ಜನಪ್ರಿಯ S-Presso ಕಾರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ Maruti Suzuki
ಎಂಟ್ರಿ ಲೆವೆಲ್ ಮೈಕ್ರೋ-ಎಸ್‌ಯುವಿಯಾದ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಮಾರುತಿ ಎಸ್-ಪ್ರೆಸ್ಸೊ ಕಾರು ಕಡಿಮೆ ಅವಧಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು 2019 ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು ಮತ್ತು ಅಂದಿನಿಂದ ಇದು ಮಾರುಕಟ್ಟೆಯಲ್ಲಿ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಮಾರುತಿ ಸುಜುಕಿ ಕಂಪನಿಯು ಇದೀಗ ಈಗ S-ಎಸ್-ಪ್ರೆಸ್ಸೊ ಕಾರಿಗಾಗಿ ಹೊಸ ಟಿವಿಸಿಯನ್ನು ಬಿಡುಗಡೆ ಮಾಡಿದೆ. ಎಸ್-ಪ್ರೆಸ್ಸೊದ ಹೊಸ ಟಿವಿಸಿ ಕಾರಿನಂತೆಯೇ ಯುವಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ. ಬೆಲೆಯಿಂದಾಗಿ ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಮಾರುತಿ ಸುಜುಕಿ ಆಲ್ಟೋ ಜೊತೆಗೆ ಎಸ್-ಪ್ರೆಸ್ಸೊ ಸ್ಥಾನ ಪಡೆದಿದೆ.

ಬಿಡುಗಡೆಯಾದ ಒಂದು ವರ್ಷದ ನಂತರ, ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನ 75,000 ಕ್ಕೂ ಹೆಚ್ಚು ಯುನಿಟ್ ಗಳು ಮಾರಾಟವಾಗಿವೆ. ಎಸ್-ಪ್ರೆಸ್ಸೊ ಸ್‌ಯುವಿ ಡಿಎನ್‌ಎಯೊಂದಿಗೆ ಬರುತ್ತದೆ, ಇದು ಕಾರಿಗೆ ಕಮಾಂಡಿಂಗ್ ಸ್ಥಾನವನ್ನು ನೀಡುವ ಉನ್ನತ ಸ್ಥಾನದ ಬಾನೆಟ್ ಅನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಕಂಪನಿಯು ಸಾಮಾನ್ಯ ಜನರಿಗಾಗಿ ಕೈಗೆಟಕುವ ದರದಲ್ಲಿ ಈ ಮಿನಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಇದರಿದ ಮಧ್ಯಮ ವರ್ಗದ ಜನರಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಎಸ್-ಪ್ರೆಸ್ಸೊ ಮಿನಿ ಎಸ್‍ಯುವಿ 998 ಸಿಸಿ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಈ 67 ಬಿಎಚ್‌ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆರಂಭಿಕ ಕಾರು ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಆಟೋ ಗೇರ್ ಶಿಫ್ಟ್(ಎಜಿಎಸ್) ಆಯ್ಕೆಯನ್ನು ನೀಡಲಾಗಿದೆ.

ಈ ಮಾರುತಿ ಎಸ್-ಪ್ರೆಸ್ಸೊ ಮೈಕ್ರೋ ಎಸ್‌ಯುವಿ ವಿನ್ಯಾಸದೊಂದಿಗೆ ಆಕರ್ಷಕ ಗ್ರೌಂಡ್ ಕ್ಲಿಯೆರೆನ್ಸ್, 14-ಇಂಚಿನ ಸ್ಟೀಲ್ ವೀಲ್ಹ್, ಸ್ಲಿಕ್ ಫ್ರಂಟ್ ಗ್ರಿಲ್, ಕ್ರೋಮ್ ಇನ್ಸರ್ಟ್, ಹೆಡ್‌ಲ್ಯಾಂಪ್, ವಿಸ್ತರಿತ ಸೆಂಟರ್ ಏರ್ ಇನ್‌ಟೆಕ್, ಸಿ ಶೇಫ್ ಟೈಲ್‌ಗೆಟ್ ಸೌಲಭ್ಯವು ಕಾರಿನ ಅಂದಕ್ಕೆ ಮತ್ತಷ್ಟು ಮೆರಗನ್ನು ನೀಡುತ್ತದೆ.

ಮಾರುತಿ ಎಸ್-ಪ್ರೆಸ್ಸೊ ಕಾರಿನ ಇಂಟಿರಿಯರ್ ನಲ್ಲಿ ಹಲವು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಬಾಡಿ ಕಲರ್ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೊಲ್‌ನಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟ್ಯಾಕೊ ಮೀಟರ್, ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ,ಆ್ಯಪಲ್ ಕಾರ್ ಪ್ಲೇ/ಆಂಡ್ರಾಯ್ಡ್ ಆಟೋ ಮತ್ತು ಆರೇಂಜ್ ಕಲರ್ ಆಕ್ಸೆಂಟ್ ಅನ್ನು ಒಳಗೊಂಡಿದೆ,

ಇದರಲ್ಲಿ ಕೀ ಲೆಸ್ ಎಂಟ್ರಿ, ಬ್ಲೂಥೂತ್ ಕನೆಕ್ಟಿವಿಟಿ, ಪವರ್ ವಿಂಡೋ, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಪೀಡ್ ವಾರ್ನಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲ ನೂತನ ಫೀಚರ್ಸ್‌ಗಳನ್ನು ಒಳಗೊಂಡಿವೆ.

