Just In
- 1 hr ago Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- 14 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 15 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 16 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
Don't Miss!
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- News ಲೋಕಸಭಾ ಚುನಾವಣೆ: ಮತದಾನದ ದಿನ Rapidoದಿಂದ ಉಚಿತ ಸೇವೆ, ಯಾರಿಗೆ ಲಭ್ಯ..?
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ಬಹುನಿರೀಕ್ಷಿತ ಹ್ಯುಂಡೈ ಐ20 ಎನ್ ಲೈನ್ ಕಾರು
ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿರುವ ಹ್ಯುಂಡೈ ತನ್ನ ಎನ್ ಪರ್ಫಾರ್ಮೆನ್ಸ್ ಸರಣಿಯ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿವೆ. ಮೊದಲಿಗೆ ಹ್ಯುಂಡೈ ಕಂಪನಿಯ ಎನ್ ಸರಣಿಯ ಜನಪ್ರಿಯ ಐ20 ಎನ್ ಲೈನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.
ಹ್ಯುಂಡೈ ಎನ್ ಸರಣಿಯ ಪರ್ಫಾಮೆನ್ಸ್ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಗಳನ್ನು ಗಳಿಸಿದೆ. ಬಿಎಂಡಬ್ಲ್ಯು ಎಂ, ಸ್ಕೋಡಾದ ಆರ್ಎಸ್ ಮಾದರಿಗಳ ಹಾಗೇ ಹ್ಯುಂಡೈ ಕಂಪನಿಯ ಎನ್ ಸರಣಿಯ ಕಾರುಗಳು ಪರ್ಫಾಮೆನ್ಸ್ ಮಾದರಿಗಳಾಗಿವೆ. ಹ್ಯುಂಡೈ ಕಂಪನಿಯು ಎನ್ ಸರಣಿಯ ಪರ್ಫಾಮೆನ್ಸ್ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ.
ಈ ವರ್ಷದಲ್ಲೇ ಹ್ಯುಂಡೈ ಎನ್ ಪರ್ಫಾಮೆನ್ಸ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. ಹ್ಯುಂಡೈ ಪರ್ಫಾಮೆನ್ಸ್ ಸರಣಿಯು ಎನ್ ಮತ್ತು ಎನ್ ಲೈನ್ ಕಾರುಗಳನ್ನು ಒಳಗೊಂಡಿದೆ. ಈ ಪರ್ಫಾಮೆನ್ಸ್ ಕಾರುಗಳು ಸ್ಟ್ಯಾಂಡರ್ಡ್ ಮಾದರಿಗಳಿಗಿಂತ ಹೆಚ್ಚು ಪವರ್ ಫುಲ್ ಎಂಜಿನ್ಗಳನ್ನು ಒಳಗೊಂಡಿರುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್
ಇನ್ನು ಹ್ಯುಂಡೈ ಎನ್ ಲೈನ್ ಕಾರುಗಳು ದೇಶಿಯ ಮಾರುಕಟ್ಟೆಯ ಪರ್ಫಾಮೆನ್ಸ್ ಕಾರು ಪ್ರಿಯರು ಬಹುನಿರೀಕ್ಷೆಯನ್ನು ಹುಟ್ಟು ಹಾಕಿದೆ. ಯಾಕೆಂದರೆ ಭಾರತದಲ್ಲಿ ಪರ್ಫಾಮೆನ್ಸ್ ಕಾರುಗಳು ಸಂಖ್ಯೆಯು ವಿರಳವಾಗಿದೆ.
ಹ್ಯುಂಡೈ ಕಂಪನಿಯು ಭಾರತದಲ್ಲಿ ಎನ್ ಸರಣಿಯ ಐ20 ಎನ್ ಲೈನ್ ಮಾದರಿಯನ್ನು ಮೊದಲು ಬಿಡುಗಡೆಗೊಳಿಸಲಿದೆ. ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಇತ್ತೀಚೆಗೆ ಸ್ಪೋರ್ಟಿಯರ್ ಐ20 ಎನ್ ಲೈನ್ ಹ್ಯಾಚ್ಬ್ಯಾಕ್ ಮತ್ತೊಮ್ಮೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು
ಐ20 ಎನ್ ಲೈನ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಚಿತ್ರಗಳು ಬಹಿರಂಗವಾಗಿದೆ. ಈಗಗಾಲೇ ಯುರೋಪ್ ಮಾರುಕಟ್ಟೆಯಲ್ಲಿ ಐ20 ಎನ್ ಲೈನ್ ಅನ್ನು ಪರಿಚಯಿಸಲಾಗಿದೆ. ಅದೇ ಮಾದರಿಯಲ್ಲಿ ಸಣ್ಣ ನವೀಕರಣದೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.
ಜಾಗತಿಕ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಐ20 ಎನ್ ಲೈನ್ ಕಾರು 1.6 ಎಲ್, 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 204 ಬಿಹೆಚ್ಪಿ ಪವರ್ ಮತ್ತು 275 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
ಇನ್ನು ಈ ಪರ್ಫಾಮೆನ್ಸ್ ಕಾರಿನಲ್ಲಿ ಇಂಟರ್ಕೂಲರ್, ಹ್ಯುಂಡೈನ ಹೊಸ ಸಿವಿವಿಡಿ (ನಿರಂತರವಾಗಿ ವೇರಿಯಬಲ್ ವಾಲ್ವ್ ಅವಧಿ) ತಂತ್ರಜ್ಞಾನ ಮತ್ತು 350 ಬಾರ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂನೊಂದಿಗೆ ಮೋಟರ್ ಅನ್ನು ಹೆಚ್ಚಿಸಲಾಗಿದೆ. ಸಿವಿವಿಡಿ ತಂತ್ರಜ್ಞಾನವು ಎಂಜಿನ್ನ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತಿದೆ.
ಸಾಮಾನ್ಯ ಐ20 ಮಾದರಿಯಂತೆ 'ಎನ್ ಲೈನ್' ರೂಪಾಂತರವು 10.25-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿರುತ್ತದೆ. ಇನ್ನು ಇದರಲ್ಲಿ 10.25-ಇಂಚಿನ ಟಿಎಫ್ಟಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ.
ಇನ್ನು ಡ್ರೈವರ್ ಅಸಿಸ್ಟ್ ಫೀಚರ್ ಗಳೊಂದಿಗೆ ಬ್ಲೂಲಿಂಕ್ ಕನೆಕ್ಟಿವಿಟಿ ಕಾರ್ ಸೂಟ್ ಸಹ ನೀಡುತ್ತದೆ. ಇನ್ನು ಐ20 ಎನ್ ಲೈನ್ ಕಾರಿನಲ್ಲಿ ಟ್ವೀಕ್ಡ್ ಸ್ಟೀಯರಿಂಗ್ ಮತ್ತು ಎಕ್ಸಾಸ್ಟ್ ಸಿಸ್ಟಂ ಜೊತೆಗೆ ಗಟ್ಟಿಯಾದ ಸಸ್ಪೆಂಕ್ಷನ್ ಸೆಟಪ್ ಅನ್ನು ಕೂಡ ಪಡೆಯುತ್ತದೆ. ಇನ್ನು ಈ ಪರ್ಫಾಮೆನ್ಸ್ ಕಾರು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.
Image Courtesy: Bunny Punia