ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನ ಪೇಟೆಂಟ್ ಚಿತ್ರಗಳು ಬಹಿರಂಗ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕಂಪನಿಯು ತನ್ನ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಈ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ.

ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನ ಪೇಟೆಂಟ್ ಚಿತ್ರಗಳು ಬಹಿರಂಗ

ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ 2014ರಲ್ಲಿ ಬಿಡುಗಡೆಗೊಳಿಸಿದರು. ಆದರೆ ಇತರ ಮಾದರಿಗಳ ಮಾದರಿಯಂತೆ ದೊಡ್ಡ ಯಶ್ವಸಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇದೀಗ ಹೊಸ ವಿನ್ಯಾಸದಲ್ಲಿ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ಮಾರುತಿ ಸುಜುಕಿ ಕಂಪನಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಹಲವು ಬಾರಿ ರೋಡ್ ಟೆಸ್ಟ್ ನಡೆಸಿದೆ.

ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನ ಪೇಟೆಂಟ್ ಚಿತ್ರಗಳು ಬಹಿರಂಗ

ಈ ಎರಡನೇ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಅನ್ನು 2020 ಬಿಡುಗಡೆಗೊಳಿಸಲು ಯೋಜಿಸಲಾಗಿತ್ತು. ಆದರೆ ನಂತರ ಹಲವು ಕಾರಣಗಳಿಂದ ಬಿಡುಗಡೆಯನ್ನು ಮುಂದೂಡಿದ್ದರು. ಬಳಿಕ ಕಂಪನಿಯು 2021ರ ಏಪ್ರಿಲ್-ಮೇ ತಿಂಗಳುಗಳ ಅವಧಿಯ ನಡುವೆ ಬಿಡುಗಡೆಗೊಳಿಸಲು ಯೋಜಿಸಲಾಗಿತ್ತು. ಆದರೆ ಕರೋನಾ ಸೋಂಕಿನ ಆರ್ಭಟ ಹೆಚ್ಚಳದಿಂದಾಗಿ ಮತ್ತೆ ಮುಂದೂಡಿಕೆ ಮಾಡಿದ್ದರು.

ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನ ಪೇಟೆಂಟ್ ಚಿತ್ರಗಳು ಬಹಿರಂಗ

ಇನ್ನು ಮಾರುತಿ ಸುಜುಕಿ ಕಂಪನಿಯು ಈ ಹೊಸ ಸೆಲೆರಿಯೊ ಕಾರಿನ ಬಿಡುಗಡೆಯ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ವರದಿಗಳಾಗಿದೆ.. ಇದೀಗ ಈ ಹೊಸ ಸೆಲೆರಿಯೊ ಕಾರಿನ ಪೇಟೆಂಟ್ ಚಿತ್ರಗಳು ಬಹಿರಂಗವಾಗಿದೆ.

ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನ ಪೇಟೆಂಟ್ ಚಿತ್ರಗಳು ಬಹಿರಂಗ

2021ರ ಸೆಲೆರಿಯೊ ಒಂದು ಪ್ರಮುಖ ಬದಲಾವಣೆಯೆಂದರೆ ಹೊಸ ಹಿಯರ್‌ಟೆಕ್ಟ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಇದನ್ನು ಅಭಿವೃದ್ದಿಪಡಿಸಲಾಗುತ್ತದೆ. ಈ ಮಾರುತಿ ಸೆಲೆರಿಯೊ ಹೊಸದಾಗಿ ವಿನ್ಯಾಸಗೊಳಿಸಿದೆ. ಮುಂಭಾಗದಲ್ಲಿ ಸಣ್ಣ ಗ್ರಿಲ್ ಮತ್ತು ಏರ್ ಡ್ಯಾಮ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು, ಫಾಗ್ ಲ್ಯಾಂಪ್, ಎಲ್ಇಡಿ ಟೈಲ್‌ಲೈಟ್ಸ್ ಒಆರ್‌ವಿಎಂಗಳು, ಇಂಟಿಗ್ರೇಟೆಡ್ ಟರ್ನ್ ಇಂಡಿಕೆಟರ್ಸ್ ಮತ್ತು ಟ್ವೀಕ್ಡ್ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿರುತ್ತದೆ.

ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನ ಪೇಟೆಂಟ್ ಚಿತ್ರಗಳು ಬಹಿರಂಗ

2021ರ ಸೆಲೆರಿಯೊ ಹ್ಯಾಚ್‌ಬ್ಯಾಕ್ ಒಳಭಾಗದಲ್ಲಿ 7.0-ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಈ ಸಿಸ್ಟಂ ಆಪಲ್ ಕಾರ್ ಪ್ಲೇ ಮತ್ತು ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ಅನ್ನು ಒಳಗೊಂಡಿರುತ್ತದೆ.

ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನ ಪೇಟೆಂಟ್ ಚಿತ್ರಗಳು ಬಹಿರಂಗ

ಇನ್ನು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಬದಲಾಯಿಸಲಾಗುವುದಿಲ್ಲ. ಆದರೆ ಡ್ಯಾಶ್‌ಬೋರ್ಡ್, ಸ್ಟೀಯರಿಂಗ್ ವೀಲ್ ಮತ್ತು ಸೆಂಟರ್ ಕನ್ಸೋಲ್ ಅನ್ನು ಪರಿಷ್ಕರಿಸಲಾಗುತ್ತದೆ. 2021ರ ಮಾರುತಿ ಸೆಲೆರಿಯೊ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್ ಮತ್ತು ಇತರ ಪ್ರೀಮಿಯಂ ಫೀಚರ್ ಗಳನ್ನು ಕೂಡ ಒಳಗೊಂಡಿರಬಹುದು.

ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನ ಪೇಟೆಂಟ್ ಚಿತ್ರಗಳು ಬಹಿರಂಗ

2021ರ ಮಾರುತಿ ಸುಜುಕಿ ಸೆಲೆರಿಯೊದಲ್ಲಿ ಎಂಜಿನ್ ಅನ್ನು ಬದಲಾಯಿಸಲಾಗಿದೆ. ಇದರಲ್ಲಿ ಹೊಸ 1.2ಎಲ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು, ಈ ಎಂಜಿನ್ 83 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಜ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನ ಪೇಟೆಂಟ್ ಚಿತ್ರಗಳು ಬಹಿರಂಗ

ಇದರೊಂದಿಗೆ 1.0ಎಲ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಹೊಂದಿರಬಹುದು. ಈ ಎಂಜಿನ್ 68 ಬಿಹೆಚ್‌ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಲ್ಲಾಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ನೀಡಲಾಗುತ್ತದೆ.

ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನ ಪೇಟೆಂಟ್ ಚಿತ್ರಗಳು ಬಹಿರಂಗ

ಈ ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನಲ್ಲಿ ಸುರಕ್ಷತೆಗಾಗಿ, ಸ್ಟ್ಯಾಂಡರ್ಡ್ ಸೀಟ್‌ಬೆಲ್ಟ್ ಅಲರ್ಟ್, ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡೆಲವೆರಿಯೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರಿವರ್ಸ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಅನ್ನು ಕೂಡ ನೀಡಬಹುದು. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಇದು ಕೂಡ ಒಂದಾಗಿದೆ.

Source: Suzuki Garage

Article Published On: Tuesday, June 15, 2021, 11:09 [IST]
English summary
2021 Maruti Celerio Patent Leaks Ahead Of Launch. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+