ಜೂನ್ ತಿಂಗಳ ಮಾರಾಟದಲ್ಲಿ ಮಾರುತಿ ಸ್ವಿಫ್ ಕಾರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ವ್ಯಾಗನ್‍ಆರ್

ದೇಶಿಯ ಮಾರುಕಟ್ಟೆಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಪಾರುಪತ್ಯ ಸಾಧಿಸುತ್ತಿರುವುದನ್ನು ಮುಂದುವರೆಸಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಟಾಪ್-10 ಪಟ್ಟಿಯಲ್ಲಿ ಮಾರುತಿ ಸುಜುಕಿ ಕಾರುಗಳು ಹೆಚ್ಚಾಗಿ ಕಾಣಸಿಗುತ್ತದೆ.

ಜೂನ್ ತಿಂಗಳ ಮಾರಾಟದಲ್ಲಿ ಮಾರುತಿ ಸ್ವಿಫ್ ಕಾರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ವ್ಯಾಗನ್‍ಆರ್

ಪ್ರತಿ ತಿಂಗಳು ಅತಿ ಹೆಚ್ಚು ಮಾರಾಟವಾದ ಪಟ್ಟಿಯಲ್ಲಿ ಸ್ವಿಫ್ಟ್ ಕಾರು ಹೆಚ್ಚಾಗಿ ಕಾಣಸಿಗುತ್ತದೆ. ಅದರೆ ಕಳೆದ ತಿಂಗಳ ಮಾರಾಟದಲ್ಲಿ ಸ್ವಿಫ್ಟ್ ಕಾರನ್ನು ಹಿಂದಿಕ್ಕಿ ವ್ಯಾಗನ್ಆರ್ ನಂ,1 ಸ್ಥಾನಕ್ಕೇರದೆ. ಕಳೆದ ತಿಂಗಳಿನಲ್ಲಿ ವ್ಯಾಗನ್ಆರ್ 19,447 ಯುನಿಟ್‌ಗಳು ಮಾರಾಟವಾಗಿವೆ. ಮಾರುತಿ ಸುಜುಕಿ ವ್ಯಾಗನ್ಆರ್ ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ. ಗಮನಿಸಬೇಕಾದ ಸಂಗತಿಯೆಂದರೆ ವ್ಯಾಗನ್ಆರ್ ಬಹುಬೇಡಿಕೆಯ ಸ್ವಿಫ್ಟ್ ಕಾರನ್ನು ಕಳೆದ ತಿಂಗಳ ಮಾರಾಟದಲ್ಲಿ ದೊಡ್ಡ ಅಂತರದಲ್ಲಿ ಹಿಂದಿಕ್ಕಿದೆ.

ಜೂನ್ ತಿಂಗಳ ಮಾರಾಟದಲ್ಲಿ ಮಾರುತಿ ಸ್ವಿಫ್ ಕಾರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ವ್ಯಾಗನ್‍ಆರ್

2021ರ ಜೂನ್ ತಿಂಗಳಿನಲ್ಲಿ ಸ್ವಿಫ್ಟ್ ಮಾದರಿಯ 17,727 ಯುನಿಟ್‌ಗಳು ಮಾರಾಟವಾಗಿವೆ. ದಾಖಲೆಯ ಮಟ್ಟದಲ್ಲಿ ವ್ಯಾಗನ್ಆರ್ ಕಾರು ಮಾರಾಟವಾಗಲು ಇದರ ಸಿಎನ್‌ಜಿ ಮಾದರಿಯು ಹೆಚ್ಚಿನ ಕೊಡುಗೆಯನ್ನು ನೀಡಿದೆ.

ಜೂನ್ ತಿಂಗಳ ಮಾರಾಟದಲ್ಲಿ ಮಾರುತಿ ಸ್ವಿಫ್ ಕಾರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ವ್ಯಾಗನ್‍ಆರ್

ದೇಶದಲ್ಲಿ ಪ್ರತಿದಿನ ಇಂಧಿನ ಬೆಲೆಯು ಹೆಚ್ಚಳವಾಗುತ್ತಿದೆ. ಇದರಿಂದ ಹೆಚ್ಚಿನ ಗ್ರಾಹಕರು ವ್ಯಾಗನ್ಆರ್ ಸಿಎನ್‌ಜಿ ಮಾದರಿಯನ್ನು ಖರೀದಿಸುತ್ತಿದ್ದಾರೆ. ಇನ್ನು ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದ್ದ ವ್ಯಾಗನ್ಆರ್ ಸಿಎನ್‌ಜಿ ಮಾದರಿಯನ್ನು ಹೊಸ ಬಣ್ಣಗಳ ಆಯ್ಕೆಯಲ್ಲಿ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿದ್ದರು.

ಜೂನ್ ತಿಂಗಳ ಮಾರಾಟದಲ್ಲಿ ಮಾರುತಿ ಸ್ವಿಫ್ ಕಾರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ವ್ಯಾಗನ್‍ಆರ್

ಆರಂಭದಲ್ಲಿ ಈ ಕಾರನ್ನು ವೈಟ್, ಗ್ರೇ ಮತ್ತು ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಿತ್ತು. ನಂತರ ಪೂಲ್ಸೈಡ್ ಬ್ಲೂ, ನಟ್ಮ್ಯಾಗ್ ಬ್ರೌನ್ ಮತ್ತು ಅಟ್ಮನ್ ಆರೆಂಜ್ ಬಣ್ಣಗಳನ್ನು ಸೇರಿಸಿದ್ದರು. ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ಕಾರು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.

ಜೂನ್ ತಿಂಗಳ ಮಾರಾಟದಲ್ಲಿ ಮಾರುತಿ ಸ್ವಿಫ್ ಕಾರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ವ್ಯಾಗನ್‍ಆರ್

ಮಾರುತಿ ಸುಜುಕಿ ವ್ಯಾಗನ್ಆರ್ ಕಾರನ್ನು 1.0-ಲೀಟರ್ ಮತ್ತು 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಮಾರಾಟ ಮಾಡಲಾಗುತ್ತದೆ. ಎಸ್-ಸಿಎನ್‌ಜಿ ಮಾದರಿಯಲ್ಲಿ 1.0-ಲೀಟರ್ 3-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಜೂನ್ ತಿಂಗಳ ಮಾರಾಟದಲ್ಲಿ ಮಾರುತಿ ಸ್ವಿಫ್ ಕಾರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ವ್ಯಾಗನ್‍ಆರ್

ಇದು 58 ಬಿಹೆಚ್‌ಪಿ ಮತ್ತು 78 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಜೋಡಿಸಲಾಗಿದೆ. ಇದನ್ನು ಎಲ್ಎಕ್ಸ್ಐ ಮತ್ತು ಎಲ್ಎಕ್ಸ್ಐ(ಒ) ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಜೂನ್ ತಿಂಗಳ ಮಾರಾಟದಲ್ಲಿ ಮಾರುತಿ ಸ್ವಿಫ್ ಕಾರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ವ್ಯಾಗನ್‍ಆರ್

ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ, ಇದರಲ್ಲಿ ಸುರಕ್ಷತೆಗಾಗಿ ಡ್ರೈವರ್-ಸೈಡ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಹೈಸ್ಪೀಡ್ ಅಲರ್ಟ್, ಸೀಟ್‌ಬೆಲ್ಟ್ ರಿಮೈಂಡರ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಇತರ ಪೀಚರ್ ಗಳನ್ನು ಒಳಗೊಂಡಿದೆ.

ಜೂನ್ ತಿಂಗಳ ಮಾರಾಟದಲ್ಲಿ ಮಾರುತಿ ಸ್ವಿಫ್ ಕಾರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ವ್ಯಾಗನ್‍ಆರ್

ಇನ್ನು ಎಲ್‌ಎಕ್ಸ್‌ಐ(ಒ) ರೂಪಾಂತರದಲ್ಲಿ ಪ್ರಯಾಣಿಕರ ಬದಿಯ ಏರ್‌ಬ್ಯಾಗ್ ಮತ್ತು ಹೊಸ ಫೀಚರ್ ಗಳನ್ನು ಹೊಂದಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯು 33.54 ಕಿಮೀ ಮೈಲೇಜ್ ಅನ್ನು ನೀಡುತ್ತದೆ.

ಜೂನ್ ತಿಂಗಳ ಮಾರಾಟದಲ್ಲಿ ಮಾರುತಿ ಸ್ವಿಫ್ ಕಾರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ವ್ಯಾಗನ್‍ಆರ್

ಇನ್ನು ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯಲ್ಲಿ ಇಂಟೆಲಿಜೆಂಟ್ ಇಂಜೆಕ್ಷನ್ ಸಿಸ್ಟಂನೊಂದಿಗೆ ಡ್ಯುಯಲ್ ಇಸಿಯುಗಳನ್ನು ಒಳಗೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಿಎನ್‌ಜಿ ಮಾದರಿಗಳಲ್ಲಿ ವ್ಯಾಗನ್ಆರ್ ಸಿಎನ್‌ಜಿ ಅಗ್ರಸ್ಥಾನದಲ್ಲಿದೆ.

Most Read Articles

Kannada
English summary
Maruti Wagonr Beats Swift In June 2021 Car Sales. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X