ಹೊಸ ರೂಪದಲ್ಲಿ ಭಾರತಕ್ಕೆ ಲಗ್ಗೆಯಿಡಲಿದೆ ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು

ಪ್ರಸ್ತುತ ತಲೆಮಾರಿನ ಸ್ವಿಫ್ಟ್ ಕಾರನ್ನು ಸುಜುಕಿ ಕಂಪನಿಯು 2017ರಲ್ಲಿಬಿಡುಗಡೆ ಮಾಡಲಾಯಿತು. ಇದನ್ನು 2018ರಲ್ಲಿ ಆರಂಭದಲ್ಲಿ ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಮಾರುತಿ ಸ್ವಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹೊಸ ರೂಪದಲ್ಲಿ ಭಾರತಕ್ಕೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಕಾರು

ಭಾರತದಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವಿಫ್ಟ್ ಕಳೆದ 15 ವರ್ಷದಿಂದ ದೇಶಿಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯೊಂದಿಗೆ ದಾಖಲೆಯ ಮಟ್ಟದಲ್ಲಿ ಜನಪ್ರಿಯ ಸ್ವಿಫ್ಟ್ ಕಾರು ಮಾರಾಟವಾಗುತ್ತಿದೆ. ಅಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಕೂಡ ಉತ್ತಮವಾಗಿ ಮಾರಾಟವಾಗುತ್ತಿದೆ. ಇದೀಗ ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯು ನ್ಯೂ ಜನರೇಷನ್ ಸ್ವಿಫ್ಟ್ ಕಾರನ್ನು ಅಭಿವೃದ್ದಿ ಪಡಿಸಲು ಪ್ರಾರಂಭಿಸಿದ್ದಾರೆ ಎಂದು ವರದಿಗಳಾಗಿದೆ.

ಹೊಸ ರೂಪದಲ್ಲಿ ಭಾರತಕ್ಕೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಕಾರು

ಪ್ರಸ್ತುತ ಮಾದರಿಗೆ ಹೋಲಿಸಿದರೆ ಮುಂಬರುವ ನ್ಯೂ ಜನರೇಷನ್ ಮಾದರಿಯಲ್ಲಿ ಸಾಕಷ್ಟು ಬದಲಾವಣೆಗಳಿರುತ್ತವೆ. ನ್ಯೂ ಜನರೇಷನ್ ಸ್ವಿಫ್ಟ್ ಅನ್ನು ಹೊಸ ಪ್ಲಾಟ್‌ಫಾರ್ಮ್ ಅನ್ನು ಬಿಡುಗಡೆಯಾಗಲಿದೆ. ಇದು ಪ್ರಸ್ತುತಕ್ಕಿಂತ ಹಗುರವಾಗಿರುತ್ತದೆ ಮತ್ತು ಬಲವಾಗಿರುತ್ತದೆ. ನ್ಯೂ ಜನರೇಷನ್ ಸ್ವಿಫ್ಟ್ ಕಾರನ್ನು (ವೈಇಡಿ ಕೋಡ್ ನೇಮ್) ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ ಅನ್ನು ಹಿಯರ್‌ಟೆಕ್ಟ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಬಹುದು ಎಂದು ಹೇಳಲಾಗುತ್ತಿದೆ.

ಹೊಸ ರೂಪದಲ್ಲಿ ಭಾರತಕ್ಕೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಕಾರು

ಈ ಹೊಸ ಮಾರುತಿ ಸ್ವಿಫ್ಟ್ ಕಾರು ಪರಿಷ್ಕೃತ ಪ್ಲಾಟ್‌ಫಾರ್ಮ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನ ಒಟ್ಟಾರೆ ಸ್ಥಿರತೆ, ಸುರಕ್ಷತೆ ಮತ್ತು ನಿರ್ವಹಣೆಯಲ್ಲಿ ಹೆಚ್ಚಿನ ಸುಧಾರಣೆಯನ್ನು ಕಾಣಬಹುದು. ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು ಹೊಸ ಫೀಚರ್ಸ್ ಗಳನ್ನು ಮತ್ತು ತಂತ್ರಜ್ಙಾನಗಳನ್ನು ಪಡೆಯಲಿದೆ.

