ಹನ್ಸಾಲ್‌ಪುರ ಘಟಕದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಗುಜರಾತ್‌ನ ಹನ್ಸಾಲ್‌ಪುರ ಘಟಕದಲ್ಲಿ ಡಿಜೈರ್ ಸೆಡಾನ್ ಕಾರಿನ ಉತ್ಪಾದನೆಯನ್ನು ಆರಂಭಿಸಿದೆ. ಕಂಪನಿಯು ಏಪ್ರಿಲ್ 1ರಿಂದ ಈ ಘಟಕದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿ, ಮೊದಲ ಯುನಿಟ್ ಅನ್ನು ನಿರ್ಮಿಸಿದೆ.

ಹನ್ಸಾಲ್‌ಪುರ ಘಟಕದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿದ ಮಾರುತಿ ಸುಜುಕಿ

ಸೆಡಾನ್ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮಾರುತಿ ಸುಜುಕಿ ಕಂಪನಿಯು ಹನ್ಸಾಲ್‌ಪುರದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿದೆ. ಕಂಪನಿಯು ಈ ಹಿಂದೆ ಸೆಡಾನ್ ಕಾರುಗಳನ್ನು ಮಾನೇಸರ್ ಘಟಕದಲ್ಲಿ ಮಾತ್ರ ಉತ್ಪಾದಿಸುತ್ತಿತ್ತು. ಈಗ ಸೆಡಾನ್ ಕಾರುಗಳನ್ನು ಹನ್ಸಾಲ್‌ಪುರದಲ್ಲಿಯೂ ಸಹ ಉತ್ಪಾದಿಸಲಾಗುತ್ತಿದೆ.

ಹನ್ಸಾಲ್‌ಪುರ ಘಟಕದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿದ ಮಾರುತಿ ಸುಜುಕಿ

ಹನ್ಸಾಲ್‌ಪುರ ಘಟಕವು ಮಾರುತಿ ಸುಜುಕಿ ಕಂಪನಿಗಾಗಿ ಗುತ್ತಿಗೆ ಆಧಾರದ ಮೇಲೆ ಕಾರುಗಳನ್ನು ಉತ್ಪಾದಿಸುತ್ತದೆ. ಈ ಘಟಕದಲ್ಲಿ ಮಾರುತಿ ಸುಜುಕಿ ಕಂಪನಿಯ ಬಲೆನೊ ಹಾಗೂ ಸ್ವಿಫ್ಟ್ ಕಾರುಗಳನ್ನು ಉತ್ಪಾದಿಸಲಾಗುತ್ತದೆ. ಹನ್ಸಾಲ್ಪುರ್ ಘಟಕವು ವರ್ಷಕ್ಕೆ 5 ಲಕ್ಷ ಯುನಿಟ್ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹನ್ಸಾಲ್‌ಪುರ ಘಟಕದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿದ ಮಾರುತಿ ಸುಜುಕಿ

2018ರಲ್ಲಿ ಗುಜರಾತ್ ಸರ್ಕಾರವು ಹನ್ಸಾಲ್‌ಪುರದಲ್ಲಿ ಉತ್ಪಾದನಾ ಘಟಕವನ್ನು ತೆರೆಯಲು ಮಾರುತಿ ಸುಜುಕಿ ಇಂಡಿಯಾ ಕಂಪನಿಗೆ ಭೂಮಿಯನ್ನು ಮಂಜೂರು ಮಾಡಿತ್ತು. ಈ ಘಟಕವನ್ನು 500 ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿಸಲಾಗಿದೆ.

ಹನ್ಸಾಲ್‌ಪುರ ಘಟಕದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿದ ಮಾರುತಿ ಸುಜುಕಿ

ಈ ಘಟಕವನ್ನು ನಿರ್ಮಿಸಲು ಕಂಪನಿಯು ರೂ.18,000 ಕೋಟಿ ವೆಚ್ಚ ಮಾಡಿದೆ. ಹನ್ಸಾಲ್ಪುರದಲ್ಲಿ ಡಿಸೈರ್ ಕಾರ್ ಅನ್ನು ಉತ್ಪಾದಿಸುತ್ತಿರುವುದರಿಂದ ಇನ್ನು ಮುಂದೆ ಗುರುಗ್ರಾಮ ಹಾಗೂ ಮನೇಸರ್ ಘಟಕಗಳಲ್ಲಿ ಸಣ್ಣ ಕಾರುಗಳ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹನ್ಸಾಲ್‌ಪುರ ಘಟಕದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು ಡಿಸೈರ್ ವಿಎಕ್ಸ್‌ಎಇ ಮಾದರಿಯ ಆಡಿಯೊ ಸಿಸ್ಟಂ ಅನ್ನು ಅಪ್ ಡೇಟ್ ಮಾಡಿದೆ. ಕಂಪನಿಯು ಡಿಸೈರ್ ವಿಎಕ್ಸ್‌ಎಇನಲ್ಲಿ ಎರ್ಟಿಗಾದಲ್ಲಿರುವಂತಹ ಮ್ಯೂಸಿಕ್ ಸಿಸ್ಟಂ ಅಪ್ ಡೇಟ್ ಮಾಡಿದೆ.

