Just In
- 1 hr ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 1 hr ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 2 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 2 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Maruti Vitara Brezza ಎಸ್ಯುವಿ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ದೇಶೀಯ ಮಾರುಕಟ್ಟೆಯಲ್ಲಿ 2016ರ ಆರಂಭದಿಂದಲೂ ವಿಟಾರಾ ಬ್ರೆಝಾವನ್ನು ಮಾರಾಟ ಮಾಡುತ್ತಿದೆ. ಈ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮರಾಟವಾಗುವ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ ಒಂದಾಗಿದೆ.
2016ರ ಆರಂಭದಲ್ಲಿ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ಪ್ರಬಲ್ಯವನ್ನು ಸಾಧಿಸುತಿದ್ದ ಫೋರ್ಡ್ ಇಕೋಸ್ಪೋರ್ಟ್ ಅನ್ನು ಸೋಲಿಸುವ ಮೂಲಕ ವಿಟಾರಾ ಬ್ರೆಝಾ ನಿಜವಾಗಿಯೂ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಕಳೆದ ಕೆಲವು ವರ್ಷಗಳಲ್ಲಿ, ವಿಟಾರಾ ಬ್ರೆಝಾ ಹೆಚ್ಚು ಮಾರಾಟವಾಗುವ ಎಸ್ಯುವಿಗಳಲ್ಲಿ ಒಂದಾಗಿದೆ, ದೇಶದ ಅತಿದೊಡ್ಡ ಕಾರು ತಯಾರಕರು ಹೊಸ ವಿಟಾರಾ ಬ್ರೆಝಾವನ್ನು ನವೀಕರಿಸಲಾಗುತ್ತಿದೆ. ನ್ಯೂ ಜನರೇಷನ್ ಮಾರುತಿ ವಿಟಾರಾ ಬ್ರೆಝಾ ಚಿತ್ರಗಳು ಆನ್ಲೈನ್ನಲ್ಲಿ ಸೋರಿಕೆಯಾಗಿವೆ.
ನ್ಯೂ ಜನರೇಷನ್ ಮಾರುತಿ ವಿಟಾರಾ ಬ್ರೆಝಾ ಎಸ್ಯುವಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ನಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುವ ಸ್ಟಾರ್ಟ್/ಸ್ಟಾಪ್ SHVS ತಂತ್ರಜ್ಞಾನದ ಜೊತೆಗೆ ಒಳ ಮತ್ತು ಹೊರಭಾಗದಲ್ಲಿ ಪ್ರಮುಖ ಬದಲಾವಣೆಗಳೊಂದಿಗೆ ಬರುತ್ತದೆ ಮುಂಬರುವ ಹೊಸ ವಿಟಾರಾ ಬ್ರೆಝಾ ಎಸ್ಯುವಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.
ನ್ಯೂ ಜನರೇಷನ್ ಮಾರುತಿ ವಿಟಾರಾ ಬ್ರೆಝಾ ಎಸ್ಯುವಿಯು ಮುಂದಿನ ವರ್ಷದ ಆರಂಭದಲ್ಲಿ ಅಥವಾ ಮಧ್ಯದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ ಏಕೆಂದರೆ ಉತ್ಪಾದನಾ ಮಾದರಿಯು ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ಕೆಲವು ದಿನಗಳ ಹಿಂದೆ, ಎರಡನೇ ತಲೆಮಾರಿನ ಸೆಲೆರಿಯೊವನ್ನು ಬಿಡುಗಡೆ ಮಾಡಲಾಯಿತು ಮತ್ತು ಅದನ್ನು ಫೇಸ್ಲಿಫ್ಟೆಡ್ ಬಲೆನೊ ಅನುಸರಿಸುತ್ತದೆ,
ಸೋರಿಕೆಯಾದ ಚಿತ್ರಗಳು 2022ರ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್ ಅನ್ನು ಪಡೆದುಕೊಂಡಿದೆ ಎಂದು ಸೂಚಿಸುತ್ತದೆ, ಇದು ಕ್ರೋಮ್ ಸ್ಟ್ರಿಪ್ಗೆ ಬ್ಲ್ಯಾಕ್ ಅಂಶಗಳು ಹೆಚ್ಚು ಪ್ರಮುಖವಾಗಿದೆ ಮತ್ತು ಸುಜುಕಿ ಬ್ಯಾಡ್ಜ್ ಅದರ ಮಧ್ಯದಲ್ಲಿದೆ.