ಹೊಸ ರೂಪದಲ್ಲಿ ಭಾರತಕ್ಕೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಕಾರು

ಭಾರತದಲ್ಲಿ ಬಿಡುಗಡೆಯಾಗಲಿರುವ ನ್ಯೂ ಜನರೇಷನ್ ಸಿಫ್ಟ್ ಕಾರಿನಲ್ಲಿ 1.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ನೀಡಬಹುದು.ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಸ್ವಿಫ್ಟ್ ಫೇಸ್‌ಲಿಫ್ಟ್‌ ಮಾದರಿಯಲ್ಲಿ 1.2-ಲೀಟರ್ ಡ್ಯುಯಲ್ ಜೆಟ್ 12 ಎನ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ರೂಪದಲ್ಲಿ ಭಾರತಕ್ಕೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಕಾರು

ಜಪಾನಿನ ಆಟೋಮೋಟಿವ್ ಮ್ಯಾಗಜೀನ್ ಬೆಸ್ಟ್ ಕಾರ್ ನ್ಯೂ ಜನರೇಷನ್ ಸ್ವಿಫ್ಟ್ ಕಾರಿನ 3ಡಿ ರೆಂಡರಿಂಗ್ ಚಿತ್ರವನ್ನು ಬಹಿರಂಗಪಡಿಸಲಾಗಿತ್ತು. 3ಡಿ ರೆಂಡರಿಂಗ್ ಚಿತ್ರದಲ್ಲಿ ನ್ಯೂ ಜನರೇಷನ್ ಸ್ವಿಫ್ಟ್ ತುಂಬಾ ದೊಡ್ಡದಾದ ಏರ್ ಡ್ಯಾಮ್, ಅಡ್ದಲಾಗಿರುವ ಫಾಗ್ ಲ್ಯಾಂಪ್ ಮತ್ತು ಮುಂಭಾಗದಲ್ಲಿ ತೆಳ್ಳನೆಯ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಒಳಗೊಂಡಿದೆ. ಸೈಡ್ ಪ್ರೊಫೈಲ್‌ನಲ್ಲಿ ಶಾರ್ಪ್ ಲೈನ್ ಗಳನ್ನು ಹೊಂದಿವೆ.

ಹೊಸ ರೂಪದಲ್ಲಿ ಭಾರತಕ್ಕೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಕಾರು

ಇದಲ್ಲದೆ ಟಾರ್ಕ್-ಫಿಲ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಮೋಟರ್ ಐಡ್ಲಿಂಗ್‌ನಂತಹ ಹೊಸ ಫೀಚರ್ಸ್ ಗಳನ್ನು ಕೂಡ ಪಡೆಯಬಹುದು. ಜಾಗತಿಕವಾಗಿ ಅನಾವರಣಗೊಂಡ ಬಳಿಕ ನ್ಯೂ ಜನರೇಷನ್ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

ಹೊಸ ರೂಪದಲ್ಲಿ ಭಾರತಕ್ಕೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಕಾರು

ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಗಾಗಿ ಎಸ್-ಸಿಎನ್‌ಜಿ ಸ್ಪೆಕ್ ಸ್ವಿಫ್ಟ್ ಅನ್ನು ಪರಿಚಯಿಸುವ ನಿರೀಕ್ಷೆಯಿದೆ. ಈ ಸ್ವಿಫ್ಟ್ ಸಿಎನ್‌ಜಿ ಕಾರನ್ನು ಎಂಟ್ರಿ ಲೆವೆಲ್ ಎಲ್‌ಎಕ್ಸ್‌ಐ ರೂಪಾಂತರದಲ್ಲಿ ಮಾತ್ರ ನೀಡಬಹುದು. ಈ ಮೂಲಕ ಸ್ವಿಫ್ಟ್ ಸಿಎನ್‌ಜಿ ಕಾರಿನ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಸ್ವಿಫ್ಟ್ ಸಿಎನ್‌ಜಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಪರಿಚಯಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ರೂಪದಲ್ಲಿ ಭಾರತಕ್ಕೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಕಾರು

ಮುಂದಿನ ದಿನಗಳಲ್ಲಿ ಸ್ವಿಫ್ಟ್ ಸಿಎನ್‌ಜಿ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು. ಇನ್ನು ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಸ್ವಿಫ್ಟ್ ಫೇಸ್‌ಲಿಫ್ಟ್‌ ಕಾರಿನಲ್ಲಿ ಇನ್ನು 7 ಇಂಚಿನ ಟಚ್‌ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. . ಈ ಸಿಸ್ಟಂ ನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಕೂಡ ಹೊಂದಿದೆ.

