ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ

ಮಹೀಂದ್ರಾ ಕಂಪನಿಯ ಥಾರ್ ಎಸ್‍ಯುವಿಯು ಬಿಡುಗಡೆಗೊಂಡ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಥಾರ್ ಯಶಸ್ಸಿನ ಬಳಿಕ ಮಹೀಂದ್ರಾ ನವೀಕರಿಸಿದ ಹೊಸ ಎಕ್ಸ್‌ಯುವಿ500 ಮತ್ತು ಸ್ಕಾರ್ಪಿಯೋ ಎಸ್‍ಯುವಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ

ಇದರ ನಡುವೆ ಮಹೀಂದ್ರಾ ತನ್ನ ಟಿಯುವಿ300 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಕೂಡ ಬಿಡುಗಡೆಗೊಳಿಸಿದೆ. ಆದರೆ ಇದಲ್ಲಿ 'ಬೊಲೆರೊ ನಿಯೋ' ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದು ಎನ್ನಲಾಗುತ್ತಿದೆ. ಮಹೀಂದ್ರಾ ಕಂಪನಿಯು ಸರಣಿಯಲ್ಲಿ ಬೊಲೆರೊ ಜನಪ್ರಿಯ ಮಾದರಿಯಾಗಿದೆ. ಅತಿ ಹೆಚ್ಚು ಮಾರಾಟವಾಗುವ ಯುಟಿಲಿಟಿ ವಾಹನಗಳ ಪಟ್ಟಿಯಲ್ಲಿ ಬೊಲೆರೊ ಅಗ್ರಸ್ಥಾನದಲ್ಲಿದೆ. ಇದೇ ಕಾರಣಕ್ಕೆ ಟಿಯುವಿ300 ಫೇಸ್‌ಲಿಫ್ಟ್ ಎಸ್‍ಯುವಿಗೆ ಬೊಲೆರೊ ನಿಯೋ ಎಂಬ ಹೆಸರನ್ನು ನೀಡರಬಹುದು.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ

ವಿನ್ಯಾಸದ ವಿಷಯದಲ್ಲಿ, ಮುಂಬರುವ ಬೊಲೆರೊ ನಿಯೋ ಹಿಂದಿನ ಟಿಯುವಿ300 ಮಾದರಿಗಿಂತ ಕೆಲವು ಬದಲಾವಣೆಗಳನ್ನು ಹೊಂದಿದೆ, ಇದರ ಮುಂಭಾಗದ ಗ್ರಿಲ್, ಹೊಸ ಮುಂಭಾಗದ ಬಂಪರ್ ಮತ್ತು ನಯವಾದ ಹೆಡ್‌ಲ್ಯಾಂಪ್. ಬಾಕ್ಸಿ ಸಿಲೂಯೆಟ್, ಸ್ಕ್ವೇರ್-ಇಶ್ ವ್ಹೀಲ್ ಆರ್ಚರ್ ಮತ್ತು ಸೈಡ್-ಹಿಂಗ್ಡ್ ಟೈಲ್‌ಗೇಟ್ ಅನ್ನು ಹೊಂದಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ

ಲ್ಯಾಡರ್-ಫ್ರೇಮ್ ಚಾಸಿಸ್ ಬದಲಾಗದೆ ಉಳಿಯುತ್ತದೆ.ಎಸ್‌ಯುವಿ ಸೈಡ್ ಸ್ಟೆಪ್ಸ್, ರಿಯರ್ ಸ್ಟೆಪ್, ರೂಫ್ ರೈಲ್ಸ್, ರೂಫ್-ಮೌಂಟೆಡ್ ರಿಯರ್ ಸ್ಪಾಯ್ಲರ್ ಮತ್ತು ಟೈಲ್‌ಗೇಟ್ ಅಳವಡಿಸಿದ ಸ್ಪೇರ್ ವ್ಹೀಲ್ ಅನ್ನು ಸಹ ಪಡೆಯುತ್ತದೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ

ಈ ನಿರ್ದಿಷ್ಟ ಮಾದರಿಯು ಸ್ಟೀಲ್ ವ್ಹೀಲ್ ಗಳನ್ನು ಹೊಂದಿತ್ತು, ಮತ್ತು ಇದು ಎಲ್ಇಡಿ ಹೆಡ್‌ಲೈಟ್‌ಗಳು ಅಥವಾ ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿಲ್ಲ. ಅಲ್ಲದೆ ಈ ಬೊಲೆರೊ ನಿಯೋ 7 ಸೀಟುಗಳ ಸಂರಚನೆಯಲ್ಲಿ ಲಭ್ಯವಿರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ

ಇನ್ನು ಸ್ಫಾಟ್ ಟೆಸ್ಟ್ ನಲ್ಲಿ ಹಳೆಯ ಟಿಯುವಿ300 ಬ್ಯಾಡ್ಜ್ ಅನ್ನು ಟೈಲ್‌ಗೇಟ್‌ನಲ್ಲಿ ಕಾಣಸಿಗುತ್ತದೆ. ಇನ್ನು ಬಾನೆಟ್ ವಿನ್ಯಾಸವು ಒಂದೇ ಆಗಿರುತ್ತದೆ. ಡಿ-ಪಿಲ್ಲರ್ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಯನ್ನು ಪಡೆಯುವುದರೊಂದಿಗೆ ಬೊಲೆರೊ ನಿಯೋದ ಸೈಡ್ ಪ್ರೊಫೈಲ್ ಬದಲಾಗಿದೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ

ಈ ಎಸ್‍ಯುವಿಯು ಒಟ್ಟಾರೆ ಬಾಕ್ಸಿ ವಿನ್ಯಾಸವು ಹೊಸ ಮಾದರಿಯಲ್ಲಿ ಬದಲಾಗದೆ ಉಳಿದಿದೆ. ಹೊಸ ಬೊಲೆರೊ ನಿಯೋ ಇಂಟಿರಿಯರ್ ನಲ್ಲಿ ಹಿಂದಿನ ಮಾದರಿಗಿಂತ ಕೆಲವು ನವೀಕರಣಗಳನ್ನು ಹೊಂದಿರುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ

ನವೀಕರಿಸಿದ ಕಾಂಪ್ಯಾಕ್ಟ್-ಎಸ್‌ಯುವಿ ಕ್ಯಾಬಿನ್‌ಗೆ ಹೊಸ ಲುಕ್ ಮತ್ತು ಪ್ರೀಮಿಯಂ ಅನುಭವವನ್ನು ನೀಡಲು ಸಾಕಷ್ಟು ಬದಲಾವಣೆಗಳನ್ನು ಮಾಡಲಿದೆ ಎಂದು ನಿರೀಕ್ಷಿಸುತ್ತೇವೆ. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ನೊಂದಿಗೆ ನವೀಕರಿಸಿದ ಇನ್ಫೋಟೈನ್ಮೆಂಟ್ ಟಚ್-ಸ್ಕ್ರೀನ್ ಸಿಸ್ಟಂ ಅನ್ನು ಒಳಗೊಂಡಿರಲಿದೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ

ಹಿಂದಿನ ಮಾದರಿಯಲ್ಲಿದ್ದ ಕೀ ಲೆಸ್ ಎಂಟ್ರಿ, ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕರ ಸೀಟ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಫೀಚರ್ ಗಳನ್ನು ಇದರಲ್ಲಿಯು ಮುಂದುವರೆಸಬಹುದು.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ

ಈ ಹೊಸ ಕಾಂಪ್ಯಾಕ್ಟ್-ಎಸ್‌ಯುವಿಯಲ್ಲಿ ಹಿಂದಿನ ಮಾದರಿಯಲ್ಲಿದ್ದ ಅದೇ 1.5-ಲೀಟರ್ ಮೂರು ಸಿಲಿಂಡರ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 240 ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ

ಜನಪ್ರಿಯ ಬ್ರ್ಯಾಂಡ್ ಹೆಸರನ್ನು ಬಳಸಿಕೊಂಡು ಮಾರಾಟವನ್ನು ಹೆಚ್ಚಿಸಲು ಮಹೀಂದ್ರಾ ಟಿವಿಯು300 ಅನ್ನು ಬೊಲೆರೊ ನಿಯೋ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಹೇಳಾಗುತ್ತಿದೆ. ಶೀಘ್ರದಲ್ಲೇ ಈ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ

ಹೊಸ ಮಹೀಂದ್ರಾ ಬೊಲೆರೊ ನಿಯೋ ಕಾಂಪ್ಯಾಕ್ಟ್-ಎಸ್‌ಯುವಿಯು ಭಾರತದಲ್ಲಿ ಬಿಡುಗಡೆಯಾಗ ಬಳಿಕ ಫೋರ್ಡ್ ಇಕೋಸ್ಪೋರ್ಟ್, ಹ್ಯುಂಡೈ ವೆನ್ಯೂ, ಹೋಂಡಾ ಡಬ್ಲ್ಯುಆರ್-ವಿ ಮತ್ತು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.

Article Published On: Friday, March 19, 2021, 20:35 [IST]
English summary
Mahindra Bolero Neo Spied Again During Testing. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+