ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ Maruti Celerio ಪೆಟ್ರೋಲ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಹೊಸ ಸೆಲೆರಿಯೊ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಮಾರುತಿ ಸುಜುಕಿ ಸೆಲೆರಿಯೊ(Maruti Suzuki Celerio) ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸುವಾಗ ಕಾಣಿಕೊಂಡಿದೆ.

ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಇದೇ ತಿಂಗಳು 10 ರಂದು ಬಿಡುಗಡೆಯಾಗಲಿದೆ. ಇದೀಗ ಮಾರುತಿ ಸುಜುಕಿ ಅಧಿಕೃತವಾಗಿ 2022 ಮಾರುತಿ ಸೆಲೆರಿಯೊ ಕಾರಿಗಾಗಿ ಪ್ರಿ-ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಹೊಸ ಸೆಲೆರಿಯೊ ಭಾರತದ ಅತ್ಯಂತ ಇಂಧನ ದಕ್ಷ ಪೆಟ್ರೋಲ್ ಕಾರು ಎಂದು ಹೇಳಿಕೊಳ್ಳಲಾಗಿದೆ. ಇದು 26 ಕಿ.ಮೀ ಮೈಲೇಜ್ ಅನ್ನು ಒದಗಿಸುವ ನಿರೀಕ್ಷೆಯಿದೆ, ಇದು ನಮ್ಮ ಮಾರುಕಟ್ಟೆಯಲ್ಲಿ ಯಾವುದೇ ಪೆಟ್ರೋಲ್ ಚಾಲಿತ ಮಾದರಿಗಿಂತ ಅತ್ಯಧಿಕವಾಗಿದೆ. ಈ ಹೊಸ ಮಾರುತಿ ಸೆಲೆರಿಯೊ ಮಾದರಿಯು ಪ್ರಮುಖ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಈ ಸೆಲೆರಿಯೊ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ 2014ರಲ್ಲಿ ಬಿಡುಗಡೆಗೊಳಿಸಿದ್ದರು. ಆದರೆ ಇತರ ಮಾದರಿಗಳ ಮಾದರಿಯಂತೆ ದೊಡ್ಡ ಯಶ್ವಸಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇದೀಗ ಹೊಸ ವಿನ್ಯಾಸದ ಅಥವಾ ಹೊಸ ರೂಪದಲ್ಲಿ ಲೆರಿಯೊ ಕಾರನ್ನು ಮಾರುತಿ ಸುಜುಕಿ ಕಂಪನಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಇತ್ತೀಚೆಗೆ ಈ ಹೊಸ ಮಾರುತಿ ಸೆಲೆರಿಯೊ ಕಾರು ಇತ್ತೀಚೆಗೆ ಟಿವಿಸಿ ಚಿತ್ರೀಕರಣದ ವೇಳೆ ಕಾಣಿಸಿಕೊಂಡಿದ್ದು, ಇದರ ಸ್ಪೈ ಚಿತ್ರಗಳು ಬಹಿರಂಗವಾಗಿತ್ತು. ಹೊಸ ಸೆಲೆರಿಯೊ ಕಾರಿನ ಮುಂಭಾಗ ಅಂಡಾಕಾರದ ಗ್ರಿಲ್ ಮತ್ತು ರಿಫ್ರೆಶ್ ಫ್ರಂಟ್ ಫಾಸಿಯಾವನ್ನು ಹೊಂದಿದೆ. ಈ ಕಾರಿನಲಿ ಪರಿಷ್ಕೃತ ಮುಂಭಾಗದ ಬಂಪರ್, ದುಂಡಾದ ಹೊಸದಾಗಿ ವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್‌ಗಳು ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕ ಹೊಂದಿದ್ದು, ಸಿಗ್ನೇಚರ್ ಲೋಗೋದೊಂದಿಗೆ ಮಧ್ಯದಲ್ಲಿ ವಿಲೀನಗೊಳ್ಳುತ್ತವೆ.

ಈ ಹೊಸ ಸೆಲೆರಿಯೊ ಫಾಗ್ ಲ್ಯಾಂಪ್ ಸುತ್ತುವರಿದಿದೆ ಮತ್ತು ಫ್ರಂಟ್ ಏಪ್ರನ್ ಕಾಂಟ್ರಾಸ್ಟ್ ಬ್ಲ್ಯಾಕ್ ಜೊತೆಗೆ ಅದರ ಸ್ಪೋರ್ಟಿಯರ್ ಫ್ರಂಟ್ ಲುಕ್ ಅನ್ನು ಹೆಚ್ಚು ಸೇರಿಸುತ್ತದೆ. ಇನ್ನು ಸೆಲೆರಿಯೊ ಕಾರಿನ ಲೋ ಟ್ರಿಮ್‌ಗಳು ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತವೆ. ಹೆಚ್ಚಿನ ರೂಪಾಂತರಗಳನ್ನು ಬ್ಲ್ಯಾಕ್ 14-ಇಂಚಿನ ಅಲಾಯ್ ವ್ಹೀಲ್ ಗಳನ್ನು ಪ್ರತ್ಯೇಕವಾಗಿ ನೀಡಬಹುದು.

