ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Maruti Suzuki Brezza ಎಸ್‍ಯುವಿ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಭಾರತೀಯ ಮಾರುಕಟ್ಟೆಯಲ್ಲಿ 2016ರ ಆರಂಭದಿಂದಲೂ ವಿಟಾರಾ ಬ್ರೆಝಾವನ್ನು ಮಾರಾಟ ಮಾಡುತ್ತಿದೆ. ಈ ಮಾರುತಿ ಸುಜುಕಿ ವಿಟಾರಾ ಬ್ರೆಝಾ(Maruti Suzuki Brezza) ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮರಾಟವಾಗುವ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Maruti Vitara Brezza ಎಸ್‍ಯುವಿ

2016ರ ಆರಂಭದಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಪ್ರಬಲ್ಯವನ್ನು ಸಾಧಿಸುತಿದ್ದ ಫೋರ್ಡ್ ಇಕೋಸ್ಪೋರ್ಟ್ ಅನ್ನು ಹಿಂದಿಕ್ಕಿ ವಿಟಾರಾ ಬ್ರೆಝಾ ನಿಜವಾಗಿಯೂ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಕಳೆದ ಕೆಲವು ವರ್ಷಗಳಲ್ಲಿ, ವಿಟಾರಾ ಬ್ರೆಝಾ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ, ದೇಶದ ಅತಿದೊಡ್ಡ ಕಾರು ತಯಾರಕರು ಈ ವಿಟಾರಾ ಬ್ರೆಝಾ ಎಸ್‍ಯುವಿಯನ್ನು ನವೀಕರಿಸಲಾಗುತ್ತಿದೆ. ನ್ಯೂ ಜನರೇಷನ್ ಮಾರುತಿ ಬ್ರೆಝಾ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Maruti Vitara Brezza ಎಸ್‍ಯುವಿ

ಮಾರುತಿ ಸುಜುಕಿಯು ಈ ಎಸ್‍ಯುವಿಯ ಹೆಸರಿನಿಂದ 'ವಿಟಾರಾ' ಪದವನ್ನು ಕೈಬಿಡುತ್ತಾರೆ. ಏಕೆಂದರೆ, ಕಾರು ತಯಾರಕ ತನ್ನ ಕ್ರೆಟಾ ಫೈಟರ್‌ಗೆ ಈ ಹೆಸರನ್ನು ಬಳಸಬಹುದು, ಇದು ಈಗಾಗಲೇ ವಿದೇಶದಲ್ಲಿ ವಿಟಾರಾ ಹೆಸರಿನ ದೊಡ್ಡ ಎಸ್‍ಯುವಿಯನ್ನು ಪರಿಚತಿಸುತ್ತದೆ. ಇನ್ನು ಹೊಸ ವರದಿಗಳ ಪ್ರಕಾರ, ಈ ನ್ಯೂ ಜನರೇಷನ್ ಮಾರುತಿ ಬ್ರೆಝಾ ಮುಂದಿನ ವರ್ಷದ ಮಧ್ಯಭಾಗದಲ್ಲಿ ಬಾರತದಲ್ಲಿ ಬಿಡುಗಡೆಯಾಗಲಿದೆ.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Maruti Vitara Brezza ಎಸ್‍ಯುವಿ

ಈ ನ್ಯೂ ಜನರೇಷನ್ ಮಾರುತಿ ಬ್ರೆಝಾ ಎಸ್‍ಯುವಿಯು 1.5-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುವ ಸ್ಟಾರ್ಟ್/ಸ್ಟಾಪ್ SHVS ತಂತ್ರಜ್ಞಾನದ ಜೊತೆಗೆ ಒಳ ಮತ್ತು ಹೊರಭಾಗದಲ್ಲಿ ಪ್ರಮುಖ ಬದಲಾವಣೆಗಳೊಂದಿಗೆ ಬರುತ್ತದೆ. ಮುಂಬರುವ ಹೊಸ ಬ್ರೆಝಾ ಎಸ್‍ಯುವಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Maruti Vitara Brezza ಎಸ್‍ಯುವಿ

ಕೆಲವು ದಿನಗಳ ಹಿಂದೆ, ಎರಡನೇ ತಲೆಮಾರಿನ ಸೆಲೆರಿಯೊವನ್ನು ಬಿಡುಗಡೆ ಮಾಡಲಾಯಿತು ಮತ್ತು ಅದನ್ನು ಫೇಸ್‌ಲಿಫ್ಟೆಡ್ ಬಲೆನೊ ಅನುಸರಿಸುತ್ತದೆ, ಸೋರಿಕೆಯಾದ ಚಿತ್ರಗಳು ನ್ಯೂ ಜನರೇಷನ್ ಮಾರುತಿ ಸುಜುಕಿ ಬ್ರೆಝಾ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್ ಅನ್ನು ಪಡೆದುಕೊಂಡಿದೆ ಎಂದು ಸೂಚಿಸುತ್ತದೆ.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Maruti Vitara Brezza ಎಸ್‍ಯುವಿ

ಇದು ಕ್ರೋಮ್ ಸ್ಟ್ರಿಪ್‌ಗೆ ಬ್ಲ್ಯಾಕ್ ಅಂಶಗಳು ಹೆಚ್ಚು ಪ್ರಮುಖವಾಗಿದೆ ಮತ್ತು ಸುಜುಕಿ ಬ್ಯಾಡ್ಜ್ ಅದರ ಮಧ್ಯದಲ್ಲಿದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್ ಕ್ಲಸ್ಟರ್ ಸ್ಟೈಲಿಶ್ ಲುಕಿಂಗ್ ಇಂಟಿಗ್ರೇಟೆಡ್ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ಬಾನೆಟ್ ರಚನೆಯು ಸಹ ಹೊಚ್ಚ ಹೊಸದು.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Maruti Vitara Brezza ಎಸ್‍ಯುವಿ

