ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಕುಸಿತ ಕಂಡ Maruti Suzuki

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ 2021ರ ಅಕ್ಟೋಬರ್‌ ತಿಂಗಳಿನ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು ಒಟ್ಟು 1,38,335 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಕುಸಿತ ಕಂಡ Maruti Suzuki

ಕಳೆದ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 1,82,448 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಮಾರುತಿ ಸುಜುಕಿ ಕಂಪನಿಯು ಶೇ.24.18 ರಷ್ಟು ಕುಸಿತವನ್ನು ಕಂಡಿದೆ. ಸೆಮಿಕಂಡಕ್ಟರ್ ಚಿಪ್ ಕೊರತೆಯಿಂದಾಗಿ ಉತ್ಪಾದನಾ ಸಂಖ್ಯೆಯಲ್ಲಿನ ಕಡಿತಕ್ಕೆ ಕಾರಣವಾಗಿದೆ. ಇದು ಕಳೆದ ತಿಂಗಳ ಮಾರಾಟ ಮೇಲೆಯು ಪರಿಣಾಮವನ್ನು ಬೀರಿದೆ.

ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಕುಸಿತ ಕಂಡ Maruti Suzuki

ಇನ್ನು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯು 117,013 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇನ್ನು ಕಳೆದ ವರ್ಷದ ಅಕ್ಟೋಬರ್‌ ತಿಂಗಳನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯು 1,72,862 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.32.30 ರಷ್ಟು ಕುಸಿತವನ್ನು ಕಂಡಿದೆ.

ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಕುಸಿತ ಕಂಡ Maruti Suzuki

ಆದರೆ ಆಶ್ಚರ್ಯಕರವಾಗಿ ಮಾರುತಿ ಸುಜುಕಿ ಕಾರುಗಳ ರಫ್ತು ಸಂಖ್ಯೆಗಳು ಗಮನಾರ್ಹವಾಗಿ ಏರಿಕೆಯಾಗಿದೆ. ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು 21,322 ಯುನಿಟ್‌ಗಳನ್ನು ರಫ್ತು ಮಾಡಿದೆ. ಇನ್ನು ಕಳೆದ ವರ್ಷದ ಇದೇ ಅಕ್ಟೋಬರ್‌ ತಿಂಗಳಿನಲ್ಲಿ 9,586 ಯುನಿಟ್‌ಗನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.122.42 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಕುಸಿತ ಕಂಡ Maruti Suzuki

ಇಲೆಕ್ಟ್ರಾನಿಕ್ ಯುನಿಟ್ ಗಳ ಕೊರತೆಯು ತಿಂಗಳ ಅವಧಿಯಲ್ಲಿ ವಾಹನಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿದೆ, ಕಂಪನಿಯು ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿತು. ಅದರ ಪ್ರಕಾರ, ಕಂಪನಿಯು ಮಾರಾಟದ ಪ್ರಮಾಣಕ್ಕಿಂತ ಹೆಚ್ಚಿನ ವಾಹನಗಳನ್ನು ಮಾರಾಟ ಮಾಡಿದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿದೆ.

ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಕುಸಿತ ಕಂಡ Maruti Suzuki

ವಿಟಾರಾ ಬ್ರೆಝಾ, ಎಸ್-ಕ್ರಾಸ್, ಎರ್ಟಿಗಾ ಮತ್ತು ಎಕ್ಸ್‌ಎಲ್ 6 ಮಾದರಿಗಳೊಂದಿಗೆ ಯುವಿ ವಿಭಾಗದ ಮಾರಾಟವು ಒಂದು ವರ್ಷದ ಹಿಂದೆ ಮಾರಾಟವಾದ 25,396 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 6.63 ರಷ್ಟು ಏರಿಕೆ ಕಂಡು ಕಳೆದ ತಿಂಗಳು 27,081 ಯುನಿಟ್‌ಗಳ ಮಾರಾಟಕ್ಕೆ ಸಾಕ್ಷಿಯಾಗಿದೆ.

ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಕುಸಿತ ಕಂಡ Maruti Suzuki

ಒಂದು ವರ್ಷದ ಹಿಂದೆ ಮಾರಾಟವಾಗಿದ್ದ 13,309 ಯುನಿಟ್‌ಗಳಿಗೆ ಹೋಲಿಸಿದರೆ ವ್ಯಾನ್‌ಗಳ ವಿಭಾಗದಲ್ಲಿ ಮಾರಾಟವು 10,320 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಶೇಕಡಾ 22.45 ರಷ್ಟು ಕಡಿಮೆಯಾಗಿದೆ. ಈಗ ಪ್ರಯಾಣಿಕ ಕಾರು ವಿಭಾಗಕ್ಕೆ ಬಂದರೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಾರಾಟವಾದ 1,24,951 ಯುನಿಟ್‌ಗಳಿಗೆ ಕಳೆದ ತಿಂಗಳ 71,590 ಯುನಿಟ್‌ಗಳನ್ನು ಹೋಲಿಸಿದರೆ ಶೇಕಡಾ 42.70 ರಷ್ಟು ಕುಸಿತ ಕಂಡಿದೆ.

ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಕುಸಿತ ಕಂಡ Maruti Suzuki

ಇನ್ನು ಕಂಪನಿಯು ಆಲ್ಟೊ ಮತ್ತು ಎಸ್-ಪ್ರೆಸ್ಸೊದಂತಹ 21,831 ಯುನಿಟ್ ಎಂಟ್ರಿ ಲೆವೆಲ್ ಮಿನಿ ಕಾರುಗಳನ್ನು ಮಾರಾಟ ಮಾಡಿದೆ, ಇದು ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 28,462 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 23.29 ರಷ್ಟು ಕುಸಿತವಾಗಿದೆ. ಇನ್ನು 48,690 ಯೂನಿಟ್‌ಗಳಾದ ಸ್ವಿಫ್ಟ್, ಡಿಜೈರ್, ಬಲೆನೊ ಮತ್ತು ವ್ಯಾಗನ್‌ಆರ್‌ನಂತಹ ಸಬ್‌ಕಾಂಪ್ಯಾಕ್ಟ್ ಕಾರುಗಳು ಮಾರಾಟವಾಗಿದ್ದು, ಒಂದು ವರ್ಷದ ಹಿಂದೆ ಮಾರಾಟವಾದ 95,067 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 48.78 ರಷ್ಟು ಕುಸಿತವನ್ನು ದಾಖಲಿಸಿದೆ.

ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಕುಸಿತ ಕಂಡ Maruti Suzuki

ಇನ್ನು ಆನ್‌ಲೈನ್ ಕಾರ್ ಫೈನಾನ್ಸಿಂಗ್ ಕಂಪನಿಯಾದ ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ ದೇಶಿಯ ಮಾರುಕಟ್ಟೆಯಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ ಮೂಲಕ ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಒಟ್ಟು ರೂ. 6,500 ಕೋಟಿ ಕಾರು ಸಾಲ ವಿತರಿಸಲಾಗಿದೆ. ವಿಶೇಷವೆಂದರೆ ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ ಆರಂಭವಾದ ಕೇವಲ ಒಂಬತ್ತು ತಿಂಗಳಲ್ಲಿ ಈ ಸಾಧನೆಯನ್ನು ಮಾಡಿದೆ.

ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಕುಸಿತ ಕಂಡ Maruti Suzuki

ಸ್ಮಾರ್ಟ್ ಫೈನಾನ್ಸಿಂಗ್ ಸೊಲ್ಯೂಷನ್ಸ್ ಮೂಲಕ, ಕಂಪನಿಯು ತನ್ನ ಗ್ರಾಹಕರಿಗೆ ನೈಜ ಸಮಯದ ಟ್ರ್ಯಾಕಿಂಗ್‌ನೊಂದಿಗೆ ಆನ್‌ಲೈನ್ ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಇದು ಕ್ರೆಡಿಟ್ ಸ್ಕೋರ್ ಆಧಾರಿತ ಬಡ್ಡಿ ದರ, ಪೂರ್ವ ಅನುಮೋದಿತ ಸಾಲ, ಆನ್‌ಲೈನ್ ಡಾಕ್ಯುಮೆಂಟ್ ಶೇರಿಂಗ್, ನೈಜ ಸಮಯದ ಸಾಲದ ಸ್ಥಿತಿ ಟ್ರ್ಯಾಕಿಂಗ್‌ನಂತಹ ಹಲವು ವೈಶಿಷ್ಟ್ಯಗಳನ್ನು ಒದಗಿಸುತ್ತಿದೆ.

ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಕುಸಿತ ಕಂಡ Maruti Suzuki

ಇದರ ಜೊತೆಗೆ ಪ್ಲಾಟ್‌ಫಾರಂ ಸಹ ಅರ್ಜಿದಾರರಿಂದ ಹಣಕಾಸು ಒದಗಿಸುವ ಆಯ್ಕೆಯನ್ನು ಸಹ ಒದಗಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಯಾವುದೇ ಗೌಪ್ಯ ಶುಲ್ಕ ಅಥವಾ ಸಂಬಂಧಿತ ಶುಲ್ಕಗಳಿಲ್ಲದೆ ಪಾರದರ್ಶಕವಾಗಿರುತ್ತದೆ. ಮಾರುತಿ ಸುಜುಕಿ ಕಂಪನಿಯು 16 ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಇವುಗಳಲ್ಲಿ ಹೆಚ್‌ಡಿ‌ಎಫ್‌ಸಿ ಬ್ಯಾಂಕ್, ಐ‌ಸಿ‌ಐ‌ಸಿ‌ಐ ಬ್ಯಾಂಕ್, ಯೆಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಸ್‌ಇಂಡ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಚೋಳಮಂಡಲಂ ಫೈನಾನ್ಸ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಮಹೀಂದ್ರಾ ಫೈನಾನ್ಸ್, ಕೋಟಕ್ ಮಹೀಂದ್ರಾ, ಸುಂದರಂ ಒಳಗೊಂಡಿವೆ.

ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಕುಸಿತ ಕಂಡ Maruti Suzuki

ಈ ಪ್ಲಾಟ್ ಫಾರಂಗೆ ಇನ್ನು ಕೆಲವು ಹೊಸ ಹಣಕಾಸು ಕಂಪನಿಗಳನ್ನು ಸೇರಿಸಲು ಯೋಜಿಸುತ್ತಿರುವುದಾಗಿ ಮಾರುತಿ ಸುಜುಕಿ ಕಂಪನಿ ಹೇಳಿದೆ. ಆನ್‌ಲೈನ್ ಕಾರ್ ಫೈನಾನ್ಸಿಂಗ್ ಅನ್ನು ಹೆಚ್ಚು ವ್ಯಾಪಕವಾಗಿ ಮಾಡಲು ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ ಎಕ್ಸ್‌ಚೇಂಜ್ ಆಯ್ಕೆಯನ್ನು ಸಹ ಪರಿಚಯಿಸಿದೆ. ಇದು ಬಳಸಿದ ಕಾರುಗಳಿಗೆ ಬದಲಿಗೆ ಖರೀದಿದಾರರಿಗೆ ಸಮಂಜಸವಾದ ಅಂದಾಜು ಮೌಲ್ಯವನ್ನು ಒದಗಿಸುತ್ತದೆ.

ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಕುಸಿತ ಕಂಡ Maruti Suzuki

ಇನ್ನು ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಭಾರತದಲ್ಲಿ ತನ್ನ ಜನಪ್ರಿಯ ಮಾದರಿಗಳನ್ನು ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದಲ್ಲದೇ ಮಾರುತಿ ಸುಜುಕಿ ಕಂಪನಿಯು ಸ್ವಿಫ್ಟ್ ಹ್ಯಾಚ್‌ಬ್ಯಾಕ್, ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಮತ್ತು ವಿಟಾರಾ ಬ್ರೆಝಾ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯ ಸಿಎನ್‌ಜಿ ಮಾದರಿಗಳಾಗಿ ಬಿಡುಗಡೆಗೊಳಿಸಬಹುದು. ಇನ್ನು ಸೆಮಿಕಂಡಕ್ಟರ್ ಚಿಪ್ ಕೊರತೆಯನ್ನು ನಿವಾರಿಸಿ ಉತ್ಪಾದನೆಯನ್ನು ಹೆಚ್ಚಿಸಲು ಮಾರುತಿ ಸುಜುಕಿ ಕಂಪನಿಯು ಪ್ರಯತ್ನಿಸುತ್ತಿದೆ.

Most Read Articles

Kannada
English summary
Maruti suzuki sold over 1 lakh units in october 2021 details
Story first published: Monday, November 15, 2021, 15:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X