Just In
Don't Miss!
- News
ಯುದ್ಧ ಸಾಕು, ಶಾಂತಿ ಬೇಕು..! ಉತ್ತರ ಕೊರಿಯಾ ಜೊತೆ ಜಪಾನ್ ಸಂಧಾನ..!
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- Sports
ಸತತ ಮೂರನೇ ಸೋಲಿಗೆ ಬೇಸತ್ತ ಡೇವಿಡ್ ವಾರ್ನರ್ ಹೇಳಿದ್ದೇನು?
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಬಿಡುಗಡೆಯಾಗಲಿದೆ 27.8 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸಿಟಿ ಹೈಬ್ರಿಡ್ ಕಾರು
ಜಪಾನ್ ಮೂಲದ ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬ್ರಿಡ್ ಕಾರನ್ನು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಇದು ಸಿಟಿ ಸೆಡಾನ್‌ನ ಹೈಬ್ರಿಡ್ ಆವೃತ್ತಿಯಾಗಿರಬಹುದು, ಇದು ಈಗಾಗಲೇ ಥೈಲ್ಯಾಂಡ್‌ನಲ್ಲಿ ಮಾರಾಟದಲ್ಲಿದೆ.

ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರು ಭಾರತದಲ್ಲಿ ದೀಪಾವಳಿ ಹಬ್ಬದ ಮೊದಲು ಬಿಡುಗಡೆಯಾಗಲಿದೆ. ಕೆಲವು ವರದಿಗಳ ಪ್ರಕಾರ ಈ ವರ್ಷದ ಮೇ ಅಥವಾ ಜೂನ್ ತಿಂಗಳಲ್ಲಿ ಬಿಡುಗಡೆಯಾಗಬಹುದು. ಹೋಂಡಾ ಸಿಟಿ ಹೈಬ್ರಿಡ್ ಮಾದರಿಯಲ್ಲಿ ಲ್ಟಿ-ಮೋಡ್ ಡ್ರೈವ್ (ಐ-ಎಂಎಂಡಿ) ಪವರ್‌ಟ್ರೇನ್ ಆಗಿದ್ದು ಅದು ಐ-ಡಿಸಿಡಿಯನ್ನು ಬದಲಾಯಿಸಿದೆ. ಇದರೊಂದಿಗೆ 1.5-ಲೀಟರ್ ಅಟ್ಕಿನ್ಸನ್-ಸೈಕಲ್ ಡಿಒಹೆಚ್‌ಸಿ ಐ-ವಿಟಿಇಸಿ ನಾಲ್ಕು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 98 ಬಿಹೆಚ್‍ಪಿ ಮತ್ತು 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಎರಡು ಮೋಟರ್‌ಗಳಿಗೆ ಹೊಂದಿಕೆಯಾಗುತ್ತದೆ. ಇನ್ನು ಎಲೆಕ್ಟ್ರಿಕ್ ಮೋಟರ್ ಅಸಿಸ್ಟ್ ಜನರೇಟರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದು ಸ್ಟಾರ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ದೊಡ್ಡದಾದ ಎರಡನೇ ಮೋಟರ್ 108 ಬಿಹೆಚ್‍ಫಿ ಪವರ್ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೆಚ್ಚಿನ ಕಾರ್ಯಕ್ಷಮತೆಯ ಸ್ಥಿತಿಗತಿಗಳಂತೆ ಎಂಜಿನ್ ಹೆಚ್ಚಿನ ವೇಗದಲ್ಲಿ ನೇರ ಡ್ರೈವ್ ನೀಡಬಲ್ಲದು, ಇದು ಮೋಟಾರ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಇನ್ನು ಈ ಎಲೆಕ್ಟ್ರಿಕ್-ಹೈಬ್ರಿಡ್ ಸೆಟಪ್ ಸಿಟಿ ಕಾರು ಕೇವಲ 9.9 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಹೋಂಡಾ ಸಿಟಿ ಆರ್‌ಎಸ್ ಇ:ಹೆಚ್‌ಇವಿ ಕಾರು 173 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಇನ್ನು ಈ ಹೈಬ್ರಿಡ್ ಕಾರು 27 ಕಿ.ಮೀ.ಗೂ ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಹೋಂಡಾ ಸಿಟಿ ಹೈಬ್ರಿಡ್ ಬೆಸ್ಪೋಕ್ ಸ್ಟೈಲಿಂಗ್ ಪ್ಯಾಕ್ ಅನ್ನು ಒಳಗೊಂಡಿದೆ, ಇದು ಗ್ಲೋಸ್-ಬ್ಲ್ಯಾಕ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಡಿಫ್ಯೂಸರ್ನಲ್ಲಿ ಕಾರ್ಬನ್-ಪ್ಯಾಟರ್ನ್ ಟ್ರಿಮ್, ಹೊಸ ಫಾಗ್ ಲ್ಯಾಂಪ್, ಹೊಸ ಮಿರರ್ ಕವರ್ ಮತ್ತು ಗ್ಲೋಸ್-ಬ್ಲ್ಯಾಕ್ ಫಿನಿಶ್‌ನಲ್ಲಿ ಡಕ್‌ಟೇಲ್ ಸ್ಪಾಯ್ಲರ್ ಅನ್ನು ಒಳಗೊಂಡಿದೆ.