ಮುಂಬರುವ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ತರ ಪ್ರಮುಖ ಅಂಶಗಳೆಂದರೆ ಹೊಸ ಏರ್ ಇನ್ಲೆಟ್‌ಗಳು, ಮುಂಭಾಗ ಮತ್ತು ಹಿಂಭಾಗದ ಫಾಕ್ಸ್ ಸ್ಕಿಡ್ ಪ್ಲೇಟ್‌ಗಳು, ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳು ಮತ್ತು ಸನ್‌ರೂಫ್ ಹೊಂದಿದೆ.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Maruti Vitara Brezza ಎಸ್‍ಯುವಿ

ಇದರೊಂದಿಗೆ ಪರಿಷ್ಕೃತ ಎಲ್ಇಡಿ ಟೈಲ್ ಲ್ಯಾಂಪ್‌ಗಳು (ಲ್ಯಾಂಡ್ ರೋವರ್ ಪ್ರೇರಿತ), ಮರುಸ್ಥಾನಗೊಳಿಸಲಾದ ನಂಬರ್ ಪ್ಲೇಟ್ ರಿಸೆಸ್, ಶಾರ್ಕ್ ಫಿನ್ ಆಂಟೆನಾ, ಜೊತೆಗೆ ಬಂಪರ್ ವಿಭಾಗ ವೈಪರ್, ವಾಷರ್, ಬೂಟ್‌ಲಿಡ್‌ನಲ್ಲಿ ಬರೆಯಲಾದ BREZZA ಹೆಸರು, ರೂಫ್ ರೈಲ್, ಬೂಟ್-ಇಂಟಿಗ್ರೇಟೆಡ್ ಸ್ಪಾಯ್ಲರ್ ಮತ್ತು ಹೆಚ್ಚಿನ ಮೌಂಟೆಡ್ ಸ್ಟಾಪ್ ಲ್ಯಾಂಪ್ ಅನ್ನು ಒಳಗೊಂಡಿದೆ,

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Maruti Vitara Brezza ಎಸ್‍ಯುವಿ

ನ್ಯೂ ಜನರೇಷನ್ ಮಾರುತಿ ಸುಜುಕಿ ಬ್ರೆಝಾದ ಒಳಭಾಗದ ಸ್ವಲ್ಪ ಸುಳಿವು ನೀಡುತ್ತವೆ ಮತ್ತು ಇದು ಸ್ಮಾರ್ಟ್‌ಪ್ಲೇ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಪ್ಲೇಸ್‌ಮೆಂಟ್‌ನಂತಹ ಇಕೋಸ್ಪೋರ್ಟ್‌ನೊಂದಿಗೆ ನವೀಕರಿಸಿದ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ ಮತ್ತು ಇದು ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ ಬರುತ್ತದೆ.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Maruti Vitara Brezza ಎಸ್‍ಯುವಿ

ನವೀಕರಿಸಿದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ದೊಡ್ಡ ಮಲ್ಟಿ ಇನ್ಫೋ ಡಿಸ್ ಪ್ಲೇಯನ್ನು ಹೊಂದಿದೆ, ಇನ್ನು ಸಂಟ್ರಲ್ ಕನ್ಸೋಲ್‌ಗೆ ಹೊಸ ಮೇಲ್ಮೈ ಸಾಮಗ್ರಿಗಳು ಮತ್ತು ಪರಿಷ್ಕರಣೆಗಳ ಬಳಕೆ ಇರುತ್ತದೆ. ಇದರೊಂದಿಗೆ ಒಳಭಾಗದಲ್ಲಿಯು ಇತರ ಫೀಚರ್ಸ್ ಗಳನ್ನು ಕೂಡ ಹೊಂದಿರುತ್ತದೆ.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Maruti Vitara Brezza ಎಸ್‍ಯುವಿ

ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ವಿಟಾರಾ ಬ್ರೆಝಾ ಮಾದರಿಯು ಕೇವಲ 1.3-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿತ್ತು. ಇನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆಯುವ ಫೇಸ್‌ಲಿಫ್ಟ್ ಆವೃತ್ತಿಯು ಫೆಬ್ರವರಿ 2020ರಲ್ಲಿ ಪಚಯಿಸಿದ್ದರು. ಆದರೆ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವಾಗ 1.3-ಲೀಟರ್ ಡೀಸೆಲ್ ಎಂಜಿನ್‌ ಅನ್ನು ಸ್ಥಗಿತಗೊಳಿಸಿದರು,

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Maruti Vitara Brezza ಎಸ್‍ಯುವಿ

ಡೀಸೆಲ್ ವಾಹನವು ಸ್ಥಗಿತಗೊಂಡ ನಂತರವೂ ಖರೀದಿದಾರರಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದೇ ಎಂಜಿನ್ ಅನ್ನು ಮುಂದುವರೆಸುವ ಸಾಧ್ಯತೆಗಳಿದೆ.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ Maruti Vitara Brezza ಎಸ್‍ಯುವಿ

ನ್ಯೂ ಜನರೇಷನ್ ಮಾರುತಿ ಬ್ರೆಝಾ ಕಾಂಪ್ಯಾಕ್ಟ್ ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರುಗಳಿಗೆ ಪೈಪೋಟಿ ನೀಡುವುದು ಮುಂದುವರೆಸಲಿದೆ.

Most Read Articles

Kannada
English summary
New gen maruti suzuki brezza suv revealed more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X