ದಿನಂಪ್ರತಿ 200ರಿಂದ 250 ಯುನಿಟ್ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ ನ್ಯೂ ಜನರೇಷನ್ ಥಾರ್

ಮಹೀಂದ್ರಾ ಕಂಪನಿಯು ಕಳೆದ ಅಕ್ಟೋಬರ್ ಮೊದಲ ವಾರದಲ್ಲಿ ತನ್ನ ಬಹುನೀರಿಕ್ಷಿತ ಥಾರ್ ಎಸ್‌ಯುವಿ ಕಾರು ಮಾದರಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿತ್ತು. ಹೊಸ ಕಾರು ಇದುವರೆಗೆ ಬರೋಬ್ಬರಿ ಸುಮಾರು 39 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ದಿನಂಪ್ರತಿ 200ರಿಂದ 250 ಗ್ರಾಹಕರು ಸರಾಸರಿಯಾಗಿ ಹೊಸ ಕಾರಿಗೆ ಬುಕ್ಕಿಂಗ್ ದಾಖಲಿಸಿದ್ದಾರೆ.

ದಿನಂಪ್ರತಿ 200ರಿಂದ 250 ಯುನಿಟ್ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ ನ್ಯೂ ಜನರೇಷನ್ ಥಾರ್

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಹೊಸ ಥಾರ್ ಕಾರಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿರುವ ಮಹೀಂದ್ರಾ ಕಂಪನಿಯು ಕಳೆದ ಡಿಸೆಂಬರ್ ಅವಧಿಯಲ್ಲೇ ಸುಮಾರು 7 ಯುನಿಟ್ ಕಾರುಗಳಿಗೆ ಬುಕ್ಕಿಂಗ್ ಪಡೆದುಕೊಂಡಿತ್ತು. ಬೇಡಿಕೆ ಹೆಚ್ಚಿರುವ ಹಿನ್ನಲೆಯಲ್ಲಿ ನಾಸಿಕ್ ಕಾರು ಘಟಕದಲ್ಲಿ ಉತ್ಪಾದನಾ ಪ್ರಮಾಣವನ್ನು ಸಹ ಹೆಚ್ಚಳ ಮಾಡಲಾಗಿದ್ದು, ಬುಕ್ಕಿಂಗ್ ನಂತರ ಹೊಸ ಕಾರು ಪಡೆದುಕೊಳ್ಳಲು ಸದ್ಯ ಕನಿಷ್ಠ 5 ರಿಂದ 8 ತಿಂಗಳು ಕಾಯಲೇಬೇಕಿದೆ.

ದಿನಂಪ್ರತಿ 200ರಿಂದ 250 ಯುನಿಟ್ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ ನ್ಯೂ ಜನರೇಷನ್ ಥಾರ್

ಹೊಸ ಕಾರಿನ ಕಾಯುವಿಕೆ ಅವಧಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದ್ದು, ಸಾಫ್ಟ್ ಟಾಪ್ ಮಾದರಿಗಳು ಕಡಿಮೆ ಅವಧಿಯಲ್ಲಿ ವಿತರಣೆಯಾಗಲಿದ್ದರೆ ಡೀಸೆಲ್ ಆಟೋಮ್ಯಾಟಿಕ್ ಹಾರ್ಡ್ ಟಾಪ್ ಮಾದರಿಗಳ ಖರೀದಿಗೆ ಹೆಚ್ಚು ಕಾಯಬೇಕಿದೆ.

ದಿನಂಪ್ರತಿ 200ರಿಂದ 250 ಯುನಿಟ್ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ ನ್ಯೂ ಜನರೇಷನ್ ಥಾರ್

ಆಫ್ ರೋಡಿಂಗ್ ವೈಶಿಷ್ಟ್ಯತೆಯೊಂದಿಗೆ ತನ್ನದೆ ಆದ ಜನಪ್ರಿಯೆತೆ ಹೊಂದಿರುವ ಥಾರ್ ಕಾರು ಮಾದರಿಯು ಸಾಮಾನ್ಯ ಕಾರು ಮಾದರಿಗಳಂತೆ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ನ್ಯೂ ಜನರೇಷನ್ ಥಾರ್ ಖರೀದಿ ಮಾಡಿರುವ ಗ್ರಾಹಕರಲ್ಲಿ ಬಹುತೇಕರು ಹೊಸದಾಗಿ ಆಫ್ ಕೌಶಲ್ಯದ ಆಸಕ್ತಿಯೊಂದಿಗೆ ಥಾರ್ ಮಾಲೀಕತ್ವ ಪಡೆದುಕೊಂಡವರಾಗಿದ್ದಾರೆ.

ದಿನಂಪ್ರತಿ 200ರಿಂದ 250 ಯುನಿಟ್ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ ನ್ಯೂ ಜನರೇಷನ್ ಥಾರ್

ಶೇ.57ರಷ್ಟು ಗ್ರಾಹಕರು ಹೊಸದಾಗಿ ಆಫ್ ರೋಡಿಂಗ್ ಕಾರು ಖರೀದಿ ಮಾಡುತ್ತಿರುವ ಗ್ರಾಹಕರಾಗಿದ್ದು, ಮ್ಯಾನುವಲ್‌ಗಿಂತಲೂ ಹೆಚ್ಚು ಆಟೋಮ್ಯಾಟಿಕ್ ಡೀಸೆಲ್ ಮಾದರಿಗಳಿಗೆ ಹೆಚ್ಚು ಬೇಡಿಕೆ ಹರಿದುಬಂದಿದೆ. ಹೊಸ ಥಾರ್ ಕಾರು ಮಾದರಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ದಿನಂಪ್ರತಿ 200ರಿಂದ 250 ಯುನಿಟ್ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ ನ್ಯೂ ಜನರೇಷನ್ ಥಾರ್

ಗ್ರಾಹಕರ ಬೇಡಿಕೆಯೆಂತೆ ಥಾರ್ ಆರಂಭಿಕ ಆವೃತ್ತಿಗಳಾದ ಎಎಕ್ಸ್ ಪೆಟ್ರೋಲ್ ಸ್ಟ್ಯಾಂಡರ್ಡ್ ಸಿಕ್ಸ್ ಸೀಟರ್, ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಮತ್ತು ಎಎಕ್ಸ್ ಸಿಕ್ಸ್ ಸೀಟರ್ ಡೀಸೆಲ್ ಸಾಫ್ಟ್ ಟಾಪ್ ಮಾದರಿಗಳನ್ನು ಸ್ಥಗಿತಗೊಳಿಸಿರುವ ಕಂಪನಿಯು ಹೈ ಎಂಡ್ ಮಾದರಿಗಳ ಮಾರಾಟದ ಮೇಲೆ ಹೆಚ್ಚು ಗಮನಹರಿಸಿದೆ.

ದಿನಂಪ್ರತಿ 200ರಿಂದ 250 ಯುನಿಟ್ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ ನ್ಯೂ ಜನರೇಷನ್ ಥಾರ್

ವೆರಿಯೆಂಟ್ ಬದಲಾವಣೆ ನಂತರ ಥಾರ್ ಕಾರು ಆರಂಭಿಕ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.10 ಲಕ್ಷದಿಂದ ಟಾಪ್ ಮಾದರಿಯು ರೂ. 14.15 ಲಕ್ಷ ಬೆಲೆ ಪಡೆದುಕೊಂಡಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ದಿನಂಪ್ರತಿ 200ರಿಂದ 250 ಯುನಿಟ್ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ ನ್ಯೂ ಜನರೇಷನ್ ಥಾರ್

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ದಿನಂಪ್ರತಿ 200ರಿಂದ 250 ಯುನಿಟ್ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ ನ್ಯೂ ಜನರೇಷನ್ ಥಾರ್

ಹೊಸ ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ದಿನಂಪ್ರತಿ 200ರಿಂದ 250 ಯುನಿಟ್ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ ನ್ಯೂ ಜನರೇಷನ್ ಥಾರ್

ಹೊಸ ಕಾರಿನ ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

MOST READ: ಬಹುನೀರಿಕ್ಷಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಜಾರಿಗೆ ಗ್ರೀನ್ ಸಿಗ್ನಲ್

ದಿನಂಪ್ರತಿ 200ರಿಂದ 250 ಯುನಿಟ್ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ ನ್ಯೂ ಜನರೇಷನ್ ಥಾರ್

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸೆಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್, ರಿಯರ್ ವ್ಯೂ ಕ್ಯಾಮೆರಾ ಜೋಡಿಸಲಾಗಿದೆ.

Article Published On: Friday, February 5, 2021, 20:53 [IST]
English summary
Mahindra Thar SUV Bookings Cross 39,000 Units, Per Day Getting 200-250 Orders. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+