ಹೊಸ ಎನ್7ಎಕ್ಸ್ ಕಾನ್ಸೆಪ್ಟ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಹೋಂಡಾ
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಹೋಂಡಾ ಇಂಡೋನೇಷ್ಯಾದಲ್ಲಿ ಹೊಸ ಎನ್7ಎಕ್ಸ್ ಕಾನ್ಸೆಪ್ಟ್ ಎಸ್‍ಯುವಿಯವಿಯನ್ನು ಅನಾವರಣಗೊಳಿಸಿದೆ. ಹೊಸ ಎನ್7ಎಕ್ಸ್ ಕಾನ್ಸೆಪ್ಟ್ ಎಸ್‍ಯುವಿಯನ್ನು ಬಿಆರ್-ವಿ ಮಾದರಿಯ ಬದಲಿಯಾಗಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ಹೊಸ ಹೋಂಡಾ ಎನ್7ಎಕ್ಸ್ ಮಾದರಿಯು 7-ಸೀಟರ್ ಎಸ್‍ಯುವಿಯಾಗಿದೆ. ಈ ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಟೊಯೊಟಾ ರಶ್ ಮತ್ತು ಮಿತ್ಸುಬಿಷಿ ಎಕ್ಸ್‌ಪಾಂಡರ್ ಕ್ರಾಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಎನ್7ಎಕ್ಸ್ ಕಾನ್ಸೆಪ್ಟ್ ಮಾದರಿಯು ಪರಿಚಿತ ಹೋಂಡಾ ವಿನ್ಯಾಸದೊಂದಿಗೆ ಬರುತ್ತದೆ, ಇದೇ ರೀತಿಯ ವಿನ್ಯಾಸವನ್ನು ಹೊಸ ಸಿಟಿ, ಹೊಸ ಹೆಚ್ಆರ್-ವಿ ಮತ್ತು ದೊಡ್ಡ ಸಿಆರ್-ವಿ ಎಸ್‌ಯುವಿ ಸೇರಿದಂತೆ ಇತ್ತೀಚಿನ ಹೋಂಡಾ ಕಾರುಗಳಲ್ಲಿ ನಾವು ಈಗಾಗಲೇ ನೋಡಿದ್ದೇವೆ.

ಹೊಸ ಹೋಂಡಾ ಎನ್7ಎಕ್ಸ್ ಕಾನ್ಸೆಪ್ಟ್ ಮುಂಭಾಗ ಕ್ಲಾಮ್‌ಶೆಲ್ ಬಾನೆಟ್ ಹೊಂದಿದೆ. ಇದು ಇದು ಮಲ್ಟಿ-ಸ್ಲ್ಯಾಟ್ ಕ್ರೋಮ್ ಲಾಡೆನ್ ಗ್ರಿಲ್ ಮತ್ತು ಸ್ಲಿಮ್ ಆಗಿರುವ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಹೆಡ್‌ಲ್ಯಾಂಪ್ ವಿನ್ಯಾಸವು ಹೊಸ ಸಿಟಿ ಸೆಡಾನ್‌ನಿಂದ ಸ್ಫೂರ್ತಿ ಪಡೆದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಗ್ರಿಲ್ ಮಧ್ಯದಲ್ಲಿ ದೊಡ್ಡ ಪ್ರಮುಖ ಹೋಂಡಾ ಬ್ಯಾಡ್ಜ್ ಅನ್ನು ಇರಿಸಲಾಗಿದೆ. ಡ್ಯುಯಲ್-ಎಲ್ಇಡಿ ಡಿಆರ್ಎಲ್ ಸೆಟಪ್ ಇದೆ, ಒಂದು ಎಲ್ಇಡಿ ಡಿಆರ್ಎಲ್ ಅನ್ನು ಹೆಡ್ ಲ್ಯಾಂಪ್ ಮೇಲೆ ಮತ್ತು ಇನ್ನೊಂದನ್ನು ಬಂಪರ್ ಮೇಲೆ ಇರಿಸಲಾಗಿದೆ. ಕೆಳಗಿನ ಬಂಪರ್ ವಿಶಾಲವಾದ ವೈಡ್ ಏರ್ ಡ್ಯಾಮ್ ಅನ್ನು ಹೊಂದಿದೆ.

ಹೊಸ ಹೋಂಡಾ ಎನ್7ಎಕ್ಸ್ ಕಾನ್ಸೆಪ್ಟ್‌ನ ಸೈಡ್ ಪ್ರೊಫೈಲ್ ನಲ್ಲಿ ಬೆಟ್ ಲೈನ್ ಬೆಲ್ಟ್‌ಲೈನ್ ಅನ್ನು ಒಳಗೊಂಡಿದೆ. ಡ್‌ಲ್ಯಾಂಪ್‌ನಿಂದ ಪ್ರಾರಂಭಿಸಿ ಟೈಲ್‌ಲ್ಯಾಂಪ್‌ಗಳಲ್ಲಿ ವಿಲೀನಗೊಳ್ಳುವ ಉದ್ದಕ್ಕೂಬೆಲ್ಟ್‌ಲೈನ್ ಇದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಈ ಎಸ್‍ಯುವಿಯಲ್ಲಿ ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲಾಡಿಂಗ್‌ನೊಂದಿಗೆ ರೌಂಡ್ ವ್ಹೀಲ್ ಅರ್ಚಾರ್ ಅನ್ನು ಪಡೆಯುತ್ತದೆ. ಈ ಎಸ್‍ಯುವಿ ಸಿಟಿ ಸೆಡಾನ್‌ನಲ್ಲಿ ನೀಡಲಾಗುವಂತೆಯೇ ಸಿಗ್ನೇಚರ್ ಎಲ್‌ಇಡಿ ಅಂಶಗಳೊಂದಿಗಿನ ಟೈಲ್ ಲ್ಯಾಂಪ್ ಅನ್ನು ಪಡೆಯುತ್ತದೆ.

ಹೊಸ ಹೋಂಡಾ ಎನ್7ಎಕ್ಸ್ ಕಾನ್ಸೆಪ್ಟ್ ಎಸ್‍ಯುವಿಯ ಇಂಟಿರಿಯರ್ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ, ಆದರೆ ಇದು ಕ್ಯಾಬಿನ್ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಸ ಸಿಟಿ ಕಾರಿನೊಂದಿಗೆ ಹಂಚಿಕೊಳ್ಳುವ ನಿರೀಕ್ಷೆಯಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇಂಡೋನೇಷ್ಯಾ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಗ್ರಾಹಕರನ್ನು ಗಣನೆಗೆ ತೆಗೆದುಕೊಂಡು ಅವರ ಅಭಿರುಚಿಗೆ ತಕ್ಕಂತೆ ಎನ್7ಎಕ್ಸ್ ಕಾನ್ಸೆಪ್ಟ್ ಎಸ್‍ಯುವಿಯ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ ಎಂದು ಹೋಂಡಾ ಹೇಳಿಕೊಂಡಿದೆ.

ಇನ್ನು ಈ ಹೊಸ ಹೋಂಡಾ ಎನ್7ಎಕ್ಸ್ ಕಾನ್ಸೆಪ್ಟ್ ಎಸ್‍ಯುವಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 121 ಬಿಹೆಚ್‌ಪಿ ಮತ್ತು 145 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗುತ್ತದೆ.

ಇದರೊಂದಿಗೆ ಈ ಎಸ್‍ಯುವಿಯಲ್ಲಿ ಹೊಸ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಕೂಡ ಸೇರಿಸಬಹುದು, ಈ ಎಂಜಿನ್ 121 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.


Click it and Unblock the Notifications