ಹೊಸದಾಗಿ ವಿನ್ಯಾಸಗೊಳಿಸಲಾದ ಹೆಡ್ಲ್ಯಾಂಪ್ ಕ್ಲಸ್ಟರ್ ಸ್ಟೈಲಿಶ್ ಲುಕಿಂಗ್ ಇಂಟಿಗ್ರೇಟೆಡ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಗಳೊಂದಿಗೆ ಬಾನೆಟ್ ರಚನೆಯು ಸಹ ಹೊಚ್ಚ ಹೊಸದು. ಮುಂಬರುವ ಕಾಂಪ್ಯಾಕ್ಟ್ ಎಸ್ಯುವಿಯಲ್ಲಿ ತರ ಪ್ರಮುಖ ಅಂಶಗಳೆಂದರೆ ಹೊಸ ಏರ್ ಇನ್ಲೆಟ್ಗಳು, ಮುಂಭಾಗ ಮತ್ತು ಹಿಂಭಾಗದ ಫಾಕ್ಸ್ ಸ್ಕಿಡ್ ಪ್ಲೇಟ್ಗಳು, ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳು ಮತ್ತು ಸನ್ರೂಫ್ ಹೊಂದಿದೆ.
ಇದರೊಂದಿಗೆ ಪರಿಷ್ಕೃತ ಎಲ್ಇಡಿ ಟೈಲ್ ಲ್ಯಾಂಪ್ಗಳು (ಲ್ಯಾಂಡ್ ರೋವರ್ ಪ್ರೇರಿತ), ಮರುಸ್ಥಾನಗೊಳಿಸಲಾದ ನಂಬರ್ ಪ್ಲೇಟ್ ರಿಸೆಸ್, ಶಾರ್ಕ್ ಫಿನ್ ಆಂಟೆನಾ, ಜೊತೆಗೆ ಬಂಪರ್ ವಿಭಾಗ ವೈಪರ್, ವಾಷರ್, ಬೂಟ್ಲಿಡ್ನಲ್ಲಿ ಬರೆಯಲಾದ BREZZA ಹೆಸರು, ರೂಫ್ ರೈಲ್, ಬೂಟ್-ಇಂಟಿಗ್ರೇಟೆಡ್ ಸ್ಪಾಯ್ಲರ್ ಮತ್ತು ಹೆಚ್ಚಿನ ಮೌಂಟೆಡ್ ಸ್ಟಾಪ್ ಲ್ಯಾಂಪ್ ಅನ್ನು ಒಳಗೊಂಡಿದೆ,
2022ರ ಮಾರುತಿ ಸುಜುಕಿ ವಿಟಾರಾ ಬ್ರೆಝಾದ ಒಳಭಾಗದ ಸ್ವಲ್ಪ ಸುಳಿವು ನೀಡುತ್ತವೆ ಮತ್ತು ಇದು ಸ್ಮಾರ್ಟ್ಪ್ಲೇ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಪ್ಲೇಸ್ಮೆಂಟ್ನಂತಹ ಇಕೋಸ್ಪೋರ್ಟ್ನೊಂದಿಗೆ ನವೀಕರಿಸಿದ ಡ್ಯಾಶ್ಬೋರ್ಡ್ ಅನ್ನು ಹೊಂದಿದೆ ಮತ್ತು ಇದು ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ ಬರುತ್ತದೆ.
ನವೀಕರಿಸಿದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ದೊಡ್ಡ ಮಲ್ಟಿ ಇನ್ಫೋ ಡಿಸ್ ಪ್ಲೇಯನ್ನು ಹೊಂದಿದೆ, ಇನ್ನು ಸಂಟ್ರಲ್ ಕನ್ಸೋಲ್ಗೆ ಹೊಸ ಮೇಲ್ಮೈ ಸಾಮಗ್ರಿಗಳು ಮತ್ತು ಪರಿಷ್ಕರಣೆಗಳ ಬಳಕೆ ಇರುತ್ತದೆ. ಇದರೊಂದಿಗೆ ಒಳಭಾಗದಲ್ಲಿಯು ಇತರ ಫೀಚರ್ಸ್ ಗಳನ್ನು ಕೂಡ ಹೊಂದಿರುತ್ತದೆ.
ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ವಿಟಾರಾ ಬ್ರೆಝಾ ಮಾದರಿಯು ಕೇವಲ 1.3-ಲೀಟರ್ ಡೀಸೆಲ್ ಎಂಜಿನ್ನೊಂದಿಗೆ ಲಭ್ಯವಿತ್ತು. ಇನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆಯುವ ಫೇಸ್ಲಿಫ್ಟ್ ಆವೃತ್ತಿಯು ಫೆಬ್ರವರಿ 2020ರಲ್ಲಿ ಪಚಯಿಸಿದ್ದರು. ಆದರೆ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವಾಗ 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿತ್ತು.
ಡೀಸೆಲ್ ವಾಹನವು ಸ್ಥಗಿತಗೊಂಡ ನಂತರವೂ ಖರೀದಿದಾರರಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 105 ಬಿಹೆಚ್ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದೇ ಎಂಜಿನ್ ಅನ್ನು ಮುಂದುವರೆಸುವ ಸಾಧ್ಯತೆಗಳಿದೆ,
ಇನ್ನು 2022ರ ಸುಜುಕಿ ಎಸ್-ಕ್ರಾಸ್ ಕೂಡ ಮುಂದಿನ 1-2 ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಎಸ್-ಕ್ರಾಸ್ ಕಾರು ಇದೇ ತಿಂಗಳ 25 ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. 2022ರ ಸುಜುಕಿ ಎಸ್-ಕ್ರಾಸ್ ಕಾರಿನ ಸ್ಪೈ ಚಿತ್ರಗಳು ಇಂಟರ್ನೆಟ್ನಲ್ಲಿ ಸೋರಿಕೆಯಾಗಿದೆ. ಈ ಸ್ಪೈ ಚಿತ್ರಗಳು 2022ರ ಸುಜುಕಿ ಎಸ್-ಕ್ರಾಸ್ ಕ್ರಾಸ್ಒವರ್ನ ವಿನ್ಯಾಸವನ್ನು ಸಂಪೂರ್ಣವಾಗಿ ಬಹಿರಂಗಪಡಿಸುತ್ತವೆ. ಇತ್ತೀಚಿನ ಚಿತ್ರಗಳಲ್ಲಿ ಕಾರಿನ ಮುಂಭಾಗ, ಅಡ್ಡ ಮತ್ತು ಹಿಂಭಾಗದ ಪ್ರೊಫೈಲ್ ಮಾಹಿತಿಗಳನ್ನು ಬಹಿರಂಗಪಡಿಸುತ್ತದೆ. ಹೊಸ ಮಾದರಿಯು ಮೊದಲು ಯುರೋಪ್ನಲ್ಲಿ ಮಾರಾಟವಾಗಲಿದೆ, ಏಕೆಂದರೆ ಡೀಲರ್ ಗಳಿಗೆ ರವಾನೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ.
ನ್ಯೂ ಜನರೇಷನ್ ಮಾರುತಿ ವಿಟಾರಾ ಬ್ರೆಝಾ ಎಸ್ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರುಗಳಿಗೆ ಪೈಪೋಟಿ ನೀಡುವುದು ಮುಂದುವರೆಸುತ್ತದೆ.