ನ್ಯೂ ಜನರೇಷನ್ ವೈಶಿಷ್ಟ್ಯತೆಯ ಸ್ಕೋಡಾ ಆಕ್ಟೀವಿಯಾ ವಿಡಿಯೋ ರಿವ್ಯೂ
ಸ್ಕೋಡಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಮಧ್ಯಮ ಗಾತ್ರದ ಸೆಡಾನ್ ಕಾರು ಮಾದರಿಯಾದ ಆಕ್ಟೀವಿಯಾ ಆವೃತ್ತಿಯನ್ನು ಶೀಘ್ರದಲ್ಲೇ ಹೊಸ ತಲೆಮಾರಿನ ವೈಶಿಷ್ಯತೆಗಳೊಂದಿಗೆ ಬಿಡುಗಡೆ ಮಾಡಲಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಂಪನಿಯು ಹೊಸ ಕಾರಿನ ವಿನ್ಯಾಸ ಮತ್ತು ಪರ್ಫಾಮೆನ್ಸ್ ವೀಕ್ಷಣೆಗಾಗಿ ಡ್ರೈವ್‌ಸ್ಪಾರ್ಕ್ ತಂಡವನ್ನು ಆಹ್ವಾನಿಸಿತ್ತು.
2002ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಗೊಂಡಿದ್ದ ಆಕ್ಟೀವಿಯಾ ತನ್ನ ವಿನೂತನ ವೈಶಿಷ್ಟ್ಯತೆ ಮತ್ತು ಪರ್ಫಾಮೆನ್ಸ್ ಮೂಲಕ ಜನಪ್ರಿಯತೆ ಕಾಯ್ದುಕೊಂಡಿದ್ದು, ಆಕ್ಟೀವಿಯಾದ ಎರಡನೇ ತಲೆಮಾರಿನ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಲಾರಾ ಹೆಸರಿನಲ್ಲಿ ಬಿಡುಗಡೆ ಮಾಡಿದಾಗಲೂ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿತು. ಇದಾದ ನಂತರ ಸ್ಕೋಡಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಭಾರತದಲ್ಲಿ ಹೊಸ ವಿನ್ಯಾಸದೊಂದಿಗೆ ಮೂರನೇ ತಲೆಮಾರಿನ ಆಕ್ಟೀವಿಯಾ ಕಾರ್ ಅನ್ನು ಮರು ಬಿಡುಗಡೆಗೊಳಿಸಿತ್ತು. ಇದೀಗ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ನಾಲ್ಕನೇ ತಲೆಮಾರಿನ ಆಕ್ಟೀವಿಯಾ ಮಾದರಿಯನ್ನು ಬಿಡುಗಡೆಯ ಸಿದ್ದತೆಯಲ್ಲಿದೆ.
ಹೊಸ ಆಕ್ಟೀವಿಯಾ ಕಾರು ಈ ಹಿಂದಿನ ಮಾದರಿಗಿಂತಲೂ ಹೆಚ್ಚು ಸ್ಪೋರ್ಟಿ ಹಾಗೂ ಶಾರ್ಪ್ ಎಡ್ಜ್ ಪಡೆದುಕೊಂಡಿದ್ದು, ಕ್ರಿಸ್ಟಲ್ ಲೈಟಿಂಗ್ ಹೊಂದಿರುವ ಸ್ಲೀಕ್ ಹೆಡ್ ಲ್ಯಾಂಪ್ ಯುನಿಟ್, ಹೈ ಹಾಗೂ ಲೋ ಬೀಮ್'ಗಳಿಗಾಗಿ ಎಲ್ಇಡಿ ಪ್ರೊಜೆಕ್ಟರ್ ಸೆಟಪ್ ಹೊಂದಿದೆ.
2021 ಆಕ್ಟೀವಿಯಾ ಕಾರ್ ಅನ್ನು ಸ್ಟೈಲ್ ಹಾಗೂ ಎಲ್ ಅಂಡ್ ಕೆ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಿದ್ದು, 2.0 ಲೀಟರ್ ಟಿಎಫ್‌ಎಸ್‌ಐ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ.

ಹೊಸ ಕಾರಿನ 2.0-ಲೀಟರ್ ಎಂಜಿನ್ ಮಾದರಿಯು ಏಳು ಸ್ಪೀಡಿನ ಡಿಎಸ್‌ಜಿ ಗೇರ್ ಬಾಕ್ಸ್‌ನೊಂದಿಗೆ 4,180 ಆರ್‌ಪಿಎಂನಲ್ಲಿ 187.4 ಬಿಹೆಚ್‌ಪಿ ಪವರ್ ಹಾಗೂ 1,500 - 3,990 ಆರ್‌ಪಿಎಂನಲ್ಲಿ 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಕಾರಿನಲ್ಲಿ ಶಿಫ್ಟ್-ಬೈ-ವೈರ್ ಟೆಕ್ನಾಲಜಿ ಬಳಕೆ ಮಾಡಲಾಗಿದ್ದು, ಹಲವಾರು ಸೇಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
ಹೊಸ ಸೆಡಾನ್ ಕಾರಿನ ಅಧಿಕೃತ ಬೆಲೆಗಳನ್ನು ಇದೇ ತಿಂಗಳು 10ರಂದು ಬಹಿರಂಗಪಡಿಸುವುದಾಗಿ ಹೇಳಿಕೊಂಡಿರುವ ಸ್ಕೋಡಾ ಇಂಡಿಯಾ ಕಂಪನಿಯು ಶೀಘ್ರದಲ್ಲೇ ಕಾರು ವಿತರಣೆ ಚಾಲನೆ ನೀಡಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 25 ಲಕ್ಷದಿಂದ ರೂ.30 ಲಕ್ಷ ಬೆಲೆ ಪಡೆದುಕೊಳ್ಳಬಹುದೆಂದು ನೀರಿಕ್ಷಿಸಲಾಗಿದೆ.


Click it and Unblock the Notifications








