ಹೊಸ ಕಾರು ಉತ್ಪಾದನಾ ಘಟಕದ ಮೇಲೆ ರೂ. 18 ಸಾವಿರ ಕೋಟಿ ಹೂಡಿಕೆಗೆ ಸಿದ್ದವಾದ ಮಾರುತಿ ಸುಜುಕಿ

ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿಯು ದೇಶದ ವಿವಿಧಡೆ ಒಟ್ಟು ಮೂರು ವಾಹನ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಉತ್ಪಾದನಾ ಘಟಕಗಳ ವಿಸ್ತರಣೆಗಾಗಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.

ರೂ. 18 ಸಾವಿರ ಕೋಟಿ ಹೂಡಿಕೆಗೆ ಸಿದ್ದವಾದ ಮಾರುತಿ ಸುಜುಕಿ

ಹೌದು, ಮಾರುತಿ ಸುಜುಕಿ ಕಂಪನಿಯು ಹರಿಯಾಣದ ಮನೆಸಾರ್ ಮತ್ತು ಗುರುಗ್ರಾಮ್‌, ಗುಜರಾತಿನ ಹನ್ಸಲ್‌ಪುರ್‌ ಘಟಕ ಸೇರಿ ಒಟ್ಟು ಮೂರು ವಾಹನ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಕಾರ್ಪೊರೇಷನ್ ವ್ಯಾಪ್ತಿಯಲ್ಲಿರುವ ಗುರುಗ್ರಾಮ್ ಕಾರು ಉತ್ಪಾದನಾ ಘಟಕದಿಂದ ಹೊರಹೋಗಲು ನಿರ್ಧರಿಸಿದೆ. ನಗರೀಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾರು ಉತ್ಪಾದನಾ ಘಟಕ ವಿಸ್ತರಣೆಗೆ ಅವಕಾಶವಿಲ್ಲವಾಗಿರುವುದರಿಂದ ಹೊಸ ಘಟಕ ನಿರ್ಮಾಣಕ್ಕಾಗಿ ಸ್ಥಳ ಬದಲಾವಣೆಗೆ ನಿರ್ಧರಿಸಿದೆ.

ರೂ. 18 ಸಾವಿರ ಕೋಟಿ ಹೂಡಿಕೆಗೆ ಸಿದ್ದವಾದ ಮಾರುತಿ ಸುಜುಕಿ

ಸದ್ಯ ಗುರುಗ್ರಾಮ್ ಕಾರು ಉತ್ಪಾದನಾ ಘಟಕವು 300 ಎಕರೆಯಲ್ಲಿ ಹರಡಿಕೊಂಡಿದ್ದು, ಈ ಘಟಕದಲ್ಲಿ ವಾರ್ಷಿಕವಾಗಿ 7 ಲಕ್ಷ ಕಾರುಗಳನ್ನು ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಆದರೆ ಪ್ಯಾಸೆಂಜರ್ ವಾಹನಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ಘಟಕದ ವಿಸ್ತರಣೆಯು ಮಾರುತಿ ಸುಜುಕಿ ಕಂಪನಿಗೆ ಅನಿವಾರ್ಯವಾಗಿದೆ.

ರೂ. 18 ಸಾವಿರ ಕೋಟಿ ಹೂಡಿಕೆಗೆ ಸಿದ್ದವಾದ ಮಾರುತಿ ಸುಜುಕಿ

ಆದರೆ ಮಾರುತಿ ಸುಜುಕಿಯು ಗುರುಗ್ರಾಮ್ ಘಟಕವು ಆರಂಭದ ದಿನಗಳಲ್ಲಿ ನಗರ ವ್ಯಾಪ್ತಿಯಿಂದ ಸಾಕಷ್ಟು ದೂರದಲ್ಲಿತ್ತು. ಇದೀಗ ಕಾರು ಘಟಕದ ಸುತ್ತಲೂ ಅನೇಕ ಕಾರ್ಖಾನೆಗಳು ನಿರ್ಮಾಣಗೊಂಡಿರುವುದಲ್ಲದೆ ಗೃಹ ನಿರ್ಮಾಣ ಯೋಜನೆಗಳು ಸಹ ಚಾಲ್ತಿಯಲ್ಲಿವೆ.

ರೂ. 18 ಸಾವಿರ ಕೋಟಿ ಹೂಡಿಕೆಗೆ ಸಿದ್ದವಾದ ಮಾರುತಿ ಸುಜುಕಿ

ಈ ಹಿನ್ನಲೆಯಲ್ಲಿ ಕಾರು ಉತ್ಪಾದನಾ ವಿಸ್ತರಣೆ ಸಾಧ್ಯವಿಲ್ಲದಿರುವುದರಿಂದ 40 ವರ್ಷಗಳಷ್ಟು ಹಳೆಯದಾದ ಉತ್ಪಾದನಾ ಘಟಕವನ್ನು ತೊರೆಯಲು ಮುಂದಾಗಿರುವ ಮಾರುತಿ ಸುಜುಕಿಯು ಅತಿ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಮಟ್ಟದ ಭೂಮಿ ದೊರೆಯಬಹುದಾದ ರಾಜ್ಯಗಳತ್ತ ಮುಖಮಾಡಿತ್ತು.

