Just In
- 16 min ago Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- 26 min ago ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- 29 min ago ಮಹೀಂದ್ರಾ ಪ್ರೀಯರಿಗೆ ಭಾರೀ ಸಿಹಿಸುದ್ದಿ: ಗಲ್ಲಿಗಲ್ಲಿಯಲ್ಲಿ ಶುರುವಾಗುತ್ತಾ ಸ್ಕಾರ್ಪಿಯೋ ಹವಾ!
- 1 hr ago ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡುತ್ತವೆ!
Don't Miss!
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನ್ಯೂ ಜನರೇಷನ್ ಸ್ಕಾರ್ಪಿಯೋ ವಿವಿಧ ವೆರಿಯೆಂಟ್ಗಳ ರೋಡ್ ಟೆಸ್ಟಿಂಗ್ ನಡೆಸಿದ ಮಹೀಂದ್ರಾ
ಎಸ್ಯುವಿ ಕಾರುಗಳ ಮಾರಾಟ ಮಹತ್ವದ ಬದಲಾವಣೆ ಪರಿಚಯಿಸುತ್ತಿರುವ ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಎಸ್ಯುವಿ ಕಾರಿನ ನ್ಯೂ ಜನರೇಷನ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ವಿವಿಧ ವೆರಿಯೆಂಟ್ಗಳೊಂದಿಗೆ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ.
ಮಹೀಂದ್ರಾ ಕಂಪನಿಯು ಸದ್ಯ ನ್ಯೂ ಜನರೇಷನ್ ಎಕ್ಸ್ಯುವಿ500 ಕಾರು ಬಿಡುಗಡೆಯ ಸಿದ್ದತೆಯಲ್ಲಿದ್ದು, ತದನಂತರವಷ್ಟೇ ಸ್ಕಾರ್ಪಿಯೋ ಹೊಸ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆವೃತ್ತಿಗಿಂತಲೂ ಹಲವಾರು ಹೊಸ ಬದಲಾವಣೆಯೊಂದಿಗೆ ಎಸ್ಯುವಿ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಕಾರಿನ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ಹೊಸ ಸ್ಕಾರ್ಪಿಯೋ ಕಾರು ಮಾದರಿಯ ಮಾರಾಜೋ ಹೊಸ ಆವೃತ್ತಿಯಿಂದಲೂ ಕೆಲವು ಪ್ರೀಮಿಯಂ ಫೀಚರ್ಸ್ಗಳನ್ನು ಎರವಲು ಪಡೆದುಕೊಂಡಿದ್ದು, ಹೊಸ ಫೀಚರ್ಸ್ಗಳಿಂದಾಗಿ ಸ್ಕಾರ್ಪಿಯೋ ಕಾರು ಮತ್ತಷ್ಟು ಬಲಿಷ್ಠ ವಿನ್ಯಾಸದೊಂದಿಗೆ ವಿಸ್ತರಿತ ವೀಲ್ಹ್ ಬೆಸ್ ಮೂಲಕ ಅರಾಮದಾಯಕ ಕ್ಯಾಬಿನ್ ಸ್ಪೆಸ್ ಹೊಂದಿರುವುದು ರೋಡ್ ಟೆಸ್ಟಿಂಗ್ನಲ್ಲಿ ಬಹಿರಂಗವಾಗಿದೆ.
ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ಆಕರ್ಷಕವಾದ ಪ್ರೀಮಿಯಂ ಫೀಚರ್ಸ್ ಜೊತೆಗೆ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಎಕ್ಸ್ಯುವಿ300 ನಂತರ ಮಹೀಂದ್ರಾ ನಿರ್ಮಾಣದ ಬಹುತೇಕ ಕಾರುಗಳು ಕ್ರ್ಯಾಶ್ ಟೆಸ್ಟಿಂಗ್ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಳ್ಳುತ್ತಿವೆ.