ಹೊಸ ರೂಪದಲ್ಲಿ ಭಾರತಕ್ಕೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಕಾರು

ಮಲ್ಟಿ-ಕಲರ್ ಎಂಐಡಿ, ಫ್ಲಾಟ್ ಸಂಯೋಜಿತ ಕಂಟ್ರೋಲ್ ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಇತ್ಯಾದಿಗಳೊಂದಿಗೆ ಬಾಟಮ್ ಸ್ಟೀಯರಿಂಗ್ ವ್ಹೀಲ್ ಅನ್ನು ಪಡೆಯುತ್ತದೆ. ಈ ಸ್ವಿಫ್ಟ್ ಕಾರಿನ ಮುಂಭಾಗದಲ್ಲಿ ಕ್ರೋಮ್ ಆಕ್ಸೆಂಟ್ ಹೊಂದಿರುವ ಆಕರ್ಷಕ ಕ್ರಾಸ್ ಮೆಶ್ ಗ್ರಿಲ್ ಮತ್ತು ಗ್ರಿಲ್ ಸುತ್ತಲು ನೀಡಲಾಗಿರುವ ಕಪ್ಪು ಪಟ್ಟಿಯು ಕಾರಿನ ಹೊಸ ಲುಕ್ ಅನ್ನು ಹೆಚ್ಚಿಸಿದೆ.

ಹೊಸ ರೂಪದಲ್ಲಿ ಭಾರತಕ್ಕೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಕಾರು

ಮಾರುತಿ ಸ್ವಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಗ್ರಾಂಡ್ ಐ10 ನಿಯೋಸ್, ಫೋರ್ಡ ಫಿಗೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದೆ. ಈ ಸ್ವಿಫ್ಟ್ ಕಾರು ಮಾರುತಿ ಸುಜುಕಿ ಕಂಪನಿಗೆ ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ಇನ್ನು ಮಾರುತಿ ಸುಜುಕಿ ಕಂಪನಿಯು ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಜೊತೆ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಮತ್ತು ವಿಟಾರಾ ಬ್ರೆಝಾ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯ ಸಿಎನ್‌ಜಿ ಮಾದರಿಗಳಾಗಿ ಬಿಡುಗಡೆಗೊಳಿಸಲಿದೆ. ಈ ಮೂರು ಸಿಎನ್‌ಜಿ ಮಾದರಿಗಳು ಈ ವರ್ಷದ ಹಬ್ದದ ಸೀಸನ್ ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ

ಹೊಸ ರೂಪದಲ್ಲಿ ಭಾರತಕ್ಕೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಕಾರು

ಭಾರತದಲ್ಲಿ ಸ್ವಿಫ್ಟ್ ಕಾರಿಗೆ ಹೆಚ್ಚು ಬೇಡಿಕೆ ಹೊಂದಿರುವುದರಿಂದ ನ್ಯೂ ಜನರೇಷನ್ ಸ್ವಿಫ್ಟ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು ಅತ್ಯಾಧುನಿಕ ಫೀಚರ್ಸ್ ಮತ್ತು ಹೊಸ ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ. ಅಲ್ಲದೇ ಹೆಚ್ಚಿನ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿರುತ್ತದೆ. ಈ ಮಾರುತಿ ಸ್ವಿಫ್ಟ್‌ನ ನ್ಯೂ ಜನರೇಷನ್ ಆವೃತ್ತಿಯನ್ನು ಭಾರತದಲ್ಲಿ ಮುಂದಿನ ವರ್ಷ ಪರಿಚಯಿಸಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Wednesday, August 18, 2021, 18:27 [IST]
English summary
Maruti suzuki working on the next generation swift hatchback launch expected details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+