ರೂ. 18 ಸಾವಿರ ಕೋಟಿ ಹೂಡಿಕೆಗೆ ಸಿದ್ದವಾದ ಮಾರುತಿ ಸುಜುಕಿ

ಆದರೆ ಗುರುಗ್ರಾಮ್ ಘಟಕದಿಂದ ಹೊರಹೋಗುವುದನ್ನು ತಡೆದಿರುವ ಹರಿಣಾಯ ಸರ್ಕಾರವು ಗುರುಗ್ರಾಮ್‌ಗೆ ಸಮೀಪದಲ್ಲಿಯೇ ಭಾರೀ ಪ್ರಮಾಣದ ಭೂಮಿ ನೀಡುವಾಗಿ ಭರವಸೆ ನೀಡಿದ್ದು, ಹಳೆಯ ಕಾರು ಉತ್ಪಾದನಾ ಘಟಕದಿಂದ ಶೀಘ್ರದಲ್ಲೇ ಹೊಸ ಕಾರು ಉತ್ಪಾದನಾ ಘಟಕಕ್ಕೆ ಸ್ಥಳಾಂತರಗೊಳ್ಳಲು ಮಾರುತಿ ಸುಜುಕಿ ಸಿದ್ದತೆ ನಡೆಸಿದೆ.

ರೂ. 18 ಸಾವಿರ ಕೋಟಿ ಹೂಡಿಕೆಗೆ ಸಿದ್ದವಾದ ಮಾರುತಿ ಸುಜುಕಿ

ಹೊಸ ಕಾರು ಉತ್ಪಾದನಾ ಘಟಕವು ಸುಮಾರು 700ರಿಂದ 1 ಸಾವಿರ ಎಕರೆ ವ್ಯಾಪ್ತಿ ಹೊಂದಿರಲಿದ್ದು, ಹೊಸ ಕಾರು ಘಟಕ ಸ್ಥಾಪನೆಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಹರಿಯಾಣ ಸರ್ಕಾರವು ಮಾರುತಿ ಸುಜುಕಿಗೆ ಭರವಸೆ ನೀಡಿದೆ.

ರೂ. 18 ಸಾವಿರ ಕೋಟಿ ಹೂಡಿಕೆಗೆ ಸಿದ್ದವಾದ ಮಾರುತಿ ಸುಜುಕಿ

ಹೀಗಾಗಿ ಹೊಸ ಕಾರು ಉತ್ಪಾದನಾ ಘಟಕವನ್ನು ಹರಿಯಾಣದಿಂದ ಹೊರ ರಾಜ್ಯಗಳಿಗೆ ಸ್ಥಳಾಂತರಗೊಳ್ಳುವ ಸ್ಪಷ್ಟನೆ ನೀಡಿರುವ ಮಾರುತಿ ಸುಜುಕಿಯು ಹರಿಯಾಣದಲ್ಲೇ ಹೊಸ ಘಟಕದೊಂದಿಗೆ ಮುಂದುವರಿಯಲಿದ್ದು, ಹೊಸ ಘಟಕದ ನಿರ್ಮಾಣಕ್ಕಾಗಿ ರೂ. 18 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದೆ.

ರೂ. 18 ಸಾವಿರ ಕೋಟಿ ಹೂಡಿಕೆಗೆ ಸಿದ್ದವಾದ ಮಾರುತಿ ಸುಜುಕಿ

ಹೊಸ ಕಾರು ಉತ್ಪಾದನಾ ಘಟಕದೊಂದಿಗೆ ಮಾರುತಿ ಸುಜುಕಿಯು ಕಾರು ಉತ್ಪಾದನೆಯನ್ನು ವಾರ್ಷಿಕವಾಗಿ 7 ಲಕ್ಷದಿಂದ 10 ಲಕ್ಷಕ್ಕೆ ಏರಿಕೆ ಮಾಡುವ ಯೋಜನೆಯಲ್ಲಿದ್ದು, ಹೊಸ ಘಟಕವನ್ನು ಸಂಪೂರ್ಣವಾಗಿ ಅತ್ಯಾಧುನಿಕ ಕಾರು ಉತ್ಪಾದನಾ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಿದೆ.

ರೂ. 18 ಸಾವಿರ ಕೋಟಿ ಹೂಡಿಕೆಗೆ ಸಿದ್ದವಾದ ಮಾರುತಿ ಸುಜುಕಿ

ಇನ್ನು ಮಾರುತಿ ಸುಜುಕಿಯು ಇತ್ತೀಚೆಗೆ ಹರಿಯಾಣದಲ್ಲಿಯೇ ಇರುವ ಮನೆಸಾರ್ ಘಟಕವನ್ನು ಸಹ ವಿಸ್ತರಣೆ ಮಾಡಿದ್ದು, ಮನೆಸಾರ್ ಘಟಕವು ಸದ್ಯ 600 ಎಕರೆ ವಿಸ್ತಿರ್ಣ ಹೊಂದಿದೆ. ಆದರೆ ಗುರುಗ್ರಾಮ್ ಘಟಕದ ವಿಸ್ತರಣೆಯು ಇದೀಗ ಅತಿ ಅವಶ್ಯವಾಗಿ ಪರಿಣಿಮಿಸಿದ್ದು, ಕಂಪನಿಯ ಪ್ರಮುಖ ಕಾರು ಮಾದರಿಗಳು ಇದೇ ಘಟಕದಲ್ಲೇ ಸಿದ್ದಗೊಳ್ಳುತ್ತಿವೆ.

Most Read Articles

Kannada
English summary
Maruti Suzuki To Invest Rs 18,000 Crore In New Manufacturing Plant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X