ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿಯಾಗಿ ಬರುತ್ತಿದೆ ಮಾರುತಿ ವ್ಯಾಗನ್ಆರ್ ಇವಿ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಮಾದರಿಯಾಗಿ ವ್ಯಾಗನ್ಆರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಮಾರುತಿ ಸುಜುಕಿ ಕಂಪನಿಯು ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಇತ್ತೀಚೆಗೆ ಮತ್ತೊಮ್ಮೆ ಹೊಸ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರನ್ನು ಸ್ಪಾಟ್ ಟೆಸ್ಟ್ ಅನ್ನು ನಡಿಸಿದೆ. ಈ ಎಲೆಕ್ಟ್ರಿಕ್ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಸ್ಪೈ ಚಿತ್ರದಲ್ಲಿ ಕಂಡು ಬಂದಿರುವ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಉತ್ಪಾದನೆಯಾಗಲಿರುವ ಮಾದರಿ ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಇದೇ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಮಾರುತಿ ಸುಜುಕಿ ಕಳೆದ ವರ್ಷ ದೇಶದಲ್ಲಿ 50 ಜೆಡಿಎಂ-ಸ್ಪೆಕ್ ಮೂಲಮಾದರಿಗಳನ್ನು ಪರಿಚಯಿಸಿದ್ದು, ಇದು ಹಲವು ಬಾರಿ ರೋಡ್ ಟೆಸ್ಟ್ ಅನ್ನು ನಡೆಸಿದೆ. ಹಿಂದಿನ ವರದಿಗಳ ಪ್ರಕಾರ, ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ವಾಣಿಜ್ಯ ಬಳಕೆಗೆ ಮತ್ತು ಟ್ಯಾಕ್ಸಿ ಕಾರುಗಳಾಗಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

ನಂತರ ಇದರ ಬಗ್ಗೆ ಹೆಚ್ಚಿನ ಅಭಿಪ್ರಾಯಗಳನ್ನು ಪಡೆದು ಹಲವಾರು ಸುಧಾರಣೆಗಳನ್ನು ನಡೆಸಿ ವೈಯಕ್ತಿಕ ಬಳಕೆಗಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು. ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಹೆಚ್ಚಿನ ವಿವರಗಳನ್ನು ಕಂಪನಿಯು ಬಹಿರಂಗಪಡಿಸಿಲ್ಲ.

ಈ ಎಲೆಕ್ಟ್ರಿಕ್ ಕಾರಿನಲ್ಲಿ 15 ಇಂಚಿನ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಈ ಹೊಸ ಕಾರಿನ ಮುಂಭಾಗದಲ್ಲಿ ಕೆಲವು ನವೀಕರಣಗಳನ್ನು ನಡೆಸಲಾಗಿದೆ. ಈ ಹ್ಯಾಚ್‍ಬ್ಯಾಕ್ ನಲ್ಲಿ ಹೊಸ ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊಂದಿದ್ದು, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್(ಡಿಆರ್‌ಎಲ್) ಗಳನ್ನು ಮೇಲೆ ಇರಿಸಲಾಗಿದೆ.

ಇದರಲ್ಲಿ ಮುಖ್ಯವಾಗಿ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಟೈಯೆಗಲ್ ಹೌಸಿಂಗ್ ನಲ್ಲಿ ಇರಿಸಲಾಗಿದೆ. ಇನ್ನು ಮುಂಭಾಗದ ಬಂಪರಿನ ಕೆಳಭಾಗದಲ್ಲಿ ಫಾಂಗ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಅತ್ಯಂತ ಗಮನಾರ್ಹವಾದ ವ್ಯತ್ಯಾಸವೆಂದರೆ ಗ್ರಿಲ್ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗುತ್ತದೆ.

ಸೈಡ್ ಮತ್ತು ಹಿಂಭಾಗದ ಪ್ರೊಫೈಲ್ ಪ್ರಸ್ತುತ ಮಾದರಿಗೆ ಹೋಲುತ್ತದೆ. ಈ ಟಾಲ್ ಬಾಯ್ ಹ್ಯಾಚ್‍ಬ್ಯಾಕ್ ಹಿಂಭಾಗದಲ್ಲಿ ಟೇಲ್ ಲೈಟ್ ಅನ್ನು ಅಳವಡಿಸಲಾಗಿದೆ. ಈ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಇಗ್ನಿಸ್ ಮಾದರಿಯಲ್ಲಿರುವಂತಹ 14 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

ಈ ಎಲೆಕ್ಟ್ರಿಕ್ ಆವೃತ್ತಿಯು ಉತ್ತಮ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಸ್ಟ್ಯಾಂಡರ್ಡ್ ಚಾರ್ಜಿಂಗ್ ಬ್ಯಾಟರಿಗಳನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಏಳು-ಗಂಟೆಗಳ ಕಾಲ ಸಮಯವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದ್ದರೆ,

ವೇಗದ ಚಾರ್ಜಿಂಗ್ ಒಂದು ಗಂಟೆಯ ಸಮಯದಲ್ಲಿ 0 - 80 ಶೇಕಡಾ ಚಾರ್ಜ್ ಮಾಡಲು ಸಮರ್ಥವಾಗಿರುತ್ತದೆ. ವ್ಯಾಗನ್ಆರ್ ಎಲೆಕ್ಟ್ರಿಕ್ ಅತ್ಯಂತ ನಿರೀಕ್ಷಿತ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ, ಈ ಹೊಸ ವ್ಯಾಗನ್ಆರ್ ಎಲೆಕ್ಟ್ರಿಕ್ ಇದೇ ವರ್ಷದಲ್ಲಿ ದೇಶದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈ ಹೊಸ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಾಟಾ ಟಿಗೋರ್ ಇವಿ ಮತ್ತು ಮುಂಬರುವ ಮಹೀಂದ್ರಾ ಇಕೆಯುವಿ100 ಮತ್ತು ಓಲಾ ಎಲೆಕ್ಟ್ರಿಕ್ ಕಾರಿಗೆ ಪೈಫೋಟಿ ನೀಡುತ್ತದೆ.
Image Courtesy: Prabhat Rana/Rushlanespylance


Click it and Unblock the Notifications