ಟ್ರೂ ವ್ಯಾಲ್ಯೂ ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳ ಮೂಲಕ ಹೊಸ ದಾಖಲೆಗೆ ಕಾರಣವಾದ ಮಾರುತಿ ಸುಜುಕಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಜೊತೆಗೆ ಬಳಕೆ ಮಾಡಿದ ವಾಹನಗಳ ಮರು ಮಾರಾಟ ಮತ್ತು ಖರೀದಿ ಪ್ರಕ್ರಿಯೆ ಸಹ ಜೋರಾಗಿದ್ದು, ಹೊಸ ಉದ್ಯಮ ವ್ಯವಹಾರದಲ್ಲಿ ಮಾರುತಿ ಸುಜುಕಿಯ ಟ್ರೂ ವ್ಯಾಲ್ಯೂ ಕೇಂದ್ರಗಳಿಗೆ ಭಾರೀ ಹರಿದುಬರುತ್ತಿದೆ.

ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳ ಮೂಲಕ ಹೊಸ ದಾಖಲೆ

ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಮತ್ತು ಮಾರಾಟ ವ್ಯವಹಾರವನ್ನು ಕಾರು ಉತ್ಪಾದನಾ ಕಂಪನಿಗಳೇ ನಿರ್ವಹಣೆ ಮಾಡುತ್ತಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಬಳಕೆಯ ಮಾಡಿದ ಕಾರುಗಳಿಗೂ ಹೊಸ ಕಾರುಗಳ ಮಾದರಿಯಲ್ಲೇ ಹಲವಾರು ಆಫರ್ ನೀಡುತ್ತಿರುವುದಲ್ಲದೆ ಗರಿಷ್ಠ ವಾರಂಟಿ ರೋಡ್ ಸೈಡ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳ ಮೂಲಕ ಹೊಸ ದಾಖಲೆ

ಹೊಸ ವಾಹನಗಳ ಖರೀದಿ ಪ್ರಕ್ರಿಯೆಯಲ್ಲಿ ಭಾರೀ ಹೆಚ್ಚಳವಾಗಿರುವ ಹಿನ್ನಲೆ ಎಕ್ಸ್‌ಚೆಂಜ್ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಬಳಕೆ ಮಾಡಿದ ವಾಹನಗಳ ಖರೀದಿ ಮತ್ತು ಮರು ಮಾರಾಟ ಉದ್ಯಮದಲ್ಲಿ ಮಾರುತಿ ಸುಜುಕಿ ಸೇರಿದಂತೆ ವಿವಿಧ ಆಟೋ ಕಂಪನಿಗಳು ಭಾರೀ ಲಾಭಾಂಶ ಕಂಡುಕೊಳ್ಳುತ್ತಿವೆ.

ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳ ಮೂಲಕ ಹೊಸ ದಾಖಲೆ

ಮಾರುತಿ ಸುಜುಕಿಯು ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಯನ್ನು, ಮಹೀಂದ್ರಾ ಕಂಪನಿಯು ಫಸ್ಟ್ ಚಾಯ್ಸ್, ಫೋಕ್ಸ್‌ವ್ಯಾಗನ್ ಕಂಪನಿಯು ದಾಸ್ ವೆಲ್ಟ್ ಆಟೋ ಸೇರಿದಂತೆ ವಿವಿಧ ಕಾರು ಕಂಪನಿಗಳು ಹೊಸ ಕಾರುಗಳ ಜೊತೆಯಲ್ಲೇ ಬಳಕೆ ಮಾಡಿದ ವಾಹನಗಳ ವ್ಯವಹಾರವನ್ನು ಕೂಡಾ ನಿರ್ವಹಿಸುತ್ತಿವೆ.

ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳ ಮೂಲಕ ಹೊಸ ದಾಖಲೆ

2001ರಲ್ಲೇ ಆರಂಭವಾದ ಮಾರುತಿ ಸುಜುಕಿ ಒಡೆತನದ ಟ್ರೂ ವ್ಯಾಲ್ಯೂ ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳು ಆರಂಭದಲ್ಲಿ ಕೆಲವೇ ನಗರಗಳ ಆಯ್ದ ಕಾರು ಮಾರಾಟ ಮಳಿಗೆಗಳಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಕಳೆದ ನಾಲ್ಕು ವರ್ಷಗಳಿಂದೀಚೆಗೆ ದೇಶ ಪ್ರಮುಖ ನಗರಗಳಲ್ಲಿ ಟ್ರೂ ವ್ಯಾಲ್ಯೂ ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿರುವ ಮಾರುತಿ ಸುಜುಕಿಯು ಹಲವು ದಾಖಲೆಗಳಿಗೆ ಕಾರಣವಾಗಿದೆ.

ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳ ಮೂಲಕ ಹೊಸ ದಾಖಲೆ

ಟ್ರೂ ವ್ಯಾಲ್ಯೂ ಮೂಲಕ ಹೊಸ ಕಾರು ಮಾರಾಟ ಮಳಿಗೆಯಷ್ಟೇ ಲಾಭಾಂಶ ಪಡೆದುಕೊಳ್ಳುತ್ತಿರುವ ಮಾರುತಿ ಸುಜುಕಿಯು ದಿನಕ್ಕೆ ಸಾವಿರಾರು ಬಳಕೆ ಮಾಡಿದ ವಾಹನಗಳ ಖರೀದಿ ಮತ್ತು ಮರು ಮಾರಾಟದ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳ ಮೂಲಕ ಹೊಸ ದಾಖಲೆ

2001ರಿಂದ 2017ರ ತನಕವು ಟ್ರೂ ವ್ಯಾಲ್ಯೂ ಮೂಲಕ 10 ಲಕ್ಷ ಬಳಕೆ ಮಾಡಿದ ಕಾರುಗಳ ವ್ಯವಹಾರವನ್ನು ಕೈಗೊಂಡಿದ್ದ ಮಾರುತಿ ಸುಜುಕಿಯು 2017ರಿಂದ 2020ರ ಅವಧಿಯಲ್ಲಿ ಬರೋಬ್ಬರಿ 40 ಲಕ್ಷ ಬಳಕೆ ಮಾಡಿದ ಕಾರುಗಳ ವ್ಯವಹಾರವನ್ನು ಪೂರ್ಣಗೊಳಿಸಿದೆ.

ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳ ಮೂಲಕ ಹೊಸ ದಾಖಲೆ

ಲಾಕ್‌ಡೌನ್‌ಗೂ ಮೊದಲು ಹೊಸ ವಾಹನ ಖರೀದಿ ಯೋಜನೆಯಲ್ಲಿದ್ದ ಹಲವು ಗ್ರಾಹಕರು ಪರಿಸ್ಥಿತಿಗೆ ಅನುಗುಣವಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದು, ವೈರಸ್ ಭೀತಿ ಪರಿಣಾಮ ಹೊಸ ವಾಹನಗಳ ಮಾರಾಟ ಪ್ರಮಾಣಕ್ಕಿಂತಲೂ ಹೆಚ್ಚು ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಮತ್ತು ಮರು ಮಾರಾಟ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳ ಮೂಲಕ ಹೊಸ ದಾಖಲೆ

ಜೊತೆಗೆ ಹೊಸ ಕಾರು ಮಾರಾಟ ಮಾದರಿಯಲ್ಲೇ ಬಳಕೆ ಮಾಡಿದ ಕಾರುಗಳಿಗೂ ವಾರಂಟಿ, ಬ್ಯಾಂಕ್ ಸಾಲ ಸೌಲಭ್ಯ, ಎಕ್ಸ್‌ಚೆಂಜ್ ಆಫರ್ ಮತ್ತು ಆಕ್ಸೆಸರಿಸ್ ಪ್ಯಾಕೇಜ್ ಒದಗಿಸುತ್ತಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ಮೋಸವಾಗದಂತೆ ನುರಿತ ಉದ್ಯೋಗಿಗಳನ್ನು ಒಳಗೊಂಡ ತಂಡದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ.

ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳ ಮೂಲಕ ಹೊಸ ದಾಖಲೆ

ಇನ್ನು ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟವನ್ನು ವ್ಯವಸ್ಥಿತವಾಗಿ ಮಾರಾಟಗೊಳಿಸುವ ಗುರಿ ಯೋಜನೆ ಹೊಂದಿರುವ ಮಾರುತಿ ಸುಜುಕಿಯು ದೇಶದ ಪ್ರಮುಖ ನಗರಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದ್ದು, ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳು ಗ್ರಾಹಕರ ಆಯ್ಕೆಗೆ ಉತ್ತಮವಾಗಿವೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳ ಮೂಲಕ ಹೊಸ ದಾಖಲೆ

2ನೇ ಮತ್ತು 3ನೇ ದರ್ಜೆ ಮಾಹಾನಗರಗಳಲ್ಲಿ ದುಬಾರಿ ಬೆಲೆಯ ವಾಹನಗಳಿಂತಲೂ ಕೈಗೆಟುಕುವ ಬೆಲೆಯಲ್ಲಿ ಉತ್ತಮ ನಿರ್ವಹಣೆಯಲ್ಲಿರುವ ಸೆಕೆಂಡ್ ಹ್ಯಾಂಡ್ ವಾಹನಗಳ ಮಾಲೀಕತ್ವಕ್ಕೆ ಮುಂದಾಗುತ್ತಿರುವುದೇ ಬಳಕೆ ಮಾಡಿದ ವಾಹನಗಳ ಉದ್ಯಮ ವ್ಯವಹಾರವು ದ್ವಿಗುಣಗೊಳ್ಳಲು ಪ್ರಮುಖ ಕಾರಣವಾಗಿದೆ.

Most Read Articles

Kannada
English summary
Maruti Suzuki True Value Sales Milestone. Read in Kannada.
Story first published: Thursday, February 4, 2021, 19:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X