ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

ಮಾರುತಿ ಸುಜುಕಿ (Maruti Suzuki) ಕಂಪನಿಯ ಉತ್ಪಾದನೆಯು ಕಳೆದ ಕೆಲವು ತಿಂಗಳುಗಳಿಂದ ಕಡಿಮೆಯಾಗಿದೆ. ಆದರೆ ಕಂಪನಿಯ ಉತ್ಪಾದನೆಯು ಮುಂದಿನ ತ್ರೈಮಾಸಿಕದಲ್ಲಿ ಸುಧಾರಿಸಲಿದೆ ಎಂದು ಹೇಳಲಾಗುತ್ತಿದೆ. ಕಂಪನಿಯ ಉತ್ಪಾದನೆಯು ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸುಧಾರಣೆ ಕಂಡಿತ್ತು. ಈ ಅವಧಿಯಲ್ಲಿ ಮಾರುತಿ ಸುಜುಕಿಯು 4,92,000 ಯುನಿಟ್ ವಾಹನವನ್ನು ಉತ್ಪಾದಿಸಿತ್ತು.

ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

ಕಂಪನಿಯು ಮುಂದಿನ ತ್ರೈಮಾಸಿಕದಲ್ಲಿ 4,70,000 ಯುನಿಟ್ ವಾಹನಗಳನ್ನು ಉತ್ಪಾದಿಸುವುದಾಗಿ ತನ್ನ ಮಾರಾಟಗಾರರಿಗೆ ತಿಳಿಸಿದೆ. ಸೆಮಿಕಂಡಕ್ಟರ್ ಚಿಪ್ ಪೂರೈಕೆ ಸುಧಾರಿಸುತ್ತಿರುವುದರಿಂದ ಕಂಪನಿಯ ಮಾರಾಟವು ಉತ್ತಮವಾಗಿರಲಿದೆ. ಕಂಪನಿಯು ಸುಮಾರು 4,70,000 - 4,90,000 ಯುನಿಟ್ ವಾಹನಗಳ ಉತ್ಪಾದನೆಯನ್ನು ನಿರೀಕ್ಷಿಸುತ್ತಿದೆ. ಈ ಉತ್ಪಾದನೆಯು ಈ ದಶಕದ ಅತಿ ದೊಡ್ಡ ವಾರ್ಷಿಕ ಹೆಚ್ಚಳವಾಗಿರಲಿದೆ.

ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಕಂಪನಿಯ ಮಾರಾಟ ಕಡಿಮೆಯಾಗಿತ್ತು. ಕಂಪನಿಯ ಮಾರಾಟವು ಈ ಬಾರಿ ಉತ್ತಮವಾಗಿರುವ ಸಾಧ್ಯತೆಗಳಿವೆ. ಈ ಹಿಂದೆ ಕಂಪನಿಯು 2011ರ ಹಣಕಾಸು ವರ್ಷದಲ್ಲಿ 23.5% ನಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯು 4,92,000 ಯುನಿಟ್‌ಗಳನ್ನು ಉತ್ಪಾದಿಸಿತ್ತು.

ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

ಕಂಪನಿಯು ಬುಕ್ಕಿಂಗ್ ಮಾಡಲಾಗಿರುವ 2,80,000 ಯುನಿಟ್ ವಾಹನಗಳನ್ನು ವಿತರಿಸಬೇಕಾಗಿದೆ ಎಂದು ವರದಿಯಾಗಿದೆ. ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣಕ್ಕೆ ಗ್ರಾಹಕರು ವಾಹನಗಳ ವಿತರಣೆ ಪಡೆಯಲು 3 - 6 ತಿಂಗಳ ಕಾಯುವ ಪರಿಸ್ಥಿತಿ ಎದುರಾಗಿದೆ. ಕಂಪನಿಯು ಹಬ್ಬದ ಋತುವಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್‌ಗಳನ್ನು ಪಡೆದಿದೆ. ಆದರೆ ಉತ್ಪಾದನೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಯುವ ಅವಧಿ ಹೆಚ್ಚಾಗಿದೆ.

ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

ಮುಂದಿನ ತ್ರೈಮಾಸಿಕದಲ್ಲಿ ಕಂಪನಿಯು 85%ನಿಂದ 90% ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದೆ. ಆಗಸ್ಟ್‌ನಿಂದ ನವೆಂಬರ್‌ವರೆಗೆ ಕಂಪನಿಯ ಉತ್ಪಾದನೆಯುಕಡಿಮೆಯಾಗಿದೆ. ಇದೇ ಸಮಯದಲ್ಲಿ ಕಂಪನಿಯು ತನ್ನ ಮಾರಾಟಗಾರರಿಗೆ ಸುರಕ್ಷಿತವಾಗಿರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಿದೆ. ಕರೋನಾದ ಒಮಿಕ್ರಾನ್ ಅನಿಶ್ಚಿತತೆಯನ್ನು ಹೆಚ್ಚಿಸಿದೆ.

ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

ಕಂಪನಿಯು ಈ ಆರ್ಥಿಕ ವರ್ಷದ 8 ತಿಂಗಳಲ್ಲಿ 10.2 ಲಕ್ಷ ಯುನಿಟ್ ವಾಹನಗಳನ್ನು ಉತ್ಪಾದಿಸಿದೆ. ಕಂಪನಿಯು ತಿಂಗಳಿಗೆ ಸುಮಾರು 1,26,000 ಯುನಿಟ್ ವಾಹನಗಳನ್ನು ಉತ್ಪಾದಿಸಿದೆ. ಕಂಪನಿಯು ಅಕ್ಟೋಬರ್ - ನವೆಂಬರ್ ಅವಧಿಯಲ್ಲಿ 2,80,000 ಯೂನಿಟ್ ವಾಹನಗಳನ್ನು ಉತ್ಪಾದಿಸಿದೆ. ಡಿಸೆಂಬರ್ ತಿಂಗಳಲ್ಲಿ ಕಂಪನಿಯು 1,50,000 ಯುನಿಟ್ ವಾಹನಗಳನ್ನು ಉತ್ಪಾದಿಸುವ ನಿರೀಕ್ಷೆಗಳಿವೆ.

ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

ನವೆಂಬರ್ ತಿಂಗಳ ಉತ್ಪಾದನೆ

ಮಾರುತಿ ಸುಜುಕಿ ಕಳೆದ ತಿಂಗಳು 1,45,560 ಯುನಿಟ್ ವಾಹನಗಳನ್ನು ಉತ್ಪಾದಿಸಿತ್ತು. 2020ರ ನವೆಂಬರ್ ತಿಂಗಳಿನಲ್ಲಿ ಉತ್ಪಾದಿಸಲಾದ 1,50,221 ಯುನಿಟ್‌ ವಾಹನಗಳಿಗೆ ಹೋಲಿಸಿದರೆ ಕಳೆದ ತಿಂಗಳ ಉತ್ಪಾದನಾ ಪ್ರಮಾಣವು 3% ನಷ್ಟು ಕಡಿಮೆಯಾಗಿದೆ. ಆದರೆ ಕಂಪನಿಯು ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಉತ್ಪಾದಿಸಲಾದ 1,34,779 ಯುನಿಟ್ ವಾಹನಗಳಿಗೆ ಹೋಲಿಸಿದರೆ ಸುಮಾರು 8% ನಷ್ಟು ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ.

ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

ಆಲ್ಟೊ, ಎಸ್-ಪ್ರೆಸ್ಸೊದಂತಹ ಮಿನಿ ಹ್ಯಾಚ್‌ಬ್ಯಾಕ್‌ಗಳ ಉತ್ಪಾದನೆಯು 19,810 ಯುನಿಟ್‌ಗಳಷ್ಟಿದೆ. ಈ ಪ್ರಮಾಣವು ಕಳೆದ ವರ್ಷ ಇದೇ ತಿಂಗಳಿನಲ್ಲಿ ಉತ್ಪಾದಿಸಲಾದ 24,336 ಯುನಿಟ್‌ಗಳಿಗಿಂತ 18.5% ನಷ್ಟು ಕಡಿಮೆಯಾಗಿದೆ. WagonR, Swift, DZire, Baleno, Ignis ಹಾಗೂ ಇನ್ನಿತರ ಮಾದರಿಗಳೊಂದಿಗಿನ ಕಾಂಪ್ಯಾಕ್ಟ್ ವಿಭಾಗದಲ್ಲಿ ಕಳೆದ ತಿಂಗಳು 74,283 ಯೂನಿಟ್ ವಾಹನಗಳನ್ನು ಉತ್ಪಾದಿಸಲಾಗಿದೆ.

ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

2020ರ ನವೆಂಬರ್ ತಿಂಗಳಿನಲ್ಲಿ 85,118 ಯುನಿಟ್‌ಗಳನ್ನು ಉತ್ಪಾದಿಸಲಾಗಿತ್ತು. ಈ ಪ್ರಮಾಣವು 14.5% ನಷ್ಟು ಕಡಿಮೆಯಾಗಿದೆ. ಸಿಯಾಜ್ ಮಧ್ಯಮ ಗಾತ್ರದ ಸೆಡಾನ್ ಕಾರಿನ ಉತ್ಪಾದನೆಯು 2,453 ಯುನಿಟ್‌ಗಳಷ್ಟಿದೆ. ಈ ಪ್ರಮಾಣವು 2020ರ ನವೆಂಬರ್ ತಿಂಗಳಿನಲ್ಲಿ ಉತ್ಪಾದನೆಯಾದ 1,192 ಯುನಿಟ್‌ಗಳಿಗೆ ಹೋಲಿಸಿದರೆ 51.4% ನಷ್ಟು ಹೆಚ್ಚಾಗಿದೆ.

ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

ಎರ್ಟಿಗಾ, ಎಸ್-ಕ್ರಾಸ್, ವಿಟಾರಾ ಬ್ರೆಝಾ ಹಾಗೂ ಎಕ್ಸ್‌ಎಲ್ 6 ನಂತಹ ಎಸ್‌ಯು‌ವಿಗಳ ಉತ್ಪಾದನೆಯು 35,590 ಯುನಿಟ್ ಗಳೊಂದಿಗೆ 43.9% ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ತಿಂಗಳು ಕಂಪನಿಯು 9,889 ಯುನಿಟ್ ಇಕೋ ವ್ಯಾನ್‌ಗಳನ್ನು ಉತ್ಪಾದಿಸಿದೆ. 2020ರ ನವೆಂಬರ್ ತಿಂಗಳಿನಲ್ಲಿ ಈ ಪ್ರಮಾಣವು 11,212 ಯುನಿಟ್‌ಗಳಾಗಿತ್ತು. ಈ ಕಾರಿನ ಉತ್ಪಾದನಾ ಪ್ರಮಾಣವು 13% ನಷ್ಟು ಇಳಿಕೆ ಕಂಡಿದೆ.

ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

ಇನ್ನು ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು ವಾಹನ ಮಾರಾಟದಲ್ಲಿ 9% ನಷ್ಟು ಕುಸಿತವನ್ನು ದಾಖಲಿಸಿದೆ. ಕಂಪನಿಯು ಕಳೆದ ತಿಂಗಳು ಒಟ್ಟು 1,39,184 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ಕಳೆದ ವರ್ಷ ಇದೇ ತಿಂಗಳಲ್ಲಿ 1,53,233 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು.

ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು ಮಾರಾಟ ಮಾಡಿದ 1,09,726 ಪ್ರಯಾಣಿಕ ವಾಹನಗಳಲ್ಲಿ 70% ನಷ್ಟು ಕೊಡುಗೆ ಮಿನಿ ಹಾಗೂ ಕಾಂಪ್ಯಾಕ್ಟ್ ವಾಹನ ವಿಭಾಗದಿಂದ ಬಂದಿದೆ. ಇದರಲ್ಲಿ ಆಲ್ಟೊ, ವ್ಯಾಗನ್‌ಆರ್, ಬಲೆನೊ, ಸ್ವಿಫ್ಟ್ ಹಾಗೂ ಇನ್ನಿತರ ಕಾರುಗಳು ಸೇರಿವೆ. ಈ ವಾಹನಗಳು ಕಳೆದ ತಿಂಗಳು ಕಂಪನಿಗೆ 74,492 ಯುನಿಟ್‌ಗಳನ್ನು ಕೊಡುಗೆಯಾಗಿ ನೀಡಿವೆ.

ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

ಕಾಂಪ್ಯಾಕ್ಟ್ ವಾಹನ ವಿಭಾಗಕ್ಕೆ ಹೋಲಿಸಿದರೆ, ಸಿಯಾಜ್, ಎರ್ಟಿಗಾ ಹಾಗೂ ಎಕ್ಸ್‌ಎಲ್ 6 ಒಳಗೊಂಡಿರುವ ಮಧ್ಯಮ ಗಾತ್ರದ ಹಾಗೂ ಯುಟಿಲಿಟಿ ವಾಹನಗಳು ಕಳೆದ ತಿಂಗಳು ಕಂಪನಿಯ ಮಾರಾಟದಲ್ಲಿ ಸುಮಾರು 25% ನಷ್ಟು ಕೊಡುಗೆ ನೀಡಿವೆ. ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು ಸಿಯಾಜ್‌ ಕಾರಿನ ಒಟ್ಟು 1,089 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಮುಂದಿನ ತ್ರೈಮಾಸಿಕದಲ್ಲಿ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಉತ್ಪಾದನೆ

ಸೆಮಿಕಂಡಕ್ಟರ್ ಕೊರತೆಯಿಂದಾಗಿ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ ಎಂದು ಮಾರುತಿ ಸುಜುಕಿ ಕಂಪನಿ ತಿಳಿಸಿದೆ. ಇದರಿಂದ ಭಾರತದಲ್ಲಿ ಮಾರಾಟವಾಗುವ ವಾಹನಗಳ ಉತ್ಪಾದನೆಯ ಮೇಲೆ ಪರಿಣಾಮ ಉಂಟಾಗಿದೆ. ಸೆಮಿಕಂಡಕ್ಟರ್ ಕೊರತೆಯಿಂದಾಗಿ ಡಿಸೆಂಬರ್‌ನಲ್ಲಿ ಕಂಪನಿಯ ಉತ್ಪಾದನೆಯು 15% ನಿಂದ 20% ನಷ್ಟು ಕುಸಿಯುವ ನಿರೀಕ್ಷೆಗಳಿವೆ ಎಂದು ಮಾರುತಿ ಸುಜುಕಿ ಕಂಪನಿಯು ಈ ಹಿಂದೆಯೇ ತಿಳಿಸಿತ್ತು.

Most Read Articles

Kannada
English summary
Maruti suzuki production to improve in next quarter details
Story first published: Friday, December 24, 2021, 19:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X