ಸಿಟಿ ಹೈಬ್ರಿಡ್ ಡ್ಯುಯಲ್-ಟೋನ್ 16-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಸ್ಟ್ಯಾಂಡರ್ಡ್ ಆಗಿ ಆಟೋಮ್ಯಾಟಿಕ್ ಎಲ್ಇಡಿ ಹೆಚ್ ಲ್ಯಾಂಪ್ ಗಳು, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್ಇಡಿ ರಿಯರ್ ಲೈಟ್ಸ್, ಪುಶ್ ಸ್ಟಾರ್ಟ್ ನೊಂದಿಗೆ ಕೀಲೆಸ್ ಎಂಟ್ರಿ, ಸಿಂಗಲ್-ಜೋನ್ ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಇದರ ಹಿಂಭಾಗದ ಏರ್-ಕಾನ್ ವೆಂಟ್ಸ್, ಸ್ಟೀಯರಿಂಗ್ ಆಡಿಯೊ ಬಟನ್ ಮತ್ತು 8.0-ಇಂಚಿನ ಟಚ್ಸ್ಕ್ರೀನ್ ಹೆಡ್ ಯುನಿಟ್ ಅನ್ನು ಒಳಗೊಂಡಿದೆ. ಎಂಟು ಸ್ಪೀಕರ್ ಆಡಿಯೊ ಸಿಸ್ಟಂನೊಂದಿಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿದೆ.

ಹೆಚ್ಚುವರಿಯಾಗಿ, ಅಲ್ಟ್ರಾಸ್ಯೂಡ್ ಸೀಟುಗಳು, ಐ-ಎಂಎಂಡಿಗೆ ಡಿಕ್ಲೀರೇಶನ್ ಸೆಲೆಕ್ಟರ್ ಪ್ಯಾಡಲ್, ಲೆದರ್ ಸ್ಟೀರಿಂಗ್ ವ್ಹೀಲ್, ಗೇರ್ ಲಿವರ್ ಕನ್ಸೋಲ್, ಸೆಂಟರ್ ಟನಲ್ ಮತ್ತು ಡ್ಯಾಶ್‌ಬೋರ್ಡ್, ಮತ್ತು ಅಲ್ಯೂಮಿನಿಯಂ ಸ್ಪೋರ್ಟ್ ಪೆಡಲ್‌ಗಳು. ಆರು ಏರ್‌ಬ್ಯಾಗ್‌ಗಳು, ವಿಎಸ್‌ಎ, ಹಿಲ್ ಸ್ಟಾರ್ಟ್ ಅಸಿಸ್ಟ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ.