಸ್ಪೆಂಕ್ಷನ್ ಮತ್ತು ಬ್ರೇಕಿಂಗ್ ಸಿಸ್ಟಂ ಅನ್ನು ಸಹ ಪರಿಷ್ಕರಿಸಬಹುದು.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಕಾರು ತಯಾರಕ ತನ್ನ ಎಸ್-ಸಿಎನ್ ಜಿ ವಾಹನಗಳನ್ನು ಅತ್ಯುತ್ತಮ ಕಾರ್ಯಕ್ಷಮತೆ, ಸುರಕ್ಷತೆ, ಎಂಜಿನ್ ಬಾಳಿಕೆ, ಅನುಕೂಲತೆ ಮತ್ತು ಮೈಲೇಜ್ ನೀಡಲು ವಿನ್ಯಾಸಗೊಳಿಸಲಾಗಿದೆ" ಎಂದು ಹೇಳಲಾಗುತ್ತಿದೆ, ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ರೂಪಾಂತರದ ಬಿಡುಗಡೆ ವಿವರಗಳನ್ನು ಕಾರ್ ತಯಾರಕರು ಇನ್ನೂ ಬಹಿರಂಗಪಡಿಸಿಲ್ಲ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿಯ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ. ಮಾರುತಿ ಸುಜುಕಿ ವಿಟಾರಾ ಬ್ರೆಝಾ ಸುರಕ್ಷಾತಾ ಕ್ರ್ಯಾಶ್ ಟೆಸ್ಟ್ ನಲ್ಲಿ 4 ಸ್ಟಾರ್ ಪಡೆದುಕೊಂಡ ಮಾದರಿಯಾಗಿದೆ

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ವಿಟಾರಾ ಬ್ರೆಝಾ ಮಾದರಿಯು ಕೇವಲ 1.3-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿತ್ತು. ಇನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆಯುವ ಫೇಸ್‌ಲಿಫ್ಟ್ ಆವೃತ್ತಿಯು ಫೆಬ್ರವರಿ 2020ರಲ್ಲಿ ಪಚಯಿಸಿದ್ದರು. ಆದರೆ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವಾಗ 1.3-ಲೀಟರ್ ಡೀಸೆಲ್ ಎಂಜಿನ್‌ ಅನ್ನು ಸ್ಥಗಿತಗೊಳಿಸಲಾಗಿತ್ತು.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಡೀಸೆಲ್ ವಾಹನವು ಸ್ಥಗಿತಗೊಂಡ ನಂತರವೂ ಖರೀದಿದಾರರಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಇನ್ನು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಮಾರುತಿ ಸುಜುಕಿ ಕಂಫನಿಯು ಟೊಯೊಟಾದೊಂದಿಗೆ ಜಂಟಿಯಾಗಿ ಮುಂದಿನ ತಲೆಮಾರಿ ವಿಟಾರಾ ಬ್ರೆಝಾ ಮಾದರಿಯನ್ನು ಅಭಿವೃದ್ಧಿಪಡಿಸುವುದರಲ್ಲಿ ನಿರತರಾಗಿದ್ದಾರೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಬಹುನಿರೀಕ್ಷಿತ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗಿದೆ. ಈ ಹೊಸ ಮಾರುತಿ ಸೆಲೆರಿಯೊ ಮಾದರಿಯು ಪ್ರಮುಖ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಹೊಸ ವಿನ್ಯಾಸದಲ್ಲಿ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ಮಾರುತಿ ಸುಜುಕಿ ಕಂಪನಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇತ್ತೀಚೆಗೆ ಈ ಹೊಸ ಮಾರುತಿ ಸೆಲೆರಿಯೊ ಕಾರು ಇತ್ತೀಚೆಗೆ ಟಿವಿಸಿ ಚಿತ್ರೀಕರಣದ ವೇಳೆ ಕಾಣಿಸಿಕೊಂಡಿದ್ದು, ಇದರ ಸ್ಪೈ ಚಿತ್ರಗಳು ಬಹಿರಂಗವಾಗಿದೆ. ಇನ್ನು ಮಾರುತಿ ಸುಜುಕಿ ಕಂಪನಿಯು ಈ ಹೊಸ ಸೆಲೆರಿಯೊ ಕಾರಿನ ಬಿಡುಗಡೆಯ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಆದರೆ ಇದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಒಂದು ಪ್ರಮುಖ ಬದಲಾವಣೆಯೆಂದರೆ ಹೊಸ ಹಿಯರ್‌ಟೆಕ್ಟ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಇದನ್ನು ತಯಾರಿಸಲಾಗಿದೆ. ಈ ಮಾರುತಿ ಸೆಲೆರಿಯೊ ಹೊಸದಾಗಿ ವಿನ್ಯಾಸಗೊಳಿಸಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಹೊಸ ತಲೆಮಾರಿನ ವಿಟಾರಾ ಬ್ರೆಝಾ ಮಾದರಿಯು 2022ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ ಮಾದರಿಯ ಅದೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಸ ತಲೆಮಾರಿನ ಮಾದರಿಯಲ್ಲಿಯು ಅಳವಡಿಸಬಹುದು. ಮಾರುತಿ ಸುಜುಕಿ ಕೂಡ ತನ್ನ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಶೀಘ್ರದಲ್ಲೇ ಮರಳಿ ತರಲು ಯೋಜಿಸುತ್ತಿದೆ.

Article Published On: Tuesday, August 10, 2021, 22:06 [IST]
English summary
Maruti suzuki planning to launch vitara brezza cng model in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+