ಜನಪ್ರಿಯ Maruti Swift ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವಿಫ್ಟ್ ಕಳೆದ 15 ವರ್ಷದಿಂದ ದೇಶಿಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯೊಂದಿಗೆ ದಾಖಲೆಯ ಮಟ್ಟದಲ್ಲಿ ಜನಪ್ರಿಯ ಸ್ವಿಫ್ಟ್ ಕಾರು ಮಾರಾಟವಾಗುತ್ತಿದೆ.

ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಅಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಕೂಡ ಸ್ವಿಫ್ಟ್ ಕಾರು ಉತ್ತಮವಾಗಿ ಮಾರಾಟವಾಗುತ್ತಿದೆ. ಪ್ರಸ್ತುತ ತಲೆಮಾರಿನ ಸ್ವಿಫ್ಟ್ ಕಾರನ್ನು ಸುಜುಕಿ ಕಂಪನಿಯು 2017ರಲ್ಲಿಬಿಡುಗಡೆ ಮಾಡಲಾಯಿತು. ಇದನ್ನು 2018ರಲ್ಲಿ ಆರಂಭದಲ್ಲಿ ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಮಾರುತಿ ಸ್ವಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ ಕೆಲವು ಫೀಚರ್ಸ್ ಗಳನ್ನು ಹೊಂದಿಲ್ಲ. ಜನಪ್ರಿಯ ಸ್ವಿಫ್ಟ್ ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳ ಮಾಹಿತಿ ಇಲ್ಲಿವೆ.

ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಸಿವಿಟಿ ಆಟೋಮ್ಯಾಟಿಕ್

ಪ್ರಸ್ತುತ, ಮಾರುತಿ ಸುಜುಕಿ ಸ್ವಿಫ್ಟ್ ಆಟೋಮ್ಯಾಟಿಕ್ ಮಾರುತಿಯ ಆಟೋ ಗೇರ್ ಶಿಫ್ಟ್ (ಎಜಿಎಸ್) ಆನ್‌ಬೋರ್ಡ್ ಎಂದು ಕರೆಯಲ್ಪಡುವ ಎಎಂಟಿ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ, ಕೆಲವರಿಗೆ ಚಾಲನೆ ಮಾಡುವುದು ಉತ್ತಮವಾಗಿದ್ದರೂ, ಮಾರುತಿ ಏಕೆ ಸಿವಿಟಿ ಆನ್‌ಬೋರ್ಡ್ ಅನ್ನು ನೀಡಲಿಲ್ಲ ಎಂದು ನಮಗೆ ಆಶ್ಚರ್ಯವಾಗುತ್ತದೆ ಆದರೆ ಬಲೆನೊ ಕಾರು ಪಡೆಯುತ್ತದೆ. ಒಂದು ವೇಳೆ ಸ್ವಿಫ್ಟ್‌ನ 1.2-ಲೀಟರ್ ಡ್ಯುಯಲ್ ಜೆಟ್ ಎಂಜಿನ್ ಅನ್ನು ಸಿವಿಟಿಯೊಂದಿಗೆ ಜೋಡಿಸಿದರೆ ಇನ್ನಷ್ಟು ಗ್ರಾಹಕರನ್ನು ಸೆಳೆಯಬಹುದು.

ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನ

ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಐಡಲ್ ಸ್ಟಾಪ್-ಸ್ಟಾರ್ಟ್ ಫೀಚರ್ ಸಾಕಷ್ಟು ಪರಿಣಾಮಕಾರಿ ಆಡ್-ಆನ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮಾರುತಿ ಸುಜುಕಿ ಮೈಲ್ಡ್ ಹೈಬ್ರಿಡ್ ಸೆಟಪ್ ಹೆಚ್ಚುವರಿ ಡ್ಯುಯಲ್ ಬ್ಯಾಟರಿ ಸೆಟಪ್‌ನೊಂದಿಗೆ ಬರುತ್ತದೆ. ಸ್ವಿಫ್ಟ್ ಕಾರಿನಲ್ಲಿ ಪೂರ್ಣ- ಮೈಲ್ಡ್ ಹೈಬ್ರಿಡ್ ಸಿಸ್ಟಂ ನೀಡಿದ್ದರೆ ಹ್ಯಾಚ್‌ಬ್ಯಾಕ್ ವಿಭಾಗದದಲ್ಲಿ ಹೆಚ್ಚಿನ ಪ್ರಾಬಲ್ಯವನ್ನು ಹೊಂದಬಹುದು.

ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್

ಸ್ವಿಫ್ಟ್‌ನ ಎಂಐಡಿ ನಿಜವಾದ ಕ್ಲಾಸಿಕ್ ಆಗಿದ್ದರೂ ಹ್ಯಾಚ್‌ಬ್ಯಾಕ್ ವಿಭಾಗದದಲ್ಲಿ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಸ್ವಿಫ್ಟ್ ಕಾರಿನಲ್ಲಿ ಫುಲ್ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಫೀಚರ್ ಮಿಸ್ ಆಗಿದೆ. ಸಂಪೂರ್ಣ ಡಿಜಿಟಲ್ ಎಂಐಡಿ ನೀಡಿದರೆ ಪ್ರೀಮಿಯಂ ಅನುಭವವನ್ನು ನೀಡುತ್ತದೆ,

ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಮತ್ತು ರೈನ್ ಸೆನ್ಸಿಂಗ್ ವೈಪರ್

ಸ್ವಿಫ್ಟ್ ಆಧುನಿಕ ಕಾಲದ ಸ್ಪರ್ಧಿಗಳಿಗೆ ಸಮನಾಗುವ ಸಮಯ ಬಂದಿದೆ. ಸ್ವಿಫ್ಟ್ ಆನ್‌ಬೋರ್ಡ್‌ನಲ್ಲಿ ಸಾಕಷ್ಟು ಪ್ರಮಾಣದ ಸೌಕರ್ಯ ಮತ್ತು ವೈಶಿಷ್ಟ್ಯಗಳನ್ನು ತಂದಿದ್ದರೂ ಸಹ, ಈಗ ಪ್ರೀಮಿಯಂ ಸೌಕರ್ಯಕ್ಕೆ ಸಾಂಕೇತಿಕವೆಂದು ಪರಿಗಣಿಸಲಾಗಿರುವ ಎರಡು ನಿರ್ಣಾಯಕ ವೈಶಿಷ್ಟ್ಯಗಳನ್ನು ಅದು ಕಳೆದುಕೊಂಡಿದೆ. ಹೌದು, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ರೈನ್ ಸೆನ್ಸಿಂಗ್ ವೈಪರ್‌ಗಳಾಗಿದೆ, ಇದನ್ನು ಭವಿಷ್ಯದಲ್ಲಿ ಸ್ವಿಫ್ಟ್ ನೀಡಬೇಕಾದ ಎರಡು ಆಕರ್ಷಕ ಫೀಚರ್ಸ್ ಗಳಾಗಿವೆ.

ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

1.3 ಲೀಟರ್ ಡೀಸೆಲ್ ಬರ್ನರ್

ಬಿಎಸ್ 6 ಮಾಲಿನ್ಯ ನಿಯಮದಿಂದಾಗಿ ಮಾರುತಿ ತನ್ನ 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ಮಾರುತಿ ಸುಜುಕಿ ಸ್ವಿಫ್ಟ್‌ನಲ್ಲಿ ರದ್ದುಗೊಳಿಸಲು ನಿರ್ಧರಿಸಿತು. ಅಂದಿನಿಂದ ಅತ್ಯಾಸಕ್ತಿಯ ಡೀಸೆಲ್ ಉತ್ಸಾಹಿಗಳು ಮತ್ತು 1.3-ಲೀಟರ್ ಎಂಜಿನ್ ಬಳಸಿದವರು, ಡೀಸೆಲ್ ಇಂಜಿನ್ ಪ್ರೀಮಿಯರು ಇಲ್ಲದಿರುವುದು ಅತಿದೊಡ್ಡ ನ್ಯೂನತೆಯೆಂದು ಪರಿಗಣಿಸುತ್ತಾರೆ.

ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ರಿಯರ್ ಎಸಿ ವೆಂಟ್ಸ್ ಮತ್ತು ರಿಯರ್ ಪವರ್ ಸಾಕೆಟ್‌

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಹಿಂದಿನ ಎಸಿ ವೆಂಟ್‌ಗಳು ಮತ್ತು ಹಿಂದಿನ ಪವರ್ ಸಾಕೆಟ್‌ಗಳನ್ನು ಹೊಂದಿಲ್ಲ. ಹಿಂಬದಿ ಪ್ರಯಾಣಿಕರಿಗೆ ಈಗ ಸಾಮಾನ್ಯ ಸೌಕರ್ಯದ ವೈಶಿಷ್ಟ್ಯವೆಂದು ಪರಿಗಣಿಸಲಾಗಿದೆ. ಸ್ವಿಫ್ಟ್ ಈ ರೀತಿಯ ವೈಶಿಷ್ಟ್ಯವನ್ನು ನೀಡಬಹುದಾಗಿದೆ,

ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಫ್ರಂಟ್ ಡ್ರೈವರ್ ಆರ್ಮ್‌ರೆಸ್ಟ್ ಮತ್ತು ರಿಯರ್ ಆರ್ಮ್‌ರೆಸ್ಟ್

ಸ್ವಿಫ್ಟ್ ನಲ್ಲಿ ಹೊಂದಿಲ್ಲದ ಸೂಪರ್ ಆರಾಮದಾಯಕ ಸೌಕರ್ಯದ ವೈಶಿಷ್ಟ್ಯವೆಂದರೆ ಮುಂಭಾಗದ ಡ್ರೈವರ್ ಆರ್ಮ್‌ರೆಸ್ಟ್ ಮತ್ತು ಹಿಂಭಾಗದ ಆರ್ಮ್‌ರೆಸ್ಟ್ ಆಗಿದೆ, ಇವೆರಡೂ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಎಲ್ಲಾ ಪ್ರಯಾಣಿಕರಿಗೆ ಅತ್ಯುನ್ನತ ಸೌಕರ್ಯವನ್ನು ನೀಡುವ ವೈಶಿಷ್ಟ್ಯಗಳಾಗಿವೆ. ಈ ಫೀಚರ್ಸ್ ಗಳು ಚಾಲಕನಿಗೆ ಮತ್ತು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಅನುಭವವನ್ನು ನೀಡುತ್ತದೆ,

ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಇನ್ನು 2005ರಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಸ್ವಿಫ್ಟ್ ದೇಶದಲ್ಲಿ 2.5 ಮಿಲಿಯನ್(25 ಲಕ್ಷ) ಯುನಿಟ್ ಗಳ ಒಟ್ಟು ಮಾರಾಟವನ್ನು ಗಳಿಸಿ ಹೊಸ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿದೆ. ಅದರ 16 ವರ್ಷಗಳ ಅಸ್ತಿತ್ವದಲ್ಲಿ, ಹ್ಯಾಚ್‌ಬ್ಯಾಕ್ ಯಾವಾಗಲೂ ಅದರ ಆಧುನಿಕ ಸ್ಟೈಲಿಂಗ್, ದಕ್ಷ ಪವರ್‌ಟ್ರೇನ್‌ಗಳು, ಮೈಲೇಜ್ ಮತ್ತು ಅದರ ಸಾಮರ್ಥ್ಯಕ್ಕಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಈ ಮಾರುತಿ ಸ್ವಿಫ್ಟ್ ಕಾರಿನಲ್ಲಿ 1.2 ಎಲ್ ಡ್ಯುಯಲ್‌ಜೆಟ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಮೋಟಾರ್ ಅನ್ನು ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಮೂಲಕ ಹೆಚ್ಚಿಸಲಾಗಿದ್ದು ಅದು ಇಂಧನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದು ARAI- ಪ್ರಮಾಣೀಕೃತ ಮೈಲೇಜ್ ಅನ್ನು 23.20 ಕಿ.ಮೀ ಆಗಿದೆ. ಇನ್ನು ಈ ಎಂಜಿನ್ ನೊಂದಿಗೆ ಮ್ಯಾನುಯಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಮಾರುತಿ ಸುಜುಕಿ ಸ್ವಿಫ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಗ್ರಾಂಡ್ ಐ10 ನಿಯೋಸ್, ಫೋರ್ಡ ಫಿಗೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದೆ. ಈ ಸ್ವಿಫ್ಟ್ ಕಾರು ಮಾರುತಿ ಸುಜುಕಿ ಕಂಪನಿಗೆ ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ಹಲವು ವರ್ಷಗಳಿಂದ ತನ್ನ ಜನಪ್ರಿಯತೆಯನ್ನು ಅದೇ ರೀತಿ ಉಳಿಸಿಕೊಂಡಿರುವ ಖ್ಯಾತಿಯನ್ನು ಸ್ವಿಫ್ಟ್ ಕಾರು ಹೊಂದಿದೆ. ಇನ್ನು ಮಾರುತಿ ಸುಜುಕಿ ಕಂಪನಿಯು ನ್ಯೂ ಜನರೇಷನ್ ಸಿಫ್ಟ್ ಕಾರನ್ನು ಬಿಡುಗಡೆಗೊಳಿಸಲಿದೆ, ಈ ನ್ಯೂ ಜನರೇಷನ್ ಮಾದರಿಯಲ್ಲಿ ಇಂತಹ ಫೀಚರ್ಸ್ ಗಳನ್ನು ಪಡೆದುಕೊಳ್ಳಬಹುದು.

Most Read Articles

Kannada
English summary
Maruti suzuki swift misses some important features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X