ಶೀಘ್ರದಲ್ಲೇ ಪ್ರಾರಂಭವಾಗಲಿದೆ ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯ ಉತ್ಪಾದನೆ

ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ಜಾಗತಿಕವಾಗಿ ಹೊಸ ಮೈಕ್ರೊ ಎಸ್‌ಯುವಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಹಿಂದಿದೆ ಮೈಕ್ರೊ ಎಸ್‍ಯುವಿಗೆ ಎಎಕ್ಸ್1 ಎಂಬ ಕೋಡ್ ನೇಮ್ ಅನ್ನು ನೀಡಿದ್ದರು, ಈ ಮೈಕ್ರೊ ಎಸ್‍ಯುವಿಯು ಕ್ಯಾಸ್ಪರ್ ಎಂಬ ಹೆಸರನ್ನು ನೀಡಲಾಗಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯ ಉತ್ಪಾದನೆ

ಹ್ಯುಂಡೈ ಕಂಪನಿಯು ಈ ಹೊಸ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯ ಉತ್ಪಾದನೆಯನ್ನು ಸೆಪ್ಟೆಂಬರ್ 15 ರಂದು ಪ್ರಾರಂಭಿಸಲಿದೆ. ಈ ಹೊಸ ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯು ಈ ವರ್ಷದ ಕೊನೆಯಲ್ಲಿ ಕೊರಿಯಾದಲ್ಲಿ ಬಿಡುಗಡೆಯಾಗಲಿದೆ. ಇನ್ನು ಭಾರತದಲ್ಲಿ ಈ ಮೈಕ್ರೊ ಎಸ್‍ಯುವಿಯು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಹ್ಯುಂಡೈ ಕೊರಿಯಾದಲ್ಲಿ ಕ್ಯಾಸ್ಪರ್ ನೇಮ್‌ಪ್ಲೇಟ್ ಅನ್ನು ಟ್ರೇಡ್‌ಮಾರ್ಕ್ ಆಗಿ ನೋಂದಾಯಿಸಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯ ಉತ್ಪಾದನೆ

ಹ್ಯುಂಡೈ ಕ್ಯಾಸ್ಪರ್ ಭಾರತದಲ್ಲಿ ಮತ್ತು ಇತರ ಮಾರುಕಟ್ಟೆಗಳಲ್ಲಿ ವಿಭಿನ್ನ ಹೆಸರಿನೊಂದಿಗೆ ಬರಬಹುದು. ಇದು ಹ್ಯುಂಡೈಯ ಚಿಕ್ಕ ಎಸ್‍ಯುವಿಯಾಗಿದ್ದು, ಸಬ್-ಮೀಟರ್ ಎಸ್‍ಯುವಿಗಿಂತ ಕೆಳಗಿರುತ್ತದೆ. ಕ್ಯಾಸ್ಪರ್ ಹ್ಯುಂಡೈನ ಕೆ1 ಕಾಂಪ್ಯಾಕ್ಟ್ ಕಾರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಪ್ರಸ್ತುತ ಗ್ರ್ಯಾಂಡ್ ಐ10 ನಿಯೋಸ್ ಮತ್ತು ಸ್ಯಾಂಟ್ರೊಗೆ ಆಧಾರವಾಗಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯ ಉತ್ಪಾದನೆ

ಇನ್ನು ಈ ಹ್ಯುಂಡೈ ಕ್ಯಾಸ್ಪರ್ 3,595 ಎಂಎಂ ಉದ್ದ, 1,595 ಎಂಎಂ ಅಗಲ ಮತ್ತು 1,575 ಎಂಎಂ ಎತ್ತರವನ್ನು ಹೊಂದಿರಲಿದೆ ಎಂದು ವರದಿಗಳಾಗಿದೆ. ಇದು ಸ್ಯಾಂಟ್ರೊ ಹ್ಯಾಚ್‌ಬ್ಯಾಕ್‌ಗಿಂತ ಚಿಕ್ಕದಾಗಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯ ಉತ್ಪಾದನೆ

ಕ್ಯಾಸ್ಪರ್ ಮಾದರಿಯು ಮಾರುತಿ ಸುಜುಕಿ ಇಗ್ನಿಸ್, ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಟಾಟಾ ಎಚ್‌ಬಿಎಕ್ಸ್ ಕಾನ್ಸೆಪ್ಟ್ ಆಧಾರಿತ ಮೈಕ್ರೊ ಎಸ್‌ಯುವಿಗಿಂತ ಚಿಕ್ಕದಾಗಿರುತ್ತದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯ ಉತ್ಪಾದನೆ

ಹೊಸ ಹ್ಯುಂಡೈ ಎಎಕ್ಸ್ 1 ಮಿನಿ ಎಸ್‌ಯುವಿ ಜಿಜಿಎಂ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು.ಕಾರಿನ ಪ್ರಾಯೋಗಿಕ ಉತ್ಪಾದನೆಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಸಾಮೂಹಿಕ ಉತ್ಪಾದನೆಯು ಸೆಪ್ಟೆಂಬರ್ 15 ರಿಂದ ಪ್ರಾರಂಭವಾಗಲಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯ ಉತ್ಪಾದನೆ

ಹ್ಯುಂಡೈ ಆರಂಭದಲ್ಲಿ ಮೈಕ್ರೊ ಎಸ್‌ಯುವಿಯ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸಲಿದ್ದು, ಅದರ ನಂತರ 2023 ರಲ್ಲಿ ಎಲೆಕ್ಟ್ರಿಕ್ ಮಾದರಿಯಾಗಿ ಪರಿಚಯಿಸಲಿದೆ. ಈ ಮೈಕ್ರೊ ಎಸ್‍ಯುವಿಯು ಬೋರ್ಗ್‌ವರ್ನರ್ ಇಂಟಿಗ್ರೇಟೆಡ್ ಡ್ರೈವ್ ಮಾಡ್ಯೂಲ್ (ಐಡಿಎಂ) ಅನ್ನು ಪಡೆಯುತ್ತದೆ,

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯ ಉತ್ಪಾದನೆ

ಇದು ಮಾಡ್ಯುಲರ್ ಘಟಕದಲ್ಲಿ ಎಲೆಕ್ಟ್ರಿಕ್ ಮೋಟರ್, ಗೇರ್‌ಬಾಕ್ಸ್ ಮತ್ತು ಪವರ್ ಎಲೆಕ್ಟ್ರಾನಿಕ್ ಅನ್ನು ಒಳಗೊಂಡಿರುತ್ತದೆ. ಹೊಸ ಹ್ಯುಂಡೈ ಕ್ಯಾಸ್ಪರ್ ಮಾದರಿಯಲ್ಲಿ ಗ್ರ್ಯಾಂಡ್ ಐ10 ನಿಯೋಸ್ ಕಾರಿನಲ್ಲಿರುವ ಅದೇ 1.2-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುವ ಸಾಧ್ಯತೆಯಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯ ಉತ್ಪಾದನೆ

ಈ ಎಂಜಿನ್ 83 ಬಿಹೆಚ್‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮೈಕ್ರೊ ಎಸ್‍ಯುವಿಯ ಲೊ ವೆರಿಯೆಂಟ್ ಗಳು 1.1-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಬಹುದು. ಈ ಎಂಜಿನ್ ಗಳೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗುತ್ತದೆ.

Article Published On: Wednesday, July 28, 2021, 12:34 [IST]
English summary
Hyundai Casper Micro SUV Production To Begin On September 15. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+