ಭಾರತದಲ್ಲಿ ಹೂಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು

ಪ್ರಸ್ತುತ ತಲೆಮಾರಿನ ಸ್ವಿಫ್ಟ್ ಕಾರನ್ನು ಸುಜುಕಿ ಕಂಪನಿಯು 2016ರ ಡಿಸೆಂಬರ್‌ ತಿಂಗಳಿನಲ್ಲಿ ಜಪಾನ್ ನಲ್ಲಿ ಪರಿಚಯಿಸಿತ್ತು. ಭಾರತದಲ್ಲಿ ಇದನ್ನು 2017ರ ಆರಂಭದಲ್ಲಿ ಮಾರುತಿ ಸುಜುಕಿ ಕಂಪನಿಯು ಪರಿಚಯಿಸಿತು. ಈ ಮಾರುತಿ ಸ್ವಿಫ್ಟ್ ಕಾರು ಭಾರತದಲ್ಲಿ ಉತ್ತಮ ಯಶಸ್ವಿಯನ್ನು ಕಂಡಿದೆ.

ಭಾರತದಲ್ಲಿ ಹೂಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು

ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವಿಫ್ಟ್ ಕಳೆದ 15 ವರ್ಷದಿಂದ ದೇಶಿಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯೊಂದಿಗೆ ದಾಖಲೆಯ ಮಟ್ಟದಲ್ಲಿ ಜನಪ್ರಿಯ ಸ್ವಿಫ್ಟ್ ಕಾರು ಮಾರಾಟವಾಗುತ್ತಿದೆ. ಅಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಕೂಡ ಉತ್ತಮವಾಗಿ ಮಾರಾಟವಾಗುತ್ತಿದೆ. ಇದೀಗ ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯು ಸ್ವಿಫ್ಟ್ ಕಾರನ್ನು ಅಭಿವೃದ್ದಿ ಪಡಿಸಲು ಪ್ರಾರಂಭಿಸಿದ್ದಾರೆ ಎಂದು ವರದಿಗಳಾಗಿದೆ.

ಭಾರತದಲ್ಲಿ ಹೂಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು

ಮಾರುತಿ ಸುಜುಕಿ ತನ್ನ ನ್ಯೂ ಜನರೇಷನ್ (ವೈಇಡಿ ಕೋಡ್ ನೇಮ್) ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ ಅನ್ನು ಹಿಯರ್‌ಟೆಕ್ಟ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗುತ್ತದೆ. ಪರಿಷ್ಕೃತ ಪ್ಲಾಟ್‌ಫಾರ್ಮ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನ ಒಟ್ಟಾರೆ ಸ್ಥಿರತೆ, ಸುರಕ್ಷತೆ ಮತ್ತು ನಿರ್ವಹಣೆಯಲ್ಲಿ ಹೆಚ್ಚಿನ ಸುಧಾರಣೆಯನ್ನು ಕಾಣಬಹುದು.

ಭಾರತದಲ್ಲಿ ಹೂಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು

ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು ಹೊಸ ಫೀಚರ್ಸ್ ಗಳನ್ನು ಮತ್ತು ತಂತ್ರಜ್ಙಾನಗಳನ್ನು ಪಡೆಯಲಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ನ್ಯೂ ಜನರೇಷನ್ ಸಿಫ್ಟ್ ಕಾರಿನಲ್ಲಿ 1.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ನೀಡಬಹುದು.

ಭಾರತದಲ್ಲಿ ಹೂಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು

ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಸ್ವಿಫ್ಟ್ ಫೇಸ್‌ಲಿಫ್ಟ್‌ ಕಾರಿನಲ್ಲಿ 1.2-ಲೀಟರ್ ಡ್ಯುಯಲ್ ಜೆಟ್ 12 ಎನ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಹೂಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು

ಜಪಾನಿನ ಆಟೋಮೋಟಿವ್ ಮ್ಯಾಗಜೀನ್ ಬೆಸ್ಟ್ ಕಾರ್ ನ್ಯೂ ಜನರೇಷನ್ ಸ್ವಿಫ್ಟ್ ಕಾರಿನ 3ಡಿ ರೆಂಡರಿಂಗ್ ಚಿತ್ರವನ್ನು ಇತ್ತೀಚೆಗೆ ಬಹಿರಂಗಪಡಿಸಲಾಗಿತ್ತು. 3ಡಿ ರೆಂಡರಿಂಗ್ ಚಿತ್ರದಲ್ಲಿ ನ್ಯೂ ಜನರೇಷನ್ ಸ್ವಿಫ್ಟ್ ತುಂಬಾ ದೊಡ್ಡದಾದ ಏರ್ ಡ್ಯಾಮ್, ಅಡ್ದಲಾಗಿರುವ ಫಾಗ್ ಲ್ಯಾಂಪ್ ಮತ್ತು ಮುಂಭಾಗದಲ್ಲಿ ತೆಳ್ಳನೆಯ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಒಳಗೊಂಡಿದೆ. ಸೈಡ್ ಪ್ರೊಫೈಲ್‌ನಲ್ಲಿ ಶಾರ್ಪ್ ಲೈನ್ ಗಳನ್ನು ಹೊಂದಿವೆ.

ಭಾರತದಲ್ಲಿ ಹೂಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು

ಇನ್ನು ಜಪಾನೀಸ್-ಸ್ಪೆಕ್ ಮಾದರಿಯು ಪೂರ್ಣ ಹೈಬ್ರಿಡ್ ಸಿಸ್ಟಂನೊಂದಿಗೆ ಬಿಡುಗಡೆಯಾಗಲಿದೆ. ಭಾರತದಲ್ಲಿ ಮತ್ತು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೊಸ ಸ್ವಿಫ್ಟ್ ಮೈಲ್ಡ್-ಹೈಬ್ರಿಡ್ ಹೊಂದುವ ಸಾಧ್ಯತೆಯಿದೆ. ಹೊಸ ಮಾದರಿಯು ಪ್ರಸ್ತುತ 12-ವೋಲ್ಟ್ ಬದಲಿಗೆ 48-ವೋಲ್ಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಬಹುದು.

ಭಾರತದಲ್ಲಿ ಹೂಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು

ಇದಲ್ಲದೆ ಟಾರ್ಕ್-ಫಿಲ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಮೋಟರ್ ಐಡ್ಲಿಂಗ್‌ನಂತಹ ಹೊಸ ವೈಶಿಷ್ಟ್ಯಗಳು ಸಹ ಪಡೆಯಬಹುದು. ಜಾಗತಿಕವಾಗಿ ಅನಾವರಣಗೊಂಡ ಬಳಿಕ ನ್ಯೂ ಜನರೇಷನ್ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಹೂಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು

ಭಾರತದಲ್ಲಿ ಸ್ವಿಫ್ಟ್ ಕಾರಿಗೆ ಹೆಚ್ಚು ಬೇಡಿಕೆ ಹೊಂದಿರುವುದರಿಂದ ನ್ಯೂ ಜನರೇಷನ್ ಸ್ವಿಫ್ಟ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಸ್ವಿಫ್ಟ್‌ನ ನ್ಯೂ ಜನರೇಷನ್ ಆವೃತ್ತಿಯನ್ನು ಭಾರತದಲ್ಲಿ 2024ರಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Friday, June 11, 2021, 15:35 [IST]
English summary
Work On Next-Gen Maruti Swift Begins In India. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+