ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಮಾರುತಿ ಸುಜುಕಿ (Maruti Suzuki) ಕಂಪನಿಯು ನವೆಂಬರ್ 10ರಂದು ಭಾರತದಲ್ಲಿ ತನ್ನ ಹೊಸ ಸೆಲೆರಿಯೊ (Celerio) ಹ್ಯಾಚ್‌ಬ್ಯಾಕ್ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಇದಕ್ಕೂ ಮುನ್ನ ಕಂಪನಿಯು ಭಾರತದಲ್ಲಿ 2014 ರಲ್ಲಿ ಬಿಡುಗಡೆಯಾದ ಸೆಲೆರಿಯೊ ಕಾರಿನ ಎರಡನೇ ತಲೆಮಾರಿನ ಮಾದರಿಯನ್ನು ಮಾರಾಟ ಮಾಡುತ್ತಿತ್ತು. ಮಾರುತಿ ಸುಜುಕಿ ಸೆಲೆರಿಯೊ ಬಿಡುಗಡೆಯಾದಾಗಿನಿಂದಲೂ ಕಮರ್ಷಿಯಲ್ ಸೆಗ್ ಮೆಂಟಿನಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಈ ಕಾರು ಸಿ‌ಎನ್‌ಜಿ ಮಾದರಿಯಲ್ಲಿ ಲಭ್ಯವಿರುವುದರಿಂದ ಕ್ಯಾಬ್/ಫ್ಲೀಟ್ ನಿರ್ವಾಹಕರು ಈ ಕಾರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೊಸ ಸೆಲೆರಿಯೊ ಕಾರ್ ಅನ್ನು ಸಹ ಕಂಪನಿಯು ಸಿ‌ಎನ್‌ಜಿ ಮಾದರಿಯಲ್ಲಿ ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ. ಮಾಹಿತಿಯ ಪ್ರಕಾರ, ಹೊಸ ಸೆಲೆರಿಯೊ ಸಿಎನ್‌ಜಿ ಮಾದರಿಯನ್ನು ವೈಯಕ್ತಿಕ ಹಾಗೂ ವಾಣಿಜ್ಯ ಬಳಕೆಗಾಗಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಸಿಎನ್‌ಜಿ ಮಾದರಿಯನ್ನು ಯಾವಾಗ ಬಿಡುಗಡೆಗೊಳಿಸಲಾಗುವುದು ಎಂಬ ಬಗ್ಗೆ ಕಂಪನಿಯು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸಿಎನ್‌ಜಿ ಸೆಲೆರಿಯೊ ಮಾದರಿಯು ಪೆಟ್ರೋಲ್ ಮಾದರಿಗಿಂತ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ನಿನ್ನೆಯಷ್ಟೇ ಭಾರತದಲ್ಲಿ ಬಿಡುಗಡೆಯಾದ ಹೊಸ ಸೆಲೆರಿಯೊ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 4.99 ಲಕ್ಷಗಳಾಗಿದೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಇನ್ನು ಈ ಕಾರಿನ ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 6.94 ಲಕ್ಷಗಳಾಗಿದೆ. ಹೊಸ ಸೆಲೆರಿಯೊ ಕಾರ್ ಅನ್ನು ಹಲವು ಹೊಸ ಹಾಗೂ ಅಪ್ ಡೇಟ್ ಮಾಡಲಾದ ಫೀಚರ್ ಗಳೊಂದಿಗೆ ಬಿಡುಗಡೆಗೊಳಿಸಲಾಗಿದೆ. ಮಾರುತಿ ಸುಜುಕಿ ಕಂಪನಿಯು ಹೊಸ ಸೆಲೆರಿಯೊ ಕಾರ್ ಅನ್ನು ಸಿಲ್ಕಿ ಸಿಲ್ವರ್, ಗ್ಲಿಸ್ಟರಿಂಗ್ ಗ್ರೇ, ಆರ್ಕ್ಟಿಕ್ ವೈಟ್, ಕೆಫೀನ್ ಬ್ರೌನ್ ಜೊತೆಗೆ ಎರಡು ಹೊಸ ಬಣ್ಣಗಳಾದ ಫೈರ್ ರೆಡ್ ಹಾಗೂ ಸ್ಪೀಡಿ ಬ್ಲೂ ಎಂಬ ಆರು ಬಣ್ಣಗಳಲ್ಲಿ ಬಿಡುಗಡೆಗೊಳಿಸಿದೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಈ ಕಾರ್ ಅನ್ನು 4 ಟ್ರಿಮ್‌ ಹಾಗೂ 7 ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ ಸೆಲೆರಿಯೊ ಪ್ರತಿ ಲೀಟರ್ ಪೆಟ್ರೋಲಿಗೆ 26.68 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ. ಹೊಸ ಸೆಲೆರಿಯೊ ಕಾರು ಭಾರತದಲ್ಲಿರುವ ಇತರ ಕಾರು ತಯಾರಕ ಕಂಪನಿಗಳು ಮಾರಾಟ ಮಾಡುವ ಎಲ್ಲಾ ಕಾರುಗಳಿಗಿಂತ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಮಾರುತಿ ಸುಜುಕಿ ಕಂಪನಿಯು ಹೊಸ ಸೆಲೆರಿಯೊ ಕಾರಿನಲ್ಲಿ 1.0 ಲೀಟರ್ ಕೆ 10ಸಿ ಸರಣಿಯ 3 ಸಿಲಿಂಡರ್ ಡ್ಯೂಯಲ್ ಜೆಟ್ ಪೆಟ್ರೋಲ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ ಗರಿಷ್ಠ 65 ಬಿ‌ಹೆಚ್‌ಪಿ ಪವರ್ ಹಾಗೂ 89 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಸೆಲೆರಿಯೊ ಐದು ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್‌ನೊಂದಿಗೆ ಸ್ವಯಂಚಾಲಿತ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಸಹ ಪಡೆಯುತ್ತದೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಹೊಸ ಮಾರುತಿ ಸೆಲೆರಿಯೊ ಕಾರು ಸಹ ಸ್ವಿಫ್ಟ್ ಹಾಗೂ ಬಲೆನೊ ಕಾರುಗಳಂತೆ ಸುಜುಕಿಯ ಹಾರ್ಟೆಕ್ಟ್ ಪ್ಲಾಟ್‌ಫಾರಂ ಅನ್ನು ಆಧರಿಸಿದೆ. ಹೊಸ ಮಾದರಿಯು ಹಳೆಯ ಮಾದರಿಗಿಂತ ಹೆಚ್ಚು ಉದ್ದ ಹಾಗೂ ಅಗಲವಾಗಿದೆ. ಇದರ ವ್ಹೀಲ್‌ಬೇಸ್ ಸಹ ಮೊದಲಿಗಿಂತ ಉದ್ದವಾಗಿದ್ದು, ಕಾರಿನೊಳಗೆ ಮೊದಲಿಗಿಂತ ಹೆಚ್ಚು ಜಾಗವನ್ನು ನೀಡುತ್ತದೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಹೊಸ ಸೆಲೆರಿಯೊ ಆಕರ್ಷಕ ಗ್ರಿಲ್, ಹೊಸ ಅಲಾಯ್ ವ್ಹೀಲ್, ಫಾಗ್ ಲೈಟ್‌ಗಳನ್ನು ಹೊಂದಿದೆ. ಈ ಕಾರಿನ ಇಂಟಿರಿಯರ್'ನಲ್ಲಿ ಹೊಸ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಕಾಲ್ ಹಾಗೂ ಮ್ಯೂಸಿಕ್ ಅಸಿಸ್ಟ್‌ ಹೊಂದಿರುವ ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಸಿಂಗಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸರ್ಕ್ಯುಲರ್ ಡಿಜಿಟಲ್ ಸ್ಕ್ರೀನ್ ಹೊಂದಿದೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಈ ಕಾರಿನ ಹೆಡ್‌ಲೈಟ್‌ ವಿನ್ಯಾಸವನ್ನು ಅಪ್ ಡೇಟ್ ಮಾಡಲಾಗಿದೆ. ಇದರ ಜೊತೆಗೆ ಈ ಕಾರು ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಸಂಪರ್ಕ ಹೊಂದಿರುವ ಸ್ಮಾರ್ಟ್‌ಪ್ಲೇ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನಂತಹ ಹಲವಾರು ಹೊಸ ಹಾಗೂ ಅಪ್ ಡೇಟ್ ಮಾಡಲಾದ ಫೀಚರ್ ಗಳನ್ನು ಹೊಂದಿದೆ. ಇದರ ಹೊರತಾಗಿ ಈ ಕಾರಿನಲ್ಲಿ ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಜೊತೆಗೆ ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಫೀಚರ್ ಸಹ ನೀಡಲಾಗಿದೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಹೊಸ ಸೆಲೆರಿಯೊದಲ್ಲಿ ಡೋರ್ ರಿಕ್ವೆಸ್ಟ್ ಸ್ವಿಚ್ ಕೂಡ ನೀಡಲಾಗಿದೆ. ಹೊಸ ಮಾರುತಿ ಸೆಲೆರಿಯೊದಲ್ಲಿ ಬೂಟ್ ಸ್ಪೇಸ್ ಅನ್ನು ಈಗ 313 ಲೀಟರ್‌ಗಳಿಗೆ ಹೆಚ್ಚಿಸಲಾಗಿದೆ. ಕಂಪನಿಯು ಹೊಸ ಸೆಲೆರಿಯೊ ಕಾರಿನಲ್ಲಿ ಸುರಕ್ಷತಾ ಫೀಚರ್ ಗಳಿಗೆ ಹೆಚ್ಚು ಆದ್ಯತೆ ನೀಡಿದೆ. ಹೊಸ ಸೆಲೆರಿಯೊ ಕಾರಿನಲ್ಲಿ ಡ್ರೈವರ್ ಹಾಗೂ ಫ್ರಂಟ್ ಸೀಟ್ ಪ್ಯಾಸೆಂಜರ್ ಏರ್‌ಬ್ಯಾಗ್‌, ಸೀಟ್ ಬೆಲ್ಟ್ ರಿಮೈಂಡರ್, ಎಬಿಎಸ್-ಇಬಿಡಿ, ಇಂಜಿನ್ ಇಮೊಬಿಲೈಜರ್, ಹಿಂಭಾಗದ ಬಾಗಿಲುಗಳಲ್ಲಿ ಚೈಲ್ಡ್ ಪ್ರೂಫ್ ಲಾಕ್, ಸ್ಪೀಡ್ ಅಲರ್ಟ್ ಸಿಸ್ಟಂ, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಇನ್ನು ಮಾರುತಿ ಸುಜುಕಿ ಕಂಪನಿಯ ಉತ್ಪಾದನೆಯು ಈ ತಿಂಗಳಿನಿಂದ ಸಹಜ ಸ್ಥಿತಿಗೆ ತಲುಪುವ ಸಾಧ್ಯತೆಗಳಿವೆ. ಕಂಪನಿಯು ನವೆಂಬರ್ ತಿಂಗಳಲ್ಲಿ 1,45,000 - 1,50,000 ಯುನಿಟ್ ಕಾರುಗಳನ್ನು ಉತ್ಪಾದಿಸುವ ನಿರೀಕ್ಷೆಗಳಿವೆ. ಸೆಮಿಕಂಡಕ್ಟರ್‌ಗಳ ಪೂರೈಕೆ ಉತ್ತಮವಾಗುವುದರಿಂದ ಉತ್ಪಾದನೆಯು ಸುಧಾರಿಸಲಿದೆ ಎಂದು ಹೇಳಲಾಗಿದೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲೇ ತನ್ನ ಜನಪ್ರಿಯ ಮಾದರಿಗಳಾದ Swift, Dzire, Vitara Brezza ಕಾರುಗಳ ಉತ್ಪಾದನೆಯನ್ನು ಹೆಚ್ಚಿಸಲಿದೆ. ಮೂಲಗಳ ಪ್ರಕಾರ ಕಂಪನಿಯು ಈ ಉತ್ಪಾದನಾ ಸಂಖ್ಯೆಯ ಅಂಕಿ ಅಂಶಗಳನ್ನು ಉಪಕರಣಗಳ ಪೂರೈಕೆದಾರರಿಗೆ ನೀಡಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ ತಿಂಗಳುಗಳಲ್ಲಿ ಕಂಪನಿಯ ಉತ್ಪಾದನೆಯಲ್ಲಿ 50% - 60% ನಷ್ಟು ಇಳಿಕೆಯಾಗಿದೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಸೆಮಿಕಂಡಕ್ಟರ್‌ಗಳ ಕೊರತೆ ಕಂಪನಿಯ ಉತ್ಪಾದನೆ ಇಳಿಕೆಯಾಗಲು ಪ್ರಮುಖ ಕಾರಣವಾಗಿದೆ. ಸೆಮಿಕಂಡಕ್ಟರ್ ಗಳು ಆಧುನಿಕ ಕಾರುಗಳಲ್ಲಿ ಪ್ರಮುಖವಾಗಿವೆ.ಸೆಮಿಕಂಡಕ್ಟರ್‌ಗಳ ಕೊರತೆಯಿಂದ ಹಲವು ಕಂಪನಿಗಳು ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿವೆ. ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಮಲೇಷ್ಯಾದಲ್ಲಿ ಸೆಮಿಕಂಡಕ್ಟರ್ ಗಳ ಉತ್ಪಾದನೆಯು ಮತ್ತೆ ಹೆಚ್ಚಾಗಲಿದೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಈ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯ ಉತ್ಪಾದನೆಯು ನವೆಂಬರ್‌ ತಿಂಗಳಿಗಿಂತ ಹೆಚ್ಚಾಗಿರಲಿದೆ ಎಂದು ಅಂದಾಜಿಸಲಾಗಿದೆ. ಅಕ್ಟೋಬರ್‌ನಲ್ಲಿ ಕಂಪನಿಯ ಉತ್ಪಾದನೆಯು ಸೆಪ್ಟೆಂಬರ್‌ ತಿಂಗಳಿಗಿಂತ 40% ನಷ್ಟು ಹೆಚ್ಚಾಗಿದೆ. ಅಕ್ಟೋಬರ್‌ಗೆ ಹೋಲಿಸಿದರೆ ಕಾರುಗಳ ಉತ್ಪಾದನೆಯು ನವೆಂಬರ್ ತಿಂಗಳಿನಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ. ಇದರಿಂದ ಕಂಪನಿಯ ಕಾರುಗಳ ಉತ್ಪಾದನೆಯು ಡಿಸೆಂಬರ್ ವೇಳೆಗೆ ಸಹಜ ಸ್ಥಿತಿಯತ್ತ ಮರಳಲಿದೆ.

ಹೊಸ Celerio ಕಾರಿನ ಸಿ‌ಎನ್‌ಜಿ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ Maruti Suzuki

ಮಾರುತಿ ಸುಜುಕಿ ಕಂಪನಿಯ ಸರಾಸರಿ ಉತ್ಪಾದನೆ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ಕರೋನಾ ವೈರಸ್ ಎರಡನೇ ಅಲೆ ದೇಶಕ್ಕೆ ಅಪ್ಪಳಿಸುವ ಮೊದಲು 1,67,000 ಯುನಿಟ್‌ಗಳಷ್ಟಿತ್ತು. ಮಲೇಷ್ಯಾದಲ್ಲಿ ತಯಾರಿಸಲಾಗುವ ಸೆಮಿಕಂಡಕ್ಟರ್‌ಗಳು ಭಾರತವನ್ನು ತಲುಪಲು 6 ರಿಂದ 8 ವಾರಗಳು ಬೇಕಾಗುತ್ತವೆ. ಸೆಪ್ಟೆಂಬರ್ - ಅಕ್ಟೋಬರ್‌ ಅವಧಿಯಲ್ಲಿ ಕಂಪನಿಯ ಉತ್ಪಾದನೆಯು ಸುಧಾರಿಸಿದೆ.

Most Read Articles

Kannada
English summary
Maruti suzuki to launch celerio cng variant soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X