ನ್ಯೂ ಜನರೇಷನ್ ಸ್ಕಾರ್ಪಿಯೋ ಕಾರಿನಲ್ಲೂ ಮಲ್ಟಿ ಏರ್ಬ್ಯಾಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್ಗಳಲ್ಲಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಕ್ರೂಸ್ ಕಂಟ್ರೋಲ್, ಸನ್ರೂಫ್, ಪುಶ್ ಬಟನ್ ಆನ್/ಆಫ್, ಕೀ ಲೆಸ್ ಎಂಟ್ರಿ, ರೂಫ್ ರೈಲ್ಸ್, ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್ ಸೌಲಭ್ಯಗಳಿದ್ದು, ಹೊಸ ವಿನ್ಯಾಸದ 17 ಇಂಚಿನ ಅಲಾಯ್ ವೀಲ್ಹ್ಗಳು, ಹೊಸ ವಿನ್ಯಾಸದ ಫ್ರಂಟ್ ಅಂಡ್ ರಿಯರ್ ಬಂಪರ್ ಮತ್ತು ವಿಸ್ತರಿತ ವೀಲ್ಹ್ಬೆಸ್ನಿಂದಾಗಿ ಮೂರನೇ ಸಾಲಿನ ಪ್ರಯಾಣಿಕರಿಗೆ ಹೆಚ್ಚಿನ ಮಟ್ಟದ ಸ್ಥಳಾವಕಾಶ ನೀಡಲಿದೆ.
ಇದಲ್ಲದೆ ಹೊಸ ಕಾರಿನಲ್ಲಿ ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್ ಮತ್ತು ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ಒದಗಿಸಲು ಆ್ಯಪಲ್ ಕಾರ್ಪ್ಲೇ ಮತ್ತುಅಂಡ್ರಾಯಿಡ್ ಆಟೋ ಸರ್ಪೊಟ್ ಮಾಡುವ ಟಚ್ಸ್ಕ್ರಿನ್ ಇನ್ಪೋಟೈನ್ಟೆಂಟ್ ಸಿಸ್ಟಂ ಸಹ ಜೋಡಣೆ ಮಾಡಲಾಗಿದೆ.
ಹೊಸ ತಾಂತ್ರಿಕ ಸೌಲಭ್ಯಗಳಿಂದಾಗಿ ವಾಹನಗಳ ಬೆಲೆಯಲ್ಲಿ ತುಸು ಹೆಚ್ಚಳವಾದರೂ ಗುಣಮಟ್ಟದ ಉತ್ಪನ್ನಗಳನ್ನು ಸಿದ್ದಪಡಿಸುವಲ್ಲಿ ಯಶಸ್ವಿಯಾಗುತ್ತಿರುವ ಮಹೀಂದ್ರಾ ಕಂಪನಿಯು ಹೊಸ ಸ್ಕಾರ್ಪಿಯೋದಲ್ಲಿ ವಿವಿಧ ಎಂಜಿನ್ಗಳನ್ನು ಜೋಡಣೆ ಮಾಡುವ ಸಿದ್ದತೆಯಲ್ಲಿದೆ.
MOST READ: ಗ್ರಾಹಕರ ದೂರು ಹಿನ್ನೆಲೆ...ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಸಬ್ಸಿಡಿ ರದ್ದು
ಸ್ಕಾರ್ಪಿಯೋ ಕಾರಿನಲ್ಲಿ ಈ ಬಾರಿ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ಗೆ ಪೂರಕವಾದ 2.2-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಜೊತೆಗೆ ಹೊಸ ಪೆಟ್ರೋಲ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಎಲ್ಲಾ ಸಾಧ್ಯತೆಗಳಿವೆ.
ಮಹೀಂದ್ರಾ ಕಂಪನಿಯು ಹೊಸ ಸ್ಕಾರ್ಪಿಯೋ ಕಾರು ಮಾದರಿಯಲ್ಲಿ ಥಾರ್ ಎಸ್ಯುವಿಯಲ್ಲಿ ನೀಡಲಾಗಿರುವ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಿದ್ದು, ಹೊಸ ಕಾರು ಮುಂಬರುವ ಏಪ್ರಿಲ್ ಹೊತ್ತಿಗೆ ಖರೀದಿಗೆ ಲಭ್ಯವಿರಲಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!
ಸದ್ಯ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೋ ಎಸ್ಯುವಿ ಕಾರು ಮಾದರಿಯು ಪ್ರಮುಖ ಐದು ವೆರಿಯೆಂಟ್ಗಳೊಂದಿಗೆ 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟಕ್ಕೆ ಲಭ್ಯವಿದ್ದು, ವಿವಿಧ ವೆರಿಯೆಂಟ್ಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.56 ಲಕ್ಷ ಬೆಲೆ ಹೊಂದಿದೆ. ಹೊಸ ತಲೆಮಾರಿನ ಆವೃತ್ತಿಯು ಪ್ರಸ್ತುತ ಮಾದರಿಗಿಂತ ರೂ.1 ಲಕ್ಷದಿಂದ 1.50 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದ್ದು, ಪೆಟ್ರೋಲ್ ಮಾದರಿಯು ಉತ್ತಮ ಆಯ್ಕೆಯಾಗಲಿದೆ.