ಹೊಸ ಸೆಲೆರಿಯೊ ಹ್ಯಾಚ್‌ಬ್ಯಾಕ್ ಅನ್ನು 2020 ಬಿಡುಗಡೆಗೊಳಿಸಲು ಯೋಜಿಸಲಾಗಿತ್ತು. ಆದರೆ ನಂತರ ಹಲವು ಕಾರಣಗಳಿಂದ ಬಿಡುಗಡೆಯನ್ನು ಮುಂದೂಡಿದ್ದರು. ಬಳಿಕ ಕಂಪನಿಯು 2021ರ ಏಪ್ರಿಲ್-ಮೇ ತಿಂಗಳುಗಳ ಅವಧಿಯ ನಡುವೆ ಬಿಡುಗಡೆಗೊಳಿಸಲು ಯೋಜಿಸಲಾಗಿತ್ತು. ಆದರೆ ಕರೋನಾ ಸೋಂಕಿನ ಆರ್ಭಟ ಹೆಚ್ಚಳದಿಂದಾಗಿ ಮತ್ತೊಮ್ಮೆ ಮುಂದೂಡಿಕೆ ಮಾಡಿದ್ದರು.

ಇದೀಗ ಮಾರುತಿ ಸುಜುಕಿ ಕಂಪನಿಯು ಈ ಹೊಸ ಸೆಲೆರಿಯೊ ಕಾರನ್ನು ಇದೇ ತಿಂಗಳು ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಮಾರುತಿ ಸೆಲೆರಿಯೊ ಒಂದು ಪ್ರಮುಖ ಬದಲಾವಣೆಯೆಂದರೆ ಹೊಸ ಹಿಯರ್‌ಟೆಕ್ಟ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಇದನ್ನು ತಯಾರಿಸಲಾಗಿದೆ. ಈ ಮಾರುತಿ ಸೆಲೆರಿಯೊ ಹೊಸದಾಗಿ ವಿನ್ಯಾಸಗೊಳಿಸಿದೆ.

ಈ ಹೊಸ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಒಳಭಾಗದಲ್ಲಿ 7.0-ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಈ ಸಿಸ್ಟಂ ಆಪಲ್ ಕಾರ್ ಪ್ಲೇ ಮತ್ತು ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ಅನ್ನು ಕೂಡ ಒಳಗೊಂಡಿರುತ್ತದೆ.

ಇನ್ನು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಬದಲಾಯಿಸಲಾಗುವುದಿಲ್ಲ. ಆದರೆ ಡ್ಯಾಶ್‌ಬೋರ್ಡ್, ಸ್ಟೀಯರಿಂಗ್ ವೀಲ್ ಮತ್ತು ಸೆಂಟರ್ ಕನ್ಸೋಲ್ ಅನ್ನು ಪರಿಷ್ಕರಿಸಲಾಗುತ್ತದೆ. ಹೊಸ ಮಾರುತಿ ಸೆಲೆರಿಯೊ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್ ಮತ್ತು ಇತರ ಪ್ರೀಮಿಯಂ ಫೀಚರ್ ಗಳನ್ನು ಕೂಡ ಒಳಗೊಂಡಿರುತ್ತದೆ. ಆದರೆ ಫೀಚರ್ಸ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ.

ಇನ್ನು ಈ ಹೊಸ ಸೆಲೆರಿಯೊ ಕಾರಿನಲ್ಲಿ ಸುರಕ್ಷತೆಗಾಗಿ, ಸ್ಟ್ಯಾಂಡರ್ಡ್ ಸೀಟ್‌ಬೆಲ್ಟ್ ಅಲರ್ಟ್, ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡೆಲವೆರಿಯೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರಿವರ್ಸ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಅನ್ನು ಕೂಡ ನೀಡಬಹುದು.

ಈ ಹೊಸ ಮಾರುತಿ ಸೆಲೆರಿಯೊ ಕಾರಿನ ಎಂಜಿನ್ ಅನ್ನು ಬದಲಾಯಿಸಬಹುದು, ಇದರಲ್ಲಿ ಹೊಸ 1.2ಎಲ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು, ಈ ಎಂಜಿನ್ 83 ಬಿಹೆಚ್ಪಿ ಪವರ್ ಮತ್ತು 113 ಎನ್ಎಂ ಟಾರ್ಜ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರೊಂದಿಗೆ 1.0ಎಲ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ನೀಡಬಹುದು. ಈ ಎಂಜಿನ್ 68 ಬಿಹೆಚ್ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಲ್ಲಾ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ,

ಹೊಸ ಮಾರುತಿ ಸುಜುಕಿ ಸೆಲೆರಿಯೊ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ. ಹೊಸ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೊ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಾಟಾ ಟಿಯಾಗೋ, ಹ್ಯುಂಡೈ ಸ್ಯಾಂಟ್ರೊ ಮತ್ತು ರೆನಾಲ್ಟ್ ಕ್ವಿಡ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಇಂಧನ ಬೆಲೆ ಏರಿಕೆ ಸಮಯದಲ್ಲಿ ಅತಿ ಹೆಚ್ಚು ಮೈಲೇಜ್ ಹೊಂದಿರುವ ಕಾರು ಬಿಡುಗಡೆಯಾಗುವುದರಿಂದ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಸೃಷ್ಟಿಸಬಹುದು.


Click it and Unblock the Notifications