ಹನ್ಸಾಲ್‌ಪುರ ಘಟಕದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿದ ಮಾರುತಿ ಸುಜುಕಿ

ಜೊತೆಗೆ ಕಾರಿನ ಡ್ಯಾಶ್‌ಬೋರ್ಡ್‌ನ ವಿನ್ಯಾಸವನ್ನೂ ಬದಲಿಸಲಾಗಿದೆ. ಮಾರುತಿ ಡಿಜೈರ್ ಸೆಡಾನ್ ಸೆಗ್'ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರ್ ಆಗಿದೆ. ಹಲವು ವರ್ಷಗಳಿಂದ ಮಾರುತಿ ಡಿಜೈರ್ ಈ ಸೆಗ್'ಮೆಂಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹನ್ಸಾಲ್‌ಪುರ ಘಟಕದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿ 1.2-ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಎಎಂಟಿ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಹನ್ಸಾಲ್‌ಪುರ ಘಟಕದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿದ ಮಾರುತಿ ಸುಜುಕಿ

ಡಿಜೈರ್ ಕಾರಿನ ಟಾಪ್ ಎಂಡ್ ಮಾದರಿಯಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಹೊಂದಿರುವ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸ್ಮಾರ್ಟ್‌ಪ್ಲೇ ಸ್ಟುಡಿಯೋ ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹನ್ಸಾಲ್‌ಪುರ ಘಟಕದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿದ ಮಾರುತಿ ಸುಜುಕಿ

ಇದರ ಜೊತೆಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಎಲ್ಇಡಿ ಟೇಲ್‌ಲ್ಯಾಂಪ್‌, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಡಿಫಾಗರ್, ಯುಎಸ್‌ಬಿ ಚಾರ್ಜರ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ಹನ್ಸಾಲ್‌ಪುರ ಘಟಕದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿದ ಮಾರುತಿ ಸುಜುಕಿ

ಡಿಜೈರ್ ಟಾಪ್-ಎಂಡ್ ಮಾದರಿಯ ಇಂಟಿರಿಯರ್ ಡ್ಯುಯಲ್-ಟೋನ್ ಫಿನಿಶಿಂಗ್ ಹೊಂದಿದೆ. ಈ ಮಾದರಿಯಲ್ಲಿ, ಡ್ಯಾಶ್‌ಬೋರ್ಡ್‌ನಲ್ಲಿ ನ್ಯಾಚುರಲ್ ಗ್ಲಾಸ್ ಫಿನಿಶಿಂಗ್ ಹಾಗೂ ಮಾಡರ್ನ್ ವುಡ್ ಫಿನಿಶಿಂಗ್ ನೀಡಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹನ್ಸಾಲ್‌ಪುರ ಘಟಕದಲ್ಲಿ ಡಿಜೈರ್ ಕಾರಿನ ಉತ್ಪಾದನೆಯನ್ನು ಆರಂಭಿಸಿದ ಮಾರುತಿ ಸುಜುಕಿ

ಸುರಕ್ಷತೆಗಾಗಿ ಈ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಡೇ ನೈಟ್ ರೇರ್ ವೀವ್ ಮಿರರ್, ಎಬಿಎಸ್‌ ಹೊಂದಿರುವ ಇಬಿಡಿ, ಸೆಂಟ್ರಲ್ ಲಾಕಿಂಗ್, ಸೀಟ್ ಬೆಲ್ಟ್ ಅಲರ್ಟ್, ರೇರ್ ಪಾರ್ಕಿಂಗ್ ಸೆನ್ಸಾರ್‌, ಎಂಜಿನ್ ಇಮೊಬೈಲೈಸರ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

Most Read Articles

Kannada
English summary
Maruti Suzuki starts production of Dzire Sedan car at Hansalpur unit. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X