ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಮಾರುತಿ ಸುಜುಕಿ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ತನ್ನ ಆಗಸ್ಟ್ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಗಳ ಪ್ರಕಾರ, ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು ಒಟ್ಟು 130,699 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಮಾರುತಿ ಸುಜುಕಿ

ಇನ್ನು ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 124,624 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.5 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಒಟ್ಟು ವಾರ್ಷಿಕ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದರು ದೇಶಿಯಾ ಮಾರುಕಟ್ಟೆಯಲ್ಲಿ ಕುಸಿತವನ್ನು ಕಂಡಿದೆ, ಇನ್ನು ಮಾರುತಿ ಸುಜುಕಿ ಕಂಪನಿಗೆ ಎಲೆಕ್ಟ್ರಾನಿಕ್ ಯುನಿಟ್ ನಿಂದಾಗಿ ಕೊರತೆಯಿಂದಾಗಿ ಆಗಸ್ಟ್ ತಿಂಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಕಂಪನಿ ಹೇಳಿದೆ. ಇದು ಹಲವಾರು ವಾಹನ ತಯಾರಕರು ಜಾಗತಿಕವಾಗಿ ಎದುರಿಸುತ್ತಿರುವ ಸಮಸ್ಯೆಯಾಗಿದೆ.

ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಮಾರುತಿ ಸುಜುಕಿ

2021ರ ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 162,462 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ,20 ರಷ್ಟು ಕುಸಿತವನ್ನು ಕಂಡಿತು. ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 116,704 ಕ್ಕೆ ಹೋಲಿಸಿದರೆ 2021ರ ಆಗಸ್ಟ್ ತಿಂಗಳಿನಲ್ಲಿ ಕಾರು ತಯಾರಕರ ದೇಶೀಯ ಮಾರಾಟವು 110,080 ಯುನಿಟ್‌ಗಳಷ್ಟು ಕಡಿಮೆಯಾಗಿದೆ.

ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಮಾರುತಿ ಸುಜುಕಿ

2021ರ ಜುಲೈ ತಿಂಗಳ 141,238 ವಾಹನಗಳ ಮಾರಾಟಕ್ಕೆ ಹೋಲಿಸಿದರೆ, ಕಂಪನಿಯು ಶೇಕಡಾ ಶೇ.22 ರಷ್ಟು MoM ಕುಸಿತವನ್ನು ಕಂಡಿದೆ. ಆಗಸ್ಟ್‌ನಲ್ಲಿ ಮಾರುತಿ ಸುಜುಕಿ ಭಾರತದಿಂದ 20,619 ವಾಹನಗಳನ್ನು ರಫ್ತು ಮಾಡಿದೆ. ಇನ್ನು ಕಳೆದ ವರ್ಷದ ಇದೇ ತಿಂಗಳಿನಲ್ಲಿ 7,920 ಯುನಿಟ್‌ಗಳಿಗೆ ಹೋಲಿಸಿದರೆ ಅದು ಶೇಕಡಾ 160 ರಷ್ಟು ಬೆಳವಣಿಗೆಯಾಗಿದೆ, ಇನ್ನು ಇದೇ ವರ್ಷದ ಜುಲೈ ತಿಂಗಳಿನಲ್ಲಿ 21,224 ವಾಹನಗಳನ್ನು ರಫ್ತು ಮಾಡಿದೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.2 ರಷ್ಟು ಕುಸಿತವನ್ನು ಕಂಡಿದೆ.

ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಮಾರುತಿ ಸುಜುಕಿ

ಹೊಸ ವಾಹನಗಳ ಉತ್ಪಾದನೆಗೆ ಅವಶ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯಾಪಕವಾಗಿ ಪರಿಣಾಮ ಬೀರುತ್ತಿದೆ. ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತ ಮಾತ್ರವಲ್ಲ ವಿಶ್ವದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದೆ.

ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಮಾರುತಿ ಸುಜುಕಿ

ಚೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದ್ದ ಎಲೆಕ್ಟ್ರಾನಿಕ್ ಚಿಪ್ ಪ್ರಮಾಣವನ್ನು ಕಡಿತಗೊಳಿಸುತ್ತಿರುವುದರಿಂದ ಇತರೆ ದೇಶಗಳಲ್ಲಿನ ಉತ್ಪಾದನಾ ಲಭ್ಯತೆ ಆಧರಿಸಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯೂ ಹೆಚ್ಚಳವಾಗುತ್ತಿದೆ. ಅಗಸ್ಟ್ ತಿಂಗಳ ಕೊನೆಯಾಂತ್ಯದಲ್ಲಿ ಎಲೆಕ್ಟ್ರಿಕ್ ಚಿಪ್ ಹೆಚ್ಚಳ ನೀರಿಕ್ಷೆಯಲ್ಲಿದ್ದ ಮಾರುತಿ ಸುಜುಕಿ ಕಂಪನಿಗೆ ನಿರಾಸೆ ಉಂಟಾಗಿದೆ.

ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಮಾರುತಿ ಸುಜುಕಿ

ಪೂರೈಕೆ ಪ್ರಮಾಣವು ಕಡಿಮೆಯಿರುವುರಿಂದ ಪರಿಸ್ಥಿತಿ ತಿಳಿಗೊಳ್ಳಲು ಇನ್ನು ಕೆಲ ತಿಂಗಳುಗಳೇ ಬೇಕಗಿದೆ. ಇದರಿಂದ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಉತ್ಪಾದನೆಗೆ ನೇರ ಪರಿಣಾಮ ಬೀರಿದೆ. ಇದರ ಜೊತೆ ಕಾರುಗಳ ಮಾರಾಟ ಮೇಲೆಯು ಪರಿಣಾಮ ಬೀರಿದೆ.

ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಮಾರುತಿ ಸುಜುಕಿ

ಇನ್ನು ಮಾರುತಿ ಸುಜುಕಿ ಕಂಪನಿಯು ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹೈಬ್ರಿಡ್ ಕಾರ್ ಅನ್ನು ರಸ್ತೆ ಬದಿಯ ಚಾರ್ಜಿಂಗ್ ಮೂಲಸೌಕರ್ಯವನ್ನು ಅವಲಂಬಿಸದೆ ಪ್ರಯಾಣದಲ್ಲಿರುವಾಗಲೇ ಚಾರ್ಜ್ ಮಾಡಬಹುದು. ಈ ಆಟೋ ಚಾರ್ಜಿಂಗ್ ಕಾರಿನಲ್ಲಿ ಎಂಜಿನ್ ಬ್ಯಾಟರಿಗೆ ಶಕ್ತಿಯನ್ನು ಕೂಡ ನೀಡುತ್ತದೆ.

ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಮಾರುತಿ ಸುಜುಕಿ

ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಜನಪ್ರಿಯ ಕಾರು ತಯಾರಕ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿವೆ. ಇದರ ಜೊತೆಗೆ ಅನೇಕ ಹೊಸ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈ ಕಂಪನಿಗಳಿಗೆ ಹೊಲಿಸಿದರೆ ಮಾರುತಿ ಸುಜುಕಿ ಕಂಪನಿಯು ಈಗ ಹೈಬ್ರಿಡ್ ಎಲೆಕ್ಟ್ರಿಕ್ ಕಾರಿನ ಮೇಲೆ ಕೆಲಸ ಮಾಡುತ್ತಿದೆ.

ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಮಾರುತಿ ಸುಜುಕಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾರುತಿ ಸುಜುಕಿಕಂಪನಿಯ ಅಧಿಕಾರಿಯೊಬ್ಬರು ಹಲವಾರು ಎಲೆಕ್ಟ್ರಿಕ್ ವಾಹನಗಳು ಜಂಟಿ ಪರೀಕ್ಷೆಯಲ್ಲಿದ್ದು, ಮುಂದಿನ ತಿಂಗಳಿನಿಂದ ಟೊಯೊಟಾ ಕಂಪನಿಯ ಜೊತೆಗೂಡಿ ಈ ಮಾದರಿಗಳ ಪರೀಕ್ಷೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು. ಅದರ ಬಳಕೆಯ ಕುರಿತು ಹೆಚ್ಚಿನ ಗ್ರಾಹಕರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಮಾರುತಿ ಸುಜುಕಿ

ಸುಮಾರು 10 - 15 ವರ್ಷಗಳವರೆಗೆ ಇದು ಒಂದು ಪ್ರಬಲ ತಂತ್ರಜ್ಞಾನವಾಗಿರಲಿದ್ದು, ಹಲವು ಅನುಕೂಲಗಳನ್ನು ಹೊಂದಿರಲಿದೆ ಎಂಬುದು ಕಂಪನಿಯ ಅಭಿಪ್ರಾಯ. ಈ ತಂತ್ರಜ್ಞಾನವು ಎಕ್ಸ್ ಟರ್ನಲ್ ಚಾರ್ಜಿಂಗ್ ಮೂಲಸೌಕರ್ಯದ ಅವಲಂಬನೆಯನ್ನು ತಪ್ಪಿಸಬಹುದು. ಜೊತೆಗೆ ಮಾಲಿನ್ಯ ಹೊರಸೂಸುವಿಕೆಯು ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ,

ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಮಾರುತಿ ಸುಜುಕಿ

ಇನ್ನು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಸರಣಿಯಲ್ಲಿ ವೈವಿಧ್ಯಮಯ ಮಾದರಿಗಳನ್ನು ಹೊಂದಿದ್ದಾರೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಎಲ್ಲಾ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಗಳಿಸಿದೆ.

ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಮಾರುತಿ ಸುಜುಕಿ

ಇನ್ನು ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಭಾರತದಲ್ಲಿ ತನ್ನ ಜನಪ್ರಿಯ ಮಾದರಿಗಳನ್ನು ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಮಾರುತಿ ಸುಜುಕಿ ಹೊಸ ತಲೆಮಾರಿನ ಸೆಲೆರಿಯೊ ಹ್ಯಾಚ್‌ಬ್ಯಾಕ್ ಅನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದಲ್ಲದೇ ಮಾರುತಿ ಸುಜುಕಿ ಕಂಪನಿಯು ಸ್ವಿಫ್ಟ್ ಹ್ಯಾಚ್‌ಬ್ಯಾಕ್, ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಮತ್ತು ವಿಟಾರಾ ಬ್ರೆಝಾ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯ ಸಿಎನ್‌ಜಿ ಮಾದರಿಗಳಾಗಿ ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Maruti suzuki sold over 1 lakh units in august 2021 details
Story first published: Thursday, September 2, 2021, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X