ಈ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಸದ್ಯ ಪ್ರಮುಖ ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಆಯ್ಕೆ ಮಾಡಬಹುದಾಗಿದೆ.

ಹೊಸ ಸುಜುಕಿ ಎಸ್-ಕ್ರಾಸ್ ಕಾರು ಇದೇ ತಿಂಗಳ 25 ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. 2022ರ ಸುಜುಕಿ ಎಸ್-ಕ್ರಾಸ್ ಕಾರಿನ ಸ್ಪೈ ಚಿತ್ರಗಳು ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದೆ. ಈ ಸ್ಪೈ ಚಿತ್ರಗಳು 2022ರ ಸುಜುಕಿ ಎಸ್-ಕ್ರಾಸ್ ಕ್ರಾಸ್‌ಒವರ್‌ನ ವಿನ್ಯಾಸವನ್ನು ಸಂಪೂರ್ಣವಾಗಿ ಬಹಿರಂಗಪಡಿಸುತ್ತವೆ. ಇತ್ತೀಚಿನ ಚಿತ್ರಗಳಲ್ಲಿ ಕಾರಿನ ಮುಂಭಾಗ, ಅಡ್ಡ ಮತ್ತು ಹಿಂಭಾಗದ ಪ್ರೊಫೈಲ್ ಮಾಹಿತಿಗಳನ್ನು ಬಹಿರಂಗಪಡಿಸುತ್ತದೆ. ಹೊಸ ಮಾದರಿಯು ಮೊದಲು ಯುರೋಪ್‌ನಲ್ಲಿ ಮಾರಾಟವಾಗಲಿದೆ, ಏಕೆಂದರೆ ಡೀಲರ್ ಗಳಿಗೆ ರವಾನೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ.

ಹೊರಹೋಗುವ ಮಾದರಿಯಲ್ಲಿ ಕ್ರಾಸ್ಒವರ್ ನಿಲುವಿಗೆ ವಿರುದ್ಧವಾಗಿ ಇದು ನೇರವಾದ ಎಸ್‍ಯುವಿ-ಇಶ್ ಪ್ರೊಫೈಲ್ ಅನ್ನು ಪಡೆಯುತ್ತದೆ. ಸೈಡ್ ಮತ್ತು ಹಿಂಬದಿಯ ಪ್ರೊಫೈಲ್ ಇದಕ್ಕೆ ಕ್ರಾಸ್ಒವರ್ ಶೈಲಿಯನ್ನು ನೀಡುತ್ತದೆ ಈ ಹೊಸ ಸುಜುಕಿ ಎಸ್-ಕ್ರಾಸ್ ಕೂಡ ಮುಂದಿನ 1-2 ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. 2022ರ ಸುಜುಕಿ ಎಸ್-ಕ್ರಾಸ್ ಎಲ್ಲಾ ಹೊಸ ವಿನ್ಯಾಸದೊಂದಿಗೆ ಬರಲಿದೆ ಎಂದು ಸ್ಪೈ ಚಿತ್ರಗಳು ಖಚಿತಪಡಿಸುತ್ತವೆ. ನ್ಯೂ ಜನರೇಷನ್ ಎಸ್-ಕ್ರಾಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿಯು ಹೊಸ ರೂಪದಲ್ಲಿ ಪ್ರವೇಶಿಸಲಿದೆ.

ಮಾರುತಿ ಸುಜುಕಿ ಇತ್ತೀಚೆಗೆ ಎಲ್ಲಾ ಹೊಸ ಸೆಲೆರಿಯೊವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಹೊಸ ಕಾರು ಭಾರತದಲ್ಲಿ ಹೆಚ್ಚು ಇಂಧನ ದಕ್ಷತೆಯ ಪೆಟ್ರೋಲ್ ಕಾರು ಎನಿಸಿಕೊಂಡಿದೆ. ಮಾರುತಿ ಸುಜುಕಿಯಿಂದ ಮುಂಬರುವ ಕಾರುಗಳಲ್ಲಿ ಹೊಸ ಬಲೆನೊ ಫೇಸ್‌ಲಿಫ್ಟ್, ಎಲ್ಲಾ-ಹೊಸ ವಿಟಾರಾ ಬ್ರೇಝಾ, ಹೊಸ ಆಲ್ಟೊ, ಬಲೆನೊ-ಆಧಾರಿತ ಎಸ್‌ಯುವಿ, ಹೊಸ ಎಸ್-ಕ್ರಾಸ್ ಮತ್ತು ಹೆಚ್ಚಿನವು ಸೇರಿವೆ.ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಗರನ್ನು ಸೆಳೆಯುಯಲ್ಲಿ ಉತ್ತಮವಾಗಿ ಯಶಸ್ವಿಯಾಗಿದೆ. ಒಟ್ಟಿನಲ್ಲಿ ಕೊರೋನಾ ಆತಂಕ ನಡುವೆಯು ಕಳೆದ ತಿಂಗಳಿನಲ್ಲಿ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಉತ್ತಮವಾಗಿ ಮಾರಾಟವಾಗುತ್ತಿದೆ.


Click it and Unblock the Notifications