ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಮಾಹಿತಿ ಬಹಿರಂಗ

ಹೋಂಡಾ ಕಂಪನಿಯು ತನ್ನ ಹೊಸ ತಲೆಮಾರಿನ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯನ್ನು ಶೀಘ್ರದಲ್ಲೇ ಜಾಗತಿಕವಾಗಿ ಅನಾವರಣಗೊಳಿಸಲಿದೆ. ಇನ್ನು ಹೋಂಡಾ ತನ್ನ ಈ ಹೊಸ ಹೆಚ್‌ಆರ್-ವಿ ಎಸ್‍ಯುವಿಯನ್ನು ವೆಜೆಲ್ ಎಂಬ ಹೆಸರಿನಲ್ಲಿ ಜಪಾನ್ ನಲ್ಲಿ ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಳಿಸಬಹುದು.

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಮಾಹಿತಿ ಬಹಿರಂಗ

ಹೋಂಡಾ ಕಂಪನಿಯು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್‌ಆರ್-ವಿ ಎಸ್‍ಯುವಿಯನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯ ಸ್ಪೆಕ್ಸ್, ಮೈಲೇಜ್ ಮತ್ತು ರೂಪಾಂತರಗಳ ಬಗ್ಗೆ ಪ್ರಮುಖ ಮಾಹಿತಿ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ. ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯಯು ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಬರಲಿದೆ ಎಂದು ಹೋಂಡಾ ಖಚಿತಪಡಿಸಿದೆ. ಟೀಸರ್ ಟೈಲ್‌ಗೇಟ್‌ನಲ್ಲಿ ಇ: ಹೆಚ್‌ಇವಿ ಬ್ಯಾಡ್ಜ್ ಅನ್ನು ಸಹ ತೋರಿಸುತ್ತದೆ.

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಮಾಹಿತಿ ಬಹಿರಂಗ

ಈ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯಯು ಪೆಟ್ರೋಲ್-ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಬರಲಿದ್ದು, ಇದನ್ನು ಅಂತರರಾಷ್ಟ್ರೀಯ-ಸ್ಪೆಕ್ ಫಿಟ್/ಜಾಝ್ ಮಾದರಿಯಿಂದ ಎರವಲು ಪಡೆಯಲಾಗುವುದು. ಇದೇ ಎಂಜಿನ್ ಭಾರತದಲ್ಲಿ ಮುಂಬರುವ ಹೊಸ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿಗೆ ನೀಡಬಹುದು.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಮಾಹಿತಿ ಬಹಿರಂಗ

ಯುರೋಪಿನ ಮಾರುಕಟ್ಟೆಗಳಲ್ಲಿ ಹೋಂಡಾ ಕಂಪನಿಯು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಪರಿಚಯಿಸುತ್ತದೆ. ಹೊಸ ಹೆಚ್‌ಆರ್-ವಿ ಹೈಬ್ರಿಡ್ ಮಾದರಿಯು ಹೋಂಡಾ ಇ ಬ್ರ್ಯಾಂಡ್‌ನ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ ಆಗಲಿದೆ.

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಮಾಹಿತಿ ಬಹಿರಂಗ

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯಲ್ಲಿ ಇ:ಹೆಚ್‌ಇವಿ ಯುನಿಟ್ 1.5-ಲೀಟರ್ (ಇಂಟೆಲಿಜೆಂಟ್-ಮಲ್ಟಿ ಮೋಡ್ ಡ್ರೈವ್) ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತದೆ. ಜೊತೆಗೆ ಕಾಂಪ್ಯಾಕ್ಟ್, ಪವರ್ ಫುಲ್ ಎರಡು ಎಲೆಕ್ಟ್ರಿಕ್ ಮೋಟರ್‌ಗಳು ಮತ್ತು ಲಿಥಿಯಂ-ಐಯಾನ್ ಬ್ಯಾಟರಿಯನ್ನು ಒಳಗೊಂಡಿರುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಮಾಹಿತಿ ಬಹಿರಂಗ

ಈ ಹೈಬ್ರಿಡ್ ಸಿಸ್ಟಂ ಒಟ್ಟು 109 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯು ಕೇವಲ 9.5 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಮಾಹಿತಿ ಬಹಿರಂಗ

ಹೋಂಡಾ ಸಿಟಿ ಹೈಬ್ರಿಡ್ 27.8 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ. ಸೋರಿಕೆಯಾದ ಮಾಹಿತಿಯ ಪ್ರಕಾರ,ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯು 24.39 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಮಾಹಿತಿ ಬಹಿರಂಗ

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯಲ್ಲಿ ಎಲೆಕ್ಟ್ರಿಕ್ ಡ್ರೈವ್, ಹೈಬ್ರಿಡ್ ಡ್ರೈವ್ ಮತ್ತು ಎಂಜಿನ್ ಡ್ರೈವ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ನೀಡುತ್ತದೆ. ಈ ಎಸ್‍ಯುವಿಯು ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಮಾಹಿತಿ ಬಹಿರಂಗ

ಇನ್ನು ಈ ಹೊಸ ಹೆಚ್‌ಆರ್-ವಿ ಹೈಬ್ರಿಡ್ ಎಸ್‍ಯುವಿ ಪ್ರೀಮಿಯಂ ಸನ್ಲೈಟ್ ವೈಟ್, ಪ್ರೀಮಿಯಂ ಕ್ರಿಸ್ಟಲ್ ರೆಡ್, ಪ್ಲಾಟಿನಂ ವೈಟ್ ಪರ್ಲ್, ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್, ಮೆಟರಾಯ್ಡ್ ಗ್ರೇ ಮತ್ತು ಸ್ಯಾಂಡ್ ಖಾಕಿ ಪರ್ಲ್ ಎಂಬ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದರೊಂದಿಗೆ ವೈಟ್ ಅಂಡ್ ಬ್ಲ್ಯಾಕ್ ರೂಫ್, ಮಿಡ್ನೈಟ್ ಬ್ಲೂ ಜೊತೆ ಸಿಲ್ವರ್ ರೂಫ್, ಬ್ಲ್ಯಾಕ್ ಜೊತೆ ಸಿಲ್ವರ್ ರೂಫ್, ಗ್ರೇ ಜೊತೆ ಬ್ಲ್ಯಾಕ್ ರೂಫ್ ಮತ್ತು ಬ್ಲ್ಯಾಕ್ ರೂಫ್ ಜೊತೆ ಖಾಕಿ ಪರ್ಲ್ ಎಂಬ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿಯು ಲಭ್ಯವಿರಲಿದೆ.

Most Read Articles

Kannada
Read more on ಹೋಂಡಾ honda
English summary
2021 Honda HR-V Important Information Leaked. Read In Kannada.
Story first published: Monday, January 25, 2021, 16:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X