ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರು

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೈಬ್ರಿಡ್ ಕಾರನ್ನು ಬಿಡುಗಡೆಗೊಳಿಸಲಿದೆ. ಈ ಹೋಂಡಾ ಸಿಟಿ ಹೈಬ್ರಿಡ್ ಕಾರನ್ನು ಮಲೇಷ್ಯಾ ಮಾರುಕಟ್ಟೆಯಲ್ಲಿ ಕಳೆದ ವರ್ಷದ ಅನಾವರಣಗೊಳಿಸಿತು.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರು

ಈ ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಕೊನಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭವಾಗಬಹುದು. ಹೋಂಡಾ ಸಿಟಿ ಹೈಬ್ರಿಡ್ ಮಾದರಿಯಲ್ಲಿ ಲ್ಟಿ-ಮೋಡ್ ಡ್ರೈವ್ (ಐ-ಎಂಎಂಡಿ) ಪವರ್‌ಟ್ರೇನ್ ಆಗಿದ್ದು ಅದು ಐ-ಡಿಸಿಡಿಯನ್ನು ಬದಲಾಯಿಸಿದೆ. ಇದರೊಂದಿಗೆ 1.5-ಲೀಟರ್ ಅಟ್ಕಿನ್ಸನ್-ಸೈಕಲ್ ಡಿಒಹೆಚ್‌ಸಿ ಐ-ವಿಟಿಇಸಿ ನಾಲ್ಕು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರು

ಈ ಎಂಜಿನ್ 98 ಬಿಹೆಚ್‍ಪಿ ಮತ್ತು 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಎರಡು ಮೋಟರ್‌ಗಳಿಗೆ ಹೊಂದಿಕೆಯಾಗುತ್ತದೆ. ಇನ್ನು ಎಲೆಕ್ಟ್ರಿಕ್ ಮೋಟರ್ ಅಸಿಸ್ಟ್ ಜನರೇಟರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದು ಸ್ಟಾರ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರು

ಇನ್ನು ದೊಡ್ಡದಾದ ಎರಡನೇ ಮೋಟರ್ 108 ಬಿಹೆಚ್‍ಫಿ ಪವರ್ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೆಚ್ಚಿನ ಪರ್ಫಾಮೆನ್ಸ್ ಸ್ಥಿತಿಗತಿಗಳಂತೆ ಎಂಜಿನ್ ಹೆಚ್ಚಿನ ವೇಗದಲ್ಲಿ ನೇರ ಡ್ರೈವ್ ನೀಡಬಲ್ಲದು, ಇದು ಮೋಟಾರ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರು

ಇನ್ನು ಈ ಎಲೆಕ್ಟ್ರಿಕ್-ಹೈಬ್ರಿಡ್ ಸೆಟಪ್ ಸಿಟಿ ಕಾರು ಕೇವಲ 9.9 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಹೋಂಡಾ ಸಿಟಿ ಆರ್‌ಎಸ್ ಇ:ಹೆಚ್‌ಇವಿ ಕಾರು 173 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಹೈಬ್ರಿಡ್ ಕಾರು 27 ಕಿ.ಮೀ.ಗೂ ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರು

ಹೋಂಡಾ ಸಿಟಿ ಹೈಬ್ರಿಡ್ ಬೆಸ್ಪೋಕ್ ಸ್ಟೈಲಿಂಗ್ ಪ್ಯಾಕ್ ಅನ್ನು ಒಳಗೊಂಡಿದೆ, ಇದು ಗ್ಲೋಸ್-ಬ್ಲ್ಯಾಕ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಡಿಫ್ಯೂಸರ್ನಲ್ಲಿ ಕಾರ್ಬನ್-ಪ್ಯಾಟರ್ನ್ ಟ್ರಿಮ್, ಹೊಸ ಫಾಗ್ ಲ್ಯಾಂಪ್, ಹೊಸ ಮಿರರ್ ಕವರ್ ಮತ್ತು ಗ್ಲೋಸ್-ಬ್ಲ್ಯಾಕ್ ಫಿನಿಶ್‌ನಲ್ಲಿ ಡಕ್‌ಟೇಲ್ ಸ್ಪಾಯ್ಲರ್ ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರು

ಈ ಸಿಟಿ ಹೈಬ್ರಿಡ್ ಡ್ಯುಯಲ್-ಟೋನ್ 16-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಸ್ಟ್ಯಾಂಡರ್ಡ್ ಆಗಿ ಆಟೋಮ್ಯಾಟಿಕ್ ಎಲ್ಇಡಿ ಹೆಚ್ ಲ್ಯಾಂಪ್ ಗಳು, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್ಇಡಿ ರಿಯರ್ ಲೈಟ್ಸ್, ಪುಶ್ ಸ್ಟಾರ್ಟ್ ನೊಂದಿಗೆ ಕೀಲೆಸ್ ಎಂಟ್ರಿ, ಸಿಂಗಲ್-ಜೋನ್ ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರು

ಇದರ ಹಿಂಭಾಗದ ಏರ್-ಕಾನ್ ವೆಂಟ್ಸ್, ಸ್ಟೀಯರಿಂಗ್ ಆಡಿಯೊ ಬಟನ್ ಮತ್ತು 8.0-ಇಂಚಿನ ಟಚ್ಸ್ಕ್ರೀನ್ ಹೆಡ್ ಯುನಿಟ್ ಅನ್ನು ಕೂಡ ಒಳಗೊಂಡಿದೆ. ಇದರೊಂದಿಗೆ ಎಂಟು ಸ್ಪೀಕರ್ ಆಡಿಯೊ ಸಿಸ್ಟಂನೊಂದಿಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಕೂಡ ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರು

ಇದರಲ್ಲಿ ಹೆಚ್ಚುವರಿಯಾಗಿ, ಅಲ್ಟ್ರಾಸ್ಯೂಡ್ ಸೀಟುಗಳು, ಐ-ಎಂಎಂಡಿಗೆ ಡಿಕ್ಲೀರೇಶನ್ ಸೆಲೆಕ್ಟರ್ ಪ್ಯಾಡಲ್, ಲೆದರ್ ಸ್ಟೀರಿಂಗ್ ವ್ಹೀಲ್, ಗೇರ್ ಲಿವರ್ ಕನ್ಸೋಲ್, ಸೆಂಟರ್ ಟನಲ್ ಮತ್ತು ಡ್ಯಾಶ್‌ಬೋರ್ಡ್, ಮತ್ತು ಅಲ್ಯೂಮಿನಿಯಂ ಸ್ಪೋರ್ಟ್ ಪೆಡಲ್‌ಗಳು. ಆರು ಏರ್‌ಬ್ಯಾಗ್‌ಗಳು, ವಿಎಸ್‌ಎ, ಹಿಲ್ ಸ್ಟಾರ್ಟ್ ಅಸಿಸ್ಟ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಮತ್ತು ಇತರ ಫೀಚರ್ ಗಳನ್ನು ಕೂಡ ಹೊಂದಿದೆ.

Article Published On: Monday, July 26, 2021, 21:43 [IST]
English summary
Honda City Hybrid To Likely Launch In India This Year